Subscribe to Updates
Get the latest creative news from FooBar about art, design and business.
Author: editor.udayarashmi@gmail.com
*ಉದಯರಶ್ಮಿ ದಿನಪತ್ರಿಕೆ* ಆಲಮೇಲ: ಪಟ್ಟಣದ ನಿರ್ಮಲಾಲಯ ಆಂಗ್ಲ ಮಾದ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ೮೧% ಫಲಿತಾಂಶ ಬಂದಿದೆ.ತನುಶ್ರೀ ಮಾನಕರ ೬೧೦(೯೭.೬೦%) ಅಂಕ ಪಡೆದು ಪ್ರಥಮ ಸ್ಥಾನ, ಸಹನಾ ಕಡಗಂಚಿ ೬೦೮ (೯೭.೨೮%) ಅಂಕ ಪಡೆದು ದ್ವಿತೀಯ ಸ್ಥಾನ, ಎಂ.ಪಿ. ಚೇತನ ಮತ್ತು ಪೂರ್ಣಿಮಾ ಬಂಡಗಾರ ಇಬ್ಬರು ೫೮೪(೯೩.೪೪%) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಒಟ್ಟು ೫೫ ವಿದ್ಯಾರ್ಥಿಗಳಲ್ಲಿ ೧೩ ವಿದ್ಯಾರ್ಥಿಗಳು ಡಿಸ್ಟಿಂಗಷನ ಪಾಸಾಗಿದ್ದರೆ, ೧೭ ವಿದ್ಯಾರ್ಥಿಗಳು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೬ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹರ್ಷ ವೆಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಐರಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇ ೬೪% ರಸ್ಟು ಫಲಿತಾಂಶ ಬಂದಿದೆ.ಅಕ್ಕಮ್ಮ ಯರಗಲ್ ೬೦೭(೯೭%) ಅಂಕ ಪಡೆದು ಪ್ರಥಮ ಸ್ಥಾನ, ಪಲ್ಲವಿ ಸಿನ್ನೂರ ೫೯೩(೯೪%) ಅಂಕ ಪಡೆದು ದ್ವಿತೀಯ ಸ್ಥಾನ, ಕಾಳಮ್ಮ ಉಕಲಿ ೫೯೦(೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕಿರ್ತಿ ತಂದಿದ್ದಾರೆ. ಹಾಗೆ ೧೧ ವಿದ್ಯಾರ್ಥಿಗಳು ಡಿಸ್ಟಿಂಗಷನ ಪಾಸಾಗಿದ್ದರೆ, ೩೬ ವಿದ್ಯಾರ್ಥಿಗಳು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೨೪ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಒಟ್ಟು ೧೧೭ ವಿದ್ಯಾರ್ಥಿಗಳಲ್ಲಿ ೭೫ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹರ್ಷ ವೇಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಎಂ.ಜಿ. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇ ೬೪% ರಸ್ಟು ಫಲಿತಾಂಶ ಬಂದಿದೆ.ಅಕ್ಕಮ್ಮ ಯರಗಲ್ ೬೦೭(೯೭%) ಅಂಕ ಪಡೆದು ಪ್ರಥಮ ಸ್ಥಾನ, ಪಲ್ಲವಿ ಸಿನ್ನೂರ ೫೯೩(೯೪%) ಅಂಕ ಪಡೆದು ದ್ವಿತೀಯ ಸ್ಥಾನ, ಕಾಳಮ್ಮ ಉಕಲಿ ೫೯೦(೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕಿರ್ತಿ ತಂದಿದ್ದಾರೆ. ಹಾಗೆ ೧೧ ವಿದ್ಯಾರ್ಥಿಗಳು ಡಿಸ್ಟಿಂಗಷನ ಪಾಸಾಗಿದ್ದರೆ, ೩೬ ವಿದ್ಯಾರ್ಥಿಗಳು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೨೪ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಒಟ್ಟು ೧೧೭ ವಿದ್ಯಾರ್ಥಿಗಳಲ್ಲಿ ೭೫ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹರ್ಷ ವೇಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಎಂ.ಜಿ. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ತಾಂಬೂಲ ಹಂಚುವ ಕಾಯಕವನ್ನುಹಡಪದ ರೇಚಣ್ಣ ಕೈಗೊಂಡಿದ್ದ ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುವಿಯ ಹೋಗಿದ್ದನೆಂದು ತಿಳಿಯುತ್ತದೆ. ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು.ಮಹಾಮನೆಯಲ್ಲಿ ಪ್ರಸಾದವನ್ನು ಹಂಚುವುದು, ಪ್ರಸಾದವಾದ ಮೇಲೆ ಎಲೆ ಅಡಿಕೆ ತಾಂಬೂಲವನ್ನು ಹಂಚುವುದು ಅವನ ಕಾಯಕವಾಗಿತ್ತು.ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾಘಟ್ಟಿವಾಳ ಮದ್ದಯ್ಯನು.ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.ಹಡಪದ ರೇಚಣ್ಣನ ಹೆಸರಿನ ಮುಂದೆ ಇರುವ ಹಡಪದ – ಅಡಪ -ಸಂಚಿ- ಎಲೆ ಅಡಿಕೆ ತಾಂಬೂಲ ಸಂಗ್ರಹಿಸಿ ಇಡುವ ಸಾಧನ ಕಟ್ಟಿಗೆಯ ಡಬ್ಬಿ . ಇವನೊಬ್ಬ ಅನುಭವಿ ಸಾಧಕ, ಈತನ ವಚನಾಂಕಿತವನ್ನು ಅವಲೋಕಿಸಿದಾಗ ,ಈತನು…
ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಲಂಡನ್ ನಲ್ಲಿ ಗಾಂಧೀಜಿಯವರು ಕಾನೂನು( ಬ್ಯಾರಿಸ್ಟರ್ ) ಪದವಿಯನ್ನು ಓದುತ್ತಿದ್ದ ಸಮಯ. ಅವರಿಗೆ ಪಠ್ಯ ವಿಷಯವನ್ನು ತೆಗೆದುಕೊಳ್ಳುತ್ತಿದ್ದ ಪ್ರೊಫೆಸರ್ ಪೀಟರ್ ಎಂಬ ವ್ಯಕ್ತಿಗೆ ಗಾಂಧಿ ಎಂದರೆ ಕೊಂಚ ಅಸೂಯೆ ಸಿಟ್ಟು… ಕಾರಣವಿಷ್ಟೇ ಗಾಂಧಿ ಎಂದಿಗೂ ತಮ್ಮ ಆತ್ಯಾಭಿಮಾನವನ್ನು ಬಿಟ್ಟು ಕೊಟ್ಟು ಮಾತನಾಡುತ್ತಿರಲಿಲ್ಲ. ಅವರಿಬ್ಬರ ನಡುವೆ ಆಗಾಗ ವಾದಗಳು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು.ಒಂದು ದಿನ ವಿಶ್ವವಿದ್ಯಾಲಯದ ವಿಶಾಲವಾದ ಊಟದ ಕೋಣೆಯಲ್ಲಿ ಪೀಟರ್ ಆಹಾರವನ್ನು ಸ್ವೀಕರಿಸುತ್ತಿದ್ದರು ಮತ್ತು ಅದೇ ಸಮಯದಲ್ಲಿ ಗಾಂಧೀಜಿಯವರು ತಮ್ಮ ಊಟದ ಟ್ರೇಯನ್ನು ಹಿಡಿದು ಪ್ರೊಫೆಸರ್ ಪಕ್ಕದಲ್ಲಿ ಬಂದು ಕುಳಿತರು. ಇದು ಪ್ರೊಫೆಸರ್ ಗೆ ಇಷ್ಟವಾಗಲಿಲ್ಲ ಆ ಸಮಯದಲ್ಲಿ ಗಾಂಧಿಯನ್ನು ಕೆಣಕುವ ನಿಟ್ಟಿನಲ್ಲಿ ಪ್ರೊಫೆಸರ್ “ಮಿಸ್ಟರ್ ಗಾಂಧಿ ನಿಮಗೆ ಗೊತ್ತಿಲ್ವೇ! ಒಂದು ಹಂದಿ ಮತ್ತು ಒಂದು ಹಕ್ಕಿ ಎಂದೂ ಜೊತೆಯಾಗಿ ಊಟಕ್ಕೆ ಕುಳಿತುಕೊಳ್ಳುವುದಿಲ್ಲ” ಎಂದು ಗಾಂಧಿಯನ್ನು ಕಿಚಾಯಿಸಿದರು.ಇದಕ್ಕೆ ಪ್ರತ್ಯುತ್ತರವಾಗಿ ಗಾಂಧಿ “ಡೋಂಟ್ ವರಿ ಪ್ರೊಫೆಸರ್…ನಾನು ಹಾರಿ ಹೋಗುವೆ ” ಎಂದು ಹೇಳಿಕೂಡಲೇ ಪಕ್ಕದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ. ಎಲ್ ಡಿ ಈ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಐ ಕ್ಯೂ ಎ ಸಿ ಮತ್ತು ಐ ಐ ಸಿ ಸಿ ಸಂಯುಕ್ತಾಶ್ರಯದಲ್ಲಿ ಮಹವಿದ್ಯಾಲಯದ ಪದವಿ ಮತ್ತು ಸ್ನಾತಕೊತ್ತರ ಪದವಿಯ ಇಂಗ್ಲಿಷ್ ವಿಭಾಗವು ಇಂಗ್ಲೀಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಹೇಗೆ ಮಾತನಾಡಬೇಕು ಎಂಬ ವಿಷಯದ ಮೇಲೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿ ಬಿ ರಜಪೂತ ಕಾರ್ಯ ಕ್ರಮವನ್ನುದ್ದೇಶಿಸಿ, ಇಂಗ್ಲೀಷ್ ಭಾಷೆ ಕಲಿಯುವುದು ಇಂದಿನ ದಿನಮಾನದಲ್ಲಿ ಅತ್ಯಗತ್ಯ .ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾ ಹೋದಂತೆ ಭಾಷೆ ಕಲಿಯುವುದು ಸುಲಭವಾಗುತ್ತದೆ ಎಂದು ಹೇಳಿದರು.ಮತ್ತು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಮತ್ತು ಅದರ ಮಹತ್ವ , ಸ್ವಯಂ ವಿಕಸನ, ಏಕಾಗ್ರತೆ,ಕೇಳುವ ಕೌಶಲ್ಯಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು .ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ .ಆರ್ ಎಂ ಮಿರ್ದೇ, ಪ್ರೊ ಅಮೀನ್ ಲೆನ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಇವರ ಆಶ್ರಯದಲ್ಲಿ ಮೂರು ದಿನಗಳ”ಯುವಸಮುದಾಯಕ್ಕಾಗಿ ಗಾಂಧೀ ಕಾರ್ಯಗಾರ ” ವನ್ನು ಆಯೋಜಿಸಿದ್ದು ಕಾರ್ಯಗಾರದಲ್ಲಿ ಪೋಸ್ಟರ್ ಮಾಡುವುದು, ಗಾಂಧೀ ಸಾಹಿತ್ಯ, ದೃಶ್ಯ ಮಾಧ್ಯಮದಲ್ಲಿ ಗಾಂಧೀ ಅರಿವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀ ತತ್ವಗಳ ಪ್ರಸಾರ , ಸಾಮಾಜಿಕ ಜಾಲತಾಣಗಳ ಮೂಲಕ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಬಗ್ಗೆ ತರಬೇತಿ , ಆಡಿಯೋ , ವಿಡಿಯೋ ಎಡಿಟಿಂಗ್, ಕ್ಯಾಮೆರಾ ಬಳಕೆ , ಮತ್ತು ಯೂಟ್ಯೂಬ್ ಚಾನಲ್ ನಿರ್ವಹಣೆ ಬಗೆಗೆ ಮಾರ್ಗದರ್ಶನ ನೀಡಲಾಗುವುದು .ಕೇವಲ 40 ಜನಕ್ಕೆ ಮಾತ್ರ ಅವಕಾಶವಿದ್ದು 18 ರಿಂದ 35 ವರ್ಷದ ಎಲ್ಲರೂ ಭಾಗವಹಿಸಬಹುದು .ಮತ್ತು ಕಾರ್ಯಗಾರಕ್ಕೆ ಬರುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.ಯಾವುದೇ ರೀತಿಯ ಶುಲ್ಕವಿರುವುದಿಲ್ಲ .ಹೆಚ್ಚಿನ ಮಾಹಿತಿಗಾಗಿ ಆಸಕ್ತರು 9008149149 (ವಿಜಯ್ ಹನೆಕೆರೆ ನಿರ್ದೇಶಕರು ) ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕೆಂದು ಗಾಂಧೀ ಸ್ಮಾರಕ ನಿಧಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆಯ ವರ್ಷಾಚರಣೆ ನಿಮಿತ್ಯ ಬರುವ ಜೂನ್ ತಿಂಗಳಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದ್ದು, ಸಾಧಕರ ಸನ್ಮಾನ ಹಾಗೂ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.೧೨ನೇ ಶತಮಾನದಲ್ಲಿ ವಿರಾಜಮಾನರಾಗಿದ್ದ ಅಣ್ಣ ಬಸವಣ್ಣನವರ ನಡೆ ನುಡಿ, ಕಾಯಕನಿಷ್ಠೆ, ಸಮಸಮಾಜಕ್ಕಾಗಿ ನೀಡಿದ ಕೊಡುಗೆ ಸ್ಮರಣೆಗಾಗಿ ಬಸವಣ್ಣನವರನ್ನು ಸ್ಮರಿಸಬೇಕಾಗಿದೆ. ಯುವ ಜನಾಂಗದಲ್ಲಿ ಬಸವಣ್ಣನವರ ಆದರ್ಶ ತತ್ವಗಳನ್ನು ಬಿತ್ತಬೇಕಾಗಿದೆ. ರಾಜ್ಯ ಸರಕಾರ ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡಿರುವ ಸ್ಮರಣೆಗಾಗಿ ವಿಜಯಪುರ ನಗರದ ಕಂದಗಲ್ ಹನುಮಮಂತರಾಯ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಬಸವ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ನಿಸ್ವಾರ್ಥ ಸೇವೆ ಸಲ್ಲಿಸಿ ಎಲೆಮರೆ ಕಾಯಿಯಾಗಿ ಸಮಾಜಮುಖಿಯಾಗಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ನಾಡಿನ ಹಿರಿಯ ಸಾಹಿತಿಗಳು, ಬಸವ ತತ್ವ ಪ್ರಚಾರಕರ ಸಮ್ಮುಖದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ; ವೈದ್ಯರಾಗಬೇಕು ಎನ್ನುವ ಕನಸಿನೊಂದಿಗೆ ಹಗಲು ರಾತ್ರಿಗಳ ಪರಿವೆ ಇಲ್ಲದೆ ಶ್ರಮವಹಿಸಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದ್ದು ಅವರ ಕನಸು ನನಸಾಗಲಿ. ಪರೀಕ್ಷೆ ಎಂದ ಮೇಲೆ ಏಳು ಬೀಳುಗಳು ಇದ್ದೇ ಇರುತ್ತವೆ. ಅಂದುಕೊಂಡಂತೆ ಅಥವಾ ನಿರೀಕ್ಷೆಗೆ ತಕ್ಕಂತೆ ಪ್ರಶ್ನೆ ಬಾರದೇ ಇದ್ದ ಪಕ್ಷದಲ್ಲಿ ಯಾವ ವಿದ್ಯಾರ್ಥಿಯೂ ಸಹ ಧೃತಿಗೆಡದೇ ಏಕಾಗ್ರತೆ ವಹಿಸಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಯಶಸ್ಸು ದೊರೆಯುತ್ತದೆ. ಒಂದು ವೇಳೆ ಅಂದುಕೊಂಡಂತೆ ಪರೀಕ್ಷೆಯನ್ನು ಎದುರಿಸುವುದಕ್ಕೆ ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಯಾವ ವಿದ್ಯಾರ್ಥಿಯೂ ಸಹ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಪರೀಕ್ಷೆಗಳು ಎಷ್ಟು ಮುಖ್ಯವೋ ಬದುಕು ಅದಕ್ಕಿಂತ ಮುಖ್ಯವಾಗಿದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಬದುಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನೋಡುತ್ತೇವೆ. ಆ ನಿಟ್ಟಿನಲ್ಲಿ ಯಾವುದೇ ನಕಾರಾತ್ಮಕ ವಿಚಾರಗಳ ಕಡೆಗೆ ಗಮನ ಕೊಡದೇ ದೃಢ ಮನಸ್ಸಿನಿಂದ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿ.ಪಂ ಸಿಇಓ ರಿಷಿ ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಸತಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವ ಮೂಲಕ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು, ನಗರದ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ಶನಿವಾರ ಜಲಧಾರೆ ಮತ್ತು ಜಲ ಜೀವನ ಮಿಷನ್ ಯೋಜನೆಗಳ ಕುರಿತು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಎಲ್ಲ ಉಪ-ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಾಖಾಧಿಕಾರಿಗಳು ಹಾಗೂ ಜಲಧಾರೆ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಯೋಜನಾ ನಿರ್ವಹಣೆ ಸಮಾಲೋಚಕರೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ನಿಯತವಾಗಿ ಹಾಗೂ…
