Author: editor.udayarashmi@gmail.com

ಇಂದು (ಅಕ್ಟೋಬರ-೧೦, ಶುಕ್ರವಾರ) ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಗೌತುಮ ಬುದ್ಧ ಅವರು, “ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ” ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯ ಎಂದರೆ ಮನಸ್ಸಿನ ಆರೋಗ್ಯ, ಮನಸ್ಸು ಆರೋಗ್ಯದಿಂದಿರುವುದು ದು ಹೇಳಬಹುದು. ಒಬ್ಬ ವ್ಯಕ್ತಿ ತನ್ನೊಂದಿಗೆ ಮತ್ತು ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಾಣಿಕೆಯ ಮನೋಭಾವವನ್ನು ಹೊಂದಿರುವ ಸ್ಥಿತಿಯೇ ಮಾನಸಿಕ ಆರೋಗ್ಯವಾಗಿದೆ.ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ ೧೦ ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಪ್ರಮುಖ ಕಾರಣವಾಗಿದೆ. ಶಾಲೆೆ-ಕಾಲೇಜು ಮತ್ತು ಸಾರ್ವಜನಿಕವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಆರೋಗ್ಯ ಶಿಕ್ಷಣ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜಗದ್ಗುರು ತೊಂಟದಾರ್ಯ ವಿದ್ಯಾಪೀಠಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿಯಲ್ಲಿ 2006-2007ನೇ ಸಾಲಿನ ಎಸ್, ಎಸ್, ಎಲ್, ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಜರುಗಿತು.ಗುರು – ಶಿಷ್ಯರ ಸಂಬಂಧ ಹೇಗೆಲ್ಲ ಇರಬಹುದು ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ತೋರಿಸಿಕೊಟ್ಟರು, ಸುಮಾರು 4 ಗಂಟೆಗಳಿಗೂ ಹೆಚ್ಚು ಸಮಯ ನಡೆದ ಗುರುವಂದನಾ ಕಾರ್ಯಕ್ರಮ ತಮಗೆ ಪಾಠ ಕಲಿಸಿದ ಪ್ರೌಢಶಾಲಾ ಗುರುಗಳನ್ನು ವೇದಿಕೆಗೆ ಕರೆತಂದು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳ ಸಮಾಗಮಕ್ಕೂ ಸಾಕ್ಷಿಯಾಗಿತ್ತು.ಸಾನಿಧ್ಯ ವೀರಬಸವ ದೇವರು ಹಿರೇಮಠ ಆಸಂಗಿˌ ಡಾ|| ಎ. ಜೆ. ನ್ಯಾಮಗೌಡ ಅಧ್ಯಕ್ಷರು ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿ,ಉದ್ಘಾಟಕರಾದ ಪಿ. ಬಿ. ದಾನಗೌಡ ಉಪಾಧ್ಯಕ್ಷರು ಸ್ಥಾನಿಕ ಆಡಳಿತ ಮಂಡಳಿ ಶಿ,ಹ, ಸ್ಮಾ, ಪ್ರೌಢ ಶಾಲೆ ಚಿಕ್ಕಪಡಸಲಗಿ, ಮುಖ್ಯ ಅತಿಥಿಗಳಾಗಿ ಪಿ. ಎಮ್. ಪಾಟೀಲ ನಿವೃತ್ತ ಮುಖ್ಯ ಪಾಧ್ಯಾಯರು, ಬಿ. ಎಲ್.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿವಿಧ ಜಾತಿಯ ಅರಣ್ಯ, ತೋಟಗಾರಿಕೆ ಹಾಗೂ ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಕಾರ್ಬನ್ ಕ್ರೆಡಿಟ್ ಕಾರ್ಯಕ್ರಮದಡಿ ಪ್ರೋತ್ಸಾಹ ಧನಕ್ಕಾಗಿ ಆಸಕ್ತ ರೈತರಿಂದ ಆರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗ್ರಾಮೀಣ‌ ಅಭಿವೃದ್ಧಿ ಸಂಸ್ಥೆ (IRD) ಮುಖ್ಯ ಕಾರ್ಯನಿರ್ವಾಹ ಅಧಿಕಾರಿ‌ ಡಾ.ಬಾಬು ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕದಲ್ಲಿ ವಿವಿಧ ಜಾತಿಯ ತೆಂಗು, ದಾಳಿಂಬೆ, ಸಾಗುವಾನಿ, ಮಹಾಗಣಿ, ಶ್ರೀಗಂಧ, ಬೇವು, ಮಾವು, ಪೇರು, ನುಗ್ಗೆ, ನೇರಳೆ, ಹಲಸು, ಬಾರಿ, ನಿಂಬೆ, ಹುಣಸೆ, ನೆಲ್ಲಿ, ಗೋಡಂಬಿ, ಸೀತಾಫಲ, ಬೆಣ್ಣೆಹಣ್ಣು, ಎಣ್ಣೆ ಪಾಮ ಮುಂತಾದ ತೋಟಗಾರಿಕೆ ಮತ್ತು ಇತರೆ ಸಸಿಗಳನ್ನು ನೆಟ್ಟಿರುವ ರೈತರಿಗೆ ಪ್ರೋತ್ಸಾಹಿಸಲು ಗ್ರಾಮೀಣ‌ ಅಭಿವೃದ್ಧಿ ಸಂಸ್ಥೆಯು ವರಾಹ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ರೈತರಿಗೆ ಪ್ರೋತ್ಸಾಹ ಧನ ನೀಡುವ ಕಾರ್ಬನ್ ಕ್ರೇಡಿಟ್ ಕಾರ್ಯಕ್ರಮದಡಿ ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಪ್ರೋತ್ಸಾಹ ಧನ ಪಡೆಯಲಿಚ್ಚಿಸುವ ಆಸಕ್ತ ರೈತರು ಮೇಲಿನ…

Read More

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ನೇತೃತ್ವದಲ್ಲಿ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮಾಜಿಕ-ಆರ್ಥಿಕ ಸಮೀಕ್ಷೆ ಸಮಯದಲ್ಲಿ ನಡೆಯುತ್ತಿರುವ ಅನಿಯಮಿತ ತಪ್ಪು ಮಾಹಿತಿಗಳ ದಾಖಲಾತಿ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಈ ಮನವಿ ಪತ್ರದಲ್ಲಿ ಸಮೀಕ್ಷಾ ಸಿಬ್ಬಂದಿಗಳು ಕೇವಲ 4–5 ಪ್ರಶ್ನೆಗಳನ್ನು ಕೇಳಿ ಉಳಿದ ಮಾಹಿತಿಯನ್ನು ಸ್ವಯಂ ಭರ್ತಿ ಮಾಡಿ ಫಾರ್ಮ್ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವರ ಮೊಬೈಲ್‌ಗಳಿಗೆ OTP ಬಾರದಿದ್ದರೂ ಅವರ ಮಾಹಿತಿಯನ್ನು ಸೇರಿಸಲಾಗುತ್ತಿಲ್ಲ, ಆದರೆ ಆಧಾರ್ ನೋಂದಣಿ ಸಂಖ್ಯೆಯ ಮೂಲಕ OTP ಇಲ್ಲದೇ ಸಹ ಸೇರಿಸಬಹುದು ಎಂಬುದನ್ನು ಉಲ್ಲೇಖಿಸಲಾಗಿದೆ. 6 ವರ್ಷಕ್ಕಿಂತ ಕಡಿಮೆ ಮಕ್ಕಳನ್ನು ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಸೇರಿಸಬಹುದಾದರೂ ಅದನ್ನೂ ಕಡೆಗಣಿಸಲಾಗುತ್ತಿದೆ. ಸಮೀಕ್ಷಾ ಸಿಬ್ಬಂದಿಗೆ ಪ್ರತಿಯೊಬ್ಬರ ಪ್ರಶ್ನೆಗಳನ್ನು ಸಂಪೂರ್ಣವಾಗಿ ಕೇಳಿ ಸರಿಯಾದ ಮಾಹಿತಿಯನ್ನು ಮಾತ್ರ ದಾಖಲಿಸಲು ಹಾಗೂ ದಿನನಿತ್ಯದ ಗುರಿಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ ಡಾ. ಎಲ್.ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ) ವತಿಯಿಂದ ಡಾ. ಅಂಬೇಢ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ ಮುಖಾಂತರ ೫೯ ಅಲೆಮಾರಿಗಳಿಗೆ ಶೇ. ೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಅವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಕರೆಕಲ್ಲ, ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ ಮಾತನಾಡಿ, ೧೦೧ ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಹೋರಾಟ ನಡೆಸಲಾಗಿದೆ. ೫೯ ಅಲೆಮಾರಿ ಜಾತಿಗಳಿಗೆ ಕೂಡಲೇ ಶೇ. ೧ ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಆದಿ ಕರ್ನಾಟಕ. ಆದಿ ಆಂಧ್ರ ಮತ್ತು ಆದಿದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಕಂದಾಯ ಇಲಾಖೆಯಲ್ಲಿ ೧೦ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ೧೨ ಸಾವಿರ ಗ್ರಾಮ ಸಹಾಯಕರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ವಾಹನ ಚಾಲಕರು ಹಾಗೂ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಅವಾಸ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ವಿದ್ಯುತ್ ಸಂಪರ್ಕವಿಲ್ಲದೆ ಬಿಟ್ಟು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿರುವದನ್ನು ಖಂಡಿಸಿ ತಲೆಮೇಲೆ ಕಲ್ಲು ಹೊತ್ತು ವಿಭಿನ್ನ ರೀತಿ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿ ಡಾ. ಆನಂದವರಿಗೆ ಮನವಿ ಸಲ್ಲಿಸಿದರು.ಅಖಿಲ ಭಾರತೀಯ ಝಮ್ ಝಮ್ ಅಸೋಶಿಯೇಶನ ರಾಜ್ಯಾಧ್ಯಕ್ಷರಾದ ಮಹಮ್ಮದಯುಸೂಫ ಮಾತನಾಡಿ, ನಗರದ ಬಸವೇಶ್ವರನಗರ ಪ್ರದೇಶದಲ್ಲಿ ಸರ್ಕಾರದ ಅವಾಸ್ ಯೋಜನೆ (ಊousiಟಿg Sಛಿheme) ಅಡಿಯಲ್ಲಿ ಸುಮಾರು ಎರಡು ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿ ಪೂರ್ಣಗೊಳಿಸಲಾಯಿತು. ಆದರೆ ಇಂದಿನವರೆಗೂ ಈ ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆ, ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಲಾಗಿಲ್ಲ. ಅದೇ ರೀತಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕೂಡ ಆಗಿಲ್ಲ.ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮರುಮರು ಮನವಿ ನೀಡಿದಾಗ ಅವರು “ಅಲೋಟ್ ಮಾಡ್ತೀವಿ, ವಿಚಾರಣೆ ನಡೆಯುತ್ತಿದೆ” ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಲವು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀನುಗಾರಿಕೆ ಮಹಿಳೆಯರಿಗೆ ಒಂದು ಆದಾಯ ತರುವ ಉದ್ಯೋಗವಾಗಿದ್ದು, ಮೀನು ಪೌಷ್ಟಿಕಾಂಶಗಳ ಆಹಾರದ ಮೂಲವಾಗಿದೆ ಎಂದು ಇಂಗ್ಲೆಂಡಿನ ಖ್ಯಾತ ಮಿದುಳು ರಕ್ತನಾಳ ತಜ್ಞ ಡಾ. ಶುಜಾ ಪುಣೇಕರ ಅಭಿಪ್ರಾಯ ಪಟ್ಟರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಸಿಕ್ಯಾಬ್ ಎ.ಆರ್.ಎಸ್ ಇನಾಮ್‌ದಾರ ಮಹಿಳಾ ಮಹಾವಿದ್ಯಾಲಯ ವಿಜಯಪುರ ಇವರ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ‘ಪ್ರಧಾನಮಂತ್ರಿ ಉಚ್ಛಶಿಕ್ಷಾ ಅಭಿಯಾನ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ‘ಮಹಿಳೆಯರಿಗೆ ಮೀನುಗಾರಿಕೆ ಕೌಶಲ್ಯಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮೀನು ಪ್ರೋಟೀನ್ ಘಟಕದ ಮೂಲ ಆಹಾರ ಆಕಾರವಾಗಿದ್ದು, ಶುದ್ಧ ನೀರು ಹಾಗೂ ಸಾಗರೋತ್ಪನ್ನಗಳಲ್ಲಿ ಪ್ರಮುಖವಾಗಿದೆ ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿಕ್ಯಾಬ್ ಎ.ಆರ್.ಎಸ್.ಆಯ್ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಿಯಾಜ್ ಫಾರೂಕ್ ಮಾತನಾಡಿ, ಮೀನುಗಾರಿಕೆ ಒಂದು ಉದ್ಯೋಗದ ಜೊತೆಗೆ ಆದಾಯವನ್ನು ತಂದುಕೊಡುವ ಉತ್ತಮ ವೃತ್ತಿಯಾಗಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಒಳನಾಡು ಮೀನುಗಾರಿಕೆ ಪರಿಣಾಮಕಾರಿಯಾದ ಕ್ರಮವಾಗಿದೆ ಎಂದರು.ಕಾರ್ಯಾಗಾರದಲ್ಲಿ ಡಾ.ವಿಜಯಕುಮಾರ ‘ಗ್ರಾಮ ಪಂಚಾಯತಿ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸ್ಮೃತಿ ದಿಲೀಪ್ ದಾಬೋಲೆ ಅವರು “ಎ ಸ್ಟಡಿ ಆನ್ ಫೊರ್ಜರಿ ಇಮೇಜ್ ಎನಲೈಸಿಸ್ ಯುಜಿಂಗ್ ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಟೆಕ್ನಿಕ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸ್ಮೃತಿ ದಿಲೀಪ್ ದಾಬೋಲೆ ಅವರು ಗಣಕ ವಿಜ್ಞಾನ ವಿಭಾಗದ ಪ್ರೊ.ಜಿ.ಜಿ.ರಜಪೂತ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸ್ಮೃತಿ ದಿಲೀಪ್ ದಾಬೋಲೆ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ಮತ್ತು ವಿಜಯ ದಶಮಿಯ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅ.೧೧ ರಂದು ಭವ್ಯ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ ೩ಕ್ಕೆ ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಮೈದಾನದಿಂದ ಹೇಮರೆಡ್ಡಿ ಮಲ್ಲಮ್ಮ ವೃತ್ತ, ನ್ಯಾಯಾಲಯದ ಹಿಂಭಾಗ, ಈಶ್ವರ ದೇವಸ್ಥಾನ, ಸ್ಟೇಟ್ ಬ್ಯಾಂಕ್ ರಸ್ತೆ, ಬಸ್ ನಿಲ್ದಾಣದ ಮುಂಭಾಗ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂತ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಶಾರದಾ ದೇವಿ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರ ಗಲ್ಲಿ, ದ್ಯಾಮವ್ವನ ಗುಡಿ, ಸರಾಫ ಬಜಾರ, ಬಜಾರ ಹನುಮಾನ ದೇವಸ್ಥಾನ, ಬೊಮ್ಮಲಿಂಗೇಶ್ವರ ದೇವಸ್ಥಾನ, ಯಮನೂರಪ್ಪನ ಕಟ್ಟೆ, ದುರ್ಗಾದೇವಿ ಗುಡಿ, ದ್ಯಾಮವ್ವನ ಕಟ್ಟೆ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಿ.ಬಿ.ಸಿ ಹೈಸ್ಕೂಲ್ ವರೆಗೆ ಸಾಗಲಿದೆ. ಬಳಿಕ ಸಂಘ ಸಭೆ ಜರುಗಲಿದ್ದು, ಸಭೆಯ ದಿವ್ಯ ಸಾನಿಧ್ಯವನ್ನು ಉಡುಪಿ…

Read More

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗವಾಯಿ ಮೇಲೆ ವಕೀಲ ರಾಕೇಶ ಶೂ ಎಸೆಯಲು ಪ್ರಯತ್ನಿಸಿದ ಪ್ರಕರಣ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರ್ವೋಚ್ಛ ನ್ಯಾಯಾಲಯದಲ್ಲಿ, ಕಲಾಪ ವೇಳೆ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ರಾಕೇಶ ಕಿಶೋರ ಅವರು ಶೂ ಎಸೆಯಲು ಪ್ರಯತ್ನಿಸಿರುವದನ್ನು ಇಲ್ಲಿನ ನ್ಯಾಯವಾದಿಗಳ ಸಂಘ ತೀವ್ರವಾಗಿ ಖಂಡಿಸಿ ತಪ್ಪಿತಸ್ಥ ವಕೀಲನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇಲ್ಲಿನ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಸಮಾಜ ನ್ಯಾಯಾಲಯದ ಮೇಲೆ, ನ್ಯಾಯಾಧೀಶರ ಮೇಲೆ, ನ್ಯಾಯವಾದಿಗಳ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು, ಈ ಘಟನೆ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಹಿರಿಯ ವಕೀಲರಾದ ಇವರಿಗೆ ತೆರೆದ ನ್ಯಾಯಾಲಯದಲ್ಲಿ ಹೇಗಿರಬೇಕು ಎನ್ನುವ ಕನಿಷ್ಟ ಸೌಜನ್ಯವೂ ಇಲ್ಲದಿರುವದು ವಿಪರ್ಯಾಸ. ಅಲ್ಲದೇ ಈ ಕೃತ್ಯ ವಕೀಲರ ಸಮುದಾಯಕ್ಕೆ ಅಪವಾದ ತಂದಂತಿದೆ. ಕಾರಣ ತಪ್ಪಿತಸ್ಥ ವಕೀಲನನ್ನು ವೃತ್ತಿಯಿಂದ ಸಪೂರ್ಣವಾಗಿ ತೆಗೆದುಹಾಕಬೇಕು ಎಂದರು.ಈ ವೇಳೆ ಹಿರಿಯ ನ್ಯಾಯವಾದಿ…

Read More