ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶ್ರೀಕೃಷ್ಣನು ನೀಡಿದ ಸಂದೇಶಗಳು ಸಂಸ್ಕಾರಯುತ ಜೀವನ ನಡೆಸಲು ಮಾದರಿಯಾಗಿದೆ. ಮತ್ತು ಶ್ರೀಕೃಷ್ಣ ಜನ್ಮಾಷ್ಠಮಿಯು ಜಾತಿ, ಮತ, ಪಂತ ಮೀರಿದ್ದು, ಇದಕ್ಕೆ ಕೃಷ್ಣನ ವೇಷಧಾರಿಗಳೇ ಸಾಕ್ಷಿಯಾಗಿದ್ದಾರೆ ಎಂದು ಪತ್ರಕರ್ತ, ಉಪನ್ಯಾಸಕ ಮಹಾಂತೇಶ ನೂಲಾನವರ ಹೇಳಿದರು.
ಸಿಂದಗಿ ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ಶ್ರೀಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳನ್ನು ಉತ್ತಮ ಸಂಸ್ಕಾರಯುತ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶ್ರೀಕೃಷ್ಣ ಜಗತ್ತಿಗೆ ಗುರುವಾಗಿದ್ದ, ಆತನ ಉಪದೇಶ ಮತ್ತು ತತ್ವಗಳು ಜೀವನದಲ್ಲಿ ಆಳವಡಿಸಿಕೊಂಡರೆ ಸದಾ ಕೋಪ, ದುಃಖ ಆಸೆಗಳು ದೂರವಾಗಿ ಸುಂದರ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮವನ್ನು ಭವಾನಿ ರಾಘವೇಂದ್ರ ಕುಲಕರ್ಣಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶ್ರೀಕೃಷ್ಣ ಮತ್ತು ರಾಧೆಯ ವೇಷದಲ್ಲಿದ್ದ ಮಕ್ಕಳ ಜನಮನ ಸೆಳೆಯಿತು. ಚಿಣ್ಣರು ಕೃಷ್ಣನ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಗಿನ್ನಿಸ ವರ್ಲ್ಡ್ ರಿಕಾರ್ಡ ಖ್ಯಾತಿಯ ಪ್ರೇರಣಾ ಶಿಶು ನಿಕೇತನ ವಿದ್ಯಾರ್ಥಿನಿ ದಿತಿ ಶಿರಶ್ಯಾಡ ಭಗವದ್ಗೀತೆಯ ೧೮ ಅಧ್ಯಾಯಗಳ ಹೆಸರು ಹೇಳಿ ಗಮನ ಸೆಳೆದಳು.
ಇದೇ ಸಂದರ್ಭದಲ್ಲಿ ಸನತ ಕುಲಕರ್ಣಿ, ಅಲ್ತಾಪ ತಾಂಬೋಳಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಎಸ್.ಬಿ.ಕುಂಟೋಜಿ, ಎಮ್.ಎಮ್.ಜುಮನಾಳ, ಬಿ.ಎಸ್.ಪಾಟೀಲ, ಎಸ್‌ವ್ಹಿ.ಕಡಣಿ, ವಿ.ಎ.ನಾಯಕ, ಎಮ್.ಜಿ.ದ್ಯಾಮಗೊಂಡ, ಎಸ್.ಡಿ.ನಾಯಕ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ವಿ.ಕೆ.ಚವ್ಹಾಣ, ಎನ್.ಜಿ.ಬಳಗಾನೂರ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಎಸ್.ಎಸ್.ಪಾಟೀಲ ಸೇರಿದಂತೆ ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕಿರಣ ಕುಲಕರ್ಣಿ ಸ್ವಾಗತಿಸಿದರು. ಯಲ್ಲಾಲಿಂಗ ಹೊಸೂರ ವಂದಿಸಿದರು. ಸತೀಶ ಕುಲಕರ್ಣಿ ನಿರೂಪಿಸಿದರು.