Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಿಕ್ಷಣ ಎಂದರೆ ಮಗುವಿನ ಭವಿಷ್ಯದ ತಯಾರಿ ಅಲ್ಲ, ಮಗುವಿನಲ್ಲಿ ಅಡಗಿರುವ ವಿದ್ಯೆಯನ್ನು ಹೆಕ್ಕಿತೆಗೆದು ಅವರ ಜೀವನನ್ನು ರೂಪಿಸುವದೇ ಶಿಕ್ಷಣ ಎಂದು ಪ್ರೌಢ ಶಾಲಾ ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಹೇಳಿದರು.ಪಟ್ಟಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ವಿಶೇಶ ಉಪನ್ಯಾಸ ನೀಡಿದರು.ಇಡೀ ಜಗತ್ತನ್ನು ಬದಲಾಯಿಸುವ ಮತ್ತು ಚರಿತ್ರೆಯನ್ನು ನಿರ್ಮಾಣ ಮಾಡುವ ಶಕ್ತಿ ಇರೋದು ಶಿಕ್ಷಣಕ್ಕೆ ಮಾತ್ರ. ಆ ಶಿಕ್ಷಣವನ್ನು ನೀಡಿ ದೇಶವನ್ನು ಹಟ್ಟುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕ ಮಾಡುತ್ತಿದ್ದಾನೆ. ಆದರೆ ಸಧ್ಯದ ದಿನಮಾನಗಳಲ್ಲಿ ಅತಿಯಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲಿಗೆ, ದರೋಡೆ, ಜಾತಿ, ಧರ್ಮ ತೊಳಲಾಟ ಇವುಗಳೆಲ್ಲ ಶಿಕ್ಷಣದ ಮೌಲ್ಯಗಳನ್ನು ಕಳೆಯುತ್ತಿವೆ. ಇಂಜಿನೀಯರಗಳು ರಸ್ತೆ ಹಾಳಾದರೂ ಪರವಾಗಿಲ್ಲ ನಾನು ಮಾತ್ರ ಚನ್ನಾಗಿರಬೇಕು ಅನ್ನೋವಾಗ, ವೈದ್ಯರು ಮೃತ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ನಿಮಿತ್ಯವಾಗಿ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ನಗರದಲ್ಲಿ ಮುಸ್ಲಿಂ ಸಮಾಜದ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.ನಗರದ ವಿವಿಧೆಡೆ ಹಸಿರುಧ್ವಜಗಳು ಹಾರಾಡಿದವು. ಮುಸ್ಲಿಮರು ಮೆರವಣಿಗೆಯಲ್ಲಿ ಮಹ್ಮದ ಪೈಗಂಬರ ಅವರ ಕುರಿತ ಗುಣಗಾನ ಮಾಡಿದರು.ಮುಂಜಾನೆ 9 ಗಂಟೆಯ ಶಾಹ್ ಆಲ್ಂ ಗೇಟ ಹತ್ತಿರ ಮೆರವಣಿಗೆಗೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಮೌಲಾನಾ ಅಬುಸಾಲಿಯಾಸಾ, ಮಲಾನಾ ಖುಷ್ಟುದಿನ್ನ ಬಿಜಾಪುರ, ಮೌಲಾನಾ ಶಿರಸಂಗಿ, ಮಾಮೂನರಸೀಧ ಪಾರರ್ಥನಳ್ಳಿ, ತೌಪೀಕ್ ಪಾರಥನಳ್ಳಿ, ರಿಯಾಜ ಅವಟಿ, ನಜೀರ ಕಂಗನೋಳ್ಳಿ, ನಗರಸಭೆ ಸದಸ್ಯ ಮುಬಾರಕ ಅಪರಾಧ, ಮೌಲಾನಾ ಜುನೆದ ರಜಾ, ನಗರ ಯೋಜನೆ ಪ್ರಾಧಿಕಾರ ಅದ್ಯಕ್ಷ ಅನ್ವರ ಮೋಮಿನ, ರಫಿಕ್ ಬಾರಿಗಡ್ಡಿ, ಸುಶಿಲಕುಮಾರ ಬೆಳಗಲಿ, ನ್ಯಾಯವಾದಿ ಶಶಿಕಾಂತ ದೊಡಮನಿ, ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ, ಸಿಪಿಐ ಮಲ್ಲಪ್ಪಮಡ್ಡಿ, ಪಿ.ಎಸ್.ಐ ಅನೀಲ ಕುಂಬಾರ. ಬಕರ ಕುಡಚಿ ಸಾದೀಕ್ ಬಂಟನೂರ, ಮುಸ್ತಾಕ್ ಝಂಡೆ ಸೇರಿದಂತೆ ಅನೇಕರು ಮೆರವಣಿಗೆಗೆ ಸಾಥ ನೀಡಿದರು.ಮೆರವಣಿಗೆಯುದ್ದಕ್ಕೂ ಹಲವು…
ಸಿಂದಗಿಯಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನೋತ್ಸವ ಉದ್ಘಾಟಿಸಿದ ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಡಾ.ಸರ್ವಪಲ್ಲಿ ರಾಧಾಕೃಷ್ಣರು ವಿವಿಯ ಕುಲಪತಿ, ಪ್ರಾಧ್ಯಾಪಕ, ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿ ಶಿಕ್ಷಕ ಸಮೂಹಕ್ಕೆ ದಾರಿ ದೀಪವಾಗಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ಶಿಕ್ಷಕರು ನೀಡುವ ಶಿಕ್ಷಣ ಜೀವನದುದ್ದಕ್ಕೂ ಮರೆಯದಂತಹ ಸಂಬಂಧ ಬೆಳೆಸುತ್ತಾರೆ ಎಂದು ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಗುಂದಗಿ ಪಂಕ್ಷನ್ ಹಾಲ್‌ನಲ್ಲಿ ವಿಜಯಪುರ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ೧೩೭ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸಿಂದಗಿ ಪುರಸಭೆಯು ಇಂದು ನಗರ ಸಭೆಯಾಗಿ ಮೇಲ್ದರ್ಜೆಗೆರಿದೆ. ಇದರಿಂದ ಸಾಕಷ್ಟು ಅನುದಾನ ಹರಿದು ಬರುತ್ತದೆ. ಅದನ್ನು ಶಾಲೆ-ಕಾಲೇಜು, ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತೇವೆ ಎಂದು ತಿಳಿಸಿದರು.ಈ ವೇಳೆ ಕಲಬುರ್ಗಿ ವಿವಿಯ ಕನ್ನಡ ಅಧ್ಯಯನ…
ವಿಜಯಪುರದಲ್ಲಿ ಶಿಕ್ಷಕರ ದಿನಾಚರಣೆ | ಜಿಲ್ಲಾ ಆತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ | ಸಂಸದ ರಮೇಶ ಜಿಗಜಿಣಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಸಮಾಜದಲ್ಲಿ ಬಹಳ ಗೌರವದ ಸ್ಥಾನವಿದ್ದು, ಶಿಕ್ಷಕರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯ ಹಾಗೂ ನಗರ ವಲಯ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪಾಠ ಬೊಧನೆ ಮಾಡುವ ಮೂಲಕ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸುವ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ಅಂತರಾಳವನ್ನು ಅರಿತು, ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಕಳೆದ ಎರಡು ದಿನಗಳ ಕಾಲ ಗ್ರಾಮದಲ್ಲಿ ಸಂಭ್ರಮ ಮೂಡಿಸಿದ್ದ ಆರಾದ್ಯದೈವ ಶ್ರೀ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆ ಹಾಗೂ ರಥೋತ್ಸವವು ಹಲವಾರು ವಿಶೇಷಗಳೊಂದಿಗೆ ವಿಜ್ರಂಭನೆಯಿಂದ ನೆರವೇರಿತು.ಬುಧವಾರ ಮುಂಜಾನೆಯೇ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ ಕಿಚಡಿ ತಯಾರಿಸುವ ಸಾಮಗ್ರಿ ಒಯ್ಯುವ ಸೇವಾ ನಿರತ ಅಲಂಕೃತ ಟ್ರ್ಯಾಕ್ಟರಗಳು ಸಂಜೆಯ ಹೊತ್ತಿಗೆ ನೂರರ ಗಡಿ ದಾಟಿದ್ದವು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕಿ.ಮಿ. ವರೆಗೆ ಸರದಿ ಸಾಲಿನಲ್ಲಿ ನಿಂತಿದ್ದವು ರಾತ್ರಿ ೧೦ ಘಂಟೆಯಿಂದ ಓಂ ಪ್ರಭುಲಿಂಗೇಶ್ವರ ಸೇವಾ ಸಮೀತಿಯ ಪ್ರಮುಖರು ಕಿಚಡಿ ಪ್ರಸಾದದ ಸಾಮಗ್ರಿಯನ್ನು ಪ್ರತಿಯೊಂದು ಟ್ರ್ಯಾಕ್ಟರಗಳಲ್ಲಿ ಗ್ರಾಮದಿಂದ ಒಂದು ಕಿ.ಮಿ. ದೂರದ ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಯಿತು ಈ ಅಲಂಕೃತ ಟ್ರ್ಯಾಕ್ಟರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಒಂದೊಂದು ಟ್ರ್ಯಾಕ್ಟರಗಳ ಶೃಂಗಾರಕ್ಕೆ ರೈತರು ಇಪ್ಪತ್ತು ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೆ ಖರ್ಚು ಮಾಡಿರುತ್ತಾರೆ.ಗುರುವಾರ ಬೆಳಿಗ್ಗೆ ೬ ಘಂ,ಗೆ ನಡೆಯುವ ರುದ್ರಾಭಿಷೇಕದೊದಿಗೆ ಪ್ರಾರಂಭಗೊಂಡ ಜಾತ್ರೆಯಲ್ಲಿ ಷಟಸ್ಥಲ ಧ್ವಜಾರೋಹಣ, ಅಡ್ಡ ಪಲ್ಲಕ್ಕಿ ಮಹೋತ್ಸವ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಪಿ.ಪಿ. ಮಾಳಿಗಡ್ಡಿ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಡಿ. ಹಿರೇಮಠ, ಹಾಗೂ ಸಹ ಶಿಕ್ಷಕರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ದೇವರ ಸ್ಥಾನವಿದೆ. ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳು. ಪ್ರತಿಯೊಬ್ಬರ ಬಾಳಿನಲ್ಲೂ ಜ್ಞಾನದ ದೀವಿಗೆ ಹಚ್ಚುವವರು ಗುರುಗಳು, ತಂದೆ ಮತ್ತು ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲೇ ಕಾಣಲು ಸಾಧ್ಯ. ಇಂತಹ ಗುರುಗಳಿಗೆ ಮೀಸಲಾದ ದಿನವೇ ‘ಶಿಕ್ಷಕರ ದಿನಾಚರಣೆ’. ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿ. ಎಲ್ಲರ ಬದುಕು ಸಮರ್ಥವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ರೇವತಗಾಂವ ಗ್ರಾಮದ ಶಿಕ್ಷಕ ಎಸ್.ಡಿ.ಆದಿಗೊಂಡೆಯವರು ಹೇಳಿದರು.ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ವೇಳೆಯಲ್ಲಿ ಎಸ್.ಜೆ.ಬಿಜ್ಜರಗಿ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಲಮಟ್ಟಿ ಈಗ ಶೃಂಗಾರಮಯ | ಜಲರಾಶಿ, ಹೂಘಮ, ರಮ್ಯತೆಯ ಸಿರಿಗಂಧ | ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಉದಯರಶ್ಮಿ ದಿನಪತ್ರಿಕೆ ವರದಿ: ಸಂಪದಾ ಹಿರೇಮಠ ಆಲಮಟ್ಟಿ: ಉತ್ತರ ಕರ್ನಾಟಕದ ರೈತರ ಜೀವನಾಡಿ ಕೃಷ್ಣೆಯ ಒಡಲಿಗೆ ಇದೇ ಶನಿವಾರ ಶ್ರದ್ಧೆ, ಭಕ್ತಿಪೂರ್ವಕ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆಯ ಸುಯೋಗ. ಆ ನಿಮಿತ್ಯ ಆಲಮಟ್ಟಿ ಅಂಗಳಕ್ಕೆ ಈಗ ಅಂದ ಚೆಂದದ ಸ್ಪರ್ಶ ! ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಆವರಣ ಮಧುವಣಗಿತ್ತಿಯಂತೆ ಅಲಂಕಾರದ ತೋರಣದಲ್ಲಿ ಮಿನುಗಿ ಗಮನ ಸೆಳೆಯುತ್ತಿದೆ. ಅತ್ಯಾಕರ್ಷಕ ರೂಪದಲ್ಲಿ ಬಾಗಿನ ಸಲ್ಲಿಕೆಯ ಸ್ಥಳ ಸೇರಿದಂತೆ ಹಲ ವೃತ್ತಗಳು ಘಮಘಮಿಸುವ ಹೂ ಪೋರಣಗಳ ಅಲಂಕಾರದಿಂದ ಕಂಗೊಳಿಸಿ ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಸಾಕ್ಷೀಕರಿಸುತ್ತಿವೆ. ಹಸಿಯೋನ್ಮಾದ ಶೃಂಗಾರ ಕಾವ್ಯದ ಲಾಲೀತ್ಯದಲ್ಲಿ ಹೃನ್ಮನ ತಣಿಸುತ್ತಿವೆ. ಅಭೂತಪೂರ್ವ ಐತಿಹ್ಯ ನೋಟ ಬೀರುತ್ತಿವೆ. ತಂಪು ವಾತಾವರಣದ ಕಂಪಿನಲ್ಲಿ ಆಣೆಕಟ್ಟು ಮುಂಭಾಗದ ಹಾಗೂ ಅಕ್ಕಪಕ್ಕದ ಪರಿಸರ ಹಿತಮಯವಾಗಿ…
ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಮಾಹಿತಿ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ರಾಜ್ಯ ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಲ್ಲೊಂದಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯ ತುಂಬಿದ ಕೃಷ್ಣೆಯ ಜಲಧಿಗೆ ಶನಿವಾರ ಬಾಗಿನ ಅರ್ಪಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಹೇಳಿದರು.ಶುಕ್ರವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆ.೬ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರು, ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ, ಅವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಆಗಮಿಸಲಿದ್ದು, ಶಿಷ್ಟಾಚಾರ ಮತ್ತು ಸುರಕ್ಷಿತ ಭದ್ರತೆಗೆ ಅಗತ್ಯ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಸ್ಥಳ ಬದಲಾವಣೆ: ತುಂಬಿದ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ನಿಗದಿತ ಸ್ಥಳದಿಂದ ಸುಮಾರು ಎರಡು ನೂರು ಮೀ. ಅಂತರದಲ್ಲಿ ಜಲಾಶಯದ ಮೇಲ್ಭಾಗದಿಂದ ಗಂಗಾ ಪೂಜೆ ಮತ್ತು ಬಾಗಿನ ಅರ್ಪಣೆ ಮಾಡಲು ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ. ಸಿಇಒ ರಿಷಿ ಆನಂದ, ಮುಖ್ಯ ಅಭಿಯಂತರ ಡಿ.ಬಸವರಾಜ, …
ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಧುರೀಣ ಅಶೋಕಗೌಡ ಪಾಟೀಲ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಸ್ವಂತ ಜಾಗೆಯಲ್ಲಿ ನಿರ್ಮಿಸಿದ ಮನೆಗಳಲ್ಲಿ ಬಹು ಕಾಲದಿಂದಲೂ ವಾಸವಾಗಿದ್ದ ಕುಟುಂಬಗಳನ್ನು ಅಭಿವೃದ್ಧಿಯ ನೆಪದಲ್ಲಿ ಅಂದಾಜು ೧೪೨ ಮನೆಗಳ ಕುಟುಂಬಗಳನ್ನು ಹೊರ ಹಾಕಿ ಎಲ್ಲ ಮನೆಗಳನ್ನು ಜೆ,ಸಿ.ಬಿ ಯಂತ್ರಗಳಿಂದ ನೆಲಸಮ ಮಾಡುವ ಮೂಲಕ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರು ಸ್ವಲ್ಪವೂ ಮಾನವಿಯತೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಕುದರಿ ಸಾಲವಾಡಗಿ ಗ್ರಾಮದ ಧುರಿಣರಾದ ಅಶೋಕಗೌಡ ಪಾಟೀಲ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರದಂದು ವಿಜಯಪುರ ನಗರದ ಅಂಬೇಡ್ಕರ ಭವನದಲ್ಲಿ ಕರೆದಿದ್ದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲರು ಪೋಲೀಸ್ ಇಲಾಖೆ ಬಳಸಿಕೊಂಡು ಪೈಶಾಚಿಕ ಕೃತ್ಯವೆಸಗಿದ್ದಾರೆ. ಈಗ ಮನೆ ಕಳೆದುಕೊಂಡ ಕುಟುಂಬಸ್ಥರು ದಿಕ್ಕೂ ದೆಸೆ ಇಲ್ಲದಂತೆ ಬೀದಿ ಪಾಲಾಗಿದ್ದಾರೆ. ಮನೆ ಕಳೆದುಕೊಂಡ…
