ಉದಯರಶ್ಮಿ ದಿನಪತ್ರಿಕೆ
ಚಡಚಣ: ೨೦೨೪-೨೦೨೫ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಚಡಚಣ ತಾಲೂಕಿನ ನಿವರಗಿಯ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ವಿದ್ಯಾರ್ಥಿನಿ ಕುಮಾರಿ ಶುಭಲಕ್ಷ್ಮೀ ರಾ.ವಾಲಿಕಾರ ೯೫.೫೨% ಪ್ರಥಮ ಸ್ಥಾನ, ಕುಮಾರಿ ಸಾಕ್ಷೀ.ರಾ.ತೇಲಿ ೯೨.೨೬% ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ, ಕುಮಾರಿ ಶೃಷ್ಠಿ .ಸಂ.ಕಟಗೇರಿ ೯೦.೨೪% ತೃತೀಯ ಸ್ಥಾನವನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ರಾಜಶ್ರೀ.ಮ.ಚೌಧರಿ ೮೭.೩೬%, ರವಿಶಂಕರ.ಮ.ಪೋಲಾದಿ ೮೭.೨೦%, ಸನ್ನಿಧಿ.ಸು.ಶಹಾ ೮೩.೮೪%, ರವಿಕಾಂತ.ಶಿ.ಜಾಲಗೇರಿ ೮೩.೫೨%, ಶ್ರಾವಣಿ.ಅ.ರಾಜಮಾನ್ಯ ೮೧.೧೨%, ಸ್ನೇಹಲ್.ಶ.ಮಠಪತಿ ೭೮.೪೦%, ಭಾಗ್ಯಶ್ರೀ.ಸಿ.ಬಿರಾದಾರ ೭೭.೬೦%, ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಗೌಡ ಅಣ್ಣಾರಾಯ ಪಾಟೀಲ, ಮುಖ್ಯಗುರುಗಳಾದ ರವಿಕುಮಾರ ನಾಯಕ್ ಬಿ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡೆಸಿದ್ದಾರೆ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

