ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಲಾಯನ್ಸ್ ಇಂಟರ್‌ನ್ಯಾಶನಲ್ ಕ್ಲಬ್ ೩೧೭-ಬಿ (ಗೋವಾ-ಕರ್ನಾಟಕ) ಮಡಗಾಂವ-ಗೋವಾದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕೋರ್ ಕಮೀಟಿ ಸದಸ್ಯರನ್ನಾಗಿ ಸಿಂದಗಿಯ ಎಂ.ಜೆ.ಎಫ್.ಲಾಯನ್ ಕೆ.ಎಚ್.ಸೋಮಾಪೂರ ಅವರನ್ನು ಜಿಲ್ಲಾ ಗವರ್ನರ್ ಜೈಅಮೋಲ್ ನಾಯಕ್ ಆಯ್ಕೆ ಮಾಡಿ ಆದೇಶಿಸಿದ್ದಾರೆ.
ಲಾಯನ್ಸ್ ಇಂಟರ್‌ನ್ಯಾಶನಲ್ ಕ್ಲಬಿನ್ ೩೧೭-ಬಿ ಕೋರ್ ಕಮೀಟಿ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕಾಗಿ ಸಿಂದಗಿ ಲಾಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಕಾರ್ಯದರ್ಶಿ ಆಯ್.ಬಿ.ಬಿರಾದಾರ ಹಾಗೂ ಲಾಯನ್ಸ್ ಸದಸ್ಯ ಬಿ.ಪಿ.ಕರ್ಜಗಿ, ಡಾ.ಅಂಬರೀಶ ಬಿರಾದಾರ, ಶಾಂತೇಶ ದುರ್ಗಿ, ಪಿ.ಎಂ.ಮಡಿವಾಳರ್, ಭೀಮನಗೌಡ ಸಿಂಗನಳ್ಳಿ, ಎಸ್.ಎಚ್.ಜಾಧವ, ಶಿವಶರಣ ಬೂದಿಹಾಳ ಅಭಿನಂದಿಸಿದ್ದಾರೆ.

