2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಫಲಿತಾಂಶ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಸಕ್ತ 2024-25 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ವಾಷಿ೯ಕ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಇಲ್ಲಿನ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಸಂಸ್ಥೆಯ ರಾವಬಹದ್ದೂರ ಡಾ,ಫ.ಗು.ಹಳಕಟ್ಟಿ (ಆರ್. ಬಿ.ಪಿ.ಜಿ) ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ಲಭಿಸಿದ್ದು ಬಾಲಕಿಯರೇ ಟಾಪರ್ ಅಗಿ ಮಿಂಚಿದ್ದಾರೆ.
ಪರೀಕ್ಷೆಯಲ್ಲಿ ಗಮನಾರ್ಹ ಫಲಿತಾಂಶ ಪಡೆಯುವದರೊಂದಿಗೆ ಬಾಲಕಿಯರು ಅಮೋಘ ಮೇಲುಗೈ ಸಾಧಿಸಿ ಮಿನುಗಿದ್ದು ಇಲ್ಲಿ ವಿಶೇಷ. ಕುಮಾರಿ, ಸುಷ್ಮಿತಾ ವಸಂತ ರಾಠೋಡ 571 (ಶೇ,91.36) ಅಂಕ ಪಡೆಯುವ ಮೂಲಕ ಶಾಲೆಗೆ ಟಾಪರ್ ಅಗಿ ಮೊದಲ ಸ್ಥಾನ ಪಡೆದಿದ್ದಾಳೆ. ಕುಮಾರಿ ಸೌಮ್ಯಾ ಕೆ.ನಲವಡೆ 566 (ಶೇ,90.56) ಅಂಕದೊಂದಿಗೆ ಪಾಸಾಗಿ ದ್ವೀತಿಯ ಸ್ಥಾನ ಪಡೆದರೆ ಕುಮಾರಿ ಸಂಗೀತಾ ಸಾರವಾಡ 544 (ಶೇ,87.04 ) ಅಂಕಗಳಿಸುವ ಮೂಲಕ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾಳೆ.
ಕುಮಾರಿ ಸಿಂಚನಾ ಆಲಮಟ್ಟಿ 521(ಶೇ, 83.36) 4 ನೇ ಸ್ಥಾನ, ಕುಮಾರ ಹರೀಷ ಕೆ.ವಡ್ಡರ. 503 (ಶೇ,80.48 ) 5 ನೇ ಸ್ಥಾನ, ಕುಮಾರಿ ಚೈತ್ರಾ ಎಸ್.ಚಲವಾದಿ 502 (ಶೇ, 80.32) 6 ನೇ ಸ್ಥಾನ, ಕುಮಾರ ಪ್ರಜ್ವಲ್ ಲಮಾಣಿ 475 (ಶೇ,76.00) 7 ನೇ ಸ್ಥಾನ, ಕುಮಾರಿ ಭಾಗ್ಯಶ್ರೀ ಆರ್.ಕೋಲಕಾರ 474 (ಶೇ, 75.84) 8 ನೇ ಸ್ಥಾನ, ಕುಮಾರಿ ಪಲ್ಲವಿ ಆರ್.ಬೊಂಬಲೇಕರ 471(ಶೇ,75.36) 9 ನೇ ಸ್ಥಾನ, ಕುಮಾರಿ ಕೀತಿ೯ ಟಿ.ಲಮಾಣಿ 458(ಶೇ,73.28) 10 ನೇ ಸ್ಥಾನ, ಕುಮಾರ ಸಾಗರ ಎಸ್.ಪವಾರ 447(ಶೇ, 71.52)11 ನೇ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆಯಾಗಿ ಶಾಲೆಗೆ,ಸಂಸ್ಥೆಗೆ ಕೀತಿ೯ತಂದಿರುವ ಸಾಧಕ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳವರು, ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ,ಶಿಕ್ಷಣ ತಜ್ಞ ಪ್ರೊ,ಶಿವಾನಂದ ಪಟ್ಟಣಶೆಟ್ಟರ ರವರು, ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
“2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಳಕಟ್ಟಿ ಪ್ರೌಢಶಾಲೆಯ ಮಕ್ಕಳು ಗಣನೀಯವಾಗಿ ಸಾಧನೆ ತೋರಿದ್ದಾರೆ. ಅದರಲ್ಲೂ ಬಾಲೆಯರು ಅಪ್ರತಿಮ ಸಾಧನೆ ಗೈದು ಉತ್ತೀರ್ಣರಾಗಿ ಮೇಲುಗೈ ಸಾಧಿಸಿರುವುದು ಸಂತಸ ತಂದಿದೆ. ಶ್ರದ್ಧೆಯಿಂದ ಓದಾಭ್ಯಾಸ ಮಾಡಿದರೆ ಖಂಡಿತ ಅದಕ್ಕೆ ತಕ್ಕ ಪ್ರತಿಫಲನ ದೊರೆಯುತ್ತದೆ ಎಂಬುದಕ್ಕೆ ಇಲ್ಲಿ ಬಾಲೆಯರ ಟಾಪರ್ ವೇ ಸಾಕ್ಷಿ. ಆ ನಿಟ್ಟಿನಲ್ಲಿ ಬಾಲಕರು ಸಹ ಪಠ್ಯಾಸಕ್ತಿ ಕೆರಳಿಸಿಕೊಂಡು ಅಧ್ಯಯನದಲ್ಲಿ ನಿರಂತರ ನಿರತರಾಗಬೇಕು. ಇದು ನೇರ ವೆಬ್‌ಸೈಟ್ ವ್ಯವಸ್ಥೆಯ ಪರೀಕ್ಷಾ ಕಾಲ ಎಂಬುದನ್ನು ಮನಗಾಣಬೇಕು. ಜಿಲ್ಲೆಯಲ್ಲಿ ನಕಲು ಮುಕ್ತ ಪರೀಕ್ಷೆ ಸಾಗಿದೆ. ಪರೀಕ್ಷಾ ವಿದ್ಯಮಾನಗಳನ್ನು ಅರಿತು ಸಕಲ ಸಿದ್ದತೆಯೊಂದಿಗೆ ಆತ್ಮವಿಶ್ವಾಸದಿಂದ ಪರೀಕ್ಷಾ ಅಕ್ಷರ ಬರವಣಿಗೆ ಹಬ್ಬದಲ್ಲಿ ಮಿಂದ ಮಕ್ಕಳು ಅಂಕಗಳ ಫಲವಂತಿಕೆಯ ಫಲಶೃತಿ ಕಂಡಿದ್ದಾರೆ.”
– ಜಿ.ಎಂ.ಕೋಟ್ಯಾಳ
ಮುಖ್ಯ ಶಿಕ್ಷಕರು
ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ, ಆಲಮಟ್ಟಿ

