ವಿಜಯಪುರದ ಎಸ್.ಬಿ. ಕಲಾ-ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಿಡಮೂಲಿಕೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ | ಹಿರಿಯ ವಿಜ್ಞಾನಿ ಡಾ.ಬಿ.ಸುಂದರೇಶನ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗಿಡಮೂಲಿಕೆಗಳಲ್ಲಿ ಅಡಕವಾಗಿರುವ ಔಷಧೀಯ ಅಂಶ, ರೋಗ ನಿವಾರಣಾ ಶಕ್ತಿ ಮೊದಲಾದ ಮಹತ್ತರವಾದ ಅಂಶಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ವಿಜಯಪುರದ ಎಸ್.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಿತು.
ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ, ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮಂಡಳಿ ಹಾಗೂ ಬಿಎಲ್‌ಡಿಇ ಸಂಸ್ಥೆಯ ಎಸ್‌ಎಸ್‌ಎಂ ಔಷಧವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ `ಔಷಧಿಯ ಸಸ್ಯಗಳು, ಗಿಡಮೂಲಿಕೆ ಔಷಧಗಳು ಹಾಗೂ ಅಂಗಾಂಶ ಕೃಷಿ ತಂತ್ರಗಳು’ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿತೆಗಳ ಮೂಲಕ ನಿರೂಪಿಸಿದರು.
ಸೆಂಟ್ರಲ್ ಇನ್ಸಿಟ್ಯೂಟ್ ಮೆಡಿಕಲ್ ಆಂಡ್ ಆರೋಮೆಟಿಕ್ ಹಿರಿಯ ವಿಜ್ಞಾನಿ ಡಾ.ಬಿ.ಸುಂದರೇಶನ್ ತರಬೇತಿ ನೀಡಿ, ಔಷಧಿಯ ಸಸ್ಯಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಸೌಂದರ್ಯವರ್ಧಕ ಉತ್ಪಾದನೆ, ನಾವು ಪ್ರತಿನಿತ್ಯ ಸೋಪ್, ಅಗರಬತ್ತಿ, ಶೌಚಾಲಯದ ಸ್ವಚ್ಚತೆಯಲ್ಲಿ ಬಳಸುವ ವಸ್ತುಗಳು, ಸೌಂದರ್ಯ ವರ್ಧಕಗಳು ಸುಗಂಧಭರಿತವಾಗಿರುತ್ತವೆ. ಇವುಗಳಲ್ಲಿ ಬಳಕೆಯಾಗುವ ಕಚ್ಚಾವಸ್ತು ಗಿಡಮೂಲಿಕೆಗಳೇ ಎಂಬುದನ್ನು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳು ಗಿಡಮೂಲಿಕೆ ಔಷಧಗಳಿಗೆ ತನ್ನದೇ ಆದ ಹೆಸರನ್ನು ನೀಡಿ ಮಾರುಕಟ್ಟೆಗೆ ತರುತ್ತಿವೆ. ಇಂದು ಔಷಧಿ ಗುಣವುಳ್ಳ ಗಿಡಮೂಲಿಕೆಗಳನ್ನು ಬೆಳೆಯುವುದರ ಮೂಲಕ ಸರಿಯಾದ ರೀತಿಯಲ್ಲಿ ಸಂಶೋಧನೆಯಾದರೆ ಉದ್ಯಮವಾಗಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೆಟಾಫಾರಮಿನ್ ಎಂಬ ಗಿಡಮೂಲಿಕೆ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಆದರೆ ನಾವು ಅದನ್ನೇ ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಸಸ್ಯಗಳು ಮನುಷ್ಯನಿಗಿಂತ ಸ್ಟ್ರಾಂಗ್ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದ ಡಾ.ಸುಂದರೇಶನ್, 40-45 ಡಿಗ್ರಿ ಸೇಲ್ಸಿಯಸ್ ಉಷ್ಣಾಂಶವಿರಲಿ ಅದು ಜಾಗ ಬಿಟ್ಟು ಕದಲುವುದಿಲ್ಲ. ಮುನುಷ್ಯರು ಹಾಗಲ್ಲ ಮಳೆ ಬಂದರೆ ರೈನ್ ಕೊಟ್ ಧರಿಸುತ್ತಾರೆ, ಬಿಸಿಲು ತಾಳದೆ ಎಸಿ, ಪ್ಯಾನ್ ಬಳಸುತ್ತಾರೆ, ಆದರೆ ಗಿಡಗಳು ಸಾರ್ವಕಾಲಕ್ಕೂ ಸದಾ ಶಕ್ತಿಯುತವಾಗಿಯೇ ಇರುತ್ತವೆ ಎಂದರು.
50 ಸಾವಿರದಿಂದ 70 ಸಾವಿರ ಗಿಡಮೂಲಿಕೆಗಳು ಔಷಧಿಯ ಸಸ್ಯಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಕೇವಲ ಮನುಷ್ಯರಿಗೆ ಔಷಧಿ ಅಲ್ಲ ಪ್ರಾಣಿಗಳ ಔಷಧ ತಯಾರಿಕೆಗೂ ಮಾರುಕಟ್ಟೆಯಲ್ಲಿ ಬೇಡಿಕೆ, ಪೂರೈಕೆಯಲ್ಲಿ ವ್ಯತ್ಯಾಸವಿದೆ. ಆದರೆ ಔಷಧಿ ಆಯುರ್ವೇದ ಔಷಧಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ನಾವು ಅದನ್ನು ಗಮನ ಇಟ್ಟುಕೊಂಡು ಔಷಧಿಯ ಸಸ್ಯಗಳ ಮೇಲೆ ಪ್ರಯೋಗಗಳು ನಡೆಯಬೇಕು. ಕೋವಿಡ್ ಸಂದರ್ಭದಲ್ಲಿ ಆಯುರ್ವೇದ ಔಷಧಗಳ ಬೇಡಿಕೆ ಹೆಚ್ಚಾಗಿತ್ತು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನೇಕರು ಗೀಡಮೂಲಿಕೆಗಳೇ ಕಾರಣ ಎಂದರು.
ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ವಿ.ಎಸ್. ಬಗಲಿ ಮಾತನಾಡಿ, ಔಷಧಿಯ ಸಸ್ಯಗಳು, ಗಿಡಮೂಲಿಕೆ ಔಷಧಗಳು ಹಾಗೂ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಹರ್ಬಲ್ ಮಡೆಸಿನ್ ಮತ್ತು ಉತ್ಪಾದನೆಗಳ ಮಹತ್ವನ್ನು ಇದರ ಮಹತ್ವವನ್ನು ನಾವು ತಿಳಿಸಿದುಕೊಳ್ಳಬೇಕಾಗಿದೆ ಎಂದರು.
ರಾಜ್ಯ ವಿಜ್ಞಾನ-ತಂತ್ರಜ್ಞಾನ ಮಂಡಳಿ ಅಧ್ಯಕ್ಷ ಡಾ.ಗಂಗಾಧರಪ್ಪ ಆರ್ ಮಾತನಾಡಿದರು. ಪ್ರಾಚಾರ್ಯರಾದ ಆರ್.ಎಂ.ಮಿರ್ಧೆ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಮಚಂದ್ರ ನಾಯಕ,
ಡಾ.ಸಿ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಗವಿರಾಜ.ಇ.ಎನ್, ಪ್ರೊ.ಗಿರಿಜಾ ನಿಂಬಾಳ, ಪ್ರೊ.ಪವನ್ ಮಹೀಂದ್ರಕರ, ಪ್ರೊ.ವಿದ್ಯಾ ಪಾಟೀಲ, ಡಾ.ಪಿ.ಡಿ.ನೀಡಗಿ, ಪ್ರೊ.ಶ್ವೇತಾ ಸವಣೂರ, ಡಾ.ಕೃಷ್ಣಾ ಮಂಡ್ಲಾ ಉಪಸ್ಥಿತರಿದ್ದರು.

