ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೯೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೫೮, ಪ್ರಥಮ ಶ್ರೇಣಿ೧೧, ದ್ವಿತೀಯ ಶ್ರೇಣಿ ೧೨ ಹಾಗೂ ತೃತೀಯ ಶ್ರೇಣಿಯಲ್ಲಿ ೦೬ ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೮೫ಕ್ಕೂ ಅಧಿಕದಷ್ಟಾಗಿದೆ.
ಗಂಗಾ ಭತ್ತಗೌಡರ ೬೨೫ ಅಂಕಗಳಿಗೆ ೬೨೩ (ಶೇ.೯೯.೬೮%) ಅಂಕಗಳು ಪಡೆದು ಪ್ರಥಮ ಸ್ಥಾನ, ಮಹ್ಮದಯೂನುಸ್ ಅಳ್ಳೋಳ್ಳಿ ೬೧೭ (೯೮.೭೨%) ದ್ವಿತೀಯ, ವಿಜಯಲಕ್ಷ್ಮಿ ವಸ್ತ್ರದ ೬೧೫ (ಶೇ.೯೮.೪೦%) ತೃತೀಯ, ಶರಣಗೌಡ ಬಗಲಿ ೬೧೨(ಶೇ.೯೭.೯೨%), ರೋಹಿತ ಕಲ್ಯಾಣಿ ೬೧೦ (ಶೇ.೯೭.೬೦%), ಅನನ್ಯ ದೇವಣಗಾಂವ ೬೦೯ (ಶೇ.೯೭.೪೪%), ಯಶೋಧಾ ಹಂಚಿನಾಳ ೬೦೭ (ಶೇ.೯೭.೧೨%) ಅಭಿಷೇಕ ಕಾಮಣ್ಣನವರ ೬೦೬ (ಶೇ.೯೬.೯೬%), ಭವಾನಿ ಹಣಮಶೆಟ್ಟಿ ೬೦೪ (ಶೇ.೯೬.೬೪%), ನಂದಿನಿ ಚವ್ಹಾಣ ೬೦೪ (ಶೇ.೯೬.೬೪%), ಸ್ವಾತಿ ಪತ್ತಾರ ೬೦೪ (ಶೇ.೯೬.೬೪%), ಲಕ್ಷ್ಮಿ ಅರ್ಜುಣಗಿ ೬೦೧ (ಶೇ.೯೬.೧೬%) ಲಕ್ಷ್ಮಿ ದಿಡ್ಡಿಮನಿ ೬೦೧ (ಶೇ.೯೬.೧೬%) ಅಂಕಗಳನ್ನು ಪಡದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ, ಮುಖ್ಯ ಗುರುಮಾತೆ ಎಸ್.ಆಯ್.ಅಸ್ಕಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

