ಉದಯರಶ್ಮಿ ದಿನಪತ್ರಿಕೆ
ಝಳಕಿ: ಸತತವಾಗಿ ಮೂರು ದಿನಗಳಿಂದ ವರುಣನ ಆರ್ಭಟಕ್ಕೆ ಶಿಥಿಲಗೊಂಡ ಮನೆಗಳನ್ನು ಇಂಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಭೀಮಾಶಂಕರ ಕನ್ನೂರ ತಾಲೂಕಿನ ಹಡಲಸಂಗ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಂಚಾಯತ್ ರಾಜ್ಯ ಇಲಾಖೆ, ನರೇಗಾ ಯೋಜನೆ ಹಾಗೂ ಕರ ವಸೂಲಾತಿ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚಿಸಿ ನಿಗದಿ ಪಡಿಸಿದ ಗುರಿಯನ್ನು ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ಉಪ ತಹಶೀಲ್ದಾ ಎ ಎಸ್ ಗೋಟ್ಯಾಲ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದು ಲೋಣಿ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣ ಲಮಾಣಿ, ಸರ್ಕಲ( ಕಂದಾಯ ಇಲಾಖೆ ) ಬಿ ಜಿ ಕೊಡವಾನ್ ಮತ್ತು ಗ್ರಾಮಸ್ಥರು ಇದ್ದರು.