ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧ-ಸಹಾಯವಾಣಿ ಕೇಂದ್ರ ಸ್ಥಾಪನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮಳೆಯಿಂದ ಪ್ರಾಥಮಿಕ ವರದಿಯಂತೆ ೫೩೨೨.೧೯ ಹೆಕ್ಟೇರ್ ಕೃಷಿ ಬೆಳೆ ಹಾಗೂ ೨೭೨.೨೦ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಪರಿಹಾರ ವಿತರಿಸಲು ಬೆಳೆ ಹಾನಿ ಜಂಟಿ ಸಮೀಕ್ಷಾ ತಂಡವನ್ನು ರಚಿಸಿ, ಶೇ.೮೦ ರಷ್ಟು ಸಮೀಕ್ಷೆ ಕೈಗೊಂಡಿದ್ದು, ಕೂಡಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆ.೫ರಿಂದ ಈವರೆಗೆ ಮಳೆಯಿಂದ ಯಾವುದೇ ಮಾನವ ಜೀವಹಾನಿಯಾಗಿರುವುದಿಲ್ಲ. ೦೨ ಜಾನುವಾರು ಹಾಗೂ ೧೦೪ ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಪರಿಹಾರವನ್ನು ವಿತರಿಸಲಾಗಿದೆ. ಭಾಗಶ: ಹಾನಿಯಾದ ೨೧೩ ಮನೆಗಳ ಪೈಕಿ ಜಂಟಿ ಸಮೀಕ್ಷಾ ವರದಿಯಂತೆ ಈಗಾಗಲೇ ೧೬೦ ಮನೆಗಳಿಗೆ ಪರಿಹಾರಧನ ನೀಡಿ ಆರ್‌ಜಿಆರ್‌ಎಚ್‌ಸಿಎಲ್ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು, ಬಾಕಿ ಉಳಿದ ೫೩ ಭಾಗಶ: ಮನೆಗಳು ಇತ್ತೀಚಿನ ೨-೩ ದಿನಗಳಲ್ಲಿ ಹಾನಿಯಾಗಿದ್ದು, ಮನೆ ಹಾನಿಗೆ ಪರಿಹಾರ ವಿರಿಸಲು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದಿನಾಂಕ : ೦೧-೦೪-೨೦೨೫ ರಿಂದ ೩೧-೦೫-೨೦೨೫ರವರೆಗೆ ೦೯ ಮಾನವ ಜೀವಹಾನಿ, ೬೫ ಜಾನುವಾರು ಜೀವಹಾನಿ, ೧೧೦ ಭಾಗಶ ಮನೆಗಳ ಹಾನಿ ಹಾಗೂ ೭೦ ಮನೆಗಳ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಇವುಗಳಿಗೆ ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ಮಾರ್ಗಸೂಚಿ ಮತ್ತು ಸರ್ಕಾರದ ಆದೇಶದಂತೆ ಈಗಾಗಲೇ ಪರಿಹಾರವನ್ನು ವಿತರಿಸಲಾಗಿದ್ದು, ೧೪೭.೪೦ ಹೆ.ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ೨೧೮ ಫಲಾನುಭವಿಗಳಿಗೆ ೧೨.೮೧ ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ನಿಯಂತ್ರಣಕ್ಕಾಗಿ ನೋಡಲ್ ಅಧಿಕಾರಿಗಳ ನೇಮಕ
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿಯಂತ್ರಣಕ್ಕಾಗಿ ಈವರೆಗೆ ೧೨ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸ, ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಿ ವಿಪತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ನೀಡಲು ಸೂಚಿಸಲಾಗಿದ್ದಲ್ಲದೇ ಪ್ರವಾ ಪರಿಸ್ತಿತಿ ನಿಯಂತ್ರಣಕ್ಕಾಗಿ ಪ್ರತಿ ತಾಲೂಕಿಗೆ ಓರ್ವರಂತೆ ತಾಲೂಕಾ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ವಿಜಯಪುರ ತಾಲೂಕಿಗೆ ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಮುಳಗುಂದ ಮೊ: ೯೭೪೨೯೭೧೫೭೦, ಬಬಲೇಶ್ವರ ತಾಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ಪೂಜಾರಿ ಮೊ: ೯೮೪೪೮೪೯೨೩೮, ತಿಕೋಟಾ ತಾಲೂಕಿಗೆ ತೊಟಗಾರಿಕೆ ಇಲಾಖೆ ಉನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ ಮೊ: ೯೪೪೮೯೯೯೨೩೨, ಬಸವನಬಾಗೇವಾಡಿ ತಾಲೂಕಿಗೆ ಜಿಲ್ಲಾ ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಮೊ: ೯೪೪೮೩೯೨೦೦೫ ಇವರನ್ನು ನೇಮಕ ಮಾಡಲಾಗಿದೆ.
ಕೊಲ್ಹಾರ ತಾಲೂಕಿಗೆ ಮೀನುಗಾರಿಕೆ ಇಲಾಖೆ ಉಪನಿದೇಶಕ ಎಂ.ಎಚ್.ಬಾಂಗಿ ಮೊ: ೯೯೮೬೧೩೨೭೧೭, ಇಂಡಿ ತಾಲೂಕಿಗೆ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಮೊ: ೮೮೬೧೩೦೮೪೪೪, ಮುದ್ದೇಬಿಹಾಳ ತಾಲೂಕಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಮೊ: ೯೦೦೮೩೪೯೧೫೦ ಹಾಗೂ ತಾಳಿಕೋಟೆ ತಾಲೂಕಿಗೆ ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಪಾಟೀಲ ಮೊ: ೮೨೭೭೯೩೦೬೦೧/೯೮೮೦೩೩೫೫೯೭ ಇವರನ್ನು ನೇಮಕ ಮಾಡಲಾಗಿದೆ.
ನಿಡಗುಂದಿ ತಾಲೂಕಿಗೆ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ ಮೊ: ೭೭೯೫೩೮೭೨೧೭, ಚಡಚಣ ತಾಲೂಕಿಗೆ ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಮೊ: ೯೮೪೪೮೫೦೪೧೧, ಸಿಂದಗಿ ತಾಲೂಕಿಗೆ ಆಹಾರ ಇಲಾಖೆ ಉಪನಿರ್ದೇಶಕ ವಿನಯ ಪಾಟೀಲ ಮೊ: ೮೯೫೧೪೨೦೩೯೯, ದೇವರಹಿಪ್ಪರಗಿ ತಾಲೂಕಿಗೆ ಕಾರ್ಮಿಕ ಅಧಿಕಾರಿ ಶ್ರೀಮತಿ ಉಮಾಶ್ರೀ ಕೊಳ್ಳಿ ಮೊ: ೮೬೧೮೪೯೭೫೨೩ ಹಾಗೂ ಆಲಮೇಲ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮೊ: ೯೪೮೨೬೬೪೧೮೦/೯೪೮೦೮೪೩೦೨೧ ಇವರನ್ನು ನೇಮಕ ಮಾಡಲಾಗಿದೆ.
ವಿಪತ್ತು ನಿರ್ವಹಣೆ ಸಹಾಯವಾಣಿ : ಪ್ರವಾಹ ನಿಯಂತ್ರಣ ಹಾಗೂ ಪ್ರಕೃತಿ ವಿಕೋಪದ ತುರ್ತು ಕ್ರಮ ಕೈಗೊಳ್ಳಲು ಈಗಾಗಲೇ ತಾಲೂಕಾ ನೋಡಲ್ ಅಧಿಕಾರಿಗಳಿತಗೆ ಹಾಗೂ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಪತ್ತು ನಿರ್ವಹಣೆಯ ಕುಂದು-ಕೊರತೆಗಳ ಕುರಿತು ಸಾರ್ವಜನಿಕರು ತಮ್ಮ ತಾಲೂಕಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಕುರಿತು ೨೪/೭ ಸಹಾಯವಾಣಿ ೧೦೭೭ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.