Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದ ಅಂಗನವಾಡಿ, ವಸತಿ ಶಾಲೆ, ಹಾಸ್ಟೆಲ್ಗಳಿಗೆ ದಿಡೀರ್ ಭೇಟಿ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಂಗನವಾಡಿ ಹಾಸ್ಟೆಲ್, ವಸತಿ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಅಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಸಂಗಮೇಶ ಬಬಲೇಶ್ವರ ಅವರು ಎಸ್ ಎಸ್ ಎಲ್ ಸಿ ಮಕ್ಕಳೊಂದಿಗೆ “ಭಯಮುಕ್ತವಾಗಿ ಪರೀಕ್ಷೆ ಎದುರಿಸುವುದು ಹೇಗೆ? ಎನ್ನುವ ಕುರಿತು ಸಂವಾದ ನಡೆಸಿದರು.ಶಾಲೆ ಅಂಗನವಾಡಿ ವಸತಿ ಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸುವಂತೆ ಹಾಗೂ ಮಕ್ಕಳ ಸ್ನೇಹಿಯಾದ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕಂಡುಬಂದ ನ್ಯೂನ್ಯತೆಗಳ ಪಟ್ಟಿ ಮಾಡಿದ ಅವರು ಭೇಟಿ ನೀಡಿದ ಸ್ಥಳದಿಂದಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆ ಸರಿಪಡಿಸುವಲ್ಲಿ ಅಧಿಕಾರಿಗಳ ಮೇಲೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ(Curriculum Vitae)ಕಾರ್ಯಕ್ರಮ ಬರವಣಿಗೆ) ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಎ.ಎಸ್.ಪಿ ಕಾಮರ್ಸ್ ಕಾಲೇಜಿನ ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಮಾತನಾಡಿ, ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆಯಲ್ಲಿ ಇರಬೇಕಾದ ಘಟಕಾಂಶಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಇದೇ ವೇಳೆ ಪ್ರಶಿಕ್ಷಣಾರ್ಥಿಗಳಿಗೆ ಮಾದರಿ ಬರವಣಿಗೆಯನ್ನು ಯನ್ನು ಸಿದ್ಧಪಡಿಸಿ ತೋರಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನಿಸ, ಸಹಪ್ರಾಧ್ಯಾಪಕ ಡಾ. ಎಂ. ಎಸ್. ಹಿರೇಮಠ, ಡಾ.ಎಂ.ಬಿ. ಕೋರಿ, ಸಹಾಯಕ ಪ್ರಾಧ್ಯಾಪಕ ಡಾ. ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ ಮುಲ್ತಾನಿ, ಡಾ. ಎಸ್.ಪಿ. ಶೇಗುಣಸಿ, ಮಲ್ಲಯ್ಯ ಎಸ್. ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕ ಎಂ. ಪಿ. ಕುಪ್ಪಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಪ್ರಶಿಕ್ಷಣಾರ್ಥಿ ವೈಷ್ಣವಿ ಹಡಪದ ನಿರೂಪಿಸಿ, ವಂದಿಸಿದರು.
ವಿಜಯಪುರದ ಆಸರೆ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಮೂರನೆಯ ವರ್ಷದ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಇಂಡಿ ರಸ್ತೆಯಲ್ಲಿ ಇರುವ ಆಸರೆ ಸೌಹಾದ೯ ಸಹಕಾರಿ ಸಂಘ ನಿಯಮಿತದ 2024-25 ನೇ ಸಾಲಿನ ಸವ೯ಸಾಧರಣ ಸಭೆಯನ್ನು ಸೆಪ್ಟೆಂಬರ್ 19 ಶುಕ್ರವಾರದಂದು ಬೆಳಿಗ್ಗೆ 11-00 ಘಂಟೆಗೆ ಸಂಘದ ಆವರಣದಲ್ಲಿ ಆಸರೆ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಶರಣಬಸಪ್ಪ ಮಲ್ಲಪ್ಪ ಮಸಳಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.ಅಂದು ಸಂಘದ ಸರ್ವಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸಬೇಕೆಂದು ಸೌಹಾರ್ದದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯಶ್ರೀ ಪಾಟೀಲ್ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೊರಳಲ್ಲಿ ಇಷ್ಟಲಿಂಗವನ್ನು ಧರಿಸಿದ್ದ ಆ ಪುಟ್ಟ ಬಾಲಕ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಆಡುತ್ತಿರುವಾಗ ಸ್ನೇಹಿತರು ಆತನ ಕೊರಳ ಇಷ್ಟ ಲಿಂಗವನ್ನು ಕಸಿಯಲು ಪ್ರಯತ್ನಿಸಿದಾಗ ಆತ ತನ್ನ ಕೊರಳ ಇಷ್ಟ ಲಿಂಗವನ್ನು ಓಂ ನಮಃ ಶಿವಾಯ ಎಂದು ಹೇಳುತ್ತಾ ನುಂಗಿಬಿಟ್ಟ. ಹಾಗೆ ನುಂಗಿದ ಲಿಂಗವು ಆತನ ವಸಡು ಮತ್ತು ಗಂಟಲಿನ ಮಧ್ಯದಲ್ಲಿ ತಿಳಿದುಕೊಂಡು ಜೀವನದ ಕೊನೆಯವರೆಗೂ ಆತನ ದೇಹದ ಒಂದು ಭಾಗವಾಯಿತು. ಆದ್ದರಿಂದಲೇ ಆತನನ್ನು ಅಮಳೋಕ್ಯಲಿಂಗಧಾರಿ ಎಂದು ಕರೆದರು. ಕೊರಳ ಲಿಂಗವನ್ನು ಕಳೆದುಕೊಂಡ ಆತನನ್ನು ಆತನ ಪಾಲಕರು ಮನೆಯಿಂದ ಹೊರಹಾಕಿದರು. ಆತನ ತಂಗಿಯೂ ಕೂಡ ಅಣ್ಣನನ್ನು ಹಿಂಬಾಲಿಸಿದಳು.ಅಡಕದಲ್ಲಿರುವ ಸೋದರ ಮಾವನ ಮನೆಗೆ ಬಂದ ಅಜಗಣ್ಣ ಮತ್ತು ಮುಕ್ತಾಯಕ್ಕರಿಗೆ ಆಶ್ರಯ ನೀಡಿದ ಸೋದರ ಮಾವ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡಿದರೆ, ಸೊಸೆ ಮುಕ್ತಾಯಕ್ಕನನ್ನು ಇಂದಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸಳಿ ಕಲ್ಲು ಗ್ರಾಮದ ಯುವಕನಿಗೆ ಮದುವೆ ಮಾಡಿಕೊಟ್ಟರು. ತಂಗಿಯೊಂದಿಗೆ ಮಸಳಿಕಲ್ಲು…
ಲೇಖನ- ಸಂತೋಷ್ ರಾವ್ ಪೆರ್ಮುಡಪಟ್ರಮೆ ಪೋಸ್ಟ್ ಮತ್ತು ಗ್ರಾಮಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ.ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಆಕೆ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ. ೪ ಅಕ್ಟೋಬರ್ ೧೯೭೭ರಲ್ಲಿ ಉತ್ತರ ಆಫ್ರಿಕಾದ ಮೊರಕ್ಕೂದ ಬಿನಿ ಚೇಕರ್ ಎಂಬ ಹಳ್ಳಿಯ ಬಡ ಕುರಿಗಾಹಿ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದ ಸೂಪರ್ ಪವರ್ ದೇಶಗಳಲ್ಲಿ ಒಂದಾದ ಫ್ರಾನ್ಸ್ ದೇಶದ ಎರಡನೇಯ ಅತ್ಯುನ್ನತ ಹುದ್ದೆಯಾದ ಶಿಕ್ಷಣ ಸಚಿವೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಜತ್ ವಲ್ಲೌಡ್ ಬೆಕ್ಸೆಮ್ ಎಂಬ ಮಹಿಳೆಯೇ ಈ ಸಾಧಕಿ. ಇಂದು ೩೮ ವರ್ಷ ವಯಸ್ಸಿನ ಫ್ರಾನ್ಸ್ ದೇಶದ ಅತ್ಯಂತ ಕ್ರಿಯಾಶೀಲ ಮತ್ತು ಯುವ ರಾಜಕಾರಣಿಯಾಗಿ…
ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ನಗರದ ವೇಣುಗ್ರಾಮ ಫೌಂಡೇಶನ್ ವತಿಯಿಂದ ಜಾಂಬೋಟಿಯ ಮಾಧ್ಯಮಿಕ ವಿದ್ಯಾಲಯ ಶಾಲೆಯಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುವಾರ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಇದಲ್ಲದೆ ಈ ವೇಳೆ ಅರ್ಹ ಬಡಮಕ್ಕಳ ಶಾಲಾವೆಚ್ಛವನ್ನು ಕೂಡ ನೀಡಲಾಯಿತು.ಬೆಳಗಾವಿ ನಗರದ ವೇಣುಗ್ರಾಮ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಒಬ್ಬರಾದ ಕೀಲು-ಮೂಳೆ ಶಸ್ತ್ರತಜ್ಞ ಡಾ.ಅಶೋಕ ಸಂಪಗಾರ ಅವರು ಫಲಾನುಭವಿಗಳಿಗೆ ಚೆಕ್ಕುಗಳನ್ನು ವಿತರಿಸಿದರು.ಶಾಲೆಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ವೇಣುಗ್ರಾಮ ಆಸ್ಪತ್ರೆಯು ಗುಣಮಟ್ಟದ ಸೇವೆಯನ್ನು ನೀಡುತ್ತಿರುವುದಲ್ಲದೆ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದನ್ನು ಶ್ಲಾಘಿಸಿದ್ದಾರೆ. ಫಲಾನುಭವಿ ಮಕ್ಕಳ ಪಾಲಕರು ವೇಣುಗ್ರಾಮ ಫೌಂಡೇಶನ್ ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಪರವಾಗಿ ಯೋಗೇಶ ದೇಶಪಾಂಡೆ ಉಪಸ್ಥಿತರಿದ್ದರು.
ಫ್ರೀಡಂಪಾರ್ಕ್‌ನಲ್ಲಿ ಸ್ಪೃಶ್ಯ ಸಮುದಾಯದಿಂದ ಉಗ್ರ ಹೋರಾಟ | ಆತ್ಮಹತ್ಯೆಗೆ ಮಹಿಳೆ ಯತ್ನ! ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ, ಭೋವಿ, ಕೊರಚ, ಕೊರಮ ಸ್ಪೃಶ್ಯ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಮ, ಕೊರಚ ಜಾತಿಗಳನ್ನು C ವರ್ಗಕ್ಕೆ ಸೇರ್ಪಡೆ ಮಾಡಿ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ. ಆದರೇ, ಹೀಗೆ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಆಗಿದೆ ಎಂದು ಇಂದು ಸ್ಪೃಶ್ಯ ಜಾತಿಗಳ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.ಈ ವೇಳೆ ರೊಚ್ಚಿಗೆದ್ದ ಪ್ರತಿಭಟನೆಕಾರರು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಹಿಳೆಯೊಬ್ಬರು ಸ್ಥಳದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇನ್ನು ಮಹಾರಾಣಿ ಕಾಲೇಜು ಬಳಿ ಪ್ರತಿಭಟನಾಕಾರರು ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ತಡೆಯಿಂದಾಗಿ ಕೆ.ಆರ್.ಸರ್ಕಲ್ ಬಳಿ ಫುಲ್ ಟ್ರಾಫಿಕ್ ಜಾಮ್…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕಲಕೇರಿಯಿಂದ ಸುತ್ತಮುತ್ತಲಿನ ಯಾವುದೇ ಗ್ರಾಮಗಳಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅವುಗಳನ್ನು ಅಭಿವೃದ್ಧಿಪಡಿಸುವದು ಅನಿವಾರ್ಯವಾಗಿದ್ದು, ಇದೀಗ ಗ್ರಾಮದ ಜೋಡುಗುಡಿಯಿಂದ ಕೆಇಬಿ ವರೆಗಿನ ಸುಮಾರು ಒಂದು ಕೀ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗುತ್ತಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಬ. ಪಾಟೀಲ, ಕುದರಿಸಾಲವಾಡಗಿ ಅವರು ಹೇಳಿದರು.೨೦೨೫-೨೬ನೇ ಸಾಲಿನ ೩೦೫೪ ರಸ್ತೆ ಸುಧಾರಣೆ ಯೋಜನೆ ಅಡಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ತಿಳಗೂಳ ಕ್ರಾಸ್ ಕಲಕೇರಿ-ಅಸ್ಕಿ ರಸ್ತೆ ಕಿ.ಮೀ. ೨.೪ ರಿಂದ ೩.೧ರ ವರೆಗೆ ಅಂದಾಜು ೩ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಯ ಭೂಮಿಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇದೇ ವೇಳೆ ಗ್ರಾಮದ ಬಸ್‌ಸ್ಟ್ಯಾಂಡ ಮತ್ತು ಆಸ್ಪತ್ರೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಕಲಕೇರಿ ಹಾಗೂ ಕೋರವಾರ ಗ್ರಾಮಗಳನ್ನು ಹೋಬಳಿ ಮಾಡುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳು ನಿರಂತರವಾಗಿದ್ದು, ಸಾಧ್ಯವಾದಷ್ಟು ಈ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕಲಕೇರಿ ಮತ್ತು ಕೋರವಾರ ಶಾಖೆಗೆ ಸಂಬಂಧಿಸಿದ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಹಗಲು ಹೊತ್ತಿನಲ್ಲಿ ಹೊಲಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ ಫೀಡರ್‌ನ್ನು ರೈತರ ಅಭಿಲಾಷೆಯಂತೆ ರೈತರ ಒಳಿತಿಗಾಗಿ ಚಾಲನೆ ನೀಡಲಾಗುತ್ತಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಬ. ಪಾಟೀಲ, ಕುದರಿಸಾಲವಾಡಗಿ ಅವರು ಹೇಳಿದರು.ಕಲಕೇರಿಯ ೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ಮಿಸಲಾದ ನೂತನ ಫೀಡರ್ ಉದ್ಘಾಟನಾ ಸಮಾರಂಭದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.ನೂತನವಾಗಿ ನಿರ್ಮಿಸಲಾದ ಫೀಡರ್‌ನಿಂದ ಕಲಕೇರಿ ಮತ್ತು ಕೋರವಾರ ಶಾಖೆಗೆ ಸಂಬಂಧಿಸಿದ ಹಳ್ಳಿಗಳಾದ ಹಂಚಲಿ, ಬಿಬಿ ಇಂಗಳಗಿ, ಕೊಂಡಗೂಳಿ, ಅಂಬಳನೂರ, ಕೆಸರಟ್ಟಿ, ಬಿಂಜಲಭಾವಿ, ಕೆರುಟಗಿ, ತಿಳಗೂಳ, ಆಲಗೂರ, ಹುಣಶ್ಯಾಳ, ಕುದರಗುಂಡ ಸೇರಿದಂತೆ ಸುಮಾರು ೧೫-೨೦ ಹಳ್ಳಿಗಳಿಗೆ ಉತ್ತಮ ಸಂಪರ್ಕ ನೀಡುವ ಸಲುವಾಗಿ ರೈತರ ಅನುಕೂಲಕ್ಕಾಗಿ ಫೀಡರ್ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.ಈ ವೇಳೆ ಕೆಇಬಿ ಕಿರಿಯ ಅಭಿಯಂತರ ಶಂಕರಗೌಡ ಬಿರಾದಾರ, ಶ್ರೀಮತಿ ಅಮೃತ ಜುಟ್ಟಿ, ಎಇ ಸುಬಾಸ ಸಜ್ಜನ, ಶರಣು ಸಜ್ಜನ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರವರು, ಆಲಮಟ್ಟಿ ಭೆಟ್ಟಿಯ ಸಂಧರ್ಭದಲ್ಲಿ ವಕೀಲರ ಕುರಿತು ಅವಹೇಳನಕಾರಿ ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು.ಆಲಮಟ್ಟಿ ಭೇಟಿಯ ಸಂಧರ್ಭದಲ್ಲಿ ಮತ್ತು ವಿಧಾನ ಸಭೆಯಲ್ಲಿಯೂ ಕೂಡಾ ಡಿಸಿಎಂ ಡಿ.ಕೆ. ಶಿವಕುಮಾರ ರವರು ವಕೀಲರ ಕುರಿತು ಅವಹೇಳನಕರವಾಗಿ ಮಾತನಾಡಿದ್ದು, ಅವರ ಹಗುರವಾದ ಮಾತು ಇಡೀ ವಕೀಲರ ಸಮುದಾಯಕ್ಕೆ ಅವಮಾನಕರವಾಗಿದ್ದು, ಆಗೌರವಯುತವಾದ ಮಾತುಗಳನ್ನು ಖಂಡಿಸಿ ನಮ್ಮ ಸಂಘವು ಕೊರ್ಟ ಕಲಾಸ, ಕಂದಾಯ ಇಲಾಖೆ ಮತ್ತು ಗ್ರಾಹಕರ ವೇದಿಕೆ ಈ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟಿಸಲಾಯಿತು.ಡಿಸಿಎಂ ಡಿ.ಕೆ. ಶಿವಕುಮಾರ ರವರು ವಕೀಲರ ಕುರಿತು ಅವಹೇಳನಕಾರಿ ಆಡಿದ ಮಾತನ್ನು ಹಿಂಪಡೆಯಬೇಕು. ಹಾಗೂ ವಕೀಲರ ಸಮುದಾಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಅಧ್ಯಕ್ಷ ಧರೆಪ್ಪಗೌಡ ಬಿರಾದಾರ, ಉಪಾಧ್ಯಕ್ಷರಾದ ಸುನೀಲ ಬಿರಾದಾರ, ಕಾರ್ಯದರ್ಶಿ ಸುರೇಶ ಚೂರಿ, ಖಜಾಂಚಿ ಎಮ್. ಎ. ಕಾಖಂಡಕಿ,…
