Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಪ್ರೊ.ಶಿವಾನಂದ ಎಸ್.ಪಟ್ಟಣಶೆಟ್ಟರ ಕಾರ್ಯದರ್ಶಿಗಳು.ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಗದಗಹಾಗೂ ಎಸ್.ವ್ಹಿ.ವ್ಹಿ.ಅಸೋಸಿಯೇಷನ್, ಶಿಕ್ಷಣ ಸಂಸ್ಥೆ ಆಲಮಟ್ಟಿ ಉದಯರಶ್ಮಿ ದಿನಪತ್ರಿಕೆ ವಿಶ್ವಗುರು ಅಣ್ಣ ಬಸವಣ್ಣನವರ ನೆಲೆಯಲ್ಲಿ ಸಾಹಿತ್ಯದ ಪರಿಮಳ ಸೂಸುತ್ತಿರುವ ನಂದಿ ಸಾಹಿತ್ಯ ವೇದಿಕೆ ಕೈಂಕರ್ಯ ಅನೂನ್ಯ, ಅನುಪಮ. ಸಾಹಿತ್ಯ ಪರಧಿ ಸಾರುತ್ತಿರುವ ಈ ವೇದಿಕೆಗೆ ಈಗ ಇಪ್ಪತೈದನೆ ವಸಂತದ ಸಾಹಿತ್ಯ ತೃಷೆಯ ಋತುಗಾನ ಎಂಬುದು ಸಂತಸ. ಬಸವ ಜಯಂತಿ ರೂವಾರಿ ಶರಣ ಹರ್ಡೇಕರ ಮಂಜಪ್ಪನವರನ್ನು ಪೂಜ್ಯನೀಯ ಭಾವದಿಂದ ಸ್ಮರಿಸಿ ಮಂಜಪ್ಪನವರ ಕಾಯಕ ತತ್ಪರತೆ ತಿರುಳಿನ ದೃಢ ನಿಲುವು ಹೊಂದಿರುವ ಬಸವನ ಬಾಗೇವಾಡಿಯ ನಂದಿ ಸಾಹಿತ್ಯ ವೇದಿಕೆಯ ಸಮಾಜಮುಖಿ ಸಾಹಿತ್ಯ ಪರ ಕಾಯಕ ಕರುನಾಡಿನ ಸಾಹಿತ್ಯಾಸಕ್ತರ ಮನ ತಣಿಸುತ್ತಿದೆ. ಬಸವೇಶ್ವರರ ನೆಲದಲ್ಲಿ ಸೃಜನಾತ್ಮಕ ಸಾಹಿತ್ಯ ಕೃಷಿ ಬಿತ್ತಿ ಬೆಳೆಯುತ್ತಿದೆ. ಈ ಅನುಪಮ ಕಾರ್ಯ ಸಾಹಿತ್ಯ ಲೋಕದ ವೈವಿಧ್ಯತೆಯ ಪ್ರತಿಬಿಂಬವಾಗಿದೆ. ಸಾಹಿತ್ಯ ಸುಗನ್ನತೆಯ ರಸಸತ್ವದಿಂದಲೇ ನಂದಿ ಸಾಹಿತ್ಯ ವೇದಿಕೆ ನಾಡಿನ ಸಾಹಿತ್ಯ ಪ್ರಿಯರ ಗಮನ ಸೆಳೆಯುತ್ತಿರುವ ಸಾಹಿತ್ಯ ಸೇವಾ ಕಾರ್ಯ ಮಾದರಿಯಾಗಿದೆ.…
ಇಂದು (ಸೆಪ್ಟಂಬರ್ ೧೦, ಬುಧವಾರ) “ವಿಶ್ವ ಆತ್ಮಹತ್ಯೆ ತಡೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಯುವಕರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಅಥವಾ ಫೇಲ್ ಆದಾಗ ಮತ್ತು ಸಾಮಾನ್ಯ ಜನರು ಸಂಸಾರದಲ್ಲಿರುವ ಎದುರಾಗುವ ಸಂಕಷ್ಟ, ರೈತರು ಸಾಲ ಬಾಧೆಯಿಂದ ಮತ್ತು ಕೌಟುಂಬಿಕ ಕಲಹದಂತಹ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ದೃಶ್ಯಗಳು ನಮ್ಮ ಕಣ್ಮುಂದೆ ಕಾಣ ಸಿಗುತ್ತವೆ. ಆತ್ಮಹತ್ಯೆಗೆ ಕಾರಣಗಳು ಹಲವು ಇರಬಹುದು. ಶೈಕ್ಷಣಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಮಾನಸಿಕ ಆಘಾತ, ಆರ್ಥಿಕ ಪರಿಸ್ಥಿತಿ, ಬಡತನ, ಸೋಲು, ಪ್ರೇಮ ವೈಫಲ್ಯ, ಮೋಬೈಲ್ ಮೇಲೆ ಅತಿಯಾದ ವ್ಯಾಮೋಹ, ಪರೀಕ್ಷೆಯಲ್ಲಿ ಅನುತ್ತೀರ್ಣ ಮತ್ತು ದೈಹಿಕ-ಲೈಂಗಿಕ ದೌರ್ಜನ್ಯ ಇತ್ಯಾದಿ ಇವೆಲ್ಲವೂ ಆತ್ಮಹತ್ಯೆಗೆ ಕಾರಣಗಳಾಗಿವೆ. ಭಾರತದಲ್ಲಿ ಶೈಕ್ಷಣಿಕ ಸಾಧನೆಗಾಗಿ…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ಊರಿನಲ್ಲಿ ಸುಭದ್ರ ಎಂಬ ಒಬ್ಬ ಶ್ರೀಮಂತನಾದ ವಜ್ರದ ವ್ಯಾಪಾರಿಯು ವಾಸವಾಗಿದ್ದು, ದೇಶ ವಿದೇಶಗಳಿಗೂ ವಜ್ರದ ಹರಳುಗಳನ್ನು ಮಾರಾಟವನ್ನು ಮಾಡುತ್ತಿದ್ದನು. ಈತನು ತನ್ನ ವ್ಯಾಪಾರದ ಅಂಗಡಿಯನ್ನು ಮತ್ತು ತನ್ನ ಮನೆಯನ್ನು ಕಾಯಲು ಮತ್ತು ರಕ್ಷಣೆಗಾಗಿ ದೊಡ್ಡ ಜಾತಿಯ ಒಂದು ನಾಯಿಯನ್ನು ಸಾಕಿದ್ದನು. ನಾಯಿಯನ್ನು ಪಕ್ಕದ ಪಟ್ಟಣದಿಂದ ಹೆಚ್ಚು ಬೆಲೆಯನ್ನು ಕೊಟ್ಟು ಖರೀದಿಸಿ ತಂದಿದ್ದನು. ನಾಯಿಯು ನೋಡಲು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದು, ನೋಡಲು ಅತ್ಯಂತ ಸುಂದರ ಮತ್ತು ಆಕರ್ಷಕವಾಗಿತ್ತು. ಆ ನಾಯಿಯೂ ಸುಭದ್ರನಿಗೆ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ನಾಯಿಯ ಎತ್ತರವಾದ ನೋಟ ಮತ್ತು ಗಂಭೀರ ಮತ್ತು ಏರು ಧ್ವನಿಯ ಬೊಗಳುವ ಸದ್ದಿನಿಂದ ಸುತ್ತಮುತ್ತಲಿನ ಜನರೆಲ್ಲರೂ ಸುಭದ್ರನ ಮನೆಯ ಸುತ್ತ ಸುಳಿಯಲೂ ಹಿಂದೇಟು ಹಾಕುತ್ತಿದ್ದರು. ಸುಭದ್ರನು ತಾನು ಸಾಕಿದ ನಾಯಿಯ ಕುರಿತು ಒಳಗೊಳಗೆ ಹೆಮ್ಮೆಪಡುತ್ತಿದ್ದನು. ತನ್ನ ವಿಶೇಷ ಜಾರಿಯ ನಾಯಿಗೆ ಸುಭದ್ರನು ತಿನ್ನಲು ಎರಡು ಹೊತ್ತು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಾ ಮಾನವತಾವಾದಿಯಾಗಿ, ಸಮಾಜದ ಕಣ್ಣರಳಿಸಿದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರು ಸಾರ್ವಕಾಲಿಕವಾಗಿ ಶ್ರೇಷ್ಠರೇನಿಸಿದ್ದಾರೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾನುವಾರ ನಾರಾಯಣಗುರು ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು. ಕೇರಳದಲ್ಲಿ ಜನಿಸಿದ ಇವರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಶಂಕರಾಚಾರ್ಯರ ಅದ್ವೈತ ಸಾರದಲ್ಲಿ ತಮ್ಮ ದಾರ್ಶನಿಕತೆ ಪ್ರತಿಪಾದಿಸಿ ಎಲ್ಲರನ್ನೂ ಒಂದಾಗಿ ಕಂಡ ಮಹಾನುಭಾವರೆನಿಸಿದ್ದಾರೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ.ಬಿರಾದಾರ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸಾಮಾಜಿಕ ಸಮಾನತೆಯ ಹರಿಕಾರ, ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ. ದೇಶ ಸೇವೆಯೇ ಈಶ ಸೇವೆ ಎಂದು ಸಾರಿದ ಸ್ತ್ರೀ ಸಮಾನತೆಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣಗುರು ಇವರ ಆದರ್ಶಗಳು ಮತ್ತು ಸಂದೇಶಗಳು ನಮಗೆ ದಾರಿದೀಪಗಳಾಗಿವೆ ಎಂದರು.ಗ್ರಾಮ ಆಡಳಿತಾಧಿಕಾರಿ ಅನೀಲ ರಾಠೋಡ, ರಮೇಶ ಈಳಗೇರ, ರಾವುತ ಅಗಸರ ಸಿಬ್ಬಂದಿ ಚನ್ನಬಸು ಹೊಸಮನಿ, ಕಿಶೋರ…
೬೫ ಲಕ್ಷ.ರೂ ಹಣ ಸಂದಾಯವಾದರೂ ದೊರೆಯದ ಜಮೀನು | ಭ್ರಷ್ಟಾಚಾರದಲ್ಲಿ ಅಧಿಕಾರಿ ಶಾಮೀಲಿನ ಶಂಕೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿಷಯದಲ್ಲಿ ಸುಮಾರು ೬೫ ಲಕ್ಷ ರೂ.ಗಳ ಅವ್ಯವಹಾರ ಆಗಿದ್ದು ಕೂಡಲೇ ಇದರ ಕುರಿತು ಕೂಡಲೇ ಕೂಲಂಕುಷ ತನಿಖೆ ನಡೆಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶನಿವಾರ ಆಗಮಿಸಿದ ದಲಿತ ಸಂಘರ್ಷ ಸಮಿತಿ ಹಾಗೂ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಘನತ್ಯಾಜ್ಯ ವಿಲೇವಾರಿ ಘಟಕದ ಜಮೀನಿನ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಅವ್ಯವಹಾರದ ಕುರಿತು ತಹಶೀಲ್ದಾರರ ಗಮನ ಸೆಳೆದರು.ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಪಟ್ಟಣದ ಘನತ್ಯಾಜ್ಯ ವಿಲೇವಾರಿಗೆ ಅಗತ್ಯವಾದ ಜಮೀನು ಖರೀದಿಗಾಗಿ ೨೦೧೫-೧೬ನೇ ಸಾಲಿನ ೧೪ನೇ ಹಣಕಾಸು ಯೋಜನೆಯಲ್ಲಿ ೧೦.೦೨ ಲಕ್ಷ, ರೂ.ಗಳು ಹಾಗೂ ೧೮-೧೯ನೇ ಸಾಲಿನಲ್ಲಿ ೧೧.೬೪ ಲಕ್ಷ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜೊತೆ ವೇತನಾನುದಾನ ಭಾಗ್ಯವನ್ನು ನೀಡುವಂತೆ ವಿಜಯಪುರ ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಪೂಜಾರಿ ಅವರು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಶನಿವಾರ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರವೇ ರಾಜ್ಯದ ಎಲ್ಲಾ ಭಾಗಗಳಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ಖಾಸಗಿಯವರು ಮತ್ತು ಮಠ ಮಾನ್ಯಗಳು ಶಾಲಾ-ಕಾಲೇಜುಗಳನ್ನು ತೆರೆದು ಶಿಕ್ಷಣ ನೀಡುತ್ತಾ ಸರ್ಕಾರದ ಜವಾಬ್ದಾರಿಯನ್ನು ಕಡಿಮೆ ಮಾಡಿವೆ. ಸುಪ್ರಿಂ ಕೋರ್ಟ್ತೀರ್ಪಿನ ಪ್ರಕಾರ ಶಿಕ್ಷಣ ನೀಡುವ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನುದಾನ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಮಲತಾಯಿ ಧೋರಣೆ ತಳೆದಿರುವುದು ಕನ್ನಡಿಗರ ದುರ್ದೈವ ! ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಂಧೆ ಅವ್ಯಾಹತವಾಗಿ ಜರುಗುತ್ತಿದ್ದು ಇದನ್ನು ತಡೆಗಟ್ಟಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶನಿವಾರ ಆಗಮಿಸಿದ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಅಕ್ಕಿ ಅಕ್ರಮದ ಕುರಿತು ತಹಶೀಲ್ದಾರರ ಗಮನ ಸೆಳೆದರು.ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹಸನ ನದಾಫ್ ಮಾತನಾಡಿ, ಸರ್ಕಾರ ಬಡವರಿಗಾಗಿ ನೀಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲಾಗುತ್ತಿದೆ. ಪಟ್ಟಣ ಸಹಿತ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಅಕ್ಕಿ ಸಂಗ್ರಹಣೆಯ ದಂಧೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರು ಯಾವುದೇ ರೀತಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಅಕ್ಕಿ ಕಳ್ಳರ ಜೊತೆ ಅಧಿಕಾರಿಗಳು ಶಾಮೀಲು ಆಗಿರುವ ಸಂಶಯ ಮೂಡುತ್ತಿದ್ದು ಕೂಡಲೇ ತಹಶೀಲ್ದಾರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು.ಅಕ್ಕಿ ಅಕ್ರಮ ಸಂಗ್ರಹಣೆಯಲ್ಲಿ ತೊಡಗಿದವರನ್ನು ಕೂಡಲೇ ಪತ್ತೆ ಹಚ್ಚಿ ಅಂತವರ ವಿರುದ್ಧ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬ್ರಹ್ಮಶ್ರೀ ನಾರಾಯಣ ಗುರು ಅವರು ಪ್ರತಿಪಾದಿಸಿದಂತೆ ಎಲ್ಲರೂ ಮನುಷ್ಯರಾಗಿ ಗೌರವದಿಂದ ಬದುಕುವಂತಹ ಸಮಸಮಾಜದ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ತಹಶೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿ, ನಾವೆಲ್ಲರೂ ಒಂದೇ ಎಂಬ ಸಮ ಸಮಾಜದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದು ನಾರಾಯಣ ಗುರುಗಳ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಯಾವುದೇ ಧರ್ಮ, ಜಾತಿ, ಭಾಷೆಗೆ ಸೀಮಿತರಾಗಿದ್ದವರಲ್ಲ. ಅವರು ಬುದ್ದ, ಬಸವ, ಕನಕದಾಸ ರೀತಿಯ ಸಂತರು. ಸಮಾಜದಲ್ಲಿ ಸುಧಾರಣೆ ಬಯಸಿ ಅದಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಎನ್.ಕೆ. ನದಾಫ್ , ಲೋಕೇಶ ಪೂಜಾರಿ, ಯಮನಪ್ಪ ಪೂಜಾರಿ ಬಾಪು ಈಳಗೇರ, ಶ್ರೀಶೈಲ ಹಂಡಿ ಮತ್ತು ಸಮಾಜದ ಹಿರಿಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವಾತಂತ್ರೋವದಲ್ಲಿ ಪರಕೀಯರನ್ನು ಹೊರಗಟ್ಟಲು ಅಸ್ತçವಾಗಿ ಭಾರತೀಯರನ್ನು ಸಂಘಟಿಸಲು ಆರಂಭವಾದ ಸಾರ್ವಜನಿಕ ಗಣೆತೋತ್ಸವ ಈಗ ಪ್ರತಿ ಹಳ್ಳಿಗಳಿಂದ ಹಿಡಿದು ದೇಶದೆಲ್ಲೆಡೆ ಆರಾಧಿಸಲ್ಪಡುತ್ತಿದೆ. ಎಂದು ಶಾಶಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ವತಿಯಿಂದ ನಡೆದ ಗಣೇಶ ವಿಸರ್ಜನೆ ಹಾಗೂ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯ ಕ್ರಮ ಮದಲ್ಲಿ ಮಾತನಾಡಿದರು.ಜನರಲ್ಲಿ ಭಕ್ತಿ ಭಾವನೆ ಬೆಳೆಸಲು ಗಣೇತೋತ್ಸವ ಸಹಕಾರಿ, ಬಸವರಾಜೇಂದ್ರ ದೇವಸ್ಥಾನದ ಗಣೇತೋತ್ಸವ ಎಲ್ಲ ಜಾತಿ ಧರ್ಮದವರನ್ನು ಒಳಗೊಂಡು ಮಾದರಿಯಾಗಿ ನಡೆಯುತ್ತಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಮಾತನಾಡಿದರು.ಪುರಸಭೆ ಸದಸ್ಯ ಸುಧೀರ ಕರಕಟ್ಟಿ, ವಿಶಾಲ ಸಿಂದಗಿ, ಗೀರಿಶ ಪೋಪಡಿ, ಆರ್.ವಿ.ಪಾಟೀಲ, ಸೋಮುಸುರಪುರ, ಮತ್ತಿತರಿದ್ದರು.ಇದೇ ವೇಳೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಾಮರಸ್ಯದ ಸಮಾಜ ಕಟ್ಟುವುದಕ್ಕಾಗಿ ಅಣ್ಣ ಬಸವಣ್ಣ, ಶಿರಡಿ ಸಾಯಿಬಾಬಾ, ಸಿದ್ಧೇಶ್ವರ ಶ್ರೀಗಳಂಥ ದೈವಿ ಪುರುಷರು ಕಾಲ ಕಾಲಕ್ಕೆ ಸಮಾಜೊದ್ದಾರಕ್ಕೆ ಜನ್ಮ ತಳೆಯುತ್ತಾರೆ. ಅಂಥ ವಿಶಿಷ್ಟ ಸಾಧನೆಯ ಸಂತ, ಮಹಾತ್ಮರಲ್ಲಿ ಚನ್ನಬಸವೇಶ್ವರ ಮಹಾರಾಜರು ಕೂಡ ಪ್ರಮುಖರು. ಜಾಗತಿಕ ಆಧ್ಯಾತ್ಮಿಕ ಪರಂಪರೆಗೆ ಭಾರತೀಯ ಧಾರ್ಮಿಕ ಪರಂಪರೆ ವಿಶಿಷ್ಠವಾಗಿದೆ. ಇಂಚಗೇರಿ ಮಠದ ವಿಶಿಷ್ಟ ಪರಂಪರೆ ಭಾರತೀಯ ಆಧ್ಯಾತ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.ತಾಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದ್ಧಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ದೇವರ ದರ್ಶನ ಪಡೆದು, ಸನ್ಮಾನಗೊಂಡು ಮಾತನಾಡಿದ ಸಚಿವರು, 1400 ಕೋಟಿ ಜನಸಂಖ್ಯೆಯಲ್ಲಿ ಪದೇ ಪದೇ ಕೆಲವೇ ಕೆಲವರನ್ನು ಮಾತ್ರ ನೆನೆಯುತ್ತೇವೆ ಎಂದರೆ ಸಮಾಜಕ್ಕೆ ಅಂಥ ಸ್ಮರಣೀಯ…
