Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕ್ರೀಡಾ ಸಾಮಗ್ರಿಗಳನ್ನು ವಕೀಲ ಪ್ರಕಾಶ ಉಡುಪಿಕರ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಮಕ್ಕಳಿಗೆ ನಿತ್ಯ ದೈಹಿಕ ಚಟುವಟಿಕೆ ಮಾಡಿಸುವುದರಿಂದ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಯೋಗಾಸನ ಪ್ರಾಣಾಯಾಮ ಕಬಡ್ಡಿ ಮತ್ತು ಗುಂಪು ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪಾಲ್ಗೊಳ್ಳುವಂತೆ ದೈಹಿಕ ಶಿಕ್ಷಕರು ಪ್ರೇರಣೆ ನೀಡುವುದು ಅವಶ್ಯವಾಗಿದೆ ಹಾಗಾದಾಗ ಮಾತ್ರ ಭವಿಷ್ಯದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.ಇದೆ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ ಜಿ ದೇಶಪಾಂಡೆ, ಸದಸ್ಯರಾದ ವಿಶಾಲ ದರಬಾರ, ಆದಿತ್ಯ ದರಬಾರ, ಸಮನ್ವಯ ಅಧಿಕಾರಿ ಡಾ. ವಿ ಬಿ ಗ್ರಾಮ ಪುರೋಹಿತ, ಪಾರಥ ದರಬಾರ, ಪ್ರಧಾನ ಗುರುಮಾತೆ ರೂಪಾ ತೋಳ, ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ಜಿ.ಎಚ್.ಮಣೂರ, ಟಿ.ಆರ್.ಕುಲಕರ್ಣಿ, ಸತೀಶ ಕುಲಕರ್ಣಿ ಉಪಸ್ಥಿತರಿದ್ದರು.ಬೋಧಕ ಮತ್ತು…
ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಅಮವಾಸ್ಯೆಗೆ ಗುಳ್ಳವ್ವನ ಆಗಮನ ಉದಯರಶ್ಮಿ ದಿನಪತ್ರಿಕೆ ವರದಿ: ಇಲಾಹಿ ಇ.ಜಮಖಂಡಿಚಿಮ್ಮಡ: ಮಣ್ಣೆತ್ತಿನ ಅಮವಾಸ್ಯೆ ಬಂತೆಂದರೆ ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ ಹೆಣ್ಣು ಮಕ್ಕಳ ವಿಶೇಷ ಹಬ್ಬ ಗುಳ್ಳವ್ವನ ಆಗಮನ.ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಈ ಅಮವಾಸ್ಯೆ ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ. ಮುಂಗಾರಿನ ಮೇಘರಾಜನ ದರ್ಶನದಿಂದ ಧರೆ ನವ ವಧುವಿನಂತೆ ಸಿಂಗಾರಗೊಂಡು ಎಲ್ಲೆಡೆ ಹಸಿರಿನಿಂದ ಕಂಗೊಳಿಸಿರುತ್ತಾಳೆ, ಸಕಲ ಜೀವ ಸಂಪತ್ತಿಗೆ ಆಸರೆಯಾಗಿರುವ ಪ್ರಕೃತಿಮಾತೆ ಆಷಾಢ ಮಾಸದಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಗುಳ್ಳವ್ವನ ಪ್ರತಿರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ಭಾಗದಲ್ಲಿ ಅದರ ಪೂಜೆ ಹೆಣ್ಣು ಮಕ್ಕಳಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಠಿಸಿರುತ್ತದೆ. ಮನ್ನೆತ್ತಿನ ಅಮವಾಸ್ಯೆ ನಂತರ ನಾಲ್ಕು ವಾರಗಳವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ ಮಹಿಳೆಯರು ಕುಂಬಾರ ಓಣಿಗೆ ಹೋಗಿ ಅಲ್ಲಿ ತಯಾರಿಸಿದ ಹಲವು ಆಕಾರಗಳ ಗುಳ್ಳವ್ವನ ಕಲಾಕೃತಿಗಳಲ್ಲಿ ತಮಗೆ ಬೇಕಾದ…
ಮಹಿಳಾ ವಿವಿ ಸಂಸ್ಥಾಪಕ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವು ಮಾಡುವ ಕೆಲಸಗಳು ಕಾಲಾನಂತರದಲ್ಲಿ ಮರೆಯಾಗಬಹುದಾದರೂ, ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ಮಹಿಳಾ ವಿವಿಯ ಸಂಸ್ಥಾಪಕ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ವಾರ್ಷಿಕ ದಿನಾಚರಣೆ-೨೦೨೫’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳಾ ವಿಶ್ವವಿದ್ಯಾನಿಲಯ ಕೇವಲ ೧೦ ವಾರಗಳ ಅಂತರದಲ್ಲಿ ಸ್ಥಾಪಿತವಾಯಿತು ಎಂಬುದು ಇತಿಹಾಸದಲ್ಲೇ ವಿಶಿಷ್ಟ ಸಾಧನೆ. ವಿಶ್ವವಿದ್ಯಾನಿಲಯ ಸ್ಥಾಪನೆಯ ಆದೇಶ ನನಗೆ ದೊರೆತಾಗ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮಹತ್ವಪೂರ್ಣ ಗುರಿಯನ್ನು ಸಾಧಿಸಬೇಕು ಎಂಬ ದೃಢ ನಿಶ್ಚಯದೊಂದಿಗೆ ಕಾರ್ಯಪ್ರವೃತ್ತನಾದೆ. ಯಾವ ದೇಶದಲ್ಲಿ ಮಹಿಳೆಗೆ ಶಿಕ್ಷಣ ಸಿಗುವುದಿಲ್ಲವೋ, ಆ ದೇಶದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮಹಿಳೆಯರಿಗಾಗಿ, ಅವರ ಬೆಳವಣಿಗೆಗಾಗಿ ಸ್ಥಾಪಿತ ಈ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಸಾವಿರಾರು ಮಹಿಳೆಯರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಪ್ರಕಾಶ ಡೋಣೂರಮಠ ಇವರು ಕರ್ನಾಟಕ ರಕ್ಷಣಾ ವೇದಿಕೆಯ ದೇವರಹಿಪ್ಪರಗಿ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಅನುಮತಿ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಎಲ್ಲ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಲಚ್ಯಾಣ ಡಿ.ಎಡ್,ಕಾಲೇಜು ಪ್ರಾಚಾರ್ಯ ಎಸ್.ಎಮ್.ಶೆಟ್ಟಣ್ಣವರ ಹೇಳಿದರು.ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ ಸೋಮವಾರ ಜರುಗಿದ ೧೯೯೪-೯೫ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಾವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಅಲಂಕರಿಸುವುದು ಶಿಕ್ಷಕನಿಗೆ ಸಿಗುವ ಅತೀ ದೊಡ್ಡ ಗೌರವವಾಗಿದೆ. ಶಿಕ್ಷಕನ ನಿಜವಾದ ಸಂಪತ್ತು ಅವರ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವ, ಉನ್ನತ ಸ್ಥಾನ ಪಡೆದಾಗ ಶಿಕ್ಷಕರಿಗೆ ಆಗುವ ಸಂತೊಷಕ್ಕೆ ಯಾವುದೇ ಸಾಟಿ ಇಲ್ಲ ಎಂದರು.ನಿವೃತ್ತ ಪ್ರಾಚಾರ್ಯ ಎಸ್.ಎಮ್.ಮಿರ್ಜಿ ಹಾಗೂ ಬಿ.ಕೆ.ಪಾಟೀಲ ಮಾತನಾಡಿ, ಸುಮಾರು ೩೦ ವರ್ಷಗಳ ನಂತರ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು ಅವರಿಗೆ ವಂದಿಸುವ ಕಾರ್ಯ ಶ್ಲಾಘನೀಯ. ಇಂದು ಏನಾದರು ಗಳಿಸಿದ್ದರೆ ಅದೆಲ್ಲವು ಸಮಾಜದಿಂದ ಹಾಗಾಗಿ ಸಮಾಜದಿಂದ ಪಡೆದದ್ದನ್ನು ಮತ್ತೆ ಸಮಾಜದ ಉತ್ತಮ ಕಾರ್ಯಕ್ಕೆ ನೀಡಬೇಕು ಎಂದರು.ನಿವೃತ್ತಶಿಕ್ಷಕ ಬಿ.ಸಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಎಸ್.ಎಸ್.ಯರನಾಳ, ಬಿ.ಜಿ.ಅರಳಿಮಟ್ಟಿ, ಎಸ್.ಎಮ್.ಕೌಲಗಿ, ಎ.ಕೆ.ಭತಗುಣಕಿ, ಎಸ್.ವ್ಹಿ.ಹದನೂರ(ಕೋಟಿನ), ಎಮ್.ಕೆ.ನಾಯ್ಕೋಡಿ, ಜೆ.ಆರ್.ಬಿರಾದಾರ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಹೊಸನಗರದ ದುರ್ಗಾಂಬಾ ದೇವಿಯ ಜಾತ್ರಾ ಮಹೋತ್ಸವ ಭಕ್ತಿ ಭಾವದೊಂದಿಗೆ ಅದ್ಧೂರಿಯಾಗಿ ಜರುಗಿತು.ಪಟ್ಟಣದ ಹೊಸನಗರದಲ್ಲಿನ ದುಗಾಂಬಾದೇವಿಯ ಆಷಾಢ ಮಾಸದ ಮೊದಲ ಮಂಗಳವಾರ ಜರುಗುವ ಸಾಂಪ್ರದಾಯಿಕ ಜಾತ್ರಾ ಮಹೋತ್ಸವಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು.ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ದೇವಿಯ ಪ್ರತಿಮೆಗೆ ಶಾಸ್ತ್ರೋಕ್ತ ಪೂಜೆ ಪುನಸ್ಕಾರಗಳು ಆರಂಭಗೊಂಡವು. ನಂತರ ದೇವಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.ಡೊಳ್ಳು ಸಹಿತ ವಿವಿಧ ವಾದ್ಯವೃಂದದೊಂದಿಗೆ ಹೊರಟ ಮೆರವಣಿಗೆ ಹಾಗೂ ಉತ್ಸವಕ್ಕೆ ಕುದುರೆ ಕುಣಿತ ವಿಶೇಷ ಮೆರಗು ತಂದಿತು. ಮೆರವಣಿಗೆ ವಠಾರ, ಬೇವಿನಕಟ್ಟೆ, ಪತ್ತಾರಕಟ್ಟಿ, ಮೇನ್‌ಬಜಾರ್ ಮಾರ್ಗವಾಗಿ ಪ್ರಮುಖ ಬೀದಿಗಳ ಮೂಲಕ ತೆರಳಿ ಸಾಯಂಕಾಲ ಹೊಸನಗರದ ಮೂಲದೇವಸ್ಥಾನ ತಲುಪಿತು.ಮಹೋತ್ಸವದಲ್ಲಿ ತುಕಾರಾಮ ಸುಗತೇಕರ, ಅಪ್ಪು ಗೋಂಧಳಿ, ರಾಮ ವಾಗ್ಮೋಡೆ, ಸಿದ್ದಣ್ಣ ವಾಗ್ಮೋಡೆ, ಸುರೇಶ ಭೀಸೆ, ವಿಠ್ಠಲ ಶಿಂಧೆ, ಲಕ್ಷ್ಮಣ ಸುಗತೇಕರ, ಯಲ್ಲಪ್ಪ ಸುಗತೇಕರ ಸೇರಿದಂತೆ ಗೋಂಧಳಿ ಸಮುದಾಯದ ಪ್ರಮುಖರು, ಮಹಿಳೆಯರು ಹಾಗೂ ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ದಿ.18 ಶುಕ್ರವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ಅಂದು ಬೆ. 9ಗಂ. ಸಚಿವರ ಗೃಹ ಕಚೇರಿಯಲ್ಲಿ ದಿ ನ್ಯೂ ಯಾರ್ಕ್ ಟೈಮ್ಸ್ ವರದಿಗಾರರೊಂದಿಗೆ ಸಂದರ್ಶನ ನೀಡಲಿದ್ದಾರೆ.ಮ.12ಗಂ. ಡಿಸಿಸಿ ಬ್ಯಾಂಕ್ ಹತ್ತಿರ ಆಲಕುಂಟೆ ನಗರದಲ್ಲಿ ಆಯೋಜಿಸಲಾದ ಉತ್ತರ ಕರ್ನಾಟಕ ಶಾಮಿಯಾನ ಸಂಘದ ವತಿಯಿಂದ 4ನೇ ಮಹಾ ಅಧಿವೇಶನ ಹಾಗೂ ಮಳಿಗೆಗಳ ಪ್ರದರ್ಶನ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.ಮ.1ಗಂ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.ನಂತರ ಮ.3ಗಂ. ತಿಕೋಟಾ ಕೊರಬುಗಲ್ಲಿಯಲ್ಲಿ ಮಲಕನದೇವರಹಟ್ಟಿ ಇಟರಾಯನಗುಡಿ ಕೂಡು ರಸ್ತೆಯಿಂದ ಸಿದ್ದಾಪುರ ಕೆ- ತಿಕೋಟಾ ಕೂಡು ರಸ್ತೆ ವರೆಗೆ ಅಂದಾಜು ರೂ. 495 ಲಕ್ಷ ವೆಚ್ಚದಲ್ಲಿ 5.2ಕಿ.ಮೀ ವ್ಹಾಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ. ಹಾಗೂ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ.ಸಿ-2 ರಿಂದ ಜಂಕ್ಷನ್ ವರೆಗೆ ವ್ಹಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ ಅಂದಾಜು ರೂ.495…
ಆಕ್ಸಿಯಮ್ -4 ಮಿಷನ್ ಯಶಸ್ವಿ | ಡ್ರ್ಯಾಗನ್ ನೌಕೆ ಮೂಲಕ ಭೂಮಿಗೆ ಮರಳಿದ ಶುಕ್ಲಾ | ಕೋಟ್ಯಾಂತರ ಕನಸುಗಳಿಗೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ ನ್ಯೂಯಾರ್ಕ್: ಯಶಸ್ವಿ ಬಾಹ್ಯಾಕಾಶ ಯಾನ ಮುಕ್ತಾಯಗೊಳಿಸಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಅವರಿದ್ದ ತಂಡ ಇಂದು ಡ್ರ್ಯಾಗನ್ ನೌಕೆಯ ಮೂಲಕ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ.”ನಾವು ಮನೆಗೆ ಮರಳಿದ್ದೇವೆ” ಆಕ್ಸಿಯಮ್ -4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಜುಲೈ 15 ರಂದು ಪೆಸಿಫಿಕ್ ಮಹಾಸಾಗರದ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಡ್ರ್ಯಾಗನ್ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆ ಇಳಿದ ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3.02 ಕ್ಕೆ ಆಕ್ಸಿಯಮ್ ಸ್ಪೇಸ್‌ನ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ತಿಳಿಸಿದ ಸಂದೇಶ ಇದಾಗಿದೆ.ಪೆಗ್ಗಿ ವಿಟ್ಸನ್ ಸಂದೇಶಕ್ಕೆ ಕಮಾಂಡ್ ಕೇಂದ್ರ “ಮನೆಗೆ ಸ್ವಾಗತ” ಎಂದು ಉತ್ತರಿಸಿದೆ. ಇದಕ್ಕೆ ಪೆಗ್ಗಿ ಉತ್ತರಿಸುತ್ತಾ, “ಮಹಾ ಸವಾರಿ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಧನ್ಯವಾದಗಳು.” ಗ್ರೇಸ್‌ನಲ್ಲಿರುವ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಆಕ್ಸಿಯಮ್ -4 ವಾಣಿಜ್ಯ ಬಾಹ್ಯಾಕಾಶ…
ಲೇಖನ- ಡಾ. ಶಶಿಕಾಂತ ಪಟ್ಟಣ ರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರು ನಿರ್ಗಮಿಸಿದ ಮೇಲೆ ಅವರ ಹೆಸರಿನಲ್ಲಿ ಶೈವರು ವೈದಿಕರು ಸಾಹಿತಿಗಳು ಈಗ ರಾಜಕಾರಣಿಗಳು ಕಾವಿಗಳು ಬಸವ ತತ್ವವನ್ನು ತಮ್ಮ ಮನಸ್ಸಿಗೆ ಬಂದಂತೆ ಜಗ್ಗಾಡಿ ವ್ಯಾಖ್ಯಾನ ಮಾಡುತ್ತಾ ಬದುಕುತ್ತಿದ್ದಾರೆ.ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಸರ್ವತಂತ್ರ ಸ್ವತಂತ್ರ ಧರ್ಮವಾಗಿದೆ. ಲಿಂಗಾಯತ ಧರ್ಮದ ಉಲ್ಲೇಖವು ಸಿ ಪಿ ಬ್ರೌನ್ ಜಾನ್ ಡಿ ಮೆನ್ ಆರ್ಥರ್ ಮೈಲ್ಸ್ ನ್ಯಾಯಮೂರ್ತಿ ಪ್ರೊ ಶಿ ಶಿ ಬಸವನಾಳ ಎಂ ಆರ್ ಸಾಖರೆ ಪಿ ಬಿ ಗಜೇಂದ್ರಗಡಕರ ಡಾ ಎಂ ಎಂ ಕಲಬುರ್ಗಿ ಮುಂತಾದವರ ಲೇಖನಗಳಿಂದ ಕಂಡು. ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಗೆ ಎರಡು ಶತಮಾನವೇ ಕಳೆದು ಹೋಗಿವೆ. ಲಿಂಗಾಯತ ಧರ್ಮದ ಬೇಡಿಕೆ ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಾಗಿದೆ. 2018 ರಲ್ಲಿ ಶ್ರೀಮಾನ್ ಸಿದ್ದರಾಮಯ್ಯನವರ ಸರಕಾರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಸಮಿತಿ ರಚಿಸಲಾಯಿತು. ವೀರಶೈವ ಮತ್ತು ಲಿಂಗಾಯತ…
ಲೇಖನ- ವಿಜಯಲಕ್ಷ್ಮಿ ಮೂರ್ತಿ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಆ ದಿನ ಟೆರೇಸ್ ನಲ್ಲಿ ಮುದ್ದುರಾಮನ ಪುಸ್ತಕ ಓದುತ್ತಾ ಕುಳಿತಿದ್ದ ಸಮಿತಳಿಗೆ ಮನೆಯಲ್ಲಿ ಆದ ಗಲಾಟೆಯಿಂದ ಮನಸ್ಸು ಭಾರವಾಗಿತ್ತು.ಓದುತ್ತಾ ಅವಳಿಗೆ ಮುದ್ದುರಾಮನ ಪುಸ್ತಕದಲ್ಲಿ ಸಿಕ್ಕ ಈ ಚೌಪದಿ ಅವಳಿಗೆ ಅವಳ ಮನಸ್ಸಿನಲ್ಲಿ ಆಗುವ ಒಂದು ಗೊಂದಲಕ್ಕೆ ವಿರಾಮ ಹಾಕುವಂತೆ ಅವಳನ್ನು ಪ್ರೇರೇಪಿಸಿತ್ತು.ಕಥೆ ಓದುವ ಹುಚ್ಚು ಸಮಿತಳಿಗೆ ಮೊದಲಿನಿಂದಲೂ ಇತ್ತು. ಯಾವ ಕಥೆ ಆಗಲಿ ಅವಳಿಗೆ ಓದುವುದು ಮುಖ್ಯ. ಮಹಾ ಕಾವ್ಯಗಳಾದ ಮಹಾಭಾರತ ರಾಮಾಯಣದಂತಹ ಕಥೆ ಅವಳಿಗೆ ಅಚ್ಚು ಮೆಚ್ಚು. ರಾಮಾಯಣದಲ್ಲಿ ರಾಮನ ಭಾತ್ರ್ ಪ್ರೇಮ ಅವಳನ್ನು ಮೂಕವಾಗಿಸಿತ್ತು. ರಾಮನಂತೆ ತನ್ನ ಗಂಡ ಸುಶಾಂತ ತನ್ನ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಆಸೆ ಅವಳ ಮನದಲ್ಲಿ ಇತ್ತು. ಮೊದಲನೆಯವನಾಗಿ ಹುಟ್ಟಿದ ಸುಶಾಂತ ತುಂಬಾ ಮೊಂಡು ಬುದ್ಧಿಯವನಾಗಿದ್ದ. ತನ್ನದೇ ಹಠ ನಡೆಯಬೇಕೆಂಬ ಮನಸ್ಸು ಅವನದು.ಮದುವೆಯಾಗಿ ಬಂದಳು ಸಮಿತ ಈ ಕೂಡು ಕುಟುಂಬಕ್ಕೆ. ಅತ್ತೆಯ ಹಾಗೆ ತಾನೂ ಈ ಮನೆಯನ್ನು ಸಂಬಾಳಿಸಬೇಕು ಅಂದುಕೊಂಡಿದ್ದಳು. ತನ್ನ ತೌರು…
