Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೊಸದಾಗಿ ನಿರ್ಮಿಸಿದ ತೋಟಗಾರಿಕೆ ಉತ್ಪನ್ನಗಳ ಪೂರ್ಣ ಪ್ರಮಾಣದ ಮೌಲ್ಯವರ್ಧಿತ ಸಂಸ್ಕೃರಣೆ ಘಟಕಗಳು, ಔಷಧಿ ಮತ್ತು ಸುಗಂಧ ದ್ರವ್ಯಗಳ ಘಟಕಗಳನ್ನೊಳಗೊಂಡಂತೆ, ಪ್ರಾಯೋಗಿಕ ಉತ್ಪಾದನೆ ಮತ್ತು ವಾಣಿಜ್ಯ ಉತ್ಪಾದಣೆ ಕೈಗೊಳ್ಳುವ ಘಟಕಗಳಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಒದಗಿಸಲಾಗುವ ಶೇ.೨೫ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ದ್ರಾಕ್ಷಾರಸ ಉತ್ಪಾದನಾ ಘಟಕ, ಹಣ್ಣು ಮತ್ತು ತರಕಾರಿ ಸಂಸ್ಕರಣೆ-ಕ್ಯಾನಿಂಗ್ ಘಟಕ, ಉಪ್ಪಿನಕಾಯಿ ಘಟಕ, ಸುಗಂಧದ್ರವ್ಯ-ಔಷಧಿ ಸಸ್ಯಗಳ ಸಂಸ್ಕರಣಾ ಘಟಕಗಳು, ಗರ್ಕಿನ್ ಘಟಕಗಳು ಇತ್ಯಾದಿ ಘಟಕಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ-ಮೊ:೯೫೩೫೧೮೫೯೯೯, ಇಂಡಿ- ಮೊ:೯೦೦೮೪೦೪೦೪೧, ಸಿಂದಗಿ-ಮೊ:೭೭೯೫೯೫೨೬೫೩, ಬ.ಬಾಗೇವಾಡಿ-ಮೊ:೯೮೪೫೨೧೫೩೬೨, ಮುದ್ದೇಬಿಹಾಳ-ಮೊ:೯೬೦೨೫೭೮೫೫೧ ಸಂಖ್ಯೆಗೆ ಅಥವಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಸತಿ ನಿಲಯಗಳ ಕಾರ್ಯಾಚರಣೆ-ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಗಳಿಂದ ನೇಮಕ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ವಸತಿ ನಿಲಯಗಳ ನಿರ್ವಹಣೆ, ವಿದ್ಯಾರ್ಥಿಗಳ ಕಲ್ಯಾಣ ಮೂಲಸೌಕರ್ಯಗಳ ಸುಧಾರಣೆ ಹಾಗೂ ಇತರೆ ಚಟುವಟಿಕೆಗಳನ್ನು ಹಾಗೂ ಹಾಸ್ಟೆಲ್ ಮೆಂಟರ್‌ಶಿಫ್ ಕಾರ್ಯಕ್ರಮಗಳಿಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಸ್ಟೆಲ್ ಮೆಂಟರ್‌ಗಳಾಗಿ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ.ಹಾಸ್ಟೆಲ್ ಮೆಂಟರ್‌ಶಿಫ್ ಎಂಬ ವಿನೂತನ ಕಾರ್ಯಕ್ರಮಕ್ಕೆ ನೇಮಕವಾದ ಹಾಸ್ಟೆಲ್ ಮೆಂಟರ್‌ಗಳು ವಸತಿ ನಿಲಯಗಳಲ್ಲಿ ವಿದ್ಯಾರ್ಥಿಳ ಶೈಕ್ಷಣಿಕ, ವೈಯಕ್ತಿಕ ಹಾಗೂ ವೃತ್ತಿ ಜೀವನದ ಬೆಳವಣಿಗೆಗೆ ಮಾರ್ಗದರ್ಶನ ನೀಡಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವುದು, ಪ್ರತಿವಾರ ಕನಿಷ್ಠ ಒಂದು ಬಾರಿ ವಸತಿ ನಿಲಯಗಳಿಗೆ ಭೇಟಿ ನೀಡುವುದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಪರೀಕ್ಷಾ ಸಿದ್ಧತೆಗೆ ಮನೋಸ್ಥೈರ್ಯ ತುಂಬುವುದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸುವುದು, ಗುಣಮಟ್ಟದ ಆಹಾರ ಪೂರೈಕೆ, ಶುದ್ಧ ಕುಡಿಯುವ ನೀರು ಪೂರೈಸುವುದು, ನೀರು ಶುದ್ಧೀಕರಣ ವ್ಯವಸ್ಥೆ,…
ವಿಜಯಪುರ ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ಆಗ್ರಹ | ಶಾಸಕರ ಮುಂದೆ ತಮಟೆ ಬಾರಿಸಲು ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ವಿಜಯಪುರ ವತಿಯಿಂದ ನ್ಯಾ. ನಾಗಮೋಹನ ದಾಸ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆಗಷ್ಟ್ ೧೯ಕ್ಕೆ ಮುಂದೆ ಹಾಕಿರುವ ಕುರಿತು ಪತ್ರಿಕಾಗೋಷ್ಟಿ ನಗರದಲ್ಲಿ ಜರುಗಿತು.ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಶ್ರೀಶೈಲ ರತ್ನಾಕರ ಮಾತನಾಡಿ ದಿನಾಂಕ ೧೮-೮-೨೦೨೫ ರಂದು ವಿಜಯಪುರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮನೆಗಳಿಗೆ ತಮಟೆ ಬಾರಿಸುವ ಮೂಲಕ ಅಗಷ್ಟ ೧೯ ರಂದು ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಧ್ವನಿ ಎತ್ತಲು ಎಚ್ಚರಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡ ಭೀಮು ಮೇಲಿನಮನಿ ಮಾತನಾಡಿ, ಸಿದ್ದರಮಯ್ಯನವರು ೨೦೧೩ ರಿಂದ ೨೦೧೮ ರ ವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ವಿಳಂಬ ದ್ರೋಹದ ಚಾಳಿ ನಡೆಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಸಮಾಜ ಮುಖಂಡ ಎಸ್.ಎಚ್.…
ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ‘ಬಾಬರ್ ಅಲಿ’ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಟೋಬರ್ ೨೦೦೯ ರಲ್ಲಿ ಬಿಬಿಸಿಯಿಂದ ೧೬ ನೇ ವಯಸ್ಸಿನಲ್ಲಿ ‘ವಿಶ್ವದ ಅತ್ಯಂತ ಕಿರಿಯ ಮುಖ್ಯೋಪಾಧ್ಯಯ’ ಎಂದು ಹೆಸರಿಸಲ್ಪಟ್ಟರು. ಬಾಬರ್ ಅಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಾರತೀಯ ವಿದ್ಯಾರ್ಥಿ ಮತ್ತು ಶಿಕ್ಷಕ. ಅವರು ಕೇವಲ ೯ ವರ್ಷ ವಯಸ್ಸಿನವರಾಗಿದ್ದಾಗ ತನ್ನ ವಯಸ್ಸಿನ ಕೆಲವು ಮಕ್ಕಳು ಬಡತನದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ನೋಡಿದನು. ತನ್ನ ಸಹಚರರು ಬಡತನದಿಂದಾಗಿ ತನ್ನಂತೆ ಓದಲು ಸಾಧ್ಯವಾಗುತ್ತಿಲ್ಲ ಎಂಬ ಆಲೋಚನೆಯಿಂದ ಅವನು ತುಂಬಾ ಅಸಮಾಧಾನಗೊಂಡನು. ಅವನು ಅವರಿಗಾಗಿ ಏನಾದರೂ ಮಾಡಲು ನಿರ್ಧರಿಸಿದನು.ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿಯಾಗಿ ತನ್ನ ಶಿಕ್ಷಣವನ್ನು ಹಂಚಿಕೊಳ್ಳಲು ನಿರ್ಧರಿಸಿದ ಅವನು, ತನ್ನ ಸ್ವಂತ ಮನೆಯ ಹಿತ್ತಲಿನಲ್ಲಿ ‘ಅನಂದಾ ಶಿಕ್ಷಾ ನಿಕೇತನ’ ಸಂತೋಷದಾಯಕ ಕಲಿಕೆಯ ನೆಲೆಯಾದ ಶಾಲೆಯನ್ನು ಪ್ರಾರಂಭಿಸಿದರು. ಈಗ ಅಲ್ಲಿ ೩೦೦ ಸಾಮಾನ್ಯ ವಿದ್ಯಾರ್ಥಿಗಳು ಇದ್ದಾರೆ.ಕರ್ನಾಟಕ ಸರ್ಕಾರವು ಬಾಬರ್ ಅವರ ಕಥೆಯನ್ನು ಮೊದಲ ವರ್ಷದ ಪಿಯುಸಿಯ ನಿಗದಿತ…
ಮೇನ್ ಬಜಾರ್ ರಸ್ತೆ ಅತಿಕ್ರಮಿಸಿಕೊಂಡ ವ್ಯಾಪಾರ ಮಳಿಗೆಗಳು ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮೇನ್ ಬಜಾರ್ ಮೂಲಕ ಪಟ್ಟಣದ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಪಾರಸ್ಥರಿಂದ ಅತಿಕ್ರಮಣಗೊಳ್ಳುತ್ತಿದ್ದು, ಕೂಡಲೇ ಸ್ಥಳೀಯ ಆಡಳಿತ ಅತಿಕ್ರಮಣ ಕುರಿತು ಕ್ರಮ ವಹಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದ ತಾಳಿಕೋಟಿ ಸೇತುವೆಯ ನಂತರ ಬರುವ ಬಲಭಾಗದ ಮುಖ್ಯ ರಸ್ತೆ ಕಲ್ಮೇಶ್ವರ, ರಾವುತರಾಯ ದೇವಾಲಯಗಳು ಸೇರಿದಂತೆ ಮೇನ್ ಬಜಾರ್ ಸಂಪರ್ಕದ ಮುಖ್ಯ ರಸ್ತೆಯಾಗಿದೆ. ಇಲ್ಲಿ ವ್ಯಾಪಾರಸ್ಥರು ಬಹುತೇಕ ಜಾಗ ಅತಿಕ್ರಮಿಸಿ ರಸ್ತೆಯ ಎಡಬಲಗಳಲ್ಲಿ ಬೇಕಾಬಿಟ್ಟಿಯಾಗಿ ತಮ್ಮ ಅಂಗಡಿಯ ಮುಂದೆ ಹೆಚ್ಚುವರಿಯಾಗಿ ಮಾರಾಟ ಕೈಗೊಳ್ಳುವ ಮೂಲಕ ಸ್ಥಳೀಯ ವಾಹನ ಸವಾರರಿಗೆ ಅಡ್ಡಿಯಾಗಿದ್ದಾರೆ. ಇದರಿಂದ ಸ್ಥಳೀಯ ವಾಹನ ಸವಾರರು, ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಪರದಾಡುವಂತಾಗಿದೆ.ಈ ಬಗ್ಗೆ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿ, ಈ ಮೊದಲು ರಸ್ತೆಯಲ್ಲಿ ಲಾರಿ ಸರಾಗವಾಗಿ ಚಲಿಸುತ್ತಿತ್ತು. ಈಗ ಕಾರು ಸಹ ಚಲಿಸದಂತೆ ವ್ಯಾಪಾರಸ್ಥರು ರಸ್ತೆ ಅತಿಕ್ರಮಿಸಿ ಕಿರಿದಾಗಿಸಿದ್ದಾರೆ. ಅದರಲ್ಲೂ ರಸ್ತೆ ಆರಂಭದಲ್ಲಿ…
ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ :ಸೂಲಿಬೆಲೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಸ್ಥಾಪನೆಯಾಗಿರುವ ಶರತ್ ಪಾಟೀಲ ಫೌಂಡೇಶನ್ ಹಾಗೂ ನನ್ನ ಗಿಡ ನನ್ನ ಭೂಮಿ ಸಂಘಟನೆ ವತಿಯಿಂದ ನಗರದ ಆಶ್ರಮ ರಸ್ತೆಯಲ್ಲಿರುವ ಜಾಗೆಯಲ್ಲಿ 1001 ಸಸಿ ನೆಡುವ ಪರಿಸರಮುಖಿ ಕಾರ್ಯಕ್ರಮ ನಡೆಯಿತು.ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಖ್ಯಾತ ಚಿಂತಕ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ, ನಮ್ಮನ್ನು ಸಲುಹುತ್ತಿರುವ ಪರಿಸರ ನಮಗೆ ಬೆಲೆ ಕಟ್ಟಲಾಗದ ಪ್ರಾಣವಾಯು, ಆಹಾರ ನೀಡುತ್ತಿದೆ, ಒಂದು ಆಕ್ಸಿಜನ್ ಸಿಲಿಂಡರ್ ಬೆಲೆ ಎಷ್ಟೊಂದು ನಿಮಗೆ ಗೊತ್ತಿರಬಹುದು, ಆದರೆ ಗಿಡಮರಗಳು ನಮಗೆ ಉಚಿತವಾಗಿ ಆಕ್ಸಿಜನ್ ನೀಡುತ್ತವೆ, ಆದರೆ ನಾವುಗಳು ಪರಿಸರಕ್ಕೆ ಪ್ರತಿಯಾಗಿ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ, ಸಕಾರಣವಿಲ್ಲದೇ ಗಿಡ ಮರ ಕತ್ತರಿಸುತ್ತಿದ್ದೇವೆ, ಹೀಗಾಗಿ ಗಿಡ ಮರಗಳನ್ನು ನೆಡುವುದು, ಪೋಷಿಸುವುದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು.ಕಾರ್ಯಕ್ರಮದ ರೂವಾರಿ ಶರತ್ ಪಾಟೀಲ ಮಾತನಾಡಿ, ಪರಿಸರ…
ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶ್ರೀಕೃಷ್ಣನು ನೀಡಿದ ಸಂದೇಶಗಳು ಸಂಸ್ಕಾರಯುತ ಜೀವನ ನಡೆಸಲು ಮಾದರಿಯಾಗಿದೆ. ಮತ್ತು ಶ್ರೀಕೃಷ್ಣ ಜನ್ಮಾಷ್ಠಮಿಯು ಜಾತಿ, ಮತ, ಪಂತ ಮೀರಿದ್ದು, ಇದಕ್ಕೆ ಕೃಷ್ಣನ ವೇಷಧಾರಿಗಳೇ ಸಾಕ್ಷಿಯಾಗಿದ್ದಾರೆ ಎಂದು ಪತ್ರಕರ್ತ, ಉಪನ್ಯಾಸಕ ಮಹಾಂತೇಶ ನೂಲಾನವರ ಹೇಳಿದರು.ಸಿಂದಗಿ ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳನ್ನು ಉತ್ತಮ ಸಂಸ್ಕಾರಯುತ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶ್ರೀಕೃಷ್ಣ ಜಗತ್ತಿಗೆ ಗುರುವಾಗಿದ್ದ, ಆತನ ಉಪದೇಶ ಮತ್ತು ತತ್ವಗಳು ಜೀವನದಲ್ಲಿ ಆಳವಡಿಸಿಕೊಂಡರೆ ಸದಾ ಕೋಪ, ದುಃಖ ಆಸೆಗಳು ದೂರವಾಗಿ ಸುಂದರ ಜೀವನ ನಡೆಸಬಹುದು ಎಂದರು.ಕಾರ್ಯಕ್ರಮವನ್ನು ಭವಾನಿ ರಾಘವೇಂದ್ರ ಕುಲಕರ್ಣಿ ಜ್ಯೋತಿ ಬೆಳಗಿಸುವ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯ ೧೯೮೬ರಲ್ಲಿ ನಿರ್ಮಾಣವಾಗಿದೆ. ಹಲವಾರು ಬಾರಿ ರಿಪೇರಿ ಮಾಡಿಲಾಗಿದೆ. ಕಟ್ಟಡ ಶಿಥಿಲಾವಸ್ಥೆಗೆ ಬಂದು, ಮಳೆ ಬಂದರೆ ಸೋರುವ ಪರಿಸ್ಥತಿಗೆ ಬಂದಿದೆ. ತಾತ್ಕಾಲಿಕವಾಗಿ ನೂತನ ಕಟ್ಟಡದಲ್ಲಿ ಕಾರ್ಯಬಾರಿ ನಡೆಸಲು ತೀರ್ಮಾನಿಸಲಾಗಿದೆ. ಕೆಲವೇ ದಿನಗಳಲ್ಲಿ ಜಿ-ಪ್ಲಸ್ ೫ ಯೋಜನೆಯಂತೆ ನೂತನ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಹೇಳಿದರು.ಪಟ್ಟಣದ ವಕೀಲರ ಸಂಘದ ಕಾರ್ಯಾಲಯದಲ್ಲಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳಿನಲ್ಲಿ ೫೦ವರ್ಷಗಳ ಸವಿ ನೆನೆಪಿಗಾಗಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ನ್ಯಾಯಾಧೀಶರು, ಆಡಳಿತಾತ್ಮಕ ನ್ಯಾಯಾಧೀಶರೊಳಗೊಂಡಂತೆ ಕಾನೂನು ಮತ್ತು ಜಿಲ್ಲೆಯ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳನ್ನು ಆವ್ಹಾನಿಸಿ ಬ್ರಹತ್ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸಿಂದಗಿ ತಾಲೂಕಿನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಂಬಂಧಿಸಿದ ಸು.೨ಸಾವಿರ ಪ್ರಕರಣಗಳಿದ್ದು, ಪ್ರಕರಣದ ವಿಚಾರಣೆಗೆ ಜಿಲ್ಲೆಗೆ ಹೋಗಿ ಬರುವುದು ಕಕ್ಷಿದಾರರಿಗೆ ಮತ್ತು ವಕೀಲರಿಗೆ ಕಷ್ಟವಾಗುತ್ತಿತ್ತು. ಜಿಲ್ಲಾ ನ್ಯಾಯಾಲಯ ನೀಡಬೇಕೆಂದು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ವಾರ್ಡ್ ನಂ 4 ರ ಪೊಲೀಸ್ ಠಾಣೆಯ ಆವರಣದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಹಾಲು ಕಂಬಕ್ಕೆ ಅಭಿಷೇಕ ಮಾಡುವ ಮೂಲಕ ಪೂಜಾ ಕಾರ್ಯಕ್ರಮ ಮಾಡಲಾಯಿತು.ಈ ಸಂದರ್ಭದಲ್ಲಿ ಪಿಎಸ್ಐ ಎಮ್.ಬಿ. ಬಿರಾದಾರ, ಹಿರಿಯರಾದ ಸಿ.ಎಂ. ಗಣಕುಮಾರ, ಮುರಿಗೆಪ್ಪ ಬೆಳ್ಳುಬ್ಬಿ, ಭೀಮಸಿ ಬೀಳಗಿ, ಬಸಪ್ಪ ಬಾಟಿ, ಕಾಂತು ಬರಗಿ, ರಾಮಣ್ಣ ಉಪ್ಪಲದಿನ್ನಿ, ವಿರೂಪಾಕ್ಷಿ ಕೋಲಕಾರ, ಈರಯ್ಯ ಗಣಕುಮಾರ, ಕಲ್ಲಪ್ಪ ಕಾಖಂಡಕಿ, ಶೇಖಪ್ಪ ಗಾಣಿಗೇರ, ರಾಜಶೇಖರಯ್ಯ ಹೀರೆಮಠ, ಮುದಿಯಪ್ಪ ಚೌದರಿ, ವೀರಭದ್ರಪ್ಪ ಬಾಗಿ, ವಿಶ್ವನಾಥ್ ಬಾಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ | ಉಪನ್ಯಾಸಕ ಬಿ ಎಂ ಕುಂಬಾರ ಸಲಹೆ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಸತತ ಪ್ರಯತ್ನದಿಂದ ಯಶಸ್ಸು ಸಾದ್ಯ. ಹೀಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕಲಕೇರಿ ಶ್ರೀ ಜಗಜ್ಯೋತಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ ಎಂ ಕುಂಬಾರ ಸಲಹೆ ನೀಡಿದರು.ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಅವರು ಮಾತನಾಡಿದರು.ಜೀವನದಲ್ಲಿ ಯಾರೇ ಕೈಬಿಟ್ಟರು ಪುಸ್ತಕ ನಿಮ್ಮನ್ನು ಕೈಬಿಡುವುದಿಲ್ಲ ಪುಸ್ತಕವನ್ನು ಪ್ರೀತಿಸಿ ಶಿಕ್ಷಕರನ್ನು ಗೌರವಿಸಿ ವಿದ್ಯಾಮಾತೆ ನಿಮ್ಮನ್ನು ಯಾವತ್ತು ಕೈಬಿಡುವುದಿಲ್ಲ ವಿದ್ಯಾರ್ಥಿಗಳಿಗೆ ಸಮಯದ ಪ್ರಜ್ಞೆ ಇರಬೇಕು ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಕನಸನ್ನು ಕಟ್ಟಿಕೊಲ್ಲಿ ಎಂದರು.ಪ್ರಾಚಾರ್ಯ ಡಾ, ವ್ಹಿ ಸಿ ಗೋಲಾ ಮಾತನಾಡಿ ದೇಶದಲ್ಲಿ ಗ್ರಾಮೀಣ ಮಟ್ಟದ ಬಡ ವಿದ್ಯಾರ್ಥಿಗಳು ಅತೀ ಹೆಚ್ಚು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಈ ಮೂರು ವರ್ಷದ ಪದವಿಯಲ್ಲಿ…
