Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀನುಗಾರಿಕೆ ಇಲಾಖೆಯಿಂದ ೨೦೨೫-೨೬ನೇ ಸಾಲಿನ ರಾಜ್ಯ ವಲಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ನಾಲ್ಕು ಚಕ್ರ ವಾಹನ ಖರೀದಿಸಲು ಸಹಾಯಧನ ಪಡೆಯಲು ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಮೀನುಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.೫೦ರಷ್ಟು ಅಥವಾ ಗರಿಷ್ಠ ೩ ಲಕ್ಷ ರೂಪಾಯಿ ಆರ್ಥಿ ನೆರವು ನೀಡಲಾಗುವುದು. ಅರ್ಜಿಯನ್ನು ಸೆಪ್ಟಂಬರ್ ೧೫ರೊಳಗಾಗಿ ಜಿಲ್ಲೆಯ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ, ಬಬಲೇಶ್ವರ, ತಿಕೋಟಾ, ದೇವರಹಿಪ್ಪರಗಿ, ಸಿಂದಗಿ ಆಲಮೇಲ, ಇಂಡಿ ಹಾಗೂ ಚಡಚಣ ತಾಲೂಕಿನ ಮೀನುಗಾರರು ವಿಜಯಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊ: ೯೮೪೫೯೨೭೧೧೦ ಹಾಗೂ ಮುದ್ದೇಬಿಹಾಳ, ತಾಳಿಕೋಟೆ, ನಿಡಗುಂದಿ, ಕೊಲ್ಹಾರ, ಬ.ಬಾಗೇವಾಡಿ ತಾಲೂಕಿನ ಮೀನುಗಾರರು, ಮುದ್ದೇಬಿಹಾಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊ: ೯೮೮೦೨೧೦೫೦೫ ಸಂಖ್ಯೆಎ ಸಂಪರ್ಕಿಸುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಡಾ.ಆನಂದ.ಕೆ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೬ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ‍್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮುಂತಾದ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ., ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು ಮೂರು ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾಮಟ್ಟದಲ್ಲಿ ವಿಜೇತರಿಗೆ ಪ್ರಥಮ ೩ ಸಾವಿರ ರೂ. ದ್ವಿತೀಯ ೨ ಸಾವಿರ ರೂ. ಮತ್ತು ತೃತೀಯ ೧ ಸಾವಿರ ರೂ.ಬಹುಮಾನ ನೀಡಲಾಗುವುದು.ಪ್ರೌಢ ಶಾಲಾ ವಿಭಾಗದಲ್ಲಿ: ಸ್ವಚ್ಚತೆಯ ಪಾಠ-ಗಾಂಧೀಜಿಯವರ ಸಂದೇಶ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ ಹಾಗೂ ಗಾಂಧೀಜಿಯವರ ಸ್ವಾತಂತ್ರ‍್ಯದ ಕನಸು-ನನ್ನ ಕಲ್ಪನೆ. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಒಂದು ದೇಶ ಅಭಿವೃದ್ದಿ ಯಾಗಬೇಕಾದರೆ ಶೈಕ್ಷಣಿಕ ಬೆಳವಣಿಗೆ ಕಾರಣ. ಪ್ರಪಂಚದ ಅನೇಕ ದೇಶಗಳು ಬಹಳ ವಿಭಿನ್ನವಾದಂತಹ ಶಿಕ್ಷಣದ ಸ್ವರೂಪಗಳು ಹಾಗೂ ಶಿಕ್ಷಣದ ನೀತಿಗಳನ್ನು ಹೊಂದಿ ವಿಭಿನ್ನವಾದ ಶಿಕ್ಷಣ ನೀಡುತ್ತಿವೆ. ಆದರೆ ನಮ್ಮ ದೇಶದಲ್ಲಿ ವಿಭಿನ್ನವಾದ ಶಿಕ್ಷಣಕ್ಕೆ ನಮ್ಮ ಪೂರ್ವಜರು ಸಂಸ್ಕಾರದ ನೀತಿಗಳನ್ನು ಕೊಟ್ಟಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಝಳಕಿ ಗ್ರಾಮದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ ಆವರಣದಲ್ಲಿ ನಡೆದ ೨೦೨೫-೨೬ ನೇ ಸಾಲಿನ ಕ್ರೀಡಾ,ಸಂಸ್ಕೃತಿಕ ಎನ್ ಎಸ್ ಎಸ್ ಚಟುವಟಿಕೆ ಹಾಗೂ ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್ ವಿವಿಧ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಪಾಲಕರು ಮಕ್ಕಳ ಶಿಕ್ಷಣದ ಕಡೆಗೆ ನೀಗಾ ವಹಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವ ಕಾರಣ ಆ ವಸ್ತುವನ್ನು ಯಾವರೀತಿಯಲ್ಲಿ ನಮ್ಮ ಮಕ್ಕಳು ಬಳಕೆ ಮಾಡುತ್ತಾರೆ ಎಂದು ಪೋಷಕರು ನಿಗಾ ವಹಿಸಬೇಕು, ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದರು.ಮುಖ್ಯ ಅತಿಥಿ ಸಾಹಿತಿ ಸಿ ಎಮ್ ಬಂಡಗರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಬಿ ರೋಶನ್ ಪ್ರಕಾಶನ ಬೋರಗಿ ಇವರು ಪೊಲೀಸ್ ಕಲಾಸಂಗಮದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೃಷ್ಣರಾಜ ಪರಿಷತ್ ಮಂದಿರ, (ಕ.ಸಾ.ಪ) ಬೆಂಗಳೂರು ಸ್ಥಳದಲ್ಲಿ ಆ.30 ರಂದು ಸಂತೋಷ ಹೆಗಡೆ, ಮಾನ್ಯ ನಿವೃತ್ತ ಲೋಕಾಯುಕ್ತ ನ್ಯಾಯಾಧೀಶರು ಬೆಂಗಳೂರು, ಚಿನ್ನಾರಿಮುತ್ತಾ ಖ್ಯಾತಿಯ ವಿಜಯ ರಾಘವೇಂದ್ರ, ಚಲನಚಿತ್ರ ಸಾಹಿತ್ಯ ರಚನಕಾರರಾದ ನಾಗೇಂದ್ರ, ಉಮಾರಾಣಿ, ಎ.ಸಿ.ಪಿ ಬೆಂಗಳೂರು ವಲಯ, ಹಾಗೂ ಮೌಲಾಲಿ ಕೆ. ಆಲಗೂರ ಉಪಸ್ಥಿತಿಯಲ್ಲಿ ಮಹೇಶ್ ಪೋತದಾರ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ರವರಿಗೆ “ಅಪ್ಪ” ಪ್ರಶಸ್ತಿ ಪ್ರಧಾನ ಮಾಡಿದರು.ಈ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಮಹೇಶ್ ಪೋತದಾರ ರವರ ಕುಟುಂಬ ವರ್ಗದ ಪತ್ರಿ ಹಾಗೂ ಬಂಧುಗಳು ಉಪಸ್ಥಿತರಿದ್ದರು ಎಂದು ಬಿ.ಜೆ ಇಂಡಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ವಿಜಯಪುರ ಇವರು ತಿಳಿಸಿರುತ್ತಾರೆ.ಹಾಜರಿದ್ದ ಸಿಬ್ಬಂದಿ ವರ್ಗದವರು, ಡಾ. ಅರವಿಂದ ಲಂಬು, ಕುಲಪ್ಪ ಕೋರೆ, ಆನಂದ ಕಳಸಕೊಂಡ, ಆರ್.ಎಸ್ ಬನ್ನಟ್ಟಿ ಹಾಗೂ ಮಹೇಶ ಪೋತದಾರ ಧರ್ಮಪತ್ನಿಯಾದ ರೂಪಾ ಮಹೇಶ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಮಣೂರ ಗ್ರಾಮ ಪಂಚಾಯಿತಿಯಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯ ಮನೆಗಳನ್ನು ಒಂದೇ ಸಮುದಾಯಕ್ಕೆ ಮಂಜೂರ ಮಾಡಿ ಅವರಿಂದ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ಇಓ ಭಾರತಿ ಚೆಲುವಯ್ಯ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಸಭೆ ಸೇರಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಬಸ್ ನಿಲ್ದಾಣ ರಸ್ತೆ, ಮೊಹರೆ ಹಣಮಂತ್ರಾಯ ವೃತ್ತದ ಮೂಲಕ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿ ಧರಣಿ ಕುಳಿತು ಪ್ರತಿಭಟನೆ ಕೈಗೊಂಡರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರಣು ಜಮಖಂಡಿ ಮಾತನಾಡಿ, ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ೨೦೨೨-೨೩ ಹಾಗೂ ೨೦೨೪-೨೫ನೇ ಸಾಲಿನಲ್ಲಿ ಮಂಜೂರಾಗಿದ್ದ ಮನೆಗಳನ್ನು ಪಿಡಿಓ ಹಾಗೂ ನೋಡಲ್ ಅಧಿಕಾರಿಗಳು ಫಲಾನುಭವಿಗಳಿಂದ ಹಣ ಪಡೆದು ನೀಡಿದ್ದಾರೆ ಎಂದರು.ಜಿಲ್ಲಾಧ್ಯಕ್ಷ ಸುಖದೇವ ಕಟ್ಟಿಮನಿ ಮಾತನಾಡಿ, ಗ್ರಾಮಸಭೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡದೇ ಬೇಕಾಬಿಟ್ಟಿ ಮನೆಗಳನ್ನು ಹಂಚಿಕೆ ಮಾಡಿ, ೧೫ನೇ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಕೋರವಾರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಅತ್ಯುತ್ತಮ ಪ್ರಶಸ್ತಿ ಪಡೆದ ಕಾರಣ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಹಾಗೂ ಸಿಬ್ಬಂದಿಯನ್ನು ವಿಜಯಪುರ ಡಿಸಿಸಿ ಬ್ಯಾಂಕಿನ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷ ಹಾಗೂ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹಾಗೂ ಎಲ್ಲ ನಿರ್ದೇಶಕ ಮಂಡಳಿ ಸನ್ಮಾನಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಕೋರವಾರ ಗ್ರಾಮದ ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಆರಂಭಗೊಂಡಿರುವ ಶ್ರೀಶಿವಯೋಗಿ ಸಿದ್ಧರಾಮೇಶ್ವರ ಪುರಾಣದಲ್ಲಿ ನೂರಾರು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ನಾಗಮ್ಮ ಮನಗೂಳಿ ಚಾಲನೆ ನೀಡಿದರು. ಜಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ರೀಡೆಗಳು ಆಡುವದರಿಂದ ದೈಹಿಕವಾಗಿ ಸದೃಡವಾಗುವದರೊಂದಿಗೆ ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಹೇಳಿದರು.ನಗರದ ಟಕ್ಕೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ರವಿವಾರ ಶಿಕ್ಷಕರ ದಿನಾಚರಣೆ ನಿಮಿತ್ಯ ಬಿ.ಆರ್.ಸಿ ವಾಲಿಬಾಲ್ ಗೆಳೆಯರ ಬಳಗದಿಂದ ಏರ್ಪಡಿಸಿದ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸತತ ಐದು ವರ್ಷಗಳಿಂದ ನಿರಂತರವಾಗಿ ಬೆಳಗಿನ ಜಾವ ಸಮಾನ ಮನಸ್ಸಿನ ಶಿಕ್ಷಕರು ಒಡಗೂಡಿ ದೈಹಿಕ ಶ್ರಮದೊಂದಿಗೆ ವಾಲಿಬಾಲ್ ಆಡುತ್ತಿರುವದರಿಂದ ಶಿಕ್ಷಕರ ಆರೋಗ್ಯಕ್ಕೂ ಹಿತಕರವಾಗಿದೆ ಎಂದರು.ತಿಕೋಟಾ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಚನ್ನಯ್ಯ ಮಠಪತಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿಯಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಶಿಕ್ಷಕರು ಪ್ರತಿದಿನ ವಾಲಿಬಾಲ್ ಆಡುತ್ತಿರುವದು ಖುಷಿ ತಂದಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಖಜಾಂಚಿ ಜುಬೇರ ಕೇರೂರ, ಉರ್ದು ಶಿಕ್ಷಕ ಸಂಘದ ನಗರ ಘಟಕ ಅಧ್ಯಕ್ಷ…

Read More

ಏಕ ಕಾಲಕ್ಕೆ ಹದಿನೈದು ಚೌಕಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಉದಯರಶ್ಮಿ ದಿನಪತ್ರಿಕೆ ವರದಿ: ಗುರು ಆರ್ ಹಿರೇಮಠಆಲಮೇಲ: ಪಟ್ಟಣದಲ್ಲಿ ರವಿವಾರ ರಾತ್ರಿ ಗಣೇಶ ವಿಸರ್ಜನೆಯು ಅದ್ದೂರಿಯಾಗಿ ನಡೆಯಿತು.ಕಳೆದ ನಾಲ್ಕು ದಶಕಗಳಿಂದ ಭಾವೈಕ್ಯತೆಯ ನೆಲೆಯಲ್ಲಿ ಇಲ್ಲಿಯ ಗಣೇಶ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.ಕಾರ್ಯಕ್ರಮದ ಉದ್ಘಾಟನೆಗೆ ಒಂದು ವೇದಿಕೆಯನ್ನು ಪಟ್ಪಣ ಪಂಚಾಯತ ಹತ್ತಿರ ಮತ್ತು ಇನ್ನೊಂದು ವೇದಿಕೆಯನ್ನು ಅಂಬಿಗರ ಚೌಡಯ್ಯ ಸರ್ಕಲ್ ನಲ್ಲಿ ಎರಡು ಕಡೆ ಪ್ರಧಾನ ವೇದಿಕೆಗಳನ್ನು ನಿರ್ಮಿಸಲಾಗಿತ್ತು.ಪಟ್ಟಣದಲ್ಲಿ ಹದಿನೈದು ಚೌಕಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳು ಏಕ ಕಾಲಕ್ಕೆ ವಿಸರ್ಜನೆ ಮೆರವಣಿಗೆಯಲ್ಲಿ ಸಾಗಿಬಂದವು. ಒಂದರ ಹಿಂದೆ ಒಂದು ಸಾಲು ಸಾಲು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ರಸ್ತೆಯ ಎರಡೂ ಕಡೆಗಳಲ್ಲಿ ಜನ ಜಾತ್ರೆ ತುಂಬಿಕೊಂಡಿತು ಪೌರಾಣಿಕ ದೃಶ್ಯಗಳು ಮಹಾಭಾರತ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ರೂಪಕಗಳು, ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದಂತೆ ಚಿತ್ರಗಳು ನಿರ್ಮಾಣ ಮಾಡಲಾಗಿತ್ತು.ರೇವಣಸಿದ್ದೇಶ್ವರ ಚೌಕದಿಂದ ಆರ್ ಸಿ ಬಿ ತಂಡ ಕಪ್ ಕ್ರೀಡಾಪಟು ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಷಡ್ಯಂತ್ರದ ವಿರುದ್ಧ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಎಂಬ ಘೊಷಣೆಯೊಂದಿಗೆ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಸ್ಥಳೀಯ ಬಸವೇಶ್ವರ ವೃತ್ತದಿಂದ ಆರಂಭಗೊಂಡ ರ‍್ಯಾಲಿ ತಹಶೀಲ್ದಾರ ಕಚೇರಿ ತಲುಪಿತು. ರ‍್ಯಾಲಿಯುದ್ದಕ್ಕೂ ಸರ್ಕಾರದ ಹಿಂದೂ ವಿರೋಧ ನೀತಿಯನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ ಮಾಡಿದವರ ವಿರುದ್ಧ ಘೋಷಣೆಗಳನ್ನು ಕೂಗಿದರು.ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಲಾಯಿತು.ಯುವ ನಾಯಕ ಸಂಜೀವ ಐಹೊಳ್ಳಿ, ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ನಾಗಠಾಣ ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ, ತಾ.ಪಂ. ಮಾಜಿ ಸದಸ್ಯ ರಾಜು ಝಳಕಿ, ಮುಖಂಡ ಚಿದಾನಂದ ಛಲವಾದಿ ಮತ್ತಿತರರು ಮಾತನಾಡಿ, ಧರ್ಮಸ್ಥಳವು ಸತ್ಯಧರ್ಮದ ನಿಲಯವಾದ ಧರ್ಮಸ್ಥಳ ಕ್ಷೇತ್ರವು ಪರಮಪಾವನ ಸ್ಥಳವಾಗಿದೆ. ಜಾತಿ, ಧರ್ಮಗಳ ಬೇಧಭಾವ ಮರೆತು ಡಾ| ವಿರೇಂದ್ರ ಹೆಗ್ಗಡೆಯವರು ಲಕ್ಷ್ಯಾಂತರ ಬಡವರ ಬದುಕಿಗೆ ಬೆಳಕನ್ನು ನೀಡಿದ್ದಾರೆ ಮತ್ತು ಎಷ್ಟೋ…

Read More