ವಿಜಯಪುರ ಶಾಸಕ ಬಸನಗೌಡ ಪಾಟೀಲ ( ಯತ್ನಾಳ) ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಹಿಂದುಗಳು ಒಂದಾಗದಿದ್ದರೆ ದೇಶ ಮತ್ತು ಸಂವಿಧಾನ ಉಳಿಯುವದಿಲ್ಲ. ಈ ಬಗ್ಗೆ ದೇಶದ ಹಿಂದುಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ಭಾನುವಾರ ಸಾಯಂಕಾಲ ಪಟ್ಟಣದ ಶಿರಶ್ಯಾಡ ಶಾಖಾ ಮಠದಲ್ಲಿ ನಿರ್ಮಾಣಗಿಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಉಚಿತ ಪ್ರಸಾದ ನಿಲಯ ಹೊಸ್ತಿಲ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿರುವ ಹಿಂದು ಮಠಮಾನ್ಯಗಳು ಕೇವಲ ವೀರಶೈವ ಲಿಂಗಾಯತ ಮಕ್ಕಳಿಗೆ ಅಷ್ಟೇ ಶಿಕ್ಷಣ ನೀಡಿಲ್ಲ. ಅಲ್ಲಿ ಮುಸ್ಲಿಂ ಸೀಖ ಪಾರ್ಸಿ ಜೈನ ಸೇರಿದಂತೆ ಎಲ್ಲಾ ಸಮುದಾಯದ ಮಕ್ಕಳಿಗೂ ಅವಕಾಶ ಮಾಡಿಕೊಡಲಾಗಿದೆ ಎಂದರು.
ಸನಾತನ ಹಿಂದು ಧರ್ಮದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವಾಗಿರುವದು ಸತ್ಯ. ಅದನ್ನು ಸರಿಪಡಿಸಿಕೊಳ್ಳುವ ಕಾಲ ಬಂದಿದೆ. ಕಾರಣ ದೇಶದ ಎಲ್ಲರೂ ಒಗ್ಗಟ್ಟಾಗಬೇಕು ದೇಶ ಮತ್ತು ಸಂವಿಧಾನ ಉಳಿಸಿಕೊಳ್ಳಲು ಸಹಕರಿಸಬೇಕೆಂದು ಕರೆ ನೀಡಿದರು.
ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ, ಅವೆರಡೂ ಒಂದೇ ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಎಲ್ಲರೂ ನಡೆದುಕೊಳ್ಳುತ್ತಾರೆ. ಬಸವಣ್ಣನವರು ಕೇವಲ ಸನಾತನ ಧರ್ಮದಲ್ಲಿರುವ ಮೂಢ ನಂಬಿಕೆ ಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಎನ್ನುವದನ್ನು ಮರೆಯಬಾರದು. ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆಎಂದರು.
ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರರು ಪ್ರವಚನ ನೀಡಿ ಮಾತನಾಡಿದರು.
ಅದೃಷ್ಟಪ್ಪ ವಾಲಿ, ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ರಾಘವೇಂದ್ರ ಕುಲಕರ್ಣಿ, ಯಶವಂತಗೌಡ ಬಿರಾದಾರ ಮಾತನಾಡಿದರು.
ವೇದಿಕೆಯ ಮೇಲೆ ಮುರುಗೇಂದ್ರ ಶಿವಾಚಾರ್ಯರರು, ಒಡೆಯರ ರಾಜೇಂದ್ರ ಶಿವಾಚಾರ್ಯರರು ರಾಮಲಿಂಗಯ್ಯ ಶ್ರೀಗಳು ಅಶೋಕಗೌಡ ಬಿರಾದಾರ ಜಗದೀಶ ಕ್ಷತ್ರಿ ಅನೀಲ ಪ್ರಸಾದ ಏಳಗಿ ರವಿಗೌಡ ಪಾಟೀಲ ಮತ್ತಿತರಿದ್ದರು.

