ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಬರಡೋಲ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಚಡಚಣ ವಲಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ಹೂನೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಣ ಸಂಯೋಜಕ ಎನ್.ಎಸ್. ಸಿನಖೇಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಇಲಾಖೆ ನೀಡಿರುವ ೨೯ ಅಂಶಗಳ ಅನುಷ್ಠಾನ ಮತ್ತು ದಾಖಲಿಕರಣದ ಕುರಿತು, ಎಸ್.ಟಿ.ಎಸ್. ನಲ್ಲಿ ಹಾಜರಾತಿ ಕೇಂದ್ರಿಕರಣ, ಎಲ್.ಬಿ.ಎ. ಆಧಾರಿತ ಘಟಕ ಪರೀಕ್ಷೆಗಳ ಕುರಿತು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪ್ರಗತಿಗಾಗಿ ಕೈಗೊಳ್ಳಬೇಕಾದ ಅಂಶಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಜಾತಾ ಹೂನೂರ ಮಾಹಿತಿ ನೀಡಿದರು,
ಸಭೆಯಲ್ಲಿ ಉಪ ಪ್ರಾಂಶುಪಾಲ ಎಸ್.ಆಯ್.ಚನಗೊಂಡ, ಮುಖ್ಯ ಶಿಕ್ಷಕರಾದ ಎ.ಬಿ. ಪಾವಲೆ, ಜಿ.ಎಸ್. ಕಾಂಬಳೆ, ಆರ್.ಡಿ. ಬಿರಾದಾರ ಸೇರಿದಂತೆ ಚಡಚಣ ವಲಯದ ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

