Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿ ವಯೋ ನಿವೃತ್ತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಕನಾ೯ಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಮಖಂಡಿ ತಾಲೂಕು ಘಟಕ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯದಲ್ಲಿ ಪ್ರಸ್ತುತ 2025-26 ನೇ ಸಾಲಿನ ಜಮಖಂಡಿ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನೆಗಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಬಸವರಾಜ ಅನಂತಪೂರ ಹಾಗೂ ಜಮಖಂಡಿ ಡಿ.ಬಿ.ಇ.ಸಂಸ್ಥೆಯ ದೈಹಿಕ ಶಿಕ್ಷಕ ಮಲ್ಲು ಪಟ್ಟಣಶೆಟ್ಟಿ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಇಒ ಅಶೋಕ ಬಸಣ್ಣವರ, ಅನುಪಮ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿರಿಸಿರುವ ಈ ಮಹನೀಯರ ಸೇವಾವಧಿಯಲ್ಲಿನ ಕಾಯಕಗಳು ಕಾರ್ಯಕ್ಷಮತೆಯಿಂದ ಸಾಗಿವೆ.ಅನಂತಪೂರ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದರು ಸಹ ಇನ್ನೂ ಚಿಕ್ಕಪಡಸಲಗಿ ಹರಳಯ್ಯ ಪ್ರೌಢಶಾಲೆಗೆ ಅವರ ಸೇವೆ ಲಭಿಸುತ್ತಿದೆ.ಇಂಥ ಸೇವಾಭಾವದ ಮನೋಭಾವವುಳ್ಳವರನ್ನು ಕಾಣುವುದು ವಿರಳ.ಮಕ್ಕಳಿಗೆ…
ಶಾಸಕರ ಸಮಸ್ಯೆ ಇತ್ಯರ್ಥವಾಗಲಿದೆ | ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಪಷ್ಟನೆ ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಹೆಚ್ಚಾಗಿದ್ದು, ಈ ನಡುವಲ್ಲೇ ಊಹಾಪೋಹಗಳಿಗೆ ಎಐಸಿಸಿ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ಹಲವು ಆಸೆಗಳು ಇರಬಹುದು. ಪಕ್ಷದಲ್ಲಿ ಹೈಕಮಾಂಡ್ ಇದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನವದೆಹಲಿಗೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇಬ್ಬರೂ ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ತಾರತಮ್ಯ ಮಾಡದಂತೆ ಮನವೊಲಿಸಲು ಅವರು ಆಗಾಗ್ಗೆ ದೆಹಲಿಗೆ ಭೇಟಿ ನೀಡುತ್ತಾರೆ. ಇಬ್ಬರೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಹೇಗಿದೆ? ಗ್ಯಾರಂಟಿ ಯೋಜನೆಗಳ ಪರಿಣಾಮ ಇತ್ಯಾದಿ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗೆ ಶಾಸಕರಿಂದ ಉತ್ತರ ಪಡೆಯುತ್ತಿದ್ದೇವೆ. ಶಾಸಕರಾಗಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಡೀ ವಿಜಯಪುರ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ರೂ.೪೦೦ ಕೋಟಿ ಅನುದಾನವನ್ನು ಈ ಯೋಜನೆಗೆ ನೀಡಿದ್ದಾರೆ. ಇದರಲ್ಲಿ ಸಿಂದಗಿ ನಗರಕ್ಕೆ ಸುಮಾರು ರೂ.೬೫ ಕೋಟಿ ಹಣ ಖರ್ಚಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಸಿಂದಗಿ ಪಟ್ಟಣದ ಪುರಸಭೆ ಆವರಣದಲ್ಲಿ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆ ಅಡಿ ಸಿಂದಗಿ ಪಟ್ಟಣಕ್ಕೆ ೨೪೭ ಕುಡಿಯುವ ನೀರು ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆ (ಹಂತ ೧ಮತ್ತು೨)ರ ಶಂಕು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಈ ಹಣ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಬಜೆಟ್ ಬರುವ ವೇಳೆಗೆ ಸಂಪೂರ್ಣ ಖರ್ಚಾಗುತ್ತದೆ. ೧ಮತ್ತು೨ ಹಂತದ ಈ ಯೋಜನೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ೧೮ ತಿಂಗಳುಗಳ ಕಾಲಾವಧಿ ಇದ್ದು, ಅದರೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಏಕೆಂದರೆ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾದ ಯೋಜನೆ. ದಿನದ ೨೪ಗಂಟೆಗಳ ಕಾಲ ನೀರು ಸರಬರಾಜಾಗುತ್ತದೆ. ನೀರನ್ನು ಮಿತವಾಗಿ ಬಳಸಿ. ವಿಜಯಪುರ ಜಿಲ್ಲೆಗೆ ಹಿಂದೆಯೂ ಯಾರು…
ರಚನೆ- ರಮ್ಯ ಗೌರೀಶ್’ನಮ್ಮ ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ನೀನೇ ನನಗೆ ಪ್ರೇಮದ ಪಲ್ಲವಿಯಾದೆನಿನ್ನ ನುಡಿಯೇ ನನಗೆ ಲಯ ಎನಿಸಿದೆ ನಿನ್ನ ನೋಟವೇ ಪ್ರೀತಿಯ ಬಾಣವಾಗಿದೆನಿನ್ನ ಮೌನವೇ ತಾಳ ಬದ್ಧ ಕವನವಾಗಿದೆ ಪ್ರೇಮದ ಕಾವ್ಯಕೆ ಪಲ್ಲವಿಯು ನೀನಾದೆಹಾಡುವ ರಾಗಕೆ ಇಂಪಾದ ದನಿಯಾದೆ ನಿನ್ನ ನಸುನಗೆ ಸುಗಂಧ ಹೂವಾಗಿದೆತಂಗಾಳಿಗೆ ನಿನ್ನ ಸ್ಪರ್ಶವೇ ದ್ವನಿಯಾಗಿದೆ ನಿನ್ನ ಕಣ್ಸನ್ನೆ ಮೋಡಗಳ ಮರೆಯ ಚಂದ್ರನಂತಾಗಿದೆನಿನ್ನ ಸಿಹಿ ಮುತ್ತು ಸೋನೆ ಮಳೆ ನೆನಪು ಮಾಡಿದೆ ನಿನ್ನ ಆಲಿಂಗನ ಚಳಿಯಲಿ ಬೆಂಕಿಯ ಶಿಬಿರದಂತಿದೆನೀನೆ ನನ್ನ ಪ್ರೀತಿಯ ಪಾರಿವಾಳ ಎಂದೆನಿಸಿದೆ
ಲೇಖನ- ವೀಣಾ ವೈಷ್ಣವಿ’ನಮ್ಮ ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ವಿಳಾಸ ಬದಲಾದರೆ ಜೀವನವೂ ಬದಲಾಗುತ್ತಾ…?ಈ ಪ್ರಶ್ನೆ ನನ್ನಲ್ಲಿ ನಾನೇ ಎಷ್ಟು ಸಲ ಕೇಳಿಕೊಂಡಿದ್ದೀನೋ ಏನೂ, ಹೌದು ನನ್ನ ಮಟ್ಟಿಗೆ ವಿಳಾಸ ಬದಲಾದಾಗೆಲ್ಲ ಜೀವನವೂ ಬದಲಾಗುತ್ತೆ, ನಮ್ಮ ಗುರುತು ಕೂಡ. ಅಪ್ಪ ಅಮ್ಮನ ಒಬ್ಬಳೇ ಮಗಳಾಗಿ ಮೈಸೂರಿನ ಹತ್ತಿರದ ಹಳ್ಳಿಯೊಂದರಲ್ಲಿದ್ದ ನಾನು ಶಶಾಂಕನನ್ನು ವರಿಸಿ ಬೆಂಗಳೂರು ನಗರಕ್ಕೆ ಕಾಲಿಟ್ಟಿದ್ದೆ. ಹಳ್ಳಿಯಿಂದ ಬೆಂಗಳೂರಿನ ಶಶಾಂಕನ ಅಪಾರ್ಟ್ಮೆಂಟ್ ಗೆ ನನ್ನ ವಿಳಾಸ ಬದಲಾಗಿದ್ದೆ ಅದರೊಂದಿಗೆ ನನ್ನ ಗುರುತು, ಜೀವನ ಎರಡೂ ಕೂಡ ಬದಲಾಗಿ ಹೋಗಿತ್ತು. ಮೆಚ್ಚಿನ ಮಗಳಾಗಿದ್ದ ನನ್ನ ಜೀವನ ಇನ್ಮೇಲೆ ಹೆಂಡತಿಯಾಗಿ, ಅತ್ತೆ ಮಾವನ ಮೆಚ್ಚಿನ ಸೊಸೆಯಾಗಿ ಪ್ರಾರಂಭ ಆಗುತ್ತೆ ಎಂದು ಕನಸು ಹೊತ್ತಿದ್ದರೆ, ಅ ಮನೆಗೆ ಬಂದ ಮೊದಲ ರಾತ್ರಿಯೆ ಶಶಾಂಕ್ ನ ನಿಜ ಸ್ವರೂಪ ಬಯಲಾಗಿತ್ತು . ನೋಡು ನಾನು ಅಪ್ಪ ಅಮ್ಮನ ಖುಷಿಗಾಗಿ ಅಷ್ಟೇ ನಿನ್ನ ಮದುವೆಯಾಗಿದ್ದು, ನಾನು ನನ್ನ ಸಹೋದ್ಯೋಗಿ ರೀಟಾಳನ್ನು ಪ್ರೀತಿಸುತ್ತಿದ್ದೇನೆ, ಸ್ವಲ್ಪ ಸಮಯದ ನಂತರ ನಿಂಗೆ…
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಣೆ | ಬಿಹಾರದ ಖಾಯಂ ನಿವಾಸಿಗಳಿಗೆ ಮಾತ್ರ ಅನ್ವಯ ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ದಿನಗಳ ಭಾಗಿ ಇರುವಂತೆಯೇ ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ರಷ್ಟು ಮೀಸಲಾತಿಯನ್ನು ಸಿಎಂ ನಿತೀಶ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ. ಬಿಹಾರದ ಖಾಯಂ ನಿವಾಸಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಿತೀಶ್ ಕುಮಾರ್, ರಾಜ್ಯದ ಸರ್ಕಾರಿ ಸೇವೆಗಳಲ್ಲಿ ನೇರ ನೇಮಕಾತಿಯಾದ ಎಲ್ಲಾ ವರ್ಗದ, ಹಂತದ ಬಿಹಾರದ ಮೂಲ ನಿವಾಸಿಗಳಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಶೇ. 35 ರಷ್ಟು ಮೀಸಲಾತಿ ಒದಗಿಸಲಾಗುವುದು. ಈ ನಿರ್ಧಾರವು ಆಡಳಿತ ಮತ್ತು ಆಡಳಿತದಲ್ಲಿ ಹೆಚ್ಚಿನ ಮಹಿಳೆಯರ ಭಾಗವಹಿಸುವಿಕೆಯತ್ತ ಒಂದು ಪ್ರಮುಖವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.ಪಾಟ್ನಾದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಈ ನಿರ್ಧಾರವು ಮಹಿಳಾ ಸಬಲೀಕರಣಕ್ಕೆ ರಾಜ್ಯದ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಾದಿ ಶರಣರ ವಚನಗಳು ಸತ್ಯ, ಶುದ್ಧ, ಪರಿಶ್ರಮದ ಕಾಯಕದಿಂದ ನೆಮ್ಮದಿ ಸಂತೃಪ್ತಿ ನೀಡುತ್ತವೆ. ಅದರಲ್ಲಿ ಮುಖ್ಯವಾಗಿ ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲ ವಿಷಯ ವಸ್ತುಗಳ ಶರಣರ ವಚನಗಳಲ್ಲಿ ಅಡಕವಾಗಿವೆ ಎಂದು ಉಪನ್ಯಾಸಕ ಅಮರೇಶ ಸಾಲಕ್ಕಿ ಅಭಿಪ್ರಾಯಪಟ್ಟರು.ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ‘ನಗೆಮಾರ ತಂದೆ’ ಅವರ ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು ಶರಣ ನಗೆಮಾರ ತಂದೆ ಶರಣ ಪರಂಪರೆಯಲ್ಲಿಯೇ ಪರಿಪೂರ್ಣ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಶರಣರನ್ನು ನಗೆಸಿ ನಲಿಸಿ ಕಾಯಕ, ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದವರು. ಅವರ ನಗೆ ಗುರು ಲಿಂಗ, ಜಂಗಮ ಸೇವೆಗೆ ಬಳಸುತ್ತ ಭೂಕೈಲಾಸವನ್ನು ಮಾಡಿದವರು. ‘ಆತುರ ವೈರಿ ಮಾರೇಶ್ವರ’ ಅಂಕಿತ ನಾಮದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ಅಪಾರ ದೈವಿ ಭಕ್ತಿ, ಶ್ರದ್ಧೆ, ಸಾಕ್ಷಾತ್ಕಾರ ಪಡೆದವರು ಶರಣರ ವಚನಗಳೇ ನಮ್ಮ ಬದುಕಿಗೆ ಸಾಧನ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ನಿರ್ದೇಶಕಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಮಟ್ಟದ ೧೪ ವರ್ಷದ ಬಾಲಕ-ಬಾಲಕಿಯರ ನೆಟಬಾಲ್ ಕ್ರೀಡೆಯನ್ನು ನಗರದ ಆರ್.ಜಿ. ಮೆಮೋರಿಯಲ್ ಶಾಲೆ ಹಾಗೂ ಅಕ್ಷರಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಸಲಾಯಿತು.ಈ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಅಕ್ಷರಾ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಈ ಜಿಲ್ಲಾ ಮಟ್ಟದ ಕ್ರೀಡೆಯನ್ನು ವಿಜಯಪುರ ನೆಟಬಾಲ್ ಸಂಸ್ಥೆಯರು ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದಯವಾಡೆ, ಶಾಲೆಯ ಅಧ್ಯಕ್ಷರಾದ ಪ್ರಕಾಶ ರಾಠೋಡ, ನೆಟಬಾಲ್ ಸಂಸ್ಥೆಯ ಅಧ್ಯಕ್ಷರಾದ ವಿಲಾಸ ವ್ಯಾಸ್, ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ತರಬೇತಿದಾರ ಶಂಕರ ಶಿ. ಸಾನಪ ಸಂಸ್ಥೆಯ ಸದಸ್ಯರಾದ ಸಿದ್ದು ಗೊಲ್ಲರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ಕ್ರೀಡಾಪಟುಗಳು ಹಾಜರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆರಾಧ್ಯದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಬಸವೇಶ್ವರ ಗೋ ಶಾಲಾ ಟ್ರಸ್ಟ್ (ರಿ) ಆಂದೋಲಾ ನಿರ್ಮಾಣದ ರೈತ ನಿನಗೆ ಗೋ ಶಾಪ? ಚಲನಚಿತ್ರದ ಚಿತ್ರಿಕರಣ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಲೋಕ ಕಲ್ಯಾಣ ಯಜ್ಞದಲ್ಲಿ ಭಾಗವಹಿಸಿ, ಮೊದಲ ಲುಕ್ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದಿರುವ ಗೋ ಮಾತೆ ರಕ್ಷಣೆ ಹಾಗೂ ಗೋವಿನ ಮಹತ್ವ ಸಾರುವ ರೈತ ನಿನಗೆ ಗೋ ಶಾಪ? ಚಲನಚಿತ್ರವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದ್ದು, ಯಾವುದೇ ಅಡೆತಡೆ ಉಂಟಾಗದೆ ಚಿತ್ರಿಕರಣ ಯಶಸ್ವಿಯಾಗಿ ಪೂರೈಸಿ, ಅತ್ಯುತ್ತವ ಚಿತ್ರವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಗೌರ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ವಿಜಯಕುಮಾರ ಡೋಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಿಬಣ್ಣ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಆಲಮೇಲ ತಾಲ್ಲೂಕು ಶಾಖೆ ನೇತೃತ್ವದಲ್ಲಿ ನಿವೃತ್ತ ನೌಕರರ ವಿಶೇಷ ಸಭೆಯನ್ನು ಜುಲೈ 12 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಸಿಂದಗಿ ರಸ್ತೆ ಕೆ.ಬಿ.ಜೆ.ಎನ್ ಎಲ್ ನೌಕರರ ಸಂಘದ ಕಾರ್ಯಾಲಯದ ಸಭಾಭವನದಲ್ಲಿ ಕರೆಯಲಾಗಿದೆ.ಸಭೆಯಲ್ಲಿ ಪಿಂಚಣಿದಾರರ ಪಿಂಚಣಿಯಯನ್ನು ಪರಿಷ್ಕರಿಸುವುದಿಲ್ಲ ಎಂಬ ಕೆಂದ್ರ ಸರ್ಕಾರದ ನಿರ್ಣಯ ಮತ್ತು 2026ರ ಏಪ್ರಿಲ್ 1 ರ ಮೊದಲು ನಿವೃತ್ತರಾದ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ವೇತನ ತುಟ್ಟಿಭತ್ಯೆಯ ಬಗ್ಗೆಯೂ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ನಿರ್ಣಯವೂ ನಿವೃತ್ತ ನೌಕರರಿಗೆ ಅತ್ಯಂತ ಆತಂಕಕಾರಿಯಾಗಿದೆ. ಕೆಂದ್ರ ಸರ್ಕಾರದ ಈ ನಿರ್ಣಯ ವಿರುದ್ಧ ಪ್ರತಿಭಟನೆ ನಡೆಸುವ ಕುರಿತಾದ ಚರ್ಚೆ ಸಭೆಯಲ್ಲಿ ನಡೆಯಲಿದೆ.ಆಲಮೇಲ ತಾಲ್ಲೂಕಿನ ಎಲ್ಲ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿ ಪಡೆಯುವವರು ಸಹಿತ ಸಭೆಯಲ್ಲಿ ತಪ್ಪದೇ ಹಾಜರಿರುವಂತೆ ಸಂಘದ ಅಧ್ಯಕ್ಷ ಜಿ,ಸಿ ಪಶುಪತಿಮಠ ಉಪಾಧ್ಯಕ್ಷರಾದ ಬಿ ಬಿ ಮುಂಡಾಸ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್. ಎಸ್. ಹಳೆಮನಿ ಖಂಜಾಚಿ…
