ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ವಾರ್ಡ್ ನಂ 4 ರ ಪೊಲೀಸ್ ಠಾಣೆಯ ಆವರಣದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಹಾಲು ಕಂಬಕ್ಕೆ ಅಭಿಷೇಕ ಮಾಡುವ ಮೂಲಕ ಪೂಜಾ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐ ಎಮ್.ಬಿ. ಬಿರಾದಾರ, ಹಿರಿಯರಾದ ಸಿ.ಎಂ. ಗಣಕುಮಾರ, ಮುರಿಗೆಪ್ಪ ಬೆಳ್ಳುಬ್ಬಿ, ಭೀಮಸಿ ಬೀಳಗಿ, ಬಸಪ್ಪ ಬಾಟಿ, ಕಾಂತು ಬರಗಿ, ರಾಮಣ್ಣ ಉಪ್ಪಲದಿನ್ನಿ, ವಿರೂಪಾಕ್ಷಿ ಕೋಲಕಾರ, ಈರಯ್ಯ ಗಣಕುಮಾರ, ಕಲ್ಲಪ್ಪ ಕಾಖಂಡಕಿ, ಶೇಖಪ್ಪ ಗಾಣಿಗೇರ, ರಾಜಶೇಖರಯ್ಯ ಹೀರೆಮಠ, ಮುದಿಯಪ್ಪ ಚೌದರಿ, ವೀರಭದ್ರಪ್ಪ ಬಾಗಿ, ವಿಶ್ವನಾಥ್ ಬಾಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.