ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯಲ್ಲಿನ ಒಟ್ಟು 7771 ವಿದ್ಯಾರ್ಥಿಗಳಲ್ಲಿ 3779 ವಿದ್ಯಾರ್ಥಿಗಳು, 3992 ವಿದ್ಯಾರ್ಥಿನಿಯರು ಉತ್ತಿರ್ಣರಾಗಿದ್ದಾರೆ ಎಂದು ಬಿಇಓ ಎ.ಕೆ.ಬಸಣ್ಣವರ ತಿಳಿಸಿದ್ದಾರೆ.
ಜಮಖಂಡಿ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.70.34ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಉತ್ತಮ ಫಲಿತಾಂಶ ಒದಗಿಸಿಕೊಟ್ಟ ಪ್ರೌಢಶಾಲೆಯ ಸಹ ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಇಲಾಖೆಯಿಂದ ಅಭಿನಂದಿಸಿದ್ದಾರೆ.
ಬನಹಟ್ಟಿಯ ಎಸ್‌ಆರ್‌ಎ ಕಾಲೇಜಿನ ಲಕ್ಷ ಸುನೀಲ ಹಿರಕಾಳೆ 623, ಮಧುರಖಂಡಿಯ ಸಾಯಿ ಸಂಕಲ್ಪ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಸಿಂಚನಾ ಶರಣಪ್ಪಾ ಪರುತಿ 623, ಬನಹಟ್ಟಿ ಎಸ್‌ಆರ್‌ಎ ಕಾಲೇಜಿನ ಅನಯಾ ಸಂಗಪ್ಪಾ ನಂದ್ಯಾಳ 622, ಯಲ್ಲಟ್ಟಿಯ ಆರ್‌ಎಂಎಸ್‌ಎ ನಿರ್ಮಲಾ ಮಲ್ಲಿಕಾರ್ಜುನ ಸಂತಿ 622, ತೊದಲಬಾಗಿ ಕಿತ್ತೂರ ರಾಣಿ ಚನ್ನಮ್ಮ ರೆಸಿಡೆನ್ಸಿಯಲ್ ಶಾಲೆಯ ಸಹನಾ ಸಂಗಮೇಶ ತಿಪರಡ್ಡಿ 622, ಹನಗಂಡಿಯ ಮೋರಾರ್ಜಿ ದೇಸಾಯಿ ಶಾಲೆಯ ಭಾಗ್ಯಶ್ರೀ ಬಸನಗೌಡಾ ಬಿಪಾಟೀಲ 622, ತೊದಲಬಾಗಿ ಕಿತ್ತೂರ ರಾಣಿ ಚನ್ನಮ್ಮ ರೆಸಿಡೆನ್ಸಿಯಲ್ ಶಾಲೆಯ ಪ್ರೀತಿ ರಮೇಶ ಭಾವಿಕಟ್ಟಿ 621, ಸಹನಾ ಶೇಖರ ಗಲಗಲಿ 621, ತುಂಗಳ ಸ್ಕೂಲಿನ ವರ್ಷಾ ರಮೇಶ ಸೋಮನ್ನವರ 621, ಶ್ರಾವಣಿ ಮಲ್ಲಿಕಾರ್ಜುನ ಶಿರೂರ 621 ಅಂಕ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

