Author: editor.udayarashmi@gmail.com

ರಾಯಚೂರಿನಲ್ಲಿ ನಡೆದ ಕಲಬುರಗಿ ವಲಯ‌ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ‌ ಸಂಸ್ಥೆಯ ಎ.ವಿ.ಎಸ್‌ ಆಯುರ್ವೇದ ಕಾಲೇಜಿನ‌ ಮಹಿಳಾ ತಂಡ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ‌ ಆಯೋಜಿಸಿದ್ದ ಕಲಬುರಗಿ ವಲಯ‌ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ‌ ಸ್ಥಾನ‌ ಪಡೆದಿದೆ.ರಾಯಚೂರಿನ ನವೋದಯ ಡೆಂಟಲ್ ಕಾಲೇಜಿನಲ್ಲಿ ಆಗಷ್ಟ 1 ಮತ್ತು 2 ರಂದು ನಡೆದ ಈ ಪಂದ್ಯಾವಳಿಯಲ್ಲಿ ಬಿ.ಎಲ್.ಡಿ.ಇ‌ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ದೀಪ್ತಿ ಮಂಗಲಗಿ, ಗೀತಾಂಜಲಿ ಮುದ್ನೂರ, ಸಾನಿಕಾ ದೇಶಪಾಂಡೆ, ಅನುರಾಧಾ ರೆಡ್ಡಿ ಮತ್ತು ಪೂಜಾ ಬಿರಾಜದಾರ ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆಯಿತು.ಮಹಿಳಾ ಚೆಸ್ ತಂಡದ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು‌ ಸಚಿವ ಎಂ. ಬಿ. ಪಾಟೀಲ, ಪ್ರಧಾನ‌ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ‌ ಸುನೀಲಗೌಡ ಪಾಟೀಲ, ಸಂಸ್ಥೆಯ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.ಈ ಮಧ್ಯೆ ಮಂಗಳವಾರ ಕಾಲೇಜಿಗೆ ಆಗಮಿಸಿದ ಚೆಸ್ ತಂಡದ ಸದಸ್ಯರನ್ನು ಪ್ರಾಚಾರ್ಯ ಡಾ. ಅಶೋಕ ಪಾಟೀಲ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ. ಎಲ್. ಡಿ.‌ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗದ ವತಿಯಿಂದ ಸಂಪಾದಿಸಲಾದ ಜಿರಿಯಾಟ್ರಿಕ್ ಕಾನ್ಸೆಪ್ಟ್ (Geriatric Concepts)* ಪುಸ್ತಕದ ಎರಡನೇ ಆವೃತ್ತಿಯನ್ನು ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಸೋಮವಾರ ಬಿಡುಗಡೆ ಮಾಡಿದರು.ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ‌ ಮಾತನಾಡಿದ ಅವರು, ಈ ಪುಸ್ತಕವು ವೈದ್ಯಕೀಯ, ನರ್ಸಿಂಗ್, ಫಾರ್ಮಾ ಮತ್ತು ಭೌತಚಿಕಿತ್ಸೆ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ ಎಂದು ತಿಳಿಸಿದರು.ಈ ಪುಸ್ತಕವನ್ನು ನಾಡೋಜ ಡಾ. ಪಿ. ಎಸ್. ಶಂಕರ ಮತ್ತು ಡಾ. ಎ. ಪಿ. ಅಂಬಲಿ ಸಂಪಾದಿಸಿದ್ದು, ಬಿ.ಎಲ್.ಡಿ.ಇ. ಡೀಮ್ಡ್ ವಿವಿಯಿಂದ ಪ್ರಕಟಿಸಲಾಗಿದೆ.ಈ ಸಂದರ್ಭದಲ್ಲಿ ವಿವಿ ಕುಲಪತಿ, ಡಾ. ಅರುಣ ಚಂ.ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ವಿಭಾಗದ ಡೀನ ಡಾ. ತೇಜಸ್ವಿನಿ ವಲ್ಲಭ, ಪರೀಕ್ಷೆ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ದೇವರಮನಿ, ವೈದ್ಯಕೀಯ ಅಧೀಕ್ಷಕ,…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಒಂದು ಊರಿನ ಜಾತ್ರೆಯು ವಿಜೃಂಭಣೆಯಿಂದ ನಡೆದಿತ್ತು. ಜಾತ್ರೆಯಲ್ಲಿ ಇಡೀ ಊರಿಗೆ ಊರೇ ಸೇರಿತ್ತು. ವೈವಿಧ್ಯಮಯ ಅಂಗಡಿಗಳು, ಹೋಟೆಲ್‌ಗಳ ಹಬ್ಬವೇ ಅಲ್ಲಿತ್ತು. ಜಾತ್ರೆಗೆ ಒಬ್ಬ ರೈತ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದ. ಜಾತ್ರೆಯಲ್ಲಿ ಮಗಳಿಗೆ ತಿಂಡಿ ತಿನಿಸು, ಬಟ್ಟೆಬರೆ, ಪುಸ್ತಕಗಳನ್ನು ಕೊಡಿಸಿ ಮನೆಗೆ ಹೊರಡುತ್ತಾನೆ. ಹೀಗೆ ಮನೆಗೆ ಹೋಗುತ್ತಿರಬೇಕಾದರೆ ಅಲ್ಲಿನ ಗೊಂಬೆಗಳ ಮಳಿಗೆಯ ಮುಂಭಾಗಕ್ಕೆ ಮಗಳೊಂದಿಗೆ ಬರುತ್ತಾನೆ. ಗೊಂಬೆಯ ಅಂಗಡಿಯಲ್ಲಿದ್ದ ಸುಂದರವಾದ ಗೊಂಬೆಗಳನ್ನು ನೋಡಿ ರೈತನ ಮಗಳು ತನಗೆ ಗೊಂಬೆ ಬೇಕು ಎಂದು ಹಠ ಹಿಡಿಯುತ್ತಾಳೆ. ಮಗಳ ಹಠಕ್ಕೆ ಸೋತ ತಂದೆಯು ಗೊಂಬೆ ಖರೀದಿಸಲು ಗೊಂಬೆಯ ಅಂಗಡಿಯೊಳಕ್ಕೆ ಮಗಳನ್ನು ಕರೆದೊಯ್ಯುತ್ತಾನೆ. ವಿವಿಧ ಗಾತ್ರದ, ವಿವಿಧ ರೂಪದ ಹಲವಾರು ಗೊಂಬೆಗಳನ್ನು ಅಲ್ಲಿ ನೇತು ಹಾಕಲಾಗಿತ್ತು. ಗೊಂಬೆಗಳನ್ನು ನೋಡಿ ಗೊಂದಲಕ್ಕೊಳಗಾಗಿ ಯಾವುದನ್ನು ಖರೀದಿಸಲಿ ಎಂದು ಯೋಚಿಸುತ್ತಾನೆ.ತಂದೆಯು ಅಂಗಡಿಯವನಲ್ಲಿ ಅಂಗಡಿಯಲ್ಲಿ ಜೋಡಿಸಿಟ್ಟಿದ್ದ ವಿವಿಧ ಗೊಂಬೆಗಳ ದರವನ್ನು ವಿಚಾರಿಸುತ್ತಾನೆ. ಮೊದಲನೆಯ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಉದಯರಶ್ಮಿ ದಿನಪತ್ರಿಕೆ ಪಂಚಮಹಾಭೂತಗಳಿಂದ ಕೂಡಿರುವ ಈ ಬ್ರಹ್ಮಾಂಡದಲ್ಲಿ ನಾವು ಭೂಮಿಯ ಮೇಲೆ ನಡೆದಾಡುವ, ಗಾಳಿಯನ್ನು ಸೇವಿಸುವ, ನೀರನ್ನು ಕುಡಿಯುವ, ಬೆಂಕಿಯನ್ನು ಬಳಸಿ ಅಡುಗೆ ಮಾಡುವ ಮತ್ತು ಆಕಾಶ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲ ನೈಸರ್ಗಿಕ ವಸ್ತುಗಳನ್ನು ನಮ್ಮದಾಗಿಸಿಕೊಂಡಿದ್ದೇವೆ, ಬಳಸುತ್ತೇವೆ ಎಲ್ಲವೂ ನಿಜ ಆದರೆ ಈ ನಿಸರ್ಗ ಸಹಜ ಸಂಪತ್ತುಗಳನ್ನು ಕೆಲವೊಮ್ಮೆ ನಾವು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಉಂಟು.ಇದರಲ್ಲಿ ಮುಖ್ಯವಾಗಿ ವಿದ್ಯುತ್. ಅವಶ್ಯಕತೆ ಇದ್ದಾಗ ಲೈಟ್ ಅನ್ನು ಫ್ಯಾನುಗಳನ್ನು ಹಾಕಿಕೊಂಡು ಅವಶ್ಯಕತೆ ಇಲ್ಲದಾಗ ಅವುಗಳನ್ನು ಬಂದ್ ಮಾಡುವ ಜರೂರತ್ತು ನಮಗಿದೆ. ಯಾವುದನ್ನು ನಮಗೆ ಉತ್ಪಾದಿಸಲು ಸಾಧ್ಯವಿಲ್ಲವೂ ಅದನ್ನು ಅನವಶ್ಯಕವಾಗಿ ಬಳಸುವ ಹಕ್ಕು ನಮಗಿಲ್ಲ. ಅದು ಅಲ್ಲದೆ ಅನವಶ್ಯಕವಾಗಿ ವಿದ್ಯುತ್ ಬಳಕೆಯನ್ನು ಮಾಡುವ ಮೂಲಕ ನಾವು ಹೆಚ್ಚಿನ ವಿದ್ಯುತ್ ದರವನ್ನು ನೀಡಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಬೇಕು. ನಮಗೆ ಎಲ್ಲವನ್ನೂ ನೀಡುವ ಭೂಮಿ ತಾಯಿಯ ಮೇಲೆ ನಾವು ಉಗುಳುತ್ತೇವೆ. ಬಹಳಷ್ಟು ಬಾರಿ ಸಂಬಂಧಿಸದ ಸ್ಥಳಗಳಲ್ಲಿ ಕೂಡ ಸಾರ್ವಜನಿಕವಾಗಿ ರಸ್ತೆಗಳ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ವೈದ್ಯ, ಇಂಜನೀಯರ್‌ಗಳಾಗಿ ವೇದಿಕೆಯಲ್ಲಿ ಕುಳಿತು ಸನ್ಮಾನ ಸ್ವೀಕರಿಸುವಂತಾಗಲಿ ಎಂದು ಪದವಿಪೂರ್ವ ಉಪನಿರ್ದೇಶಕರ ಕಾರ್ಯಾಲಯದ ಶಾಖಾಧಿಕಾರಿ ಪ್ರಕಾಶ ಗೊಂಗಡಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಶನಿವಾರ ಜರುಗಿದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಇ.ಎಲ್‌ಸಿ ಹಾಗೂ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ನಮ್ಮ ಸಾಧನೆ ಪಾಲಕರು, ಶಿಕ್ಷಕರು ಸೇರಿದಂತೆ ನಾವು ಕಲಿತ ಶಿಕ್ಷಣ ಸಂಸ್ಥೆಗೆ ಗೌರವ ದೊರಕಿಸುವಂತಾಗಬೇಕು. ಆಗ ಮಾತ್ರ ಆತ್ಮತೃಪ್ತಿ, ಸಮ್ಮಾನ ದೊರೆಯಲು ಸಾಧ್ಯ ಎಂದರು.ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಪಿ.ಸಾಲಕ್ಕಿ ಮಾತನಾಡಿ, ಪಟ್ಟಣದಲ್ಲಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಬಿಎಲ್‌ಡಿಇ ಸಂಸ್ಥೆಯ ಕೈಗೊಂಡ ಕಾರ್ಯಗಳ ಕುರಿತು ಮಾತನಾಡಿದರು.ಕ್ರೀಡಾ ಚಟುವಟಿಕೆಗಳಿಗೆ ವ್ಹಾಲಿಬಾಲ್ ಸರ್ವಿಸ್ ಮಾಡುವ ಮೂಲಕ ವಿಜಯಪುರದ ಗೆಜ್ಜೆ ಕರಿಯರ್ ಅಕಾಡಮಿ ಅಧ್ಯಕ್ಷ ಸುರೇಶ ಗೆಜ್ಜೆ ಚಾಲನೆ ನೀಡಿದರು. ಬಸನಗೌಡ ಲಿಂಗದಳ್ಳಿ (ಚಬನೂರ) ೫೦ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ಬಿಡುಗಡೆಗೊಳಿಸುವುದರ ಜೊತೆಗೆ…

Read More

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಶಿಕ್ಷಕರ ಸಭೆ, ಸಮಾರಂಭಗಳಿಗೆ ಅಗತ್ಯವಾದ ಸಭಾಭವನ ನಿರ್ಮಾಣಕ್ಕೆ ತುರ್ತಾಗಿ ಹತ್ತು ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಜರುಗಿದ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಡಿ ಜರುಗಿದ ತಾಲ್ಲೂಕು ಹಾಗೂ ಕಲಕೇರಿ ವಲಯದ ಶಿಕ್ಷಕರ ಗುರುಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಸೇವಾಪುಸ್ತಕಗಳನ್ನು ಶಿಕ್ಷಕರೆಲ್ಲರೂ ಖುದ್ದಾಗಿ ಪರಿಶೀಲಿಸಿಕೊಳ್ಳಲು ಶಿಕ್ಷಣ ಇಲಾಖೆ ಅವಕಾಶವನ್ನು ಕಲ್ಪಿಸಿದೆ. ತಮ್ಮೆಲ್ಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗುವುದು ಎಂದರು.ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಯಗಳಿಂದ ಶಿಕ್ಷಕರೆಲ್ಲರಿಗೂ ಮುಕ್ತಿ ನೀಡಬೇಕು. ಶೀಘ್ರದಲ್ಲೇ ಪಿ ಎಸ್ ಟಿ ಶಿಕ್ಷಕರ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿದೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಅವುಗಳ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಸಿದ್ಧೇಶ್ವರ ಶಾಲೆಯ ಆವರಣದಲ್ಲಿ ಶನಿವಾರ ಕರ್ನಾಟಕ ಸೇನೆಯ ಸದಸ್ಯರು ಶಾಸಕರನ್ನು ಕಂಡು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಹಸನ್ ನದಾಫ್ ಮಾತನಾಡಿ, ಅನಧಿಕೃತ ಶಾಲೆಗಳು, ಕೋಚಿಂಗ ಸೆಂಟರಗಳ ಹಾವಳಿ ತಾಲ್ಲೂಕಿನಾದ್ಯಂತ ಮಿತಿಮೀರಿದೆ.ಇಂತಹ ಶಾಲೆಗಳಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದೆ. ಈ ಅನಧಿಕೃತ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂತಹ ವಿದ್ಯಾರ್ಹತೆಗಳನ್ನು ಪಡೆದವರು ಮಾತ್ರ ಶಿಕ್ಷಕರಾಗಿದ್ದಾರೆ. ಇದೊಂದು ವ್ಯಾಪಕ ದಂಧೆಯಾಗಿದ್ದು ಈ ಕೂಡಲೇ ಇಂತಹ ಶಾಲೆಗಳನ್ನು ಬಂದ್ ಮಾಡಿ, ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಬಾರಿ ನಾವು ಈಗಾಗಲೇ ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದರು.ಮನವಿ ಸ್ವೀಕರಿಸಿದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ನಿತ್ಯ ನಡೆಯಲಿರುವ ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಪರ ಸ್ಥಳದಿಂದ ಬಂದಂತ ಭಕ್ತಾಧಿಗಳಿಗೆ, ಪ್ರವಾಸಿಗರಿಗೆ, ರುದ್ರಾಭಿಷೇಕ ಮಾಡಿಸುವ ಭಕ್ತಾಧಿಗಳಿಗೆ ನಿತ್ಯ ದಾಸೋಹ ಸೇವೆ ಕಲ್ಪಿಸಲಾಗುತ್ತದೆ. ಪ್ರಾರಂಭೋತ್ಸವ ದಿನದ ದಾಸೋಹ ಸೇವೆಯನ್ನು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಕುಟುಂಬದಿಂದ ನೆರವೇರಿಸಿದರು.ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್.ಎಂ.ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ವಿಜಯಕುಮಾರ ಡೋಣಿ, ಎಸ್.ಎಸ್.ನಾಡಗೌಡ, ಸುದೀರ ಚಿಂಚಲಿ, ಮುಖಂಡರಾದ ಸಿದ್ರಾಮಪ್ಪ ಉಪ್ಪಿನ ಸೇರಿದಂತೆ ಧಾರ್ಮಿಕ ಸಮಿತಿ ಸದಸ್ಯರುಗಳು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಜೀವನದಲ್ಲಿ ತಿರುವುಗಳು ಯಾವಾಗಲಾದರೂ ಬರಬಹುದು ಮಹಿಪತಿ ದಾಸರಿಸಿಗೆ ನಂಗಾಶಾಹಿ ಸೂಫಿಯ ಮೂಲಕವಾಗಿ ಅವರು ಆಧ್ಯಾತ್ಮದತ್ತ ಹೊರಳಿದರು’ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಹೇಳಿದರು.ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ನಡೆದ, ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ)’ ಆಯೋಜನೆ ‘ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ’ ವಿಷಯ ಮೇಲೆ ಮಾತಾಡಿದ ಅವರು ‘ಮಲ್ಲಿಕ್ ಕಾಫೂರ್, ಮಹಮ್ಮದ್ ಬಿನ್ ತುಘಲಕ್ ದಾಳಿಯ ನಂತರ ದಕ್ಷಿಣದ ತುಂಗಭದ್ರಾ ನದಿಯ ಕೆಳಗಿನ ಭಾಗದಲ್ಲಿ ‘ವಿಜಯನಗರ” ಸಾಮ್ರಾಜ್ಯ ; ನದಿಯ ಮೇಲ್ಬಾಗ ಬಹುಮನಿ ಸಾಮ್ರಾಜ್ಯಗಳು ಉದಯಿಸಿದವು. ಬಹುಮನಿ ಸಾಮ್ರಾಜ್ಯದಲ್ಲಿ ವಿಜಯಪುರ ಒಂದು ಸುಬೆಯಾಗಿದ್ದು ‘ಯೂಸುಫ್’ ಈ ಸುಬೆಯ ಸರ್ದಾರನಾಗಿದ್ದನು. ಅವನೇ ಮುಂದೇ ಆದಿಲ್ ಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ. ಈ ಆದಿಲ್ ಶಾಹಿ ಮನೆತನದ ಎರಡನೇ ಅಲಿ ಆದಿಲ್ ಶಾಹಿ ಕಾಲದಲ್ಲಿ ಮಹಿಪತಿದಾಸರು ಹಣಕಾಸು ಇಲಾಖೆಯಲ್ಲಿದ್ದರು. ಅವರಿಗೆ ನಂಗಾಶಾಹಿ ಸೂಫಿಯ ಮೂಲಕ ಪರಿವರ್ತನೆಗೊಂಡು ಭಾಸ್ಕರಸ್ವಾಮಿಗಳ ಶಿಷ್ಯರಾಗುತ್ತಾರೆ. ಮಹಿಪತಿದಾಸರು ಯೋಗ ಸಾಧನ ಮೂಲಕ ದಿವ್ಯತೆಯನ್ನು ಪಡೆದರು. ಅದನ್ನು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ಬರಡೋಲ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಚಡಚಣ ವಲಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ಹೂನೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಶಿಕ್ಷಣ ಸಂಯೋಜಕ ಎನ್.ಎಸ್. ಸಿನಖೇಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಇಲಾಖೆ ನೀಡಿರುವ ೨೯ ಅಂಶಗಳ ಅನುಷ್ಠಾನ ಮತ್ತು ದಾಖಲಿಕರಣದ ಕುರಿತು, ಎಸ್.ಟಿ.ಎಸ್. ನಲ್ಲಿ ಹಾಜರಾತಿ ಕೇಂದ್ರಿಕರಣ, ಎಲ್.ಬಿ.ಎ. ಆಧಾರಿತ ಘಟಕ ಪರೀಕ್ಷೆಗಳ ಕುರಿತು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪ್ರಗತಿಗಾಗಿ ಕೈಗೊಳ್ಳಬೇಕಾದ ಅಂಶಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ಹೂನೂರ ಮಾಹಿತಿ ನೀಡಿದರು,ಸಭೆಯಲ್ಲಿ ಉಪ ಪ್ರಾಂಶುಪಾಲ ಎಸ್.ಆಯ್.ಚನಗೊಂಡ, ಮುಖ್ಯ ಶಿಕ್ಷಕರಾದ ಎ.ಬಿ. ಪಾವಲೆ, ಜಿ.ಎಸ್. ಕಾಂಬಳೆ, ಆರ್.ಡಿ. ಬಿರಾದಾರ ಸೇರಿದಂತೆ ಚಡಚಣ ವಲಯದ ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

Read More