ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಟ್ಟದ ೧೪ ವರ್ಷದ ಬಾಲಕ-ಬಾಲಕಿಯರ ನೆಟಬಾಲ್ ಕ್ರೀಡೆಯನ್ನು ನಗರದ ಆರ್.ಜಿ. ಮೆಮೋರಿಯಲ್ ಶಾಲೆ ಹಾಗೂ ಅಕ್ಷರಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಸಲಾಯಿತು.
ಈ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಅಕ್ಷರಾ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಈ ಜಿಲ್ಲಾ ಮಟ್ಟದ ಕ್ರೀಡೆಯನ್ನು ವಿಜಯಪುರ ನೆಟಬಾಲ್ ಸಂಸ್ಥೆಯರು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದಯವಾಡೆ, ಶಾಲೆಯ ಅಧ್ಯಕ್ಷರಾದ ಪ್ರಕಾಶ ರಾಠೋಡ, ನೆಟಬಾಲ್ ಸಂಸ್ಥೆಯ ಅಧ್ಯಕ್ಷರಾದ ವಿಲಾಸ ವ್ಯಾಸ್, ಕಾರ್ಯದರ್ಶಿ ಚಂದ್ರಕಾಂತ ತಾರನಾಳ, ತರಬೇತಿದಾರ ಶಂಕರ ಶಿ. ಸಾನಪ ಸಂಸ್ಥೆಯ ಸದಸ್ಯರಾದ ಸಿದ್ದು ಗೊಲ್ಲರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ಕ್ರೀಡಾಪಟುಗಳು ಹಾಜರಿದ್ದರು.