ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ರಾಕ್ಷಿಯ ನಾಡೆಂದು ಪ್ರಸಿದ್ಧಿಗೊಂಡಂತ ವಿಜಯಪುರ ಜಿಲ್ಲೆ , ಸುಮಾರು 35,000 ಎಕರೆ ದ್ರಾಕ್ಷಿಯನ್ನು ಹೊಂದಿದ್ದು ಕಳೆದ ಹತ್ತು ವರ್ಷದ ನಂತರ ಮೊದಲ ಬರಿ ಒಳ್ಳೆಯ ಬೆಲೆ ನಿಗದಿತವಾಗಿದ್ದು ಸಂತಸ ತಂದಿದೆ. ಆದರೆ ಕೆಲವೊಂದು ಹೇಳಿಕೆಗಳ ಪ್ರಕಾರ ನೇಪಾಲ್ ಮೂಲವಾಗಿ ಚೈನಾದಿಂದ ವಣ ದ್ರಾಕ್ಷಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಅಂತ ಸಂದೇಹ ನಮ್ಮ ರೈತರು ನನ್ನ ಮುಂದೆ ಹೇಳಿದ್ದು ಇಂದು ಸಂಪೂರ್ಣ ಸುಳ್ಳು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ ಅವರು, ನಾನು ನಿನ್ನೆ ದಿನ ಸದನದ ವಿರಾಮ ವೇಳೆಯಲ್ಲಿ ನಮ್ಮ External Affair Minister ಆದಂತಹ ಜಯಶಂಕರ್ ಅವರನ್ನ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದೆ. ಅವರು ಈ ಬಗ್ಗೆ Minister of Industry and Supply ಪಿಯುಶ್ ಗೊಯಲ್ ಹತ್ತಿರ ಮಾತನಾಡಿ ಅಂತ ಅವರು ನಿರ್ಧಾರ್ಶನದ ಪ್ರಕಾರ ಅದೇರೀತಿ ಈ ಬಗ್ಗೆ ಚರ್ಚಿಸಿದೆ.. ಇದರ ಬಗ್ಗೆ ತನಿಖೆ ನಡೆಸಿದಾಗ ಯಾವುದೇ ರೀತಿಯ ಚೈನಾದಿಂದ ಒಣ ದ್ರಾಕ್ಷಿ ಆಮದು ಆಗಿಲ್ಲ ಅಂತ ಹೇಳಿದ್ದಾರೆ.. ಆತರ ಆಗಿದ್ದಲ್ಲಿ ನಿಮ್ಮತ್ರ ಯಾವುದಾದರೂ ಸಾಕ್ಷಿಳಿದ್ದರೆ ತಂದು ನನಗೆ ಒಪ್ಪಿಸಿ, ಇದರ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಅವರ ಪ್ರಕಾರ ಇಲ್ಲಿಯವರೆಗೆ ಚೈನಾದಿಂದ ನೇಪಾಲ್ ಮೂಲಕವಾಗಿ ಯಾವುದೇ ಒಣ ದ್ರಾಕ್ಷಿ ಭಾರತಕ್ಕೆ ಬಂದಿಲ್ಲ. ಹೀಗಾಗಿ ನಮ್ಮ ಜಿಲ್ಲೆಯ ದ್ರಾಕ್ಷಿಯ ಉತ್ಪಾದಕರಿಗೆ ಒಂದು ಸಂತಸದ ಸುದ್ದಿ ಚೈನಾದಿಂದ ದ್ರಾಕ್ಷಿ ಆಮದಾಗುತ್ತಿರುವ ಬಗ್ಗೆ ಸುಳ್ಳು ಪುರಾವೆಗಳನ್ನು ಹಬ್ಬಿಸುತ್ತಿದ್ದು ಕೆಡಿಸಲು ಇತರದ ಒಂದು ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ತಾವು ಯಾವುದೇ ಕಾರಣಕ್ಕೂ ಎದೆಗೊಂಡದೆ ತಮ್ಮ ದ್ರಾಕ್ಷಿಯ ನಿಗದಿತ ಬೆಲೆಗಿಂತ ಕೆಳಗಡೆ ಯಾವುದೇ ಕಾರಣಕ್ಕೂ ಮಾರುವುದು ಸೂಕ್ತವಲ್ಲ ಎಂದು ಎಂದು ಸಂಸದ ಜಿಗಜಿಣಗಿ ತಿಳಿಸಿದ್ದಾರೆ.

