Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಜು. ೧೬ ರಂದು ಮಧ್ಯಾನ್ಹ ೩ ಗಂಟೆಗೆ ಹಮ್ಮಿಕೊಂಡಿರುವ ಜನರಿಂದ ಜನರಿಗಾಗಿ ಜನರಿಗೋಸ್ಕರ ಜೆಡಿಎಸ್ ಪಕ್ಷ ಕಾರ್ಯಕ್ರಮಕ್ಕೆ ಜೆಡಿಎಸ್ ಪಕ್ಷದ ಯುವ ಮೋರ್ಚಾದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಆಗಮಿಸುತ್ತಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ, ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವ ದೃಷ್ಟಿಕೋನವಿಟ್ಟುಕೊಂಡು ರಾಜ್ಯಾದ್ಯಂತ ಜನರಿಂದ ಜನರಿಗಾಗಿ ಜನರಿಗೋಸ್ಕರ ಜೆಡಿಎಸ್ ಪಕ್ಷವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಪ್ರಥಮ ಬಾರಿಗೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಗೆ ನಿಖಿಲ್ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ತಾಲೂಕಿನ ಮನಗೂಳಿ ಪಟ್ಟಣದಿಂದ ಬೃಹತ್ ಸೈಕಲ್ ಮೋಟಾರ್ ರ್ಯಾಲಿಯೊಂದಿಗೆ ನಿಖಿಲ್ಕುಮಾರಸ್ವಾಮಿ ಬಸವನಬಾಗೇವಾಡಿ ಪಟ್ಟಣಕ್ಕೆ ಸ್ವಾಗತಿಸಿಕೊಳ್ಳಲಾಗುವದು. ಸೈಕಲ್ ಮೋಟಾರ್ ರ್ಯಾಲಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದವರೆಗೂ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನಿಖಿಲ್ಕುಮಾರಸ್ವಾಮಿ ಮಾಲಾರ್ಪಣೆ ಮಾಡುವರು. ನಂತರ ಬಾಬುಸುಹಾನಿ ದರ್ಗಾಕ್ಕೆ ಭೇಟಿ ನೀಡಿ ಮಾಲಾರ್ಪಣೆ, ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರದಲ್ಲಿ ಹಣವಿಲ್ಲವೆಂದು ಟೀಕೆ ಟಿಪ್ಪಣಿ ಮಾಡುವವರಿಗೆ ೫೦೦ಕೋಟಿ ಮಹಿಳೆಯರ ಉಚಿತವಾಗಿ ಪ್ರಯಾಣಿಸಿರುವುದೇ ಸಾಕ್ಷಿಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸರಕಾರದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ೫೦೦ಕೋಟಿ ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಶಾಸಕ ಅಶೋಕ ಮನಗೂಳಿ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ೧೩ಕೋಟಿಗೂ ಅಧಿಕ ಮಹಿಳೆಯರು ಇಲ್ಲಿಯವರೆಗೂ ಪ್ರಯಾಣ ಮಾಡಿದ್ದಾರೆ. ಹಣವಿಲ್ಲ, ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವವರಿಗೆ ಇದು ಉತ್ತರ. ನುಡಿದಂತೆ ನಡೆದ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿಕ್ಷಣವೂ, ಪ್ರತಿದಿನವೂ ಬಡವರ, ಹಿಂದುಳಿದವರ, ನಿರ್ಗತಿಕರ ಬಗ್ಗೆ ಸದಾ ಕಾಳಜಿ ಉಳ್ಳಂತಹ ಸರ್ಕಾರ ನಮ್ಮದಾಗಿದೆ ಎಂದರು.ಈ ವೇಳೆ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಸದಸ್ಯರಾದ ಮೋಷನ ಬೀಳಗಿ, ಪರಶುರಾಮ ಉಪ್ಪಾರ, ಶಿವಾನಂದ ಹಡಪದ, ರಜತ ತಾಂಬೆ, ಸುನಂದಾ ಯಂಪುರೆ, ಅಂಬರೀಶ ಚೌಗಲೆ, ಜಿಲ್ಲಾ ಕೆಡಿಪಿ ಸದಸ್ಯ…
ಸಿಂದಗಿಯಲ್ಲಿ ವಿದ್ಯಾಚೇತನ ಪ್ರಕಾಶನದಿಂದ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿತವಾದ ಸಾಹಿತ್ಯವೇ ನಿಜವಾದ ಮಕ್ಕಳ ಸಾಹಿತ್ಯ. ಈ ನಿಟ್ಟಿನಲ್ಲಿ ಸಿಂದಗಿ ತಾಲೂಕು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ರವಿವಾರ ಹಮ್ಮಿಕೊಂಡ ವಿದ್ಯಾಚೇತನ ಪ್ರಕಾಶನ ಸಿಂದಗಿ ಅವರು ಕೊಡಮಾಡುವ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ತಮ್ಮ ೮೫ನೇ ಇಳಿ ವಯಸ್ಸಿನಲ್ಲಿಯೂ ತಮ್ಮ ಪಿಂಚಣಿ ಹಣದಲ್ಲಿ ರಾಜ್ಯ ಮಟ್ಟದ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಮಕ್ಕಳ ಸಾಹಿತ್ಯ ಪುರಸ್ಕಾರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.ಹ.ಮ. ಪೂಜಾರ ಅವರ ಆಶೆಯಂತೆ ಇದೇ ಡಿಶೆಂಬರ ಒಳಗಾಗಿ ಪಟ್ಟಣದಲ್ಲಿ ಬಾಲಭವನ ನಿರ್ಮಾಣ ಕಾಮಗಾರಿಗೆ…
ಹಿರಿಹೊಳಿ ತಟದಲ್ಲಿ ಜಿಲ್ಲಾ ಮಟ್ಟದ ಹೆಜ್ಜೆಮೇಳ ಸಂಬ್ರಮ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ. ಜಾನಪದ ಅನುಭವ ಜನ್ಯವಾದುದು. ಮಾತೃ ವಾತ್ಸಲ್ಯ ಮತ್ತು ವಿಶ್ವಭ್ರಾತೃತ್ವದಲ್ಲಿ ಬೆಳೆದು ನಿಂತಿದೆ. ಸಾರ್ವಕಾಲಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸಿದ ಭಾರತದ ಜಾನಪದ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು.ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಮತ್ತು ಕೊಲ್ಹಾರ ತಾಲೂಕು ಘಟಕ ಹಾಗೂ ಬಳೂತಿಯ ಭಾವಿ ಬಸವೇಶ್ವರ ಹೆಜ್ಜೆ ಮೇಳದ ಸಹಯೋಗದಲ್ಲಿ ಕೊಲ್ಹಾರ ತಾಲೂಕಿನ ಬಳೂತಿಯ ಬೀಬೀ ಫಾತಿಮಾಳ ಹತ್ತು ದಿನದ ಜಾರತ ಉತ್ಸವ ಪ್ರಯುಕ್ತ ಹಮ್ಮಿಕೊಂಡ ” ಜಿಲ್ಲಾ ಮಟ್ಟದ ರಿವಾಯತ ಮತ್ತು ಹೆಜ್ಜೆಮೇಳ ಉತ್ಸವ ” ಉದ್ಘಾಟಿಸಿ ಮಾತನಾಡುತ್ತ, ಬದಲಾದ ಕಾಲಮಾನದಲ್ಲಿ ಭಾರತದ ಜಾನಪದ ಸಂಸ್ಕೃತಿ ಮೂಲ ರೂಪ ಕಳೆದುಕೊಳ್ಳುತ್ತಿದೆ.ಜಾನಪದ ಸಂಸ್ಕೃತಿ ಅಳಿದರೆ ದೇಶದ ಮೌಲ್ಯ ಕಡಿಮೆಯಾಗುತ್ತಿದೆ. ಬಳೂತಿ ಗ್ರಾಮದಲ್ಲಿ ಭಾವೈಕ್ಯ ಬೆಸೆಯುವ ಈ ರಿವಾಯತ ಉತ್ಸವ ನಾಡಿಗೆ ಮಾದರಿಯಾಗಿದೆ ಎಂದರು. ಮುಂದೊಂದು ದಿನ ಬಳೂತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ‘ವಾರ್ಷಿಕ ದಿನಾಚರಣೆ-೨೦೨೫’ ಕಾರ್ಯಕ್ರಮವನ್ನು ಇದೇ ದಿ. ೧೬ ರಂದು ಬೆಳಗ್ಗೆ ೧೦:೩೦ ಗಂಟೆಗೆ ವಿವಿಯ ನೂತನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ಮಹಿಳಾ ವಿವಿಯ ಸಂಸ್ಥಾಪಕ ಮಾಜಿ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಎಫ್. ಯಲಿಗಾರ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಸಿಂಡಿಕೇಟ್ ಸದಸ್ಯೆ ಡಾ.ರಿಹಾನಾ ಜಬೀನ್, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೂಡಗಿ ಎನ್‌ಟಿಪಿಸಿ ತನ್ನ ವ್ಯಾಪ್ತಿಯ ಐದು ಗ್ರಾಮಗಳ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಆಯಾ ಗ್ರಾಮ ಪಂಚಾಯತಿಗಳಿಗೆ ನೀಡಬೇಕಿದ್ದ ತೆರಿಗೆ ಹಣವನ್ನು ಕಳೆದ ಮೂರು ವರ್ಷಗಳಿಂದ ನೀಡದೇ ಸತಾಯಿಸುತ್ತಿರುವ ಪರಿಣಾಮ ಐದೂ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಪಂ ಅಧ್ಯಕ್ಷರು ಆರೋಪಿಸಿದರು. ಈ ಕುರಿತು ಸಮೀಪದ ಮುತ್ತಗಿ ಕ್ರಾಸ್ ಬಳಿಯ ಖಾಸಗಿ ಹೊಟೇಲ್‌ವೊಂದರಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ, ಎನ್‌ಟಿಪಿಸಿ ಪ್ರತಿ ವಾರ್ಷಿಕ ಕೂಡಗಿ ಗ್ರಾಪಂಗೆ ೨,೫೪,೯೦,೬೪೯ ರೂ., ಮಸೂತಿ ಗ್ರಾಪಂಗೆ ೯೯,೪೭,೦೦೦ ರೂ., ತೆಲಗಿ ಗ್ರಾಪಂಗೆ ೭೮,೩೩,೪೫೩ ರೂ., ಗೊಳಸಂಗಿ ಗ್ರಾಪಂಗೆ ೬೨,೧೫,೦೦೦ ರೂ., ಮುತ್ತಗಿ ಗ್ರಾಪಂಗೆ ೩,೧೬,೦೦೦ ರೂ., ಸೇರಿ ಒಟ್ಟು ವರ್ಷಕ್ಕೆ ೪,೯೮,೦೨,೧೦೨ ರೂ., ತೆರಿಗೆ ಪಾವತಿಸಬೇಕು. ಕಳೆದ ೨೦೨೨-೨೩, ೨೪ ಮತ್ತು ೨೫ ನೇ ಸಾಲಿನ ಮೂರು ವರ್ಷದ ಒಟ್ಟು ತೆರಿಗೆ ೧೪,೯೪,೦೬,೩೦೬…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರ್ವಜನಿಕರು ಹಾಗೂ ರೈತಸಮುದಾಯದ ಹಿತದೃಷ್ಟಿಯಿಂದ ಸರ್ಕಾರದ ವಿವಿಧ ಇಲಾಖೆಗಳನ್ನೊಳಗೊಂಡ ತಾಲ್ಲೂಕು ಆಡಳಿತ ಸೌಧವನ್ನು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಲಿ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಹೇಳಿದ್ದಾರೆ.ಪಟ್ಟಣದಲ್ಲಿ ಭಾನುವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ತಾಲ್ಲೂಕು ಆಡಳಿತ ಸೌಧಕ್ಕಾಗಿ ವಿಜಯಪುರ ರಸ್ತೆಯಲ್ಲಿಯ ಸರ್ವೆ ನಂ೫೧೨/*/೦೨ನ್ನು ಗುರುತಿಸಿ ಮಿಸಲಾಗಿಟ್ಟ ಜಾಗ ಎಂದು ನಾಮಫಲಕ ನಿಲ್ಲಿಸಲಾಗಿದೆ. ಆದರೆ ವಾಸ್ತವಿಕವಾಗಿ ಈ ಜಾಗ ಪಟ್ಟಣದಿಂದ ೨ ಕಿ.ಮೀ ದೂರದಲ್ಲಿದೆ. ಇಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನೊಳಗೊಂಡ ಸೌಧ ನಿರ್ಮಾಣವಾದರೆ ರೈತರು, ಮಹಿಳೆಯರು ಸಹಿತ ಸಾರ್ವಜನಿಕರು ತೆರಳಿ ತಮ್ಮ ಅಗತ್ಯ ಕಾರ್ಯ ಮಾಡಿಕೊಳ್ಳಲು ಹಣ ಹಾಗೂ ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ಆಡಳಿತ ಸೌಧವನ್ನು ಅಂಬೇಡ್ಕರ್ ವೃತ್ತದಲ್ಲಿರುವ ಪಶು ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಬೇಕು. ಇಗೀರುವ ಪಶುವೈದ್ಯಕೀಯ ಆಸ್ಪತ್ರೆ ವಿಶಾಲ ಜಾಗ ಹೊಂದಿದ್ದು ಪಟ್ಟಣದ ಮಧ್ಯೆ ಭಾಗದಲ್ಲಿದೆ. ಇದು ಆಡಳಿತಸೌಧಕ್ಕೆ ಎಲ್ಲ ರೀತಿಯಿಂದಲೂ ಸೂಕ್ತ ಜಾಗವಾಗಿದೆ.ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂಡಿ ರಸ್ತೆಯಲ್ಲಿ ಅತಿಕ್ರಮಣಗೊಂಡ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗಿರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಹೇಳಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಂದಗಿ ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಬೋಧನೆ ಮಾಡುವದರೊಂದಿಗೆ ರಾಜ್ಯದಲ್ಲಿ ಹೆಸರುವಾಸಿಯಾಗಿ ಶೈಕ್ಷಣಿಕ ಕಾಶಿ ಎಂದನೆಸಿಕೊಂಡಿದೆ. ಹಾಗೂ ದಿನದ ೨೪ಗಂಟೆಯು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು, ಮುಂಬೈ, ಚೆನೈ ವಾಣಿಜ್ಯ ಕಾರಿಡಾರ ಚತುಷ್ಕೋನ ರಸ್ತೆ ಸಿಂದಗಿ ನಗರಕ್ಕೆ ಸಮೀಪದಲ್ಲಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.ರಾಷ್ಟ್ರೀಯ ಹೆದ್ದಾರಿ-೫೦ ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಶೇಡಬಾಳದಿಂದ ಶಾಹಾಬಾದ ರೇಲ್ವೇ ಮಾರ್ಗವು ಮುಂಬರುವ ದಿನಮಾನಗಳಲ್ಲಿ ನೂತನ…
ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಡಿ.ಕೆ.ಶಿವಕುಮಾರ ಅವರು ಸಂಘಟನಾ ಚತುರರಾಗಿದ್ದು ಮುಖ್ಯಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಹಾಗಾಗಿ ಕಾಂಗ್ರೇಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಬಲ ಸಮುದಾಯದವರೂ ಆಗಿದ್ದಾರೆ. ಅವರ ಬೆನ್ನಿಗೆ ಹಲವು ಶಾಸಕರೂ ಇದ್ದಾರೆ. ಅದನ್ನು ಮನಗಂಡು ಕಾಂಗ್ರೇಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.ಹಿಂದುಳಿದಿರುವ ಗಡಿ ತಾಲೂಕು ಅಭಿವೃಧ್ಧಿ ಮಾಡಲು ಇಂಡಿಗೆ ಸಚಿವ ಸ್ಥಾನದ ಅವಶ್ಯಕತೆ ಇದೆ. ಸ್ವಾತಂತ್ರಾö್ಯ ನಂತರ ಒಮ್ಮೆಯೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯಾದರೂ ಸಚಿವ ಸ್ಥಾನ ವಂಚಿತ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು. ನಂಜುಂಡಪ್ಪ ವರದಿಯಂತೆ ಗಡಿ ಬಾಗದ ಇಂಡಿ ತಾಲೂಕು ಅತೀ ಹಿಂದುಳಿದ ಪ್ರದೇಶವಾಗಿದೆ. ಹೆಚ್ಚಿನ ಅಭಿವೃಧ್ಧಿಗೆ ಸಚಿವ ಸ್ಥಾನದ ಅವಶ್ಯಕತೆ ಇದ್ದು ಇಂಡಿ ಕ್ಷೇತ್ರಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಚಿತ್ರರಂಗದ ಮೇರು ಬಿ.ಸರೋಜಾದೇವಿ ನಿಧನಕ್ಕೆ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಂತಾಪ ಸಂದೇಶ ನೀಡಿರುವ ಸಚಿವರು, ಭಾರತೀಯ ಚಿತ್ರರಂಗದಲ್ಲಿ ಬಹುಭಾಷಾ ತಾರೆಯಾಗಿ ಕನ್ನಡದ ಕೀರ್ತಿ ಹೆಚ್ಚಿಸಿದ್ದ ಸರೋಜಾದೇವಿ ಅವರು, ಕನ್ನಡ ಚಿತ್ರರಂಗಕ್ಕೆ ಮಹೋನ್ನತ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.ಸರೋಜಾದೇವಿ ಅವರು ಮನೋಜ್ಞ ಅಭಿನಯ ನೀಡಿದ್ದ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪಾತ್ರಕ್ಕೆ ಜೀವತುಂಬಿದ್ದನ್ನು ಕನ್ನಡಿಗರ ಹೃದಯ ಗೆದ್ದಿದ್ದರು ಎಂದು ಸ್ಮರಿಸಿದ್ದಾರೆ.ಸರೋಜಾದೇವಿ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದ್ದು, ಕನ್ನಡಿಗರ ಹೃದಯದಲ್ಲಿ ಅವರು ಸದಾ ಅಮರವಾಗಿದ್ದಾರೆ ಎಂದಿದ್ದಾರೆ.
