ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಎಸ್.ಡಿ.ಕೆ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಅಕ್ಷತಾ ಹಿರೇಮಠ ಶೇ೯೮.೭೨ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ವಿನಯ ಮಾಮನಿ ಮತ್ತು ಪ್ರಗತಿ ಮೇತ್ರಿ ತಲಾ ಶೇ೯೮.೫೬ ಅಂಕಗಳನ್ನು ಪಡೆದು ದ್ವಿತೀಯ, ಬನಶ್ರೀ ವಡವಡಗಿ ಮತ್ತು ಸಿದ್ಧಲಿಂಗ ಬಂಗಿ ತಲಾ ಶೇ೯೮.೨೪ ಅಂಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ ಶೇ೯೫ ರಷ್ಟಾಗಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ಮಠ ಅಭಿನಂದಿಸಿದ್ದಾರೆ.

