ವಿಜಯಪುರ ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ಆಗ್ರಹ | ಶಾಸಕರ ಮುಂದೆ ತಮಟೆ ಬಾರಿಸಲು ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ವಿಜಯಪುರ ವತಿಯಿಂದ ನ್ಯಾ. ನಾಗಮೋಹನ ದಾಸ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆಗಷ್ಟ್ ೧೯ಕ್ಕೆ ಮುಂದೆ ಹಾಕಿರುವ ಕುರಿತು ಪತ್ರಿಕಾಗೋಷ್ಟಿ ನಗರದಲ್ಲಿ ಜರುಗಿತು.
ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಶ್ರೀಶೈಲ ರತ್ನಾಕರ ಮಾತನಾಡಿ ದಿನಾಂಕ ೧೮-೮-೨೦೨೫ ರಂದು ವಿಜಯಪುರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮನೆಗಳಿಗೆ ತಮಟೆ ಬಾರಿಸುವ ಮೂಲಕ ಅಗಷ್ಟ ೧೯ ರಂದು ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಧ್ವನಿ ಎತ್ತಲು ಎಚ್ಚರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಭೀಮು ಮೇಲಿನಮನಿ ಮಾತನಾಡಿ, ಸಿದ್ದರಮಯ್ಯನವರು ೨೦೧೩ ರಿಂದ ೨೦೧೮ ರ ವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ವಿಳಂಬ ದ್ರೋಹದ ಚಾಳಿ ನಡೆಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಸಮಾಜ ಮುಖಂಡ ಎಸ್.ಎಚ್. ಲೋಟಗಿ ವಕೀಲರು, ಸದಾನಂದ ಗುನ್ನಾಪೂರ, ಭೀಮರಾಯ ಹುಲ್ಲೂರು, ವಿಠ್ಠಲ ನಡುವಿನಕೇರಿ, ರವಿಚಂದ್ರ ಹಾದಿಮನಿ, ಪರಶುರಾಮ ರೋಣಿಹಾಳ, ಹನಮಂತ ಬಿರಾದಾರ, ನಾಗರಾಜ ಮಾದರ, ಪ್ರಶಾಂತ ದೊಡಮನಿ, ಅಶೋಕ ನಂದಿ, ಶ್ರೀಕಾಂತ ಬಿರಾದಾರ, ಸಿದ್ದು ಪೂಜಾರಿ, ಶೇಖು ಆಲೂರ, ಹಣಮಂತ ಹಡಲಗಿ, ಸುಭಾಸ ಕಟ್ಟಿಮನಿ, ಏಕನಾತ ಓತಿಹಾಳ, ಅನೀಲ ರತ್ನಾಕರ, ದೇವೇಂದ್ರ ಹಡಗಲಿ, ವಿಜಯ ಮಾದರ, ಶಿವು ರೂಗಿ ಮುಂತಾದವರು ಉಪಸ್ಥಿತರಿದ್ದರು.