Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಭಾಗದ ಜನರಿಗೆ ನಿತ್ಯ ಸಂಚರಿಸಲು ಗ್ರಾಮೀಣ ರಸ್ತೆಗಳ ಸುಧಾರಣೆ ಅವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ೨೦೨೪-೨೫ ನೇ ಸಾಲಿನ ೫೦೫೪-ಅಪೆಂಡಿಕ್ಸ -ಇ ಯೋಜನೆಯಡಿಯಲ್ಲಿ ಕಲಕೇರಿ ಮುಖ್ಯ ರಸ್ತೆಯಿಂದ ಗುಬ್ಬೇವಾಡ ಗ್ರಾಮದವರಿಗೆ ೭೫ಲಕ್ಷ ರೂ.ಮೊತ್ತದ ಡಾಂಬರೀಕರಣ ರಸ್ತೆಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸುಧಾರಣೆಗೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನಕ್ಕಿದ್ದು ವಿವಿಧ ಯೋಜನೆಗಳಡಿ ಅನುದಾನ ತರುವ ಮೂಲಕ ಹಂತ-ಹಂತವಾಗಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದರಲ್ಲದೇ ಸರಕಾರದಿಂದ ಅನುದಾನ ತಂದು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ನಿತ್ಯಾನಂದ ಕಟ್ಟಿಮನಿ, ಮಾಜಿ ಜಿಪಂ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಜಿಲ್ಲಾ ಕೆಡಿಪಿ ಸದಸ್ಯ ಶಿವು ಕೋಟರಗಸ್ತಿ, ತಾಲೂಕು ಕೆಡಿಪಿ ಸದಸ್ಯ ನಿಂಗು ಬುಳ್ಳಾ, ರಮೇಶ ಗುಬ್ಬೇವಾಡ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ರವಿರಾಜ ದೇವರಮನಿ, ಸಿದ್ದಲಿಂಗ ಗುಡ್ಡಾಪುರ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ೧೫ನೇ ಹಣಕಾಸು ಯೋಜನೆಯಡಿ ವಾರ್ಡಿನ ಸಿ.ಸಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.ಪಟ್ಟಣದ ಹೊಸನಗರದ ೧೩ನೇ ವಾಡಿನಲ್ಲಿ ೩.೫ಲಕ್ಷ ರೂ.ಗಳ ವೆಚ್ಚದ ೭೫ ಮೀ.ಉದ್ದ ಹಾಗೂ ೩.೫ ಅಗಲದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ಪಟ್ಟಣ ಪಂಚಾಯಿತಿ ನೀಡಿದ ಅನುದಾನಗಳಿಂದ ವಾರ್ಡಿನಲ್ಲಿ ಈಗಾಗಲೇ ೬ ರಿಂದ೭ ರಸ್ತೆಗಳು, ೪ ಬೋರೆವೆಲ್‌ಗಳ ನಿರ್ಮಾಣ ಹಾಗೂ ವಿದ್ಯುತ್ ಕಂಬಗಳ ಅಳವಡಿಕೆ ಮಾಡಲಾಗಿದೆ.ಇಂದು ಕಾಂಗ್ರೆಸ್ ಸರ್ಕಾರದ ಮಲತಾಯಿಧೋರಣೆಯಿಂದ ಕ್ಷೇತ್ರದ ಶಾಸಕರಿಗೆ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ದೊರೆಯುತ್ತಿಲ್ಲ. ನಾವು ಸಹ ಶಾಸಕರಿಗೆ ಯಾವುದೇ ಒತ್ತಡ ಹಾಕುತ್ತಿಲ್ಲ. ಅದಾಗ್ಯೂ ಪಟ್ಟಣದ ಅಭಿವೃದ್ಧಿಗೆ ಬದ್ಧರಾಗಿ ನಾವೆಲ್ಲ ಸದಸ್ಯರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ ಸಹಿತ ಬಸಪ್ಪ ದೇವಣಗಾಂವ, ಸಲಬಯ್ಯ ಸದಯ್ಯನಮಠ ಹಾಗೂ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಹುಬ್ಬಳ್ಳಿ ರೇಲ್ವೆ ವಿಭಾಗೀಯ ಮಹಾ ಪ್ರಬಂಧಕ ಮುಖಲ್ ಸರನ್ ಮಾಥುರ ಜನರಲ್ ಮ್ಯಾನೇಜರ ಅವರು ಇಂದು ವಿಜಯಪುರ ಇಂಡಿ ಮತ್ತು ಪಡನೂರ ತಡವಾಲ ಭೀಮಾ ಸೇತುವೆಯನ್ನು ವಿಕ್ಷೀಸಿದರು.ವಿವಿಧ ಕಾರ್ಯಾಚರಣೆ ಮತ್ತು ಸುರಕ್ಷತಾ ನಿಯತಾಂಕಗಳನ್ನು ಪರಿಶೀಲಿಸಿ ಮಾರ್ಗಮಧ್ಯೆ ಭೀಮಾ ಸೇತುವೆಯನ್ನು ವಿಕ್ಷಿಸಿದರು.ಹುಬ್ಬಳ್ಳಿಯ ರೇಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ಸಾರ್ವಜನಿಕರು ಮತ್ತು ರೈಲು ಅಭಿವೃದ್ದಿ ಹೋರಾಟಗಾರ ವೆಂಕಟೇಶ ಭೈರಾಮಡಗಿ ಇಂಡಿ ತಾಲೂಕಿನ ರೇಲ್ವೆ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಿಕೊಡಲು ಮನವಿ ಮಾಡಿದರು. ಮತ್ತು ವಂದೇ ಮಾತರಂ ರೈಲು ಸೋಲಾಪುರದಿಂದ ವಿಜಯಪುರ ವರೆಗೆ ವಿಸ್ತರಿಸಲು ಕೇಳಿಕೊಂಡರು.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಏಳನೇ ಸುತ್ತಿನ ಕಾಲು ಮತ್ತು ಬಾಯಿ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಏ. ೨೬ ರಿಂದ ಜೂನ್ ೬ ರವರೆಗೆ ಸತತವಾಗಿ ನಡೆಯಲಿರುವ ಈ ಲಸಿಕಾ ಅಭಿಯಾನದಲ್ಲಿ ಚಿಮ್ಮಡ ಹಾಗೂ ಯರಗಟ್ಟಿ ಗ್ರಾಮಗಳ ಸುಮಾರು ೬೫೦೦ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗನಿರೋಧಕ ಲಸಿಕೆಗಳನ್ನು ನೀಡುವ ಗುರಿ ನಿಗದಿಪಡಿಸಿಕೊಳ್ಳಲಾಗಿದ್ದು ಗ್ರಾಮದ ರೈತರು, ಸಾರ್ವಜನಿಕರು ಪಶು ಚಿಕಿತ್ಸಾಲಯಕ್ಕೆ ಬಂದು ತಮ್ಮ ಸಾಕುಪ್ರಾಣಿ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ವೈದ್ಯಾಧಿಕಾರಿ ಡಾ. ರೂಪಾ ಕಡಸಾನಿ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ಕಾರ್ಯಕ್ರಮದ ಭಿತ್ತಿಪತ್ರ ಪ್ರದರ್ಶೀಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಭು ಮುಧೋಳ, ಬಾಳು ಬ್ಯಾಕೋಡ, ಸುರೇಶ ಪೂಜಾರಿ, ತುಕಾರಾಮ ದೊಡಮನಿ, ಪಶು ವೈದ್ಯ ಪರೀಕ್ಷಕ ಎಸ್.ಕೆ. ಕೋರಿ, ಉಮೇಶ ಸವದಿ, ಪಶು ಸಖಿ ಸುನಿತಾ…

Read More

ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರು ಜಗವು ಕಂಡ ಶ್ರೇಷ್ಠ ದಾರ್ಶನಿಕರು. ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ, ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದ ಶ್ರೇಷ್ಠ ಸಾಧಕರು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಮತ್ತು ಶರಣರು ಕಲ್ಯಾಣದಲ್ಲಿ ವಿಶ್ವದ ಮೊದಲ ಸಂಸತ್ತನ್ನು ನಿರ್ಮಿಸಿದರು. ಅನುಭವ ಮಂಟಪ (ಅಥವಾ, “ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ 770 ಅಮರಗಣಂಗಳು ಇದ್ದರೆಂದು ಮತ್ತು 196000 ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.ಕಲ್ಯಾಣದಲ್ಲಿ ಈಗ…

Read More

ಚಿಂತನೆಡಾ.ಪ್ರಿಯಂವದಾ ಹುಲಗಬಾಳಿಅಥಣಿ ಉದಯರಶ್ಮಿ ದಿನಪತ್ರಿಕೆ ಕರುಳಕೇತಯ್ಯನವರ ವಚನ”ಅರ್ಪಿತವಲ್ಲದುದ ಕಲಸಿದ ಕೈ,ಉಂಡ ಬಾಯಿ.ತುಂಬಿದ ಘಟ ಅರಿದುಕೊಂಡ ಆತ್ಮ ಇವ ಹಿಡಿದಡೆ ಭಂಗ ಸಡಗರಿಸಿ ತುಂಬಿದ ಗರಳಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನರಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರಲಿಂಗವೆ ಬೇಡಿ” ವಚನ ವಿಶ್ಲೇಷಣೆ ಶರಣ ಕರುಳಕೇತಯ್ಯ ಅಪ್ಪಕಾಯಕ, ಭಕ್ತಿ, ಸಾಮಾಜಿಕ ಸಮಾನತೆ ಹಾಗೂ ಬದುಕಿನ ಸರಳತೆಯ ಸೂತ್ರಗಳ ಪ್ರಭಾವಕ್ಕೊಳಗಾದವರು. ಇವರ ಕುರಿತಾಗಿ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಈತನ ಎಂಟು ವಚನಗಳು ಮಾತ್ರ ‘ಸಮಗ್ರ ವಚನ ಸಂಪುಟ-೭’ ರಲ್ಲಿ(ಸಂಕೀರ್ಣ ವಚನ ಸಂಪುಟ-೨)ರಲ್ಲಿ ಇವೆ.ಲೌಕಿಕ ಬದುಕಿನ ಆಶೆ ಆಮಿಷೆಗಳನ್ನು ತ್ಯಜಿಸಿ ನಿರ್ಲಿಪ್ತತೆಯ ನಿರಾಂತಕ ಬದುಕು ಸಾಗಿಸಬೇಕು. ಈ ವಚನದಲ್ಲಿ ಭೌತಿಕ ವಸ್ತುಗಳ ಮೇಲಿನ ನಿರ್ಮೋಹವನ್ನು ಅವುಗಳ ನಿರರ್ಥಕತೆಯನ್ನು ರೂಪಕಗಳ ಮೂಲಕ ಕರುಳಕೇತಯ್ಯನವರು ಹೇಳಿದ್ದನ್ನು ಕಾಣುತ್ತೇವೆ. ಅರ್ಪಿತವಲ್ಲದ ಅಂದರೆ ಸಲ್ಲದ, ಲಿಂಗಾರ್ಪಿತವಲ್ಲದ, ಲಿಂಗಕ್ಕೆ ಅರ್ಪಿಸಲು ಯೋಗ್ಯವಲ್ಲದ ವಸ್ತುಗಳನ್ನು ಮುಟ್ಟಿದವರು ಹಾಗೂ ಅನುಭವಿಸಿದವರು ಲಿಂಗಭಕ್ತಿಗೆ ಹೇಗೆ ಯೋಗ್ಯರು? ಜೀವನದಲ್ಲಿ…

Read More

ಮಕ್ಕಳ ಅನುಪಾತದಂತೆ ಶಿಕ್ಷಕರ ಹೆಚ್ಚುವರಿ ಮತ್ತು ವರ್ಗಾವಣೆ ವ್ಯವಸ್ಥೆಗೆ ಚಿತ್ರಕಲಾ ಶಿಕ್ಷಕರ ವಿರೋಧ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಮಕ್ಕಳ ಅನುಪಾತದಂತೆ ವೃಂದ ಬಲವನ್ನು ಜಾರಿಗೆ ತಂದಿರುವುದರಲ್ಲಿ ಶಿಕ್ಷಣದ ಎಲ್ಲಾ ಆಶಯಗಳನ್ನು ಬದಿಗೊತ್ತಿ ಖಾಲಿ ಹುದ್ದೆಗಳನ್ನು ಮರು ಭರ್ತಿ ಮಾಡದೆ ಅಳಿದುಳಿದ ಶಿಕ್ಷಕರುಗಳಲ್ಲೇ ಬಲವಂತದಿಂದ ಹುದ್ದೆ ಮರ್ಜ್ ಅಥವಾ ರದ್ದು ಗೊಳಿಸುತ್ತಾ ಹೆಚ್ಚುವರಿ ನೆಪದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಸೃಜನಶೀಲತೆಯಿಂದ ತೊಡಗಿಕೊಂಡು ಉಲ್ಲಸಿತವಾಗಿ ಚೈತನ್ಯದಿಂದ ತೊಡಗಿಕೊಂಡು ತನ್ನ ಮನೋವೃದ್ದಿ ಹೊಂದುವಂತಿದ್ದ ಜೈವಿಕವಾದ ವಿಷಯ “ಚಿತ್ರಕಲೆಯನ್ನು” ಮೊಟಕುಗೊಳಿಸುವುದು ಸರಿಯಲ್ಲ ಎಂದು ಚಿತ್ರಕಲಾ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಯಾಂತ್ರಿಕ ಶಿಕ್ಷಣವನ್ನು ಅಂದರೆ ವಸ್ತುನಿಷ್ಠ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ಉದಾಹರಣೆ : ಕ್ಯಾಲ್ಕುಲೇಟರ್ ಒಟ್ಟಾರೆಯಾಗಿ ಹೇಳುವುದಂದರೆ ಪರ್ಸೆಂಟೇಜ್ ಫಲಿತಾಂಶ ಶಿಕ್ಷಣಕ್ಕೆ ಇಲಾಖೆ ಮತ್ತು ಪಾಲಕರು ವ್ಯಾಮೋಹ ಹೊಂದಿ,ಅನುಭವಿಸಿ ಜೀವಿಸುವ ನಮ್ಮ ಕೌಶಲ್ಯ ಮತ್ತು ಸಂಸ್ಕೃತಿಗಳಿಂದ ದೂರಗೊಳಿಸುತ್ತಾ ಮಕ್ಕಳನ್ನು ಮಾನಸಿಕ ಅಶ್ವಸ್ಥರನ್ನಾಗಿಸುವುದರಿಂದ ಮಕ್ಕಳಲ್ಲಿ…

Read More

ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವ | ಅಪರಾಧದ ವಿರುದ್ಧ ಆರಕ್ಷಕರ ಕಾರ್ಯಾಚರಣೆ | ವರ್ಷದಲ್ಲಿ ೩೪೫ ಆರೋಪಿಗಳ ಬಂಧನ | ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳು ವಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಪರಾಧಿಕ ಪ್ರಕರಣಗಳ ಕಡಿವಾಣಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ತಮ್ಮ ಸ್ವೊತ್ತನ್ನು ಕಳೆದುಕೊಂಡಿರುವ ನೈಜ ವಾರಸುದಾರರಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಸ್ವೊತ್ತನ್ನು ಹಸ್ತಾಂತರಿಸಿದರು.ಒಟ್ಟು ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವಾರಸುದಾರರಿಗೆ ೩,೪೬,೦೮,೧೦೦ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಬಾಕಿ ಉಳಿದ ೩,೫೬,೨೧,೬೬೪ ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಆಧರಿಸಿ ವಾರಸುದಾರರಿಗೆ ನೀಡುವ ವ್ಯವಸ್ಥೆ ಮಾಡಲಿದೆ.ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ…

Read More

ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಯುವ ಕ್ರಾಂತಿ’ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗವರು ದೇಶಭಕ್ತಿ ಬಗ್ಗೆ ಮಾತಾಡುತ್ತಾರೆ. ಸಾವರ್ಕರ್ ಮತ್ತು ಗೋಲ್ವಾಲ್ಕರರು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಯುವ ಕ್ರಾಂತಿ’ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುಖ್ಯಮಂತ್ರಿ, ಸ್ವಾತಂತ್ರ್ಯ ಹೋರಾಟ ಮತ್ತು‌ ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ನ ತ್ಯಾಗ-ಬಲಿದಾನ ಮಹತ್ವದ ಪಾತ್ರ ನಿರ್ವಹಿಸಿದೆ. ದೇಶಕ್ಕೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಹುಟ್ಟಿದ ಪಕ್ಷ ಕಾಂಗ್ರೆಸ್. ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ.ಆದರೆ ಈಗ ಇವರು ನಮಗೆ ದೇಶ ಭಕ್ತಿ ಬಗ್ಗೆ ಮಾತನಾಡುತ್ತಾರೆ ಎಂದರು.ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದಂತೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಭದ್ರ ಬುನಾದಿ ಹಾಕಿದವರು ನೆಹರೂರವರು. ಬಹುತ್ವ ಭಾರತದ ನೆಲದಲ್ಲಿ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಏಳಿಗೆಯೇ ನಮ್ಮ ಮೂಲ ಧ್ಯೇಯ. ಅದಕ್ಕೆ ಪೂರಕವಾಗಿ ಎಂದೆಂದಿಗೂ ಪೋಷಕರ ಸೂಕ್ತ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಟ್ಟಿ ಬೆಳಸಿದ ಶ್ರೀ ಬಂಥನಾಳ ಶಿವಯೋಗಿಗಳು, ಡಾ.ಫ ಗು ಹಳಕಟ್ಟಿಯವರು ಮತ್ತು ಡಾ.ಬಿ.ಎಂ ಪಾಟೀಲ ಮಹಾನ್ ಚೇತನರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.ಮೊದಲು ನೂತನ ಆವರಣದಲ್ಲಿ ಯಾವುದೇ ಗಿಡಮರಗಳಿಲ್ಲದೆ ಒಣ ಭೂಮಿ ಇತ್ತು. ಆದರೆ ಇಂದು ಸಂಸ್ಥೆಯ ಅಧ್ಯಕ್ಷರಿಂದ ಉದ್ಘಾಟಿತ ‘ಹಸಿರು ಸಿರಿ’ ಸೆಲ್‌ನಿಂದಾಗಿ ಹಸಿರುಮಯವಾಗಿದೆ. ಒಟ್ಟು ೨೦೦ ಕ್ಕಿಂತ ಅಧಿಕ ಗಿಡಗಳನ್ನು ನೆಟ್ಟು ಪೋಷಿಸಿ ಆವರಣ ಸಂಪೂರ್ಣ ಹಸಿರುಮಯಗೊಳಿಸಲಾಗಿದೆ.ಅದಕ್ಕೆ ಮಹಾವಿದ್ಯಾಲಯದ ಬೋಧಕ…

Read More