ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪಂಚಮಸಾಲಿ ಸಮಾಜದಿಂದ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಮತ್ತು ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ಎನ್. ಪಾಟೀಲ ಹೇಳಿದರು.
ನಗರದ ಮೈಗೂರ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮಾ ವಿವಿಧೋದ್ದೇಶಗಳ ಸಹಕಾರ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲೂಕಾ ವೀರಶೈವ ಪಂಚಮಸಾಲಿ ಸಂಘ ಹಾಗೂ ರಾಣಿ ಚೆನ್ನಮ್ಮಾ ವಿವಿಧೋದ್ದೇಶಗಳ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಸೆ.14 ರಂದು ಜಮಖಂಡಿ ತಾಲೂಕಾ ಪಂಚಮಸಾಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಮೈಗೂರ ರಸ್ತೆಯಲ್ಲಿರುವ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ 15ಸಾವಿರ, ದ್ವಿತೀಯ 10 ಸಾವಿರ, ತೃತಿಯ 5ಸಾವಿರ ನಗದು ಭಹುಮಾನ ನೀಡಲಾಗುವದು ಎಂದರು.
ಸಮಾಜದ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ನಕಲು ಪ್ರತಿ ಹಾಗೂ ಭಾವಚಿತ್ರದೊಂದೊಗೆ ವಿಳಾಸ ದೂರವಾಣಿ ಸಂಖ್ಯೆಯನ್ನು ಮೈಗೂರ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮಾ ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ ಸೆ.6ರ ಒಳಗಾಗಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮಾ ಬ್ಯಾಂಕಿನ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಪಿ ಎಂ. ಝುಲಪಿ, ರಾಜಶೇಖರ ಕೋವಳ್ಳಿ, ಅಪ್ಪಾಸಾಬ ಚೌಗಲಾ, ಮಹಾಂತೇಶ ನರಸನಗೌಡರ, ಆರ್.ಎಸ್. ಬಿರಾದಾರ, ಬಸವರಾಜ ಬಳಗಾರ, ಪ್ರಭು ಜನವಾಡ, ಕಾಡಪ್ಪ ಗಡಾದ, ಸಂಗು ಐನಾಪೂರ, ಚಂದ್ರಶೇಖರ ಆಲೂರ ಇತರರು ಇದ್ದರು.