ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲೆˌ ಸಾಹಿತ್ಯ ಮತ್ತು ˌ ಸಂಸ್ಕೃತಿ ಸಂಸ್ಥೆಯಾದ “ಸಾಹಿತ್ಯ ಸಂಗಮ” ವೇದಿಕೆ ವಿನೂತನ ಕಾರ್ಯಕ್ರಮ ಆಯೋಜಿಸಿದೆ.
ವಿಷಯ: ‘ಬಸವನಬಾಗೇವಾಡಿಯ ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ’
ನೀವು ಮಾಡಬೇಕಾಗಿರುವುದಿಷ್ಟೆ..
ನಿಯಮಗಳು
1) ಬಸವ ಜನ್ಮಸ್ಥಳ ಸ್ಮಾರಕ ಕುರಿತಾಗಿಯೆ ಕವನ ರಚಿಸಬೇಕು. ಸ್ಮಾರಕದ ಪರಿಚಯ ಬೇಕಾದಲ್ಲಿ ನನ್ನ ವಾಟ್ಸಪ್ ಸಂಖ್ಯೆ ಸಂಪರ್ಕಿಸಬಹುದು.
2) ಕವನ ಸ್ಪರ್ಧೆ ಆಗಿರುವುದರಿಂದ ಹಿರಿಯ ಸಾಹಿತಿಗಳೊಬ್ಬರು ನಿರ್ಣಾಯಕರಾಗಿರುತ್ತಾರೆ
3) ಪ್ರಥಮˌ ದ್ವಿತೀಯˌ ತೃತೀಯ ಹಾಗೂ ಮೆಚ್ಚುಗೆ ಪಡೆದ ಕವನಗಳೆಂದು ಐದು ಜನರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
4) ಭಾಗವಹಿಸಿದ ಎಲ್ಲ ಕವಿಗಳಿಗೆ ಕವಿತೆ ವಾಚಿಸಲು ಅವಕಾಶವಿದ್ದುˌ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಸಾಹಿತ್ಯಾಸಕ್ತರೊಬ್ಬರು ಕವನ ಸಂಕಲನ ಪ್ರಕಟಿಸಲು ಮುಂದೆ ಬಂದಿರುವುದು ಹರ್ಷದ ಸಂಗತಿ.
5) ‘ಸಾಹಿತ್ಯ ಸಂಗಮ’ ಕವನ ಸ್ಪರ್ಧೆ ಎಂದು ಬರೆಯುವುದು ಕಡ್ಡಾಯ.
ಕವನಗಳನ್ನು ಗ್ರುಪ್ಪಿನಲ್ಲಿ ಹಾಕುವಂತಿಲ್ಲ.
6) ಕವನಗಳನ್ನು ನಿಗದಿತ ದಿನಾಂಕದೊಳಗೆ ನನ್ನ ವೈಯಕ್ತಿಕ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.
7) ಕವಿಗಳು ತಮ್ಮ ಹೆಸರು ವಿಳಾಸˌ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು
8) ಕವನ ಕಳುಹಿಸಲು ಕೊನೆಯ ದಿನಾಂಕ 15/05/2025 (ಸಂಜೆ 05 ಗಂಟೆಯೊಳಗೆ)
ಅವಧಿ ಮೀರಿ ಬಂದ ಕವನಗಳು ಸ್ಪರ್ಧೆಗೆ ಅರ್ಹವಲ್ಲ.
9) ಕವನಗಳನ್ನು ಮುರುಗೇಶ ಸಂಗಮ, ಸಂಚಾಲಕ
9449437604 ಮೊ. ಸಂಖ್ಯೆಗೆ ಕಳುಹಿಸಬೇಕು.
