Author: editor.udayarashmi@gmail.com

ವಿಮಾನ ಅಪಘಾತದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ ತನಿಖಾ ಬ್ಯೂರೋ ವರದಿ ನವದೆಹಲಿ: ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ವರದಿಯು ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದೆ.ಹಾರಾಟದ ಕೆಲವು ಸೆಕೆಂಡುಗಳ ನಂತರ ವಿಮಾನದ ಎರಡೂ ಎಂಜಿನ್‌ಗಳ ಇಂಧನ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂಬ ಅನುಮಾನವನ್ನು ಈ ವರದಿಯು ಹುಟ್ಟುಹಾಕಿದೆ. ಒಬ್ಬ ಪೈಲಟ್ ಇನ್ನೊಬ್ಬನನ್ನು ಇಂಧನ ಸ್ವಿಚ್ ಆಫ್ ಮಾಡಿದ್ದೀರಾ ಎಂದು ಕೇಳಿದರು. ಇನ್ನೊಬ್ಬ ಪೈಲಟ್ ‘ನಾನು ಮಾಡಲಿಲ್ಲ’ ಎಂದು ಉತ್ತರಿಸಿದರು. ಪೈಲಟ್‌ನ ಸಂಭಾಷಣೆಯು ವಿಷಯವನ್ನು ಮತ್ತಷ್ಟು ಜಟಿಲಗೊಳಿಸಿದೆ. ಪೈಲಟ್ ಗಾಳಿಯಲ್ಲಿ ಇಂಧನ ಸ್ವಿಚ್ ಅನ್ನು ಏಕೆ ಆಫ್ ಮಾಡುತ್ತಾನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ? ಪೈಲಟ್ ಇದನ್ನು ಮಾಡದಿದ್ದರೆ, ಇಂಧನ ಸ್ವಿಚ್ ಹೇಗೆ ಆಫ್ ಆಯಿತು? ಎಂಬ ಪ್ರಶ್ನೆ ಉದ್ಭವಿಸಿದೆ.ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನ ಎI171 ನಲ್ಲಿ 242 ಪ್ರಯಾಣಿಕರಲ್ಲಿ, ಒಬ್ಬರು ಮಾತ್ರ ಬದುಕುಳಿದರು. ಪೈಲಟ್‌ನ ಸಂಭಾಷಣೆಯಿಂದ ಯಾವುದೇ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕಳೆದ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯೂ ಕುಸಿತ ಕಂಡಿದ್ದು ಈ ವರ್ಷ ಆರಂಭದಿಂದಲೇ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮತ್ತು ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಜಮಖಂಡಿಯ ಪ್ರಾಚಾರ್ಯ ಮಂಗಲಾ ನಾಯಕ ಹೇಳಿದರು.ತಾಲ್ಲೂಕಿನ ಇಟ್ಟಂಗಿಹಾಳದ ವೇದ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯ ಸಭೆಯಲ್ಲಿ ಅವರು ಮಾತನಾಡಿದರು.ನಕಲು ಮುಕ್ತ ಪರೀಕ್ಷೆ ನಡೆಯುವದರೊಂದಿಗೆ ಜಿಲ್ಲೆಯೂಟಾಪ್ ಹತ್ತರಲ್ಲಿ ಫಲಿತಾಂಶ ಬರಬೇಕು. ಕಠಿಣ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ಶೈಕ್ಷಣಿಕ ವರ್ಷ ಆರಂಭದಿಂದಲೇ ಆರಂಭಿಸಬೇಕು. ಅಂದಿನ ಪಾಠದ ಕಠಿಣತೆ ಕುರಿತು ಅಂದೇ ವಿಶೇಷ ತರಗತಿ ನಡೆಸುವದರ ಮೂಲಕ ಹೇಳುವದು. ಶಾಲೆಯ ಚುಕ್ಕಾಣಿ ಹಿಡಿದಿರುವ ಮತ್ತು ಅನುಷ್ಠಾನ ಅಧಿಕಾರಿಗಳಾದ ಮುಖ್ಯೋಪಾಧ್ಯಾಯರು ಚಾಚು…

Read More

ರಚನೆ- ಬಾಲಸುಬ್ರಮಣ್ಯ ವಿ ಎಸ್ ರಾವ್ ಉದಯರಶ್ಮಿ ದಿನಪತ್ರಿಕೆ ಶಿಲೆಯಲ್ಲದ ಗೋಡೆಯಲಿ ನಿನ್ನ ರೂಪಶಿಲ್ಪಿಯಿಲ್ಲದೆ ಬರೆದಾಯ್ತು ನಿನ್ನ ಬಿಂಬಪಿಸುಗುಟ್ಟಿತು ಗಾಳಿಯದು ನಿನ್ನ ಹೆಸರಮಂಜಿನ ಹನಿಯಲಿ ಸೇರಿಸಿ ಬಿಸಿ ಉಸಿರ ಕಣಕಣದಲಿ ಬೆರೆತಿದೆ ನನ್ನ ನಿನ್ನ ಪ್ರೀತಿರಿಂಗಣಿಸೆ ದುಂಬಿಗಳು ಮಕರಂದ ಹೀರಿಸುಮ ಸೌರಭ ಹರಡಿದೆ ನಮ್ಮ ಹೆಸರಿಸಿಶುಖ ಪಿಕಗಳು ಹಾಡಿವೆ ನಮ್ಮಿಬ್ಬರ ಹರಸಿ ಪ್ರೇಮದ ಕಾವ್ಯಕೆ ಪಲ್ಲವಿಯು ನೀನಾದೆಹಾಡುವ ರಾಗಕೆ ಇಂಪಾದ ದನಿಯಾದೆಸ್ವರಲೋಕದ ರಂಗದಿ ಶ್ರುತಿಯಾಗಿ ಮೆರೆದೆಕುಂಚದಲಿ ಬಣ್ಣಗಳ ಓಕುಳಿಯ ಮೂಡಿಸಿದೆ

Read More

ಲೇಖನ- ಸಂದೀಪ ಕುಲಕರ್ಣಿ’ನಮ್ಮ ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ದ್ವಂದ್ವ ಮನಸ್ಥಿತಿ – ಮಾನವನ ಒಳಗಿನ ಆಂತರಿಕ ಗೊಂದಲ.ಮನುಷ್ಯನ ಜೀವನ ಎಂದರೆ ನಿರಂತರ ಆಯ್ಕೆಗಳ ಸರಣಿ. ಪ್ರತಿದಿನವೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಂದು ಸಣ್ಣದಾಗಿ ಕಾಣಿಸುತ್ತವೆ. ಆದರೆ ಅವುಗಳ ಪರಿಣಾಮಗಳು ದೀರ್ಘಕಾಲಿಕವಾಗಿರುತ್ತವೆ. ಈ ನಿರ್ಧಾರಗಳ ಮೊದಲು ಮನುಷ್ಯನು ಒಂದು ಸ್ಥಿತಿಗೆ ತಲುಪುತ್ತಾನೆ. ಅಂದರೆ ಎರಡು ಅಥವಾ ಹೆಚ್ಚು ಆಯ್ಕೆಗಳ ನಡುವೆ ಗೊಂದಲದೊಳಗಾಗಿ ತೀವ್ರ ಆಂತರಿಕ ಒತ್ತಡ ಅನುಭವಿಸುವ ಮನಃಸ್ಥಿತಿ. ಇದನ್ನೇ ದ್ವಂದ್ವ ಮನಸ್ಥಿತಿ ಎಂದು ಕರೆಯಲಾಗುತ್ತದೆ. 1. ದ್ವಂದ್ವ ಮನಸ್ಥಿತಿಯ ಅರ್ಥ”ದ್ವಂದ್ವ” ಎಂಬುದು ಎರಡು ಪರಸ್ಪರ ವಿರೋಧಿ ಅಂಶಗಳ ನಡುವಿನ ಸಂಘರ್ಷ. “ಮನಸ್ಥಿತಿ” ಎಂದರೆ ಮನಸ್ಸಿನ ಆಂತರಿಕ ಸ್ಥಿತಿಗತಿ. ಈ ಎರಡು ಪದಗಳನ್ನು ಒಂದಾಗಿ ನೋಡುವಾಗ, “ದ್ವಂದ್ವ ಮನಸ್ಥಿತಿ” ಎಂಬುದು ವ್ಯಕ್ತಿಯ ಒಳಗೆ ನಡೆಯುವ ನಿರ್ಧಾರಾತ್ಮಕ ಗೊಂದಲ, ಭಾವನೆ ಮತ್ತು ಯುಕ್ತಿಯ ನಡುವೆ ನಡೆಯುವ ಸೆಳೆತ ಎಂದು ಅರ್ಥವಿದೆ.2. ಈ ಸ್ಥಿತಿಯ ಲಕ್ಷಣಗಳುa. ಏನನ್ನು ಆಯ್ಕೆ ಮಾಡಬೇಕು ಎಂಬ ಗೊಂದಲb. ಆತ್ಮವಿಶ್ವಾಸದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ದೈವಾಡಗಿ ಹೇಳಿದರು.ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲಯನ್ಸ್ ಪುಟ್ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡ 21 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಪಂದ್ಯಾವಳಿ ಡಾ.ಬಿ.ಆರ್. ಅಂಬೇಡ್ಕರ್ ಪುಟ್ಬಾಲ್ ಪಂದ್ಯಾಳಿ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದಿನ ನಿತ್ಯದ ಜಂಜಾಟದಲ್ಲಿ ನಾವು ಮಾನಸಿಕ ದೈಹಿಕವಾಗಿ ಕುಗ್ಗುತ್ತಿದ್ದೇವೆ. ಅವುಗಳನ್ನು ನಿವಾಸಿಕೊಳ್ಳಲು ನಾವು ಪ್ರತಿಯೊಬ್ಬರು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಕೊಂಡರೆ ಮಾನಸಿಕ, ದೈಹಿಕವಾಗಿ ನಿರಾಳರಾಗುತ್ತೇವೆ. ಅದರಂತೆ ಸದೃಢವಾದ ಆರೋಗ್ಯ ಹೊಂದಲು ಕ್ರೀಡೆಗಳು ಬಹಳಷ್ಟು ಉಪಕಾರಿಯಾಗಿವೆ ಎಂದರು.ಈ ಸಂದರ್ಭದಲ್ಲಿ ಸಮಾಜ ಸೇವಕ ಫಯಾಜ ಕಲಾದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುಕವರು ಮೊಬೈಲ್, ಗೆಜೆಟ್, ಕಂಪ್ಯೂಟರ್, ಲ್ಯಾಪಟಾಪ್‌ಗಳಿಗೆ ಅಂಟುಕೊಂಡಿದ್ದಾರೆ. ಅವುಗಳಿಂದ ಹೊರ ಬರಬೇಕು. ಮೊಬೈಲ್ ನಲ್ಲಿರುವ ಆ್ಯಪ್‌ಗಳ ಜಾಲಕ್ಕೆ ಸಿಲುಕಿಕೊಂಡು ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬೆಳಗುಂಪಿ ಪರಿವಾರದಿಂದ ಲಕ್ಷ್ಮಿ ಮೂರ್ತಿ ಸ್ಥಾಪನೆ ಹಾಗೂ ಅಗ್ರೋ ಕಾಮಗಾರಿಗೆ ಬಡದಾಳ ಮಠದ ಡಾ. ಚನ್ನಮಲ್ಲ ಶಿವಯೋಗಿಗಳು, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಗುದ್ದಲಿ ಪೂಜೆ ನೇರವೇರಿಸಿದರು.ಈ ಸಂದರ್ಭದಲ್ಲಿ ಜಗನ್ನಾಥ ಬೆಳಗುಂಪಿ, ರೇಹಮಾನ್ ಪಟೇಲ್, ಶಾಂತಪ್ಪ ಸಾಹು, ಶಂಕರ ರೂಮಾಗೊಳ, ಶಿವು ಬೆಳಗುಂಪಿ, ಶರಣಬಸು ಮೇತ್ರಿ, ಯಶ್ವಂತ ಪಟ್ಟೇದಾರ, ಕಲ್ಲಪ್ಪ ಪಟ್ಟೇದಾರ, ಲಕ್ಷ್ಮಣಗೌಡ ಪಾಟೀಲ್, ಕುಪೇಂದ್ರ ಪೂಜಾರಿ, ನಾಗರಾಜ ಮೇಳಕುಂದಿ, ಮರಳಸಿದ್ದ ಒಳಕಟ್ಟಿ, ಅನೀಲ, ಶರಣು ಗುಜ್ಜಾ ಇದ್ದರು.

Read More

ಹಿರೇಪಡಸಲಗಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಟಿ- ಶೈಕ್ಷಣಿಕ ಚಟುವಟಿಕೆ ಪರಿಶೀಲನೆ | ಬದ್ದತೆಯಿಂದ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲು ಸಲಹೆ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಇಂದಿನ ಯುವಜನತೆಯಲ್ಲಿ ಕಲಿಕಾಸಕ್ತಿ ಕ್ಷೀಣಿಸುತ್ತಿದೆ.ಮೊಬೈಲ್ ಹಾವಳಿಯ ಸೆಳೆತದಲ್ಲಿ ಸಿಲುಕಿರುವ ಬಹುತೇಕ ಮಕ್ಕಳಿಂದ ಅದ್ಯಯನ ಪ್ರವೃತ್ತಿಗೆ ಇಂದು ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಜಾಲತಾಣದ ಅನಿಯಂತ್ರಿತ ಬಳಕೆ ವ್ಯಾಮೋಹದಿಂದ ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗುತ್ತಲ್ಲಿದೆ. ಇದರಿಂದ ಶಾಲಾ ಮಕ್ಕಳನ್ನು ಉಳಿಸಿ ಓದು,ಪಠ್ಯಾಸಕ್ತಿ ಕಡೆಗೆ ಕೊಂಡೊಯ್ದು ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಕಾಳಜಿಯಿಂದ ಈ ವಿಷಕಾರಿ ವಾತಾವರಣದಲ್ಲಿ ದಾರಿ ತಪ್ಪುತ್ತಿರುವ ಭವಿಷ್ಯತ್ತಿನ ಪ್ರಜೆಗಳ ಮನವೊಲಿಸಿ ಶಿಕ್ಷಣದ ಅಭಿರುಚಿ ಒಲವು ಮೂಡಿಸಲು ಮುಂದಾಗಬೇಕಾಗಿರುವುದು ತೀರಾ ಅಗತ್ಯವಾಗಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಅಭಿಪ್ರಾಯಿಸಿದರು.ಸಮೀಪದ ಹಿರೇಪಡಸಲಗಿ ಸರಕಾರಿ ಪ್ರೌಢಶಾಲೆಗೆ ಅನಿರೀಕ್ಷಿತ ಬೇಟಿ ನೀಡಿದ ಅವರು ಶಾಲಾ ಶೈಕ್ಷಣಿಕ ವಾತಾವರಣ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ಅಭ್ಯಾಸದ ಗುಣಮಟ್ಟ ಪರಿಶೀಲಿಸಿದರು.ಈ ವೇಳೆ ನಡೆಸಿದ ಶಿಕ್ಷಕ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಎಸ್ಸೆಸ್ಸೆಲ್ಸಿ ಮಕ್ಕಳ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆಯನ್ನು ರೂಪಿಸಿ(ರಕ್ಷಣೆ ಹಾಗೂ ದೌರ್ಜನ್ಯ ತಡೆ) ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕುರಿಗಾಹಿಗಳು ಹಾಗೂ ಮುಖಂಡರು ನಗರದ ದೇಸಾಯಿ ವೃತ್ತದಿಂದ ಕುರಿಗಳ ಜೊತೆಗೆ ತಾಲ್ಲೂಕು ಆಡಳಿತ ಸೌಧದವರೆಗೆ ಪ್ರತಿಭಟಣೆ ಮೂಲಕ ಹೋಗಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.ಮುಖಂಡ ಅರ್ಜುನ ದಳವಾಯಿ ಮಾತನಾಡಿ, ಕುರಿಗಾರರ ಮೇಲೆ ನಿರಂತವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಹಲ್ಲೆ, ಜೀವ ಬೇದರಿಕೆ, ಕೊಲೆ, ಅತ್ಯಾಚಾರ, ಕುರಿ ಕಳ್ಳತನ, ಅರಣ್ಯಾಧಿಕಾರಿಗಳ ಲಂಚದ ಬೇಡಿಕೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಸರ್ಕಾರವು ಎಲ್ಲ ವರ್ಗದ ಮಹಿಳೆಯರ ಪರ, ಮಕ್ಕಳ ಪರ, ಶೋಷಿತ ಸಮುದಾಯಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆ ಮಾಡಬೇಕು ಎಂದರು.ಹೂವಪ್ಪ ಉಷಾಕರ ಮಾತನಾಡಿ, ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ, ಕುರಿಗಾರಿಕೆ ಮೂಲಕ…

Read More

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕಟಬು ಕಟಬರ ಸಮಾಜ ಆಗ್ರಹ ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಕಟಬು ಕಟಬರ ಜನಾಂಗದ ಕು.ಅರುಣಾ ಶಿಳ್ಳಿಕ್ಯಾತರ(೧೪ವರ್ಷದ) ಜುಲೈ ೦೯ರಂದು ಬೆಂಗಳೂರಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಖಂಡಿಸಿ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಕೊಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಟಬು ಕಟಬರ ಸಮಾಜದ ವಿಜಯಪುರ ಜಿಲ್ಲೆಯ ಉಪಾಧ್ಯಕ್ಷ ಮಹೇಶ್ ಶಿಂಧೆ ಮಾತನಾಡಿ, ಕು.ಅರುಣಾ ಶ್ರೀಕ್ಯಾತರ್ ತಂದೆ ನಾಗಪ್ಪ ಶಿಳ್ಳಿಕ್ಯಾತರ ಹೊಟ್ಟೆಯ ಉಪಜೀವನಕ್ಕಾಗಿ ಬೆಂಗಳೂರು ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ಹೋದವರು. ಕೂಲಿ ಕೆಲಸ ಮಾಡಲು ತಂದೆ-ತಾಯಿಯು ಹೊರಗಡೆ ಹೋದಾಗ ದುಷ್ಕರ್ಮಿಗಳು ೧೪ ವರ್ಷದ ಅರುಣಾ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾಗಿರುವ ಕೃತ್ಯ ಖಂಡನೀಯ ಎಂದು ಹೇಳಿದರು.ಕಟಬು ಕಟಬರ್ ಚಡಚಣ ತಾಲೂಕ ಅಧ್ಯಕ್ಷ ದತ್ತು ಶಿಂಧೆ ಮಾತನಾಡಿ, ನಿರ್ದಾಕ್ಷಿಣ್ಯವಾಗಿ ದಯತೋರದೆ ಇಂತಹ ಕೃತ್ಯವೆಸಗಿದವರು ಯಾರೆ ಇರಲಿ ಅಂತಹ ವ್ಯಕ್ತಿಗಳಿಗೆ ಗಲ್ಲು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಾಧನೆ ಮಾಡಬೇಕೆಂದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆದರೆ ನಾವು ಅವುಗಳನ್ನು ಮೀರಿ ಬೆಳೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಇಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಅರಳಿ ಹೇಳಿದರು.ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗ, ಎನ್‌ಎಸ್‌ಎಸ್,ರೋವರ ಮತ್ತು ರೇಂಜರ, ರೆಡ್ ಕ್ರಾಸ್ ಘಟಕಗಳ ಉಧ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಬರುತ್ತವೆ. ಸಾಧನೆ ಮಾಡುವವನಿಗೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇರಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್.ಚೋರಗಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಸಂಗಮೇಶ ಅವಜಿ, ಗೌರವ ಕಾರ್ಯದರ್ಶಿ ವಿ.ಎಸ್.ಗಿಡವೀರ, ಅಶೋಕ ಕುಲಕರ್ಣಿ ಆಗಮಿಸಿದ್ದರು.ಪ್ರಾಚಾರ್ಯ ಮನೋಜ ಕಟಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶಶಿಧರ ಕುಸೂರ, ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಶ್ರೀಶೈಲ ಕಾಮಗೊಂಡ, ರೆಡ್…

Read More