ಉದಯರಶ್ಮಿ ದಿನಪತ್ರಿಕೆ
ಚಡಚಣ: ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ದೈಹೀಕ ನೀರ್ದೆಶಕರಾದ ಪ್ರೋ.ಎಸ್.ಎಸ.ಅವಟಿ ವ್ಯಸನ ಮುಕ್ತ ದಿನಾಚರಣೆ ನಿಮಿತ್ತವಾಗಿ ವ್ಯಸನ ಮುಕ್ತ ಸಮಾಜ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ಹಾಗೂ ಅನೇಕ ಮಾದಕ ವಸ್ತುಗಳ ದಾಸರನ್ನಾಗಿಸುತ್ತದೆ ಅದು ಮಿದುಳಿನಲ್ಲಿ ಬದಲಾವಣೆ ತಂದು ಇನ್ನಷ್ಟು ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಮಾತನಾಡಿದರು.
ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಎಸ.ಎಸ.ದೇಸಾಯಿ, ಯುತ್ ರೆಡ್ ಕ್ರಾಸ್ ಸಮಿತಿಯ ಸಂಯೋಜಕರಾದ ಪ್ರೋ. ಎಂ.ಕೆ.ಬಿರಾದಾರ, ವಿದ್ಯಾರ್ಥಿ ಕಲ್ಯಾಣ ಸಮಿತಿಯ ಸಂಯೋಜಕರಾದ ಡಾ.ಮಯೂರ ಕುದರಿ, ಎನ್.ಸಿ.ಸಿ ಅಧಿಕಾರಿ ಡಾ.ಎಮ್.ಎಸ್.ಮಾಗಣಗೇರಿ, ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೋ. ಎಮ್.ಎ.ಜನವಾಡ, ಪ್ರೋ.ಎ.ಎಸ್.ಪಾಟೀಲ, ಹಿರಿಯ ಪ್ರಾಧ್ಯಾಪಕರಾದ ಆರ್.ಎಸ್.ಮಾವಿನಮರ, ಪ್ರಾಧ್ಯಾಪಕರಾದ ಪ್ರೋ.ಬಸವರಾಜ ನೀಲವಾಣಿ, ಪ್ರೋ.ಎಸ್.ಎಸ್.ಪಾಟೀಲ, ಪ್ರೋ.ಜ್ಞಾನೇಶ್ವರಿ ಲಚ್ಯಾಣ, ಪ್ರೋ.ಬಿ.ಎಮ್.ದೈವಾಡಿ, ಪ್ರೋ. ಪೂಜಾ ಬುರಡ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

