Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೃಷ್ಣೆಯ ಜಲಧಿಗೆ ಶನಿವಾರ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಭಾಗದ ಜನತೆಯ ಅಹವಾಲು ಸ್ವೀಕರಿಸುತ್ತಿದ್ದಂತೆ ಮನವಿಗಳ ಮಹಾಪೂರವೇ ಹರಿದುಬಂತು. ವಿವಿಧ ಸಂಘ-ಸಂಸ್ಥೆಯ ಮುಖಂಡರು ತಮ್ಮ ಪ್ರಮುಖ ಕಾರ್ಯಕರ್ತರೊಂದಿಗೆ ಆಲಮಟ್ಟಿಗೆ ಬೆಳಿಗ್ಗೆಯೇ ಆಗಮಿಸಿದರು. ಸಿಎಂ,ಡಿಸಿಎಂ ಬಾಗಿನ ಸಲ್ಲಿಸಿದ ಬಳಿಕ ಜನತೆಯ ಅಹವಾಲು ಸ್ವೀಕಾರಕ್ಕೆ ಮುಂದಾಗ ಹಲವಾರು ಸಂಘಟನೆಯ ಮುಖಂಡರು ಕೈಯಲ್ಲಿ ಮನವಿ ಪತ್ರಗಳನ್ನು ಹಿಡಿದುಕೊಂಡು ದೊರೆಗಳಿಗೆ ಸಲ್ಲಿಸಲು ಪೈಪೋಟಿ ನಡೆಸಿ ಹರಸಾಹಸ ಪಟ್ಟರು. ಈ ವೇಳೆ ಸಿಎಂ, ಡಿಸಿಎಂ ಸಮಾಧಾನ ಚಿತ್ತರಾಗಿ ಮನವಿಗಳನ್ನು ಸ್ವೀಕರಿಸಿದರು.ಐಟಿಐ ಸಿಬ್ಬಂದಿಗಳ ಗೋಳು, ವೇತನಾನುದಾನಕ್ಕೆ ಮನವಿ೧೯೯೭ರ ಪರಿಷ್ಕçತ ವೇತನಾನುದಾನ ಸಂಹಿತೆಯಂತೆ ೨೦೧೮ರಲ್ಲಿ ಪೂರ್ವಭಾವಿ ಪರೀವೀಕ್ಷಣೆಯಾಗಿರುವ ಅನುದಾನರಹಿತ ವೇತನಾನುದಾನ ಮಂಜೂರು ಮಾಡುವವಂತೆ ಸಿಎಂ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು. ಕಳೆದ ವರ್ಷ ಫೆ.೮ರಂದು ವಿಧಾನಸೌಧದ ಮುಂಭಾಗದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವು. ತಾವು ನಮ್ಮ ಮನವಿಯನ್ನು ಶಾಂತ ಚಿತ್ತ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅನಕ್ಷರಸ್ತರನ್ನು ಸಾಕ್ಷರರಾಗಿ ಮಾಡಿ ಬದಲಾವಣೆ ತರುವ ದೊಡ್ಡ ಕಾರ್ಯ ಶಿಕ್ಷಕರು ಮಾಡುತ್ತಾರೆ. ಮುಂದೆ ಗುರಿ, ಹಿಂದೆ ಗುರು ಇದ್ದಲ್ಲಿ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬ ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ದೇಶಪ್ರೇಮ ಬೆಳೆಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಸಿಂದಗಿ ಪಟ್ಟಣದ ರಾಂಪೂರ ರಸ್ತೆಯ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶಗಳ ಸಂಸ್ಥೆಯ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಪ್ರೇರಣಾ ಶಾಲಾ ಮಕ್ಕಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವುದು ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವುದರ ಜೊತೆಗೆ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ ಎಂದರು.ಈ ವೇಳೆ ಸೋಮಜಾಳ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಎಸ್.ನೀರಲಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ,…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಶಹರ ಪೋಲಿಸ್ ಠಾಣೆಯ ಪೋಲಿಸರು ಭರ್ಜರಿ ಬೇಟೆಯಾಡಿ ಅಂದಾಜು 10 ಲಕ್ಷ ಮೌಲ್ಯದ, ವಿವಿಧ ಕಂಪನಿಯ ಒಟ್ಟು 22 ಮೋಟಾರ ಸೈಕಲ್‍ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲೂಕಿನ ಇನಾಂ ಹಂಚಿನಾಳ (ಆರ್ ಸಿ) ಗ್ರಾಮದಲ್ಲಿ ವಾಸವಾಗಿದ್ದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಆರೋಪಿಯನ್ನು ಸಂಶಯಾಸ್ಪದ ಮೇಲೆ ಬಂಧಿಸಲಾಗಿದ್ದು. ಸುಮಾರು ವಿವಿಧ ಕಂಪನಿಯ ಮೋಟರ್ ಬೈಕ್‍ಗಳನ್ನು ಕಳ್ಳತನ ಮಾಡಿದ್ದು. ಅಂದಾಜು 10 ಲಕ್ಷ ಮೌಲ್ಯದ ಅಧಿಕ ಬೆಲೆ ಬಾಳುವ ಮೋಟರ್ ಬೈಕ್‍ಗಳನ್ನು ಆರೋಪಿ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಕಡೆಯಿಂದ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದಿದೆ ಎಂದು ಹೆಚ್ಚುವರಿ ಎಸ್‍ಪಿ, ಮಹಾಂತೇಶ್ವರ ಜಿದ್ದಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.ಈ ಪ್ರಕರಣದಲ್ಲಿ ಕಳುವಾದ ಮೋಟಾರ್ ಸೈಕಲ್ ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಎಸ್‍ಪಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಎಸ್‍ಪಿ ಮಹಾಂತೇಶ್ವರ ಜಿದ್ದಿ, ಡಿವೈಎಸ್ಪಿ ಎಸ್ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಡಿ ಮಡ್ಡಿ, ಪಿಎಸ್‍ಐ ಅನೀಲ ಕುಂಬಾರ…

Read More

ಮೃತಪಟ್ಟ ಯುವಕನ ಸಹೋದರಿಗೆ ಸಿದ್ದಸಿರಿ ಸೌಹಾರ್ದದಲ್ಲಿ ನೌಕರಿ, ಗಾಯಾಳುವಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಭರವಸೆ ನೀಡಿದ ಶಾಸಕ ಯತ್ನಾಳ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಈಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಲ ಅವರ ಮನೆಗೆ ಹಾಗೂ ಗಾಯಗೊಂಡ ಯುವಕರ ಮನೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಶಾಸಕರು, ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಸ್ಪರ್ಶದಿಂದ ದುರ್ಘಟನೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮೃತ ಯುವಕನ ಸಹೋದರಿ ಮೋನಿಕಾ ಸಂಕಪಾಲ ಬಿಕಾಂ‌ ಪದವಿಧರೆ ಆಗಿದ್ದು, ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಂಡು, ಅವರ ಕುಟುಂಬದ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.ಅದೇ ರೀತಿ…

Read More

ಆಲಮಟ್ಟಿಯಲ್ಲಿ ಕೃಷ್ಣಾ ಜಲಾಶಯಕ್ಕೆ ಬಾಗಿನ ಅರ್ಪಣೆ | ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಕುರಿತು ವಾರದೊಳಗೆ ಸಭೆ | ಸಿಎಂ ಸಿದ್ಧರಾಮಯ್ಯ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಸಭೆ ಕರೆದು ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅವರು ಶನಿವಾರ ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತ ಇವರ ವತಿಯಿಂದ ಆಯೋಜಿಸಲಾಗಿದ್ದ ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗುವುದರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತದೆ. ಈ ಹಿನ್ನಲೆಯಲ್ಲಿ ರೈತರು ಪರಿಹಾರ ಕೊಡಿ ಎಂದು ನ್ಯಾಯಾಲಯದ ಮೊರೆ ಹೋಗದಂತೆ ಅವರು ಮನವಿ ಮಾಡಿಕೊಂಡರು.ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ರೈತ ಹೋರಾಟಗಾರರೊಂದಿಗೆ ಹಿಂದೆಯೇ ಬೆಳಗಾವಿಯಲ್ಲಿ ಸಭೆ ನಡೆಸಿತ್ತು. ಅಲ್ಲಿ ಎಲ್ಲರೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಕಾರಿ ಪ್ರೌಢಶಾಲೆ ಭೂತನಾಳ ಎಲ್.ಟಿ. ನಗರವಲಯ ವಿಜಯಪುರ ಶಾಲೆಯ ವಿದ್ಯಾರ್ಥಿಗಳು 2025-26 ನೇ ಸಾಲಿನ “ಸಿದ್ದೇಶ್ವರ ಬಿ” ನಗರ ವಲಯ ವಿಜಯಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಪು ಆಟದಲ್ಲಿ ಭಾಗವಹಿಸಿ ಈ ಕೆಳಗಿನಂತೆ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

Read More

ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಲವು ದಶಕಗಳಿಂದ ಕರ್ನಾಟಕ ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ ಮಾಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ಮಾತ್ರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸಾಧ್ಯ, ಜನತೆ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಹೇಳಿದರು.ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಆಯೋಜಿಸಲಾದ ಕಾರ್ಯಕರ್ತರ ಸಭೆ, ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಸರ್ಕಾರ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ತರುವ ಪ್ರಯತ್ನ ಮಾಡುತ್ತಿದ್ದು ಇದು ಸರಿಯಲ್ಲ, ಸರ್ಕಾರವೇ ಪೂರ್ಣ ಪ್ರಮಾಣದ ಮೆಡಿಕಲ್ ಕಾಲೇಜು ಸ್ಥಾಪಿಸಲಿ. ಈಗಾಗಲೇ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಗಿದೆ” ಎಂದು ಭೋಗೇಶ್ ಸೋಲಾಪುರ್ ಹೇಳಿದರು.ಆಮ್ ಆದ್ಮಿ ಪಕ್ಷದ ಇಂಡಿ ತಾಲೂಕು ಅಧ್ಯಕ್ಷರಾಗಿ ಗೋಪಾಲ್ ಪಾಟೀಲ್ ಅಧಿಕಾರ ಸ್ವೀಕರಿಸಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಕ ಮನುಷ್ಯನ ಸೃಷ್ಟಿಕರ್ತ. ಅವನು ಮಾನವಕುಲ, ವರ್ತಮಾನ ಮತ್ತು ಭವಿಷ್ಯದ ಸಂಪೂರ್ಣ ನಾಗರಿಕತೆಯ ಅಡಿಪಾಯ. ಶಿಕ್ಷಕರ ಸಕ್ರಿಯ ಸಹಕಾರದಿಂದ ರಾಷ್ಟ್ರದ ಪುನರ್ನಿರ್ಮಾಣ ಸಾಧ್ಯ ಎಂದು ಮಡಿಕೇಶ್ವರದ ಸರಕಾರಿ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ “ಶಿಕ್ಷಕರು ರಾಷ್ಟ್ರ ನಿರ್ಮಾಪಕರು”-ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯ, ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಸುತ್ತಾ,ಸೃಜನಾತ್ಮಕ ಚಿಂತನೆ ಮತ್ತು ನವೀನತೆಗೆ ಪ್ರೋತ್ಸಾಹಿಸುತ್ತಾರೆ. ಇದು ದೇಶದ ಆವಿಷ್ಕಾರ ಮತ್ತು ಪ್ರಗತಿಗೆ ಅತ್ಯಗತ್ಯ ಎಂದು ಹೇಳಿದರು.ಮುಖ್ಯ ಅತಿಥಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಕರು ರಾಷ್ಟ್ರ ನಿರ್ಮಾಪಕರು. ಅವರು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಜ್ಞಾನ, ದೇಶಭಕ್ತಿ,ಮೌಲ್ಯ, ಸಾಮಾಜಿಕ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸುವ ಮೂಲಕ ದೇಶದ ಏಕತೆ-ಪ್ರಗತಿಗೆ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಉಮರಜ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರೌಢ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಜಗದೀಶ ವಾಘಮೋರೆ ಉದ್ದ ಜಿಗಿತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ ಹಾಗೂ ೧೦೦ ಮೀ ಓಟದಲ್ಲಿ ಪ್ರಥಮ, ಸಮಿತ ಚೌಡಕಿ ೧೫೦೦ ಮೀ ಹಾಗೂ ೩೦೦೦ ಮೀ ಓಟದಲ್ಲಿ ದ್ವಿತೀಯ, ಕಿರಣ ಡೊಳ್ಳಿ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಬಾಲಕರ ೪*೧೦೦ ಮೀ ರೀಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಾಧಕರ ಜನ್ಮದಿನವನ್ನು ಜಯಂತಿಯೆಂದು ಆಚರಿಸುತ್ತೇವೆ. ಸಾಧನೆ ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ. ಸರ್ವರ ಒಳಿತಿಗಾಗಿ ಮಾಡುವುದು.ಅಂಥವರ ಸಾಲಿನಲ್ಲಿ ಶ್ರೇಷ್ಠ ಶಿಕ್ಷಕರು ಹಾಗೂ ರಾಷ್ಟ್ರಪತಿಗಳಾಗಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬರು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ ವಾಲಿಕಾರ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.ಡಾ: ಸರ್ವಪಲ್ಲಿ ರಾಧಾಕೃಷ್ಣನರ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಇದು ನಮ್ಮ ಸೌಭಾಗ್ಯ ಎಂದರು.ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವವರೇ ಶಿಕ್ಷಕರು. ಇಂದು ಅಂತಹ ಶಿಕ್ಷಕರನ್ನು ಸ್ಮರಿಸುವ ಹಾಗೂ ಗೌರವಿಸುವ ದಿನವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು. ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಹಾದೇವಿ ಕೇಶೆಟ್ಟಿ ಅವರು ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.ಶಿಕ್ಷಕ ಜಗದೀಶ ಚಲವಾದಿ ನಿರೂಪಿಸಿದರು. ಶಿಕ್ಷಕ ಡಿ ಎಸ್ ಬಗಲಿ ಸ್ವಾಗತಿಸಿ ವಂದಿಸಿದರು.ಶಿಕ್ಷಕರಾದ ಮಹಾದೇವ ಆದಿಗೊಂಡೆ, ಎಂ…

Read More