ರಚನೆ
– ರಮ್ಯ ಗೌರೀಶ್
’ನಮ್ಮ ಕಥಾ ಅರಮನೆ’
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ನೀನೇ ನನಗೆ ಪ್ರೇಮದ ಪಲ್ಲವಿಯಾದೆ
ನಿನ್ನ ನುಡಿಯೇ ನನಗೆ ಲಯ ಎನಿಸಿದೆ
ನಿನ್ನ ನೋಟವೇ ಪ್ರೀತಿಯ ಬಾಣವಾಗಿದೆ
ನಿನ್ನ ಮೌನವೇ ತಾಳ ಬದ್ಧ ಕವನವಾಗಿದೆ
ಪ್ರೇಮದ ಕಾವ್ಯಕೆ ಪಲ್ಲವಿಯು ನೀನಾದೆ
ಹಾಡುವ ರಾಗಕೆ ಇಂಪಾದ ದನಿಯಾದೆ
ನಿನ್ನ ನಸುನಗೆ ಸುಗಂಧ ಹೂವಾಗಿದೆ
ತಂಗಾಳಿಗೆ ನಿನ್ನ ಸ್ಪರ್ಶವೇ ದ್ವನಿಯಾಗಿದೆ
ನಿನ್ನ ಕಣ್ಸನ್ನೆ ಮೋಡಗಳ ಮರೆಯ ಚಂದ್ರನಂತಾಗಿದೆ
ನಿನ್ನ ಸಿಹಿ ಮುತ್ತು ಸೋನೆ ಮಳೆ ನೆನಪು ಮಾಡಿದೆ
ನಿನ್ನ ಆಲಿಂಗನ ಚಳಿಯಲಿ ಬೆಂಕಿಯ ಶಿಬಿರದಂತಿದೆ
ನೀನೆ ನನ್ನ ಪ್ರೀತಿಯ ಪಾರಿವಾಳ ಎಂದೆನಿಸಿದೆ
