ಉದಯರಶ್ಮಿ ದಿನಪತ್ರಿಕೆ
ಇಂಡಿ: ಒಂದು ದೇಶ ಅಭಿವೃದ್ದಿ ಯಾಗಬೇಕಾದರೆ ಶೈಕ್ಷಣಿಕ ಬೆಳವಣಿಗೆ ಕಾರಣ. ಪ್ರಪಂಚದ ಅನೇಕ ದೇಶಗಳು ಬಹಳ ವಿಭಿನ್ನವಾದಂತಹ ಶಿಕ್ಷಣದ ಸ್ವರೂಪಗಳು ಹಾಗೂ ಶಿಕ್ಷಣದ ನೀತಿಗಳನ್ನು ಹೊಂದಿ ವಿಭಿನ್ನವಾದ ಶಿಕ್ಷಣ ನೀಡುತ್ತಿವೆ. ಆದರೆ ನಮ್ಮ ದೇಶದಲ್ಲಿ ವಿಭಿನ್ನವಾದ ಶಿಕ್ಷಣಕ್ಕೆ ನಮ್ಮ ಪೂರ್ವಜರು ಸಂಸ್ಕಾರದ ನೀತಿಗಳನ್ನು ಕೊಟ್ಟಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಝಳಕಿ ಗ್ರಾಮದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜ ಆವರಣದಲ್ಲಿ ನಡೆದ ೨೦೨೫-೨೬ ನೇ ಸಾಲಿನ ಕ್ರೀಡಾ,ಸಂಸ್ಕೃತಿಕ ಎನ್ ಎಸ್ ಎಸ್ ಚಟುವಟಿಕೆ ಹಾಗೂ ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್ ವಿವಿಧ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪಾಲಕರು ಮಕ್ಕಳ ಶಿಕ್ಷಣದ ಕಡೆಗೆ ನೀಗಾ ವಹಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಇರುವ ಕಾರಣ ಆ ವಸ್ತುವನ್ನು ಯಾವರೀತಿಯಲ್ಲಿ ನಮ್ಮ ಮಕ್ಕಳು ಬಳಕೆ ಮಾಡುತ್ತಾರೆ ಎಂದು ಪೋಷಕರು ನಿಗಾ ವಹಿಸಬೇಕು, ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿ ಸಾಹಿತಿ ಸಿ ಎಮ್ ಬಂಡಗರ ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕಗಳಿಗಿಂತಲೂ ಅವರಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು, ಪ್ರತಿಯೊಬ್ಬರಲ್ಲಿ ಇರುವ ಪ್ರತಿಭೆ ಅನಾವರಣ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ವಿವೇಕನಂದ ಉಘಾಡೆ, ನಾರಾಯಣ ಜಾಗೀರದ್ದಾರ, ಶ್ರೀಮಂತ ಕಾಪಸೆ, ಅಣ್ಣಪ್ಪ ತಳವಾರ, ಸಣ್ಣಪ್ಪ ತಳವಾರ, ಸಂತೋಷ ಬೆಂಡೆಗೋಳ, ಗುರಣ್ಣಗೌಡ ಪಾಟೀಲ, ಗ್ರಾ ಪಂ ಸದಸ್ಯ ಶಂಕರಗೌಡ ಬಿರಾದಾರ, ಹಣಮಂತ ಕೋಳಿ, ರವಿ ಹೂಗಾರ, ಸಂಜು ಬಂಗಾರತಳ, ಅನೀಲ ಬಿರಾದಾರ, ನಿಂಗಣಗೌಡ ಬಿರಾದಾರ ಇತತರು ಇದ್ದರು.

