ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕ್ರೀಡೆಗಳು ಆಡುವದರಿಂದ ದೈಹಿಕವಾಗಿ ಸದೃಡವಾಗುವದರೊಂದಿಗೆ ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ ಹೇಳಿದರು.
ನಗರದ ಟಕ್ಕೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ರವಿವಾರ ಶಿಕ್ಷಕರ ದಿನಾಚರಣೆ ನಿಮಿತ್ಯ ಬಿ.ಆರ್.ಸಿ ವಾಲಿಬಾಲ್ ಗೆಳೆಯರ ಬಳಗದಿಂದ ಏರ್ಪಡಿಸಿದ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸತತ ಐದು ವರ್ಷಗಳಿಂದ ನಿರಂತರವಾಗಿ ಬೆಳಗಿನ ಜಾವ ಸಮಾನ ಮನಸ್ಸಿನ ಶಿಕ್ಷಕರು ಒಡಗೂಡಿ ದೈಹಿಕ ಶ್ರಮದೊಂದಿಗೆ ವಾಲಿಬಾಲ್ ಆಡುತ್ತಿರುವದರಿಂದ ಶಿಕ್ಷಕರ ಆರೋಗ್ಯಕ್ಕೂ ಹಿತಕರವಾಗಿದೆ ಎಂದರು.
ತಿಕೋಟಾ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಚನ್ನಯ್ಯ ಮಠಪತಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿಯಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಶಿಕ್ಷಕರು ಪ್ರತಿದಿನ ವಾಲಿಬಾಲ್ ಆಡುತ್ತಿರುವದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಖಜಾಂಚಿ ಜುಬೇರ ಕೇರೂರ, ಉರ್ದು ಶಿಕ್ಷಕ ಸಂಘದ ನಗರ ಘಟಕ ಅಧ್ಯಕ್ಷ ಬಶೀರ್ ನದಾಪ್, ಕ್ರೀಡಾ ಕಾರ್ಯದರ್ಶಿ ನೀಜು ಮೇಲಿನಕೇರಿ, ಐ.ಸಿ.ಗಣಾಚಾರಿ, ಯೋಗೇಶ ನಡುವಿನಮನಿ, ಶ್ರೀಶೈಲ್ ಖಂಡೇಕರ, ನಾಗೇಶ ನಾಗೂರ, ಪರಮೇಶ್ವರ ಗದ್ಯಾಳ ಇದ್ದರು.
ಶಿಕ್ಷಕ ಮಲ್ಲಯ್ಯಾ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ವಾಲಿಬಾಲ್ ಗೆಳೆಯರ ಬಳಗದ ಕುರಿತು ಹೇಳುತ್ತಾ ಕುಟುಂಬ ಸದಸ್ಯರಿಗೂ ಕೂಡಾ ಮುಂದಿನ ದಿನಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಖಜಾಂಚಿ ಬಶೀರ್ ನದಾಪ್, ಕ್ರೀಡಾ ಕಾರ್ಯದರ್ಶಿ ನೀಜು ಮೇಲಿನಕೇರಿ, ಐ.ಸಿ.ಗಣಾಚಾರಿ, ಯೋಗೇಶ ನಡುವಿನಮನಿ, ಆರ್.ಬಿ.ಮುದನೂರ, ಹಣಮಂತ ಖಂಡೇಕರ, ನಾಗೇಶ ನಾಗೂರ, ಪರಮೇಶ್ವರ ಗದ್ಯಾಳ, ಪಾಟೀಲ ಸರ್ ಇದ್ದರು.
ನಿರೂಪಣೆಯನ್ನು ಬಸವರಾಜ ತೇಲಿ, ಪ್ರಾರ್ಥನೆಯನ್ನು ಎ.ಜಿ.ಚವ್ಹಾಣ, ಸ್ವಾಗತವನ್ನು ಎನ್.ಎಂ.ಮೇಲಿನಕೇರಿ, ವಂದನಾರ್ಪನೆಯನ್ನು ಶಿವು ಅಬಲಾಪುರ ನೆರವೇರಿಸಿದರು.