ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಒಟ್ಟು ೪೭೩೪ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅದರಲ್ಲಿ ೨೪೪೩ ವಿದ್ಯಾರ್ಥಿಗಳು ಪಾಸಾಗಿದ್ದು ಶೇ ೫೨. ೬೮ ಪ್ರತಿಶತ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಆರ್.ನಡಗಡ್ಡಿ , ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಓ. ಹೂಗಾರ ತಿಳಿಸಿದ್ದಾರೆ
೨೪೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ೧೦೨೧ ವಿದ್ಯಾರ್ಥಿಗಳು ಮತ್ತು೨೩೧೦ ವಿದ್ಯಾರ್ಥಿನಿಯರಲ್ಲಿ ೧೪೨೨ ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.
ಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಕೊಡಹೊನ್ನ ತಾಲೂಕಿಗೆ ಪ್ರಥಮ, ಬಂಥನಾಳ ಮುರಾರಜಿ ಶಾಲೆಯ ಶ್ರೇಯಾ ರಾಜಶೇಖರ ಶಿರಶ್ಯಾಡ ತಾಲೂಕಿಗೆ ದ್ವೀತಿಯ ಮತ್ತು
ಬಂಥನಾಳದ ಮುರಾರಜಿ ಶಾಲೆ ಯುವರಾಜ ಹಿಟ್ಟಿನಹಳ್ಳಿ ಮತ್ತು ಸಾಯಿ ಪಬ್ಲಿಕ್ ಶಾಲೆಯ ಸುಶ್ಮಿತಾ ಮಾಶ್ಯಾಳ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ತಾಲೂಕಿನಲ್ಲಿ ಕನ್ನಡ ಪ್ರಥಮ ಬಾಷೆಗೆ ೧೨೫ ಕ್ಕೆ ೧೨೫ ಅಂಕಗಳನ್ನು ೩೪ ವಿದ್ಯಾರ್ಥಿಗಳು, ದ್ವೀತಿಯ ಭಾಷೆ ಇಂಗ್ಲೀಷ್ ಗೆ ೧೦೦ ಕ್ಕೆ ೧೦೦ ಅಂಕಗಳನ್ನು ೬ ಅಂಕಗಳನ್ನು ದ್ವೀತಿಯ ಭಾಷೆ ಕನ್ನಡ ೧೦೦ ಕ್ಕೆ ೧೦೦ ಅಂಕಗಳನ್ನು ೨೭ ಮತ್ತು ತೃತೀಯ ಭಾಷೆ ಹಿಂದಿ ೧೦೦ ಕ್ಕೆ ೧೦೦ ಅಂಕಗಳನ್ನು ೧೧೪ ವಿದ್ಯಾರ್ಥಿಗಳು , ಗಣಿತ ೧೧, ವಿಜ್ಞಾನ ೧೬ ಮತ್ತು ಸಮಾಜ ವಿಜ್ಞಾನ ೬೭ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

