ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಆರೋಪ | ಡಿ.೯ ಕ್ಕೆ ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಸಮಸ್ಯೆಗಳನ್ನು ಬಗೆಹರಿಸದ ಕಾಂಗ್ರೆಸ್ ಸರ್ಕಾರದ ದೋರಣೆಯನ್ನು ಖಂಡಿಸಿ ಇದೇ ೯ ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ. ಬೆಳೆ ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ ಮಾಡುತ್ತಿದೆ. ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ವಿಜಯಪುರ ಜಿಲ್ಲೆಯ ಜೀವನಾಡಿಯಾಗಿದೆ. ರಾಜ್ಯ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ವಿಮೆ ಹಣ ಬರದಂತೆ ತಡೆ ಹಿಡಿದಿದ್ದಾರೆ. ನಮ್ಮ ನಾಯಕ ವಿಜೇಂದ್ರ ಹೋರಾಟಕ್ಕೆ ಇಳಿದ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರಿಗೆ ಹಣ ಜಮೆ ಮಾಡಿದೆ. ಆದರೆ ಬಹಳಷ್ಟು ರೈತರಿಗೆ ಇನ್ನೂ ಪರಿಹಾರ ಹಣ ಬಂದಿಲ್ಲ. ಆ ಹಣವನ್ನು ಬೇರೆಬೇರೆ ಉದ್ದೇಶಕ್ಕೆ ಸರ್ಕಾರವೇ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ಸಬ್ಸಿಡಿ ದರದಲ್ಲಿ ರೈತರಿಗೆ ಕೃಷಿ ಇಲಾಖೆ ನೀಡಬೇಕಿದ್ದ ಡ್ರಿಫ್ ಪೈಪ್, ಸ್ಪಿಂಕಲರ್, ಟ್ರ್ಯಾಕ್ಟರ್ ಇಕ್ವೀಪ್ಮೆಂಟ್‌ಗಳನ್ನು ಸರಿಯಾಗಿ ವಿತರಣೆ ಮಾಡುತ್ತಲ್ಲ. ಈ ಸರ್ಕಾರ ದಿವಾಳಿಯಾಗಿದೆ. ಜಿಲ್ಲೆಯ ೬ ಜನ ಶಾಸಕರಿಗೆ ಹಾಗೂ ಇಬ್ಬರು ಸಚಿವರಿಗೆ ಜೆಲ್ಲೆಯ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಕಳೆದ ೨ ವರ್ಷದಿಂದ ಎಸ್ ಎಸ್ಟಿ ಜನರಿಗೆ ಯಾವುದೇ ಬೋರ್ವೆಲ್ ಕೊರೆಸಿಲ್ಲ. ವಿದ್ಯುತ್ ಸಂಪರ್ಕ ನೀಡಿಲ್ಲ. ಜಿಲ್ಲೆಯ ಸಮಸ್ಯೆಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಎಲ್ಲ ಶಾಸಕ ಸಚಿವರು ಉತ್ತರ ತರಬೇಕು ಎಂದು ತಾಕೀತು ಮಾಡಿದರು.
ಕಳೆದ ೮೦ ದಿನಗಳಿಂದ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ನಡೆಯುತ್ತಿದೆ. ಹೋರಾಟಕ್ಕೆ ಕುಳಿತವರಿಗೆ ಮೆಡಿಕಲ್ ಸೀಟ್ ಬೇಕಾಗಿಲ್ಲ, ಜಿಲ್ಲೆಯ ಮಕ್ಕಳಿಗೆ ಭವಿಷ್ಯದಲ್ಲಿ ಒಳಿತಾಗಲಿದೆ ಎನ್ನುವ ಉದ್ದೇಶಕ್ಕೆ ಕುಳಿತಿದ್ದಾರೆ. ಆದರೆ ಯತ್ನಾಳ್ ಅವರು ತಮ್ಮ ಆಸ್ಪತ್ರೆಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಪಿಪಿಪಿ ಮಾಡೆಲ್ ಕಾಲೇಜಿಗೆ ಬೆಂಬಲ ವ್ಯಕ್ತಪಡಿಸಿರುವುದು ಖಂಡನಿಯ ಎಂದರು.
ಯತ್ನಾಳ್ ಹಾಗೂ ಎಂ.ಬಿ.ಪಾಟೀಲ ಅವರು ಸ್ವಂತ ಲಾಭಕ್ಕಾಗಿ ಪಿಪಿಪಿ ಮಾಡಲ್ ಮೆಡಿಕಲ್ ಕಾಲೇಜು ಮಾಡಲು ಒಪ್ಪಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಜನತೆ ಹೀಗೊಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಸದನದಲ್ಲಿ ಬಾವಿಗಿಳಿದು ಹೋರಾಟ ಮಾಡಬೇಕು. ವಿಜಯಪುರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ಯಡಿಯೂರಪ್ಪ, ಬೊಮ್ಮಾಯಿ ಇದ್ದಾಗ ಪಂಚಮಸಾಲಿ ಹೋರಾಟ ಮಾಡಲಾಯಿತು. ಆಗ ಸರ್ಕಾರ ಹೋರಾಟಗಾರರೊಂದಿಗೆ ಸಂಯಮದಿಂದ ವರ್ತಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಅವರ ಮೇಲೆ ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಮಾಡಿ ಅವರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಸರ್ಕಾರ ಲಾಠಿ ಚಾರ್ಜ್ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು ಒಂದು ವೇಳೆ ನೀವು ಹಾಗೆ ಜಿಲ್ಲೆಗೆ ಬಂದರೆ ಜನರ ವಿರೋಧ ವ್ಯಕ್ತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯಪುರದಲ್ಲಿ ಅತೀ ಹೆಚ್ಚು ಗುತ್ತಿಗೆದಾರರು ಇದ್ದಾರೆ. ಸರ್ಕಾರಿ ಕೆಲಸ ಮಾಡಿ ಮುಗಿಸಿದರೂ ಸರ್ಕಾರ ಅವರ ಬಿಲ್ ಬಿಡುಗಡೆ ಮಾಡುತ್ತಿಲ್ಲ. ಸರ್ಕಾರ ೬ ತಿಂಗಳಿಗೊಮ್ಮೆ ಶೇ.೫ ಹಾಗೂ ಶೇ.೧೦ ರಷ್ಟು ಹಣ ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆಯಯಾದ ಹಣ ಗುತ್ತಿಗೆದಾರರು ಬಡ್ಡಿಕಟ್ಟುವುದರಲ್ಲಿಯೇ ಖಾಲಿಯಾಗುತ್ತದೆ. ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩೦ ಕೋಟಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗೆ ಆದರೆ ಗುತ್ತಿಗೆದಾರರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಯತ್ನಾಳ ಅಡ್ಜಸ್ಟ್ಮೆಟ್ ಬಗ್ಗೆ ಮಾತನಾಡುತ್ತಾರೆ, ತಾವೇ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ಳುತ್ತಾರೆ. ರೆಬಲ್ ಟೀಮ್ ನವರು ವಿಜೇಂದ್ರ ಯುವಕ ಎಂದು ಹೇಳುತ್ತಿದ್ದಿರಿ ನೀವು ಘೋಷಣೆ ಮಾಡಿ ಯುವಕರು ಯಾರು ನಮಗೆ ಮತ ಹಾಕಬೇಡಿ ಎಂದು ಯಾಕೆ ಯುವಕರು ಅಧ್ಯಕ್ಷ ಆಗಬಾರದೆ, ಅಂದು ಯಡಿಯೂರಪ್ಪ ಮನಸ್ಸು ಮಾಡಿದ್ದರಿಂದಲೇ ಯುವಕರಾಗಿದ್ದ ಯತ್ನಾಳ ಕೇಂದ್ರ ಸಚಿವರಾಗಿದ್ದು, ಯತ್ನಾಳ ಅವರೇ ಯಡಿಯೂರಪ್ಪನವರಿಗೆ ಮಾತನಾಡುವುದನ್ನು ನಿಲ್ಲಿಸಿ. ನೀವು ವಿಜಯಪುರ ನಗರ ಸುಂದರಿಕರಣ ಮಾಡಿದ್ದೇನೆ ಎಂದು ಹೇಳುತ್ತೀರಿ ಆಗ ಬಿಜೆಪಿ ಸರ್ಕಾರ ನಿಮಗೆ ಬೆನ್ನೆಲುಬಾಗಿ ನಿಂತಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಸುಂದರಿಕರಣ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುರೇಶ ಬಿರಾದಾರ, ಪಾಲಿಕೆ ಮಾಜಿ ಸದಸ್ಯ ಭೀಮಾಶಂಕರ ಹದನೂರ, ಚಿದಾನಂದ ಛಲವಾದಿ, ಈರಣ್ಣ ರಾವೂರ, ರಾಜಶೇಖರ ಡೊಳ್ಳಿ, ಸ್ವಪ್ನಾ ಕಣ್ಮುಚನಾಳ, ವಿಜಯ ಜೋಶಿ, ಸುಶ್ಮಿತಾ ವಾಂಡಕರ್ ಮತ್ತಿತರರು ಇದ್ದರು.

