ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಬಿ ರೋಶನ್ ಪ್ರಕಾಶನ ಬೋರಗಿ ಇವರು ಪೊಲೀಸ್ ಕಲಾಸಂಗಮದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೃಷ್ಣರಾಜ ಪರಿಷತ್ ಮಂದಿರ, (ಕ.ಸಾ.ಪ) ಬೆಂಗಳೂರು ಸ್ಥಳದಲ್ಲಿ ಆ.30 ರಂದು ಸಂತೋಷ ಹೆಗಡೆ, ಮಾನ್ಯ ನಿವೃತ್ತ ಲೋಕಾಯುಕ್ತ ನ್ಯಾಯಾಧೀಶರು ಬೆಂಗಳೂರು, ಚಿನ್ನಾರಿಮುತ್ತಾ ಖ್ಯಾತಿಯ ವಿಜಯ ರಾಘವೇಂದ್ರ, ಚಲನಚಿತ್ರ ಸಾಹಿತ್ಯ ರಚನಕಾರರಾದ ನಾಗೇಂದ್ರ, ಉಮಾರಾಣಿ, ಎ.ಸಿ.ಪಿ ಬೆಂಗಳೂರು ವಲಯ, ಹಾಗೂ ಮೌಲಾಲಿ ಕೆ. ಆಲಗೂರ ಉಪಸ್ಥಿತಿಯಲ್ಲಿ ಮಹೇಶ್ ಪೋತದಾರ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ರವರಿಗೆ “ಅಪ್ಪ” ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಮಹೇಶ್ ಪೋತದಾರ ರವರ ಕುಟುಂಬ ವರ್ಗದ ಪತ್ರಿ ಹಾಗೂ ಬಂಧುಗಳು ಉಪಸ್ಥಿತರಿದ್ದರು ಎಂದು ಬಿ.ಜೆ ಇಂಡಿ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ವಿಜಯಪುರ ಇವರು ತಿಳಿಸಿರುತ್ತಾರೆ.
ಹಾಜರಿದ್ದ ಸಿಬ್ಬಂದಿ ವರ್ಗದವರು, ಡಾ. ಅರವಿಂದ ಲಂಬು, ಕುಲಪ್ಪ ಕೋರೆ, ಆನಂದ ಕಳಸಕೊಂಡ, ಆರ್.ಎಸ್ ಬನ್ನಟ್ಟಿ ಹಾಗೂ ಮಹೇಶ ಪೋತದಾರ ಧರ್ಮಪತ್ನಿಯಾದ ರೂಪಾ ಮಹೇಶ ಪೋತದಾರ ಮತ್ತು ಅಪಾರ ಅಭಿಮಾನಿ ಬಂಧುಗಳು ಹಾಜರಿದ್ದರು.