ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ಪ್ರಥಮ ಸೆಮೆಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೀತಿ ಹೊನಖಂಡೆ ಇವಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಹಾಲಿಬಾಲ್ ತಂಡಕ್ಕೆ ‘ಯುನಿವ್ಹರ್‌ಸಿಟಿ ಬ್ಲ್ಯೂ’ ಆಗಿ ಆಯ್ಕೆಯಾಗಿದ್ದಾಳೆ.
ಕಾಲೇಜಿಗೆ ಕೀರ್ತಿ ತಂದ ಈ ಕ್ರೀಡಾಪಟು ಸಾಧನೆಗೆ ಕಾಲೇಜು ಅಭಿವೃದ್ಧಿ ಸಮೀತಿ ಅಧ್ಯಕ್ಷರೂ ಹಾಗೂ ವಿಜಯಪುರ ನಗರದ ಶಾಸಕರೂ ಆದ ಬಸನಗೌಡ.ಆರ್.ಪಾಟೀಲ ಹಾಗೂ ಕಾಲೇಜಿನ ಅಭಿವೃದ್ಧಿ ಸಮೀತಿ ಸದಸ್ಯರು, ಪ್ರಾಂಶುಪಾಲ ಡಾ. ಎ.ಐ.ಹಂಜಗಿ, ಕ್ರೀಡಾ ನಿರ್ದೇಶಕ ಪ್ರೊ. ಸಂಗಮೇಶ ಗುರವ, ಕ್ರೀಡಾ ಸಮಿತಿ ಸದಸ್ಯರಾದ ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಪ್ರಕಾಶ ಹಾವೇರಿಪೇಠ ಹಾಗೂ ಡಾ. ದೇವೇಂದ್ರಗೌಡ ಪಾಟೀಲ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

