ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರ (ಡಿಎಟಿಸಿ) ರೈತ ಹಾಗೂ ರೈತ ಮಹಿಳೆಯರಿಗಾಗಿ ಸಾವಯವ ಕೃಷಿ, ಈರುಳ್ಳಿ ಹಾಗೂ ವೀಳ್ಯದೆಲೆ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು ವಿಷಯದ ಕುರಿತು ವಿಶೇಷ ತರಬೇತಿಯು ಜುಲೈ ೨ರಂದು ಬೆಳಿಗ್ಗೆ ೧೦ ಗಂಟೆಗೆ ಕೂಡಗಿ ಪಿಕೆಪಿಎಸ್ ನಲ್ಲಿ ಆಯೋಜಿಸಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಮಹತ್ವ, ಈರುಳ್ಳಿ ಹಾಗೂ ವೀಳ್ಯೆದೆಲೆ ಬೆಳೆಗಳ ವೈಜ್ಞಾನಿಕ ಬೇಸಾಯ ಪದ್ಧತಿಗಳು, ಪೋಷಕಾಂಶಗಳ ಸಮರ್ಪಕ ನಿರ್ವಹಣೆ, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಸೇರಿದಂತೆ ವಿವಿಧ ಕೃಷಿ ತಾಂತ್ರಿಕ ವಿಷಯಗಳ ಕುರಿತು ಕೃಷಿ ತಜ್ಞರು ರೈತರಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. ಕೂಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೃಷಿ ತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಫಾತೀಮಾ ಬಾನು ಸುತಾರ್ ಮೊ: ೮೨೭೭೯೩೦೬೧೯ ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
