ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೊಸದಾಗಿ ನಿರ್ಮಿಸಿದ ತೋಟಗಾರಿಕೆ ಉತ್ಪನ್ನಗಳ ಪೂರ್ಣ ಪ್ರಮಾಣದ ಮೌಲ್ಯವರ್ಧಿತ ಸಂಸ್ಕೃರಣೆ ಘಟಕಗಳು, ಔಷಧಿ ಮತ್ತು ಸುಗಂಧ ದ್ರವ್ಯಗಳ ಘಟಕಗಳನ್ನೊಳಗೊಂಡಂತೆ, ಪ್ರಾಯೋಗಿಕ ಉತ್ಪಾದನೆ ಮತ್ತು ವಾಣಿಜ್ಯ ಉತ್ಪಾದಣೆ ಕೈಗೊಳ್ಳುವ ಘಟಕಗಳಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಒದಗಿಸಲಾಗುವ ಶೇ.೨೫ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದ್ರಾಕ್ಷಾರಸ ಉತ್ಪಾದನಾ ಘಟಕ, ಹಣ್ಣು ಮತ್ತು ತರಕಾರಿ ಸಂಸ್ಕರಣೆ-ಕ್ಯಾನಿಂಗ್ ಘಟಕ, ಉಪ್ಪಿನಕಾಯಿ ಘಟಕ, ಸುಗಂಧದ್ರವ್ಯ-ಔಷಧಿ ಸಸ್ಯಗಳ ಸಂಸ್ಕರಣಾ ಘಟಕಗಳು, ಗರ್ಕಿನ್ ಘಟಕಗಳು ಇತ್ಯಾದಿ ಘಟಕಗಳನ್ನು ಸಹಾಯಧನಕ್ಕೆ ಪರಿಗಣಿಸಲಾಗುವುದು.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ-ಮೊ:೯೫೩೫೧೮೫೯೯೯, ಇಂಡಿ- ಮೊ:೯೦೦೮೪೦೪೦೪೧, ಸಿಂದಗಿ-ಮೊ:೭೭೯೫೯೫೨೬೫೩, ಬ.ಬಾಗೇವಾಡಿ-ಮೊ:೯೮೪೫೨೧೫೩೬೨, ಮುದ್ದೇಬಿಹಾಳ-ಮೊ:೯೬೦೨೫೭೮೫೫೧ ಸಂಖ್ಯೆಗೆ ಅಥವಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.