ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕು ಬಣಜಿಗ ಕ್ಷೇಮಾಭಿವೃದ್ದಿ ಸಂಘದ ನೂತನ ಪದಾದಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸೆ.೨೮ ರಂದು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪಟ್ಟಣದ ಕಿಲ್ಲಾ ಹೊಸಮಠದಲ್ಲಿ ಬಣಜಿಗ ಸಮಾಜದ ತಾಲೂಕು ಘಟಕದ ನೂತನ ಅಧ್ಯಕ್ಷ ಅಶೋಕ ಚಟ್ಟೇರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾಜ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು, ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲು ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರಕ್ಕೆ ೨೦೨೩-೨೪ ಮತ್ತು ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ ಶೇ೯೦ ಪಲಿತಾಂಶ ಪಡೆದ ವಿದ್ಶಾರ್ಥಿಗಳ ವಿವರಗಳನ್ನು ಸ೧೫ ರ ಒಳಗಾಗಿ ಸಮಾಜದ ಸದಸ್ಶರಾದ ಎಮ್.ಜಿ.ಹೊಕ್ರಾಣಿ ೯೪೪೯೫೭೮೬೯೬, ಲೋಹಿತ ನಾಲತವಾಡ ೭೭೬೦೧೭೧೭೦೦, ಚನ್ನಬಸವರಾಜ ಅಂಗಡಿ ೬೩೬೦೭೩೬೮೮೦, ಜಗದೀಶ ಲಕ್ಷಟ್ಟಿ ೯೦೬೦೧೦೭೦೭೭, ಶಿವರಾಜ ಹುರಕಡ್ಲಿ ೯೮೮೬೯೮೫೮೩೫, ಇವರ ಬಳಿ ನೊಂದಾಯಿಸಲು ಮತ್ತು ೨೦೨೨-೨೩ ಹಾಗೂ೨೦೨೩-೨೪ ರ ಸಾಲಿನ ಸರಕಾರಿ ಮತ್ತು ಅರೆ ಸರಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸಮಾಜ ಬಾಂಧವರು ತಮ್ಮ ವಿವರಗಳೊಂದಿಗೆ ಸಮಾಜದ ಮುಖಂಡ ಬಸವರಾಜ ನಾಲತವಾಡ ೮೬೬೦೮೧೩೭೩೬, ಸುರೇಶ ಮಾಟಲದಿನ್ನಿ ೯೪೮೧೦೮೧೫೩೭, ಬಿ.ವಿ.ಕೋರಿ ೯೯೪೫೭೭೯೬೩೦, ಸಂಗಣ್ಣ ನಾಶಿ ೯೪೪೮೫೪೧೧೪೬ ಇವರುಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸುವಂತೆ ಸಂಘದ ಕಾರ್ಯದರ್ಶಿ ರಾಜು ಬಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.