ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಆಲಮೇಲ ತಾಲ್ಲೂಕು ಶಾಖೆ ನೇತೃತ್ವದಲ್ಲಿ ನಿವೃತ್ತ ನೌಕರರ ವಿಶೇಷ ಸಭೆಯನ್ನು ಜುಲೈ 12 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಸಿಂದಗಿ ರಸ್ತೆ ಕೆ.ಬಿ.ಜೆ.ಎನ್ ಎಲ್ ನೌಕರರ ಸಂಘದ ಕಾರ್ಯಾಲಯದ ಸಭಾಭವನದಲ್ಲಿ ಕರೆಯಲಾಗಿದೆ.
ಸಭೆಯಲ್ಲಿ ಪಿಂಚಣಿದಾರರ ಪಿಂಚಣಿಯಯನ್ನು ಪರಿಷ್ಕರಿಸುವುದಿಲ್ಲ ಎಂಬ ಕೆಂದ್ರ ಸರ್ಕಾರದ ನಿರ್ಣಯ ಮತ್ತು 2026ರ ಏಪ್ರಿಲ್ 1 ರ ಮೊದಲು ನಿವೃತ್ತರಾದ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ವೇತನ ತುಟ್ಟಿಭತ್ಯೆಯ ಬಗ್ಗೆಯೂ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ನಿರ್ಣಯವೂ ನಿವೃತ್ತ ನೌಕರರಿಗೆ ಅತ್ಯಂತ ಆತಂಕಕಾರಿಯಾಗಿದೆ. ಕೆಂದ್ರ ಸರ್ಕಾರದ ಈ ನಿರ್ಣಯ ವಿರುದ್ಧ ಪ್ರತಿಭಟನೆ ನಡೆಸುವ ಕುರಿತಾದ ಚರ್ಚೆ ಸಭೆಯಲ್ಲಿ ನಡೆಯಲಿದೆ.
ಆಲಮೇಲ ತಾಲ್ಲೂಕಿನ ಎಲ್ಲ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿ ಪಡೆಯುವವರು ಸಹಿತ ಸಭೆಯಲ್ಲಿ ತಪ್ಪದೇ ಹಾಜರಿರುವಂತೆ ಸಂಘದ ಅಧ್ಯಕ್ಷ ಜಿ,ಸಿ ಪಶುಪತಿಮಠ ಉಪಾಧ್ಯಕ್ಷರಾದ ಬಿ ಬಿ ಮುಂಡಾಸ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್. ಎಸ್. ಹಳೆಮನಿ ಖಂಜಾಚಿ ಎನ್.ಎ. ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.