ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಹಾಗೂ ಇಷ್ಟಪಡುವುದಿಲ್ಲ. ಎಂದಿನಂತೆ ನನಗೆ ದಿನವೂ ಜನಸೇವೆಯ ದಿನವಾಗಿದ್ದು, ಡಿಸೆಂಬರ್ 13 ರಂದು ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇರುವುದರಿಂದ, ಯಾವುದೇ ತರಹದ ಹೂ-ಗುಚ್ಚ, ಉಡುಗೊರೆ, ಬ್ಯಾನರ್ ಗೆ ಅನಾವಶ್ಯಕ ವೆಚ್ಚ ಮಾಡಬಾರದೆಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಡೀ ರಾಜ್ಯಾದ್ಯಂತ ಅಸಂಖ್ಯಾತ ಹಿಂದೂ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು, ಹಿತೈಷಿಗಳು ತೋರುತ್ತಿರುವ ಅಭೂತಪೂರ್ವ ಬೆಂಬಲ, ಪ್ರೋತ್ಸಾಹ, ಆಶೀರ್ವಾದವೇ ನನಗೆ ಬಹುದೊಡ್ಡ ಉಡುಗೊರೆ ಎಂದು ಶಾಸಕರು ತಿಳಿಸಿದ್ದಾರೆ.

