Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಯಾಗಲಿ :ಇಂದುಶೇಖರ

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026

ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯತ್ನಾಳರಿಗೆ ಮರು ಜೀವ ಕೊಟ್ಟಿದ್ದ ಶಿವಾನಂದ ಪಾಟೀಲ
(ರಾಜ್ಯ ) ಜಿಲ್ಲೆ

ಯತ್ನಾಳರಿಗೆ ಮರು ಜೀವ ಕೊಟ್ಟಿದ್ದ ಶಿವಾನಂದ ಪಾಟೀಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಾಸಕ ಯತ್ನಾಳ ರಿಗೆ ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ಟಾಂಗ್

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಹಿರೇಬೇವನೂರ ಸಕ್ಕರೆ ಕಾರ್ಖಾನೆ ವಿಷಯವಾಗಿ ಶಾಸಕ ಯತ್ನಾಳ ದೊಡ್ಡ ಸಮಸ್ಯೆಯಲ್ಲಿದ್ದರು, ಆಗ ಇದೇ ಸಚಿವ ಶಿವಾನಂದ ಪಾಟೀಲರು ಮುತುವರ್ಜಿ ವಹಿಸಿ ಸಕ್ಕರೆ ಕಾರ್ಖಾನೆ ಸಮಸ್ಯೆ ಪರಿಹರಿಸಿದರು, ಆಗ ಯತ್ನಾಳರಿಗೆ ಮರು ಜೀವ ಬಂತು, ಅದೇ ತೆರನಾಗಿ ಪಕ್ಷೇತರರಾಗಿ ವಿಧಾನ ಪರಿಷತ್ ಚುನಾವಣೆ ಸ್ಪರ್ಧೆ ಮಾಡಿದಾಗ ಇದೇ ಶಿವಾನಂದ ಪಾಟೀಲರಿಗೆ ನೀವು ಕಾಲು ಹಿಡಿದಿಲ್ಲವೇ? ಅವರ ಉಪಕಾರವನ್ನು ನೀವು ಮರೆತಿದ್ದೀರಾ ಎಂದು ಕೆಪಿಸಿಸಿ ಸದಸ್ಯ ಎಸ್.ಎಂ. ಪಾಟೀಲ ಗಣಿಹಾರ ನಗರ ಶಾಸಕ ಯತ್ನಾಳರನ್ನು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದ ಶಾಸಕ ಯತ್ನಾಳರು ನಂತರ ಪಡೆದ ಲಾಭದಲ್ಲಿ ಒಂದೇ ಒಂದು ರೂ. ಲಾಭವನ್ನು ರೈತರಿಗೆ ನೀಡಲಿಲ್ಲ ಎಂದರು.
ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲರ ಮನೆಗೆ ನೀವು ಹೋಗಿಲ್ಲವೇ? ಎಂದರು.
ಸಚಿವ ಪಾಟೀಲರ ಸವಾಲು ಸ್ವೀಕರಿಸದೇ ಹೋದರೆ ಹಿಂದೂ ಇಲಿ ಎಂಬ ಬಿರುದು ನಿಮಗೆ ಖಾಯಂ. ಹಿಂದೆ ದೇವರ ಹಿಪ್ಪರಗಿ, ವಿಜಯಪುರ ನಗರದಲ್ಲಿ ಸೋತಿದ್ದು ನೆನಪಿಲ್ಲವೇ? ಬಿಜೆಪಿ ಮತದಿಂದ ಆಯ್ಕೆಯಾದ ನೀವು ಪಕ್ಷ ಉಚ್ಚಾಟನೆಯಾದ ನಂತರ ರಾಜಿನಾಮೆ ನೀಡಬೇಕಿತ್ತು, ನಿಮಗೆ ಧಮ್ ಇಲ್ಲ, ನಿಮ್ಮ ತುಟಿಯಲ್ಲಿ ಮಾತ್ರ ಧಮ್ ಇದೆ ಎಂದರು. ಕಾಂಗ್ರೆಸ್ ವಿರುದ್ಧ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಂ.ಬಿ. ಪಾಟೀಲರನ್ನು ಹೊಗಳುವ ಯತ್ನಾಳರು ಒಂದು ರೀತಿ ಸ್ವಾಭಿಮಾನ ಕಳೆದುಕೊಂಡಿದ್ದಾರೆ ಎಂದರು.
ಇಂಡಿ ಶಾಸಕರ ಹೆಸರು ಹೇಳಲು ಯೋಗ್ಯತೆ ಯತ್ನಾಳರಿಗೆ ಇಲ್ಲ
ಇಂಡಿ ಶಾಸಕ ಯಶವಂತರಾಯಗೌಡರ ಹೆಸರು ಹೇಳಲು ಸಹ ನಿಮಗೆ ಯೋಗ್ಯತೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ ಎಸ್.ಎಂ. ಪಾಟೀಲ ಗಣಿಹಾರ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ನುಡಿದಂತೆ ನಡೆದು ತೋರಿಸಿದ್ದಾರೆ, ಇಂಡಿ ಮತಕ್ಷೇತ್ರವನ್ನು ಒಮ್ಮೆ ಹೋಗಿ ನೋಡಿ.
ಹಿಂದೊಮ್ಮೆ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಅಸಮಾಧಾನದಿಂದ ನೊಂದು ರಾಜಕೀಯವೇ ಸಾಕು ಎಂದು ತಮ್ಮ ಸಂದೇಶದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದಾಗ, ವೇದಿಕೆಯಲ್ಲಿದ್ದ ಪ್ರಭಾವಿ ಸಚಿವ ಮಹಾದೇವಪ್ಪ ಅವರು `ನೀವು ಈ ಭಾಗದ ಶಾಸಕರಾಗದೇ ಹೋದರೆ ಇಲ್ಲಿ ಕೆಂಪು ನೀರು ಹರಿಯುತ್ತದೆ, ನಿಮ್ಮಂತಹವರು ರಾಜಕೀಯದಲ್ಲಿ ಇರಬೇಕು’ ಎಂದು ಹೇಳಿದ್ದರು. ಯಶವಂತರಾಯಗೌಡ ಬಗ್ಗೆ ಟೀಕೆ ಮಾಡುವ ಮೊದಲು ಯತ್ನಾಳರು ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕಿದೆ ಎಂದರು.
ನೀವು ಸ್ಪೀಕರ ಬಳಿ ಬನ್ನಿ, ನಿಮ್ಮ ರಾಜಿನಾಮೆ ಪತ್ರವನ್ನು ಜೊತೆಗೆ ತೆಗೆದುಕೊಂಡು ಬನ್ನಿ, ಇನ್ನೊಮ್ಮೆ ಬೇಕಾದರೂ ಸಚಿವ ಶಿವಾನಂದ ಪಾಟೀಲರು ರಾಜಿನಾಮೆ ಪತ್ರ ಬರೆಯಲು ಸಿದ್ದ ಎಂದು ಇನ್ನೊಂದು ಸವಾಲನ್ನು ಎಸ್.ಎಂ. ಪಾಟೀಲ ಗಣಿಗಾರ ಹಾಕಿದರು.
ಸಚಿವ ಶಿವಾನಂದ ಪಾಟೀಲರು ಯತ್ನಾಳರ ಛಾಲೆಂಜ್ ಸ್ವೀಕರಿಸಿದ ನಂತರ ಒಂದು ರೀತಿ ಹಿಂದೂ ಹುಲಿ ಹಿಂದೂ ಇಲಿಯಾಗಿದೆ ಎಂದರು.
ಯತ್ನಾಳರ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಆಯೋಜನೆಯಾಗಿತ್ತು, ಗೋವುಗಳಿಗೆ ಸಂಸ್ಕೃತಿ ಬಂತು ಆದರೆ ನಗರ ಶಾಸಕರಿಗೆ ಸಂಸ್ಕೃತಿ ಬರಲಿಲ್ಲ. ಹಿಂದೂ ಹುಲಿ ಈಗ ಇಲಿಯಾಗಿ ಕೇವಲ ಸಬೂಬು ಹೇಳುತ್ತಿದೆ ಎಂದು ಲೇವಡಿ ಮಾಡಿದರು. ಬಸವ ಜಯಂತಿಯಲ್ಲೂ ಸಹ ಹಿಂದೂ ಮುಸ್ಲಿಂ ವಿಷಯ ಮಾತನಾಡುವ ಮೂಲಕ ಅಣ್ಣ ಬಸವಣ್ಣನವರಿಗೂ ಯತ್ನಾಳ ಅವಮಾನ ಮಾಡಿದ್ದಾರೆ, ಅವರಿಗೆ ಅಣ್ಣ ಬಸವಣ್ಣ ಹಾಗೂ ಲಿಂಗಾಯತ ಧರ್ಮದ ಮೇಲೆ ಗೌರವವಿಲ್ಲ ಎಂದರು.
ಸಚಿವ ಶಿವಾನಂದ ಪಾಟೀಲರ ಸವಾಲು ಸ್ವೀಕರಿಸಿದರೆ ನಿಮಗೂ ಗೌರವ, ನಿಮ್ಮ ಹಿಂದೆ ಚಪ್ಪಾಳೆ ತಟ್ಟುವವರೆಗೆ ಗೌರವ ಎಂದರು.
ದಲಿತರ ಶ್ರೇಯೋಭಿವೃದ್ದಿಗೆ ನಿಮ್ಮ ಕೊಡುಗೆ ಏನು? ಮುಸ್ಲಿಂರನ್ನು ದೇಶ ಬಿಟ್ಟು ಕಳುಹಿಸಿ ಎಂದು ಡಾ.ಬಿ.ಆರ್. ಅಂಬೇಡ್ಕರ್ ಎಲ್ಲಿಯೂ ಹೇಳಿಲ್ಲ, ಈ ರೀತಿ ಹೇಳಿಕೆ ನೀಡಿದ ಬಗ್ಗೆ ಅಧಿಕೃತ ದಾಖಲೆ ಕೊಡಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರಾದ ಎಂ.ಸಿ. ಮುಲ್ಲಾ, ಡಾ.ರವಿಕುಮಾರ ಬಿರಾದಾರ, ಫಯಾಜ್ ಕಲಾದಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಯಾಗಲಿ :ಇಂದುಶೇಖರ

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026

ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು

ಶಾಶ್ವತ ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಯಾಗಲಿ :ಇಂದುಶೇಖರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 27, 2026
    In ದಿನಪತ್ರಿಕೆ
  • ಸಿಂದಗಿ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಕಾರು
    In (ರಾಜ್ಯ ) ಜಿಲ್ಲೆ
  • ಶಾಶ್ವತ ಗಣೇಶ ವಿಸರ್ಜನೆ ಹೊಂಡ ನಿರ್ಮಾಣಕ್ಕೆ ಕ್ರಮ
    In (ರಾಜ್ಯ ) ಜಿಲ್ಲೆ
  • ಇಂದು ಎಸ್.ಬಿ.ಆರ್ಟ್ಸ್ & ಕೆ.ಸಿ.ಪಿ. ಸೈನ್ಸ್ ಕಾಲೇಜ್ನಲ್ಲಿ ಖೇಲೋ ಇಂಡಿಯಾ ಸಂವಾದ
    In (ರಾಜ್ಯ ) ಜಿಲ್ಲೆ
  • ಐವರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾದ ತಾಯಿ!
    In (ರಾಜ್ಯ ) ಜಿಲ್ಲೆ
  • ಫುಲ್ ಮ್ಯಾರಾಥಾನ ನಡೆಸಲು ಈಗಿನಿಂದಲೇ ಸಿದ್ಧತೆ
    In (ರಾಜ್ಯ ) ಜಿಲ್ಲೆ
  • ಆದೇಶವಿದ್ದರೂ ನಿಯಮ ಪಾಲಿಸದ ಸಾರಿಗೆ ಸಿಬ್ಬಂದಿ :ಆರೋಪ
    In (ರಾಜ್ಯ ) ಜಿಲ್ಲೆ
  • ಆ.೨೭ರಂದು ಅಥಣಿ ತಾಲೂಕು ಮಟ್ಟದ ಕ್ರೀಡಾಕೂಟ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಭೂತನಾಳ ಕೆರೆಯಲ್ಲಿ 6 ಶವ ಪತ್ತೆ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.