Author: editor.udayarashmi@gmail.com

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೇತ್ರದಾನ ಜಾಗೃತಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೇತ್ರ ದಾನ ಮಹಾದಾನ ಆ ನಿಟ್ಟಿನಲ್ಲಿ ನೇತ್ರದ ದಾನದಿಂದ ಸಾವಿನ ನಂತರ ನಮ್ಮ ಕಣ್ಣುಗಳು ಬೇರೆಯವರ ಮೊದಲ ನೋಟವಾಗುತ್ತವೆ ಎಂದು ಶ್ರೀ.ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನೇತ್ರಶಾಸ್ತ್ರ ವಿಭಾಗದ ರಮ್ಯಾ ಕಾರಜೋಳ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಬಿ.ಎಲ್.ಡಿ.ಇ ಶ್ರೀ.ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನೇತ್ರಶಾಸ್ತ್ರ ವಿಭಾಗದ ನೇತ್ರದಾನ ಪಾಕ್ಷಿಕ ಆಚರಣೆ ಹಾಗೂ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೆ.೦೩ ರಂದು ‘ನೇತ್ರದಾನ ಮಾಡಿ ಇಬ್ಬರ ಅಂಧರ ಬಾಳಿಗೆ ಬೆಳಕಾಗಿರಿ’ ಎಂಬ ಧ್ಯೇಯ ವಾಕ್ಯದಡಿ ನೇತ್ರದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.ಈ ವೇಳೆಯಲ್ಲಿ ಮಾತನಾಡಿದ ಅವರು, ನೇತ್ರದಾನದ ಮಹತ್ವ ಮತ್ತು ಇದರಿಂದಾಗುವ ಪ್ರಯೋಜನಗಳು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ…

Read More

ಭಾರತ ಕಮ್ಯುನಿಸ್ಟ್ ಪಕ್ಷ (ಮ್ಯಾಕ್ಸ್೯ವಾದಿ) ವತಿಯಿಂದ ಮುಖ್ಯಮಂತ್ರಿ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಕಮ್ಯುನಿಸ್ಟ್ ಪಕ್ಷ (ಮ್ಯಾಕ್ಸ್೯ವಾದಿ) ವತಿಯಿಂದ ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ವಿಜಯಪುರ ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಹಾಗೂ ಬರ ಪರಿಹಾರ ಕೆಲಸಗಳು ಪ್ರಾರಂಭಿಸಬೇಕು. ಪ್ರತಿ ಎಕರೆಗೆ ಬೆಳೆ ಹಾನಿ ಎಂದು ೫೦ ಸಾವಿರ ರೂ.ಗಳು ರೈತರಿಗೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಾರಾಯ ಇಳಗೇರ, ಲಕ್ಷ್ಮಣ ಹಂದ್ರಾಳ, ಸುರೇಶ ಜಿ ಬಿ, ಸುರೇಖಾ ರಜಪೂತ್, ಖಾಜಾಸಾಬ್ ಕೋಲಾರ್, ಸಾಯಬಣ್ಣ ಹಂದಿಗನೂರ, ಗೋಪಾಲ ಶೀವಗದ್ದಿಗೆ, ರೇವಣಸಿದ್ದ ಪೂಜಾರಿ, ಮಹೇಶ ಗದ್ದಿಗೆ ಮತ್ತಿತರರು ಉಪಸ್ಥಿತರಿದ್ದರು.

Read More

ಚವನಭಾವಿ ರೈತರಿಂದ ಸರಕಾರಕ್ಕೆ ಆಗ್ರಹ | ರೈತ ಮುಖಂಡ ಯಮನಪ್ಪ ನಾಯ್ಕೋಡಿ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಲಗಲದಿನ್ನಿ ಕೆರೆಗೆ ಕಾಲುವೆ ನೀರು ಹರಿಸಿ ತುಂಬಿಸುವುದರಿಂದ ಪಕ್ಕದ ಚವನಭಾವಿ ಹಳ್ಳದ ಬ್ಯಾರೇಜ್ ಭರ್ತಿಯಾಗಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನ-ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಆದರೆ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಮುಖಂಡ ಯಮನಪ್ಪ ನಾಯ್ಕೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಆಗಮಿಸಿದ ಚವನಭಾವಿ ಗ್ರಾಮದ ರೈತರು ಹಾಗೂ ಮುಖಂಡರು, ಶಿರಸ್ತೇದಾರ ಎಂ.ಎ.ಬಾಗೇವಾಡಿ ಅವರ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ಪ್ರಸ್ತುತ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಬೆಳೆಗಳು ಕೈಕೊಟ್ಟಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನಿಷ್ಠ ಕುಡಿಯುವ ನೀರನ್ನಾದರೂ ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು…

Read More

ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು | ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲು ಒತ್ತಾಯ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್.ಎಂ.ಮಾಳಿವಿಜಯಪುರ: ಒಂದೇ ಬಸ್ಸಿನಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತಾಲೂಕು ಕೇಂದ್ರಕ್ಕೆ ತೆರಳಲು ತೊಂದರೆಯಾಗುತ್ತಿದ್ದು, ಹೆಚ್ಚುವರಿ ಬಸ್ ಓಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದಿಂದ ಚಡಚಣ ಪಟ್ಟಣಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಹೆಚ್ಚಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತುಂಬಿದ್ದರಿಂದ ಹಲವಾರು ವಿದ್ಯಾರ್ಥಿಗಳು ಬಸ್ ಹತ್ತಲು ಸಾಧ್ಯವಾಗದಂತಾಗಿದೆ.ಪ್ರತಿನಿತ್ಯ ಚಡಚಣ ಪಟ್ಟಣದಿಂದ ಗಡಿಭಾಗದಲ್ಲಿರುವ ಹಾಲಳ್ಳಿ, ಶಿರಾಡೋಣ, ರೇವತಗಾಂವ, ಉಮರಜ ಹಾಗೂ ದಸೂರ ಮಾರ್ಗವಾಗಿ ಓಡಾಡುವ ಸಾರಿಗೆ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಹೀಗಾಗಿ ಈಗಾಗಲೇ ಹಾಲಳ್ಳಿ ಮತ್ತು ಶಿರಾಡೋಣ ಗ್ರಾಮಕ್ಕೆ ಹೆಚ್ಚುವರಿ ಬಸ್ಸೊಂದನ್ನು ಓಡಿಸಲಾಗುತ್ತಿದೆ. ಇನ್ನುಳಿದ ಉಮರಜ, ದಸೂರ ಹಾಗೂ ರೇವತಗಾಂವ ಗ್ರಾಮಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಸವಲತ್ತು ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಒಂದೇ ಬಸ್ಸಿನಲ್ಲಿ ಜೋತು ಬಿದ್ದು ಹೋಗುವ ಪ್ರಸಂಗ ನಡೆದಿದೆ.ಒಂದು ಬಸ್‌ನಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಫ.ಗು ಹಳಕಟ್ಟಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅವರಿಗೆ ಅಪ್ಪ ರಾಜ್ಯ ಪ್ರಶಸ್ತಿಗೆ ಲಭಿಸಿದೆ.ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಪ್ರತಿ ವರ್ಷ ದಿ.ಖತಾಲಸಾಬ ಆಲಗೂರ (ಬೋರಗಿ) ಇವರ ಸ್ಮರಣಾರ್ಥವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯೂ ರೂ.5ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.ಬರಹಗಾರ, ಶರಣ ಚಿಂತಕರಾಗಿರುವ ಡಾ.ಮಹಾಂತೇಶ ಬಿರಾದಾರ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 21ಸೆಪ್ಟೆಂಬರ್ ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ಮಂದಿರದಲ್ಲಿ ನಡೆಯುವ ಅಪ್ಪ ರಾಜ್ಯ ಪ್ರಶಸ್ತಿ ಪ್ರದಾನ ಪೊಲೀಸ್ ಕಲಾಸಂಗಮ ಹಾಗೂ ಸಾಂಸ್ಕೃತಿಕ ಕಲಾ ಸಂಭ್ರಮ ಸಮಾರಂಭದಲ್ಲಿ, ನಾಡಿನ ಗಣ್ಯಾತೀಗಣ್ಯರ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮೌಲಾಲಿ ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪರೀಕ್ಷೆ ಎಂದರೆ ಕೆಲವರಿಗೆ ಕಬ್ಬಿಣದ ಕಡಲೆಯಾದರೆ ಸ್ಮಾರ್ಟ ಆಗಿ ಓದುವವರಿಗೆ ಸುಲಭದ ತುತ್ತು. ಯಾವ ವಿಷಯವನ್ನು ಯಾವ ರೀತಿಯಾಗಿ ಓದಬೇಕು ಎನ್ನುವುದರ ಪರಿಜ್ಞಾನ ನಮ್ಮಲ್ಲಿ ಮೂಡಿಸಿಕೊಂಡರೆ ಸರಳವಾಗಿ ನೀಟ್ ಪಾಸು ಮಾಡಿ ಎಂಬಿಬಿಎಸ್ ಸೀಟು ಪಡೆಯಬಹುದು ಎಂದು ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ೬೩೧ ಅಂಕಗಳನ್ನು ಪಡೆದು ಬೆಂಗಳೂರು ಮೆಡಿಕಲ್ ಕಾಲೇಜ್ ಆಂಡ್ ರೀಸರ್ಚ ಇನ್ಸಿಟ್ಯೂಟ್‌ಗೆ ಆಯ್ಕೆಯಾದ ಸಲ್ಮಾನ ಗೋಡಿಹಾಳ ಹೇಳಿದರು.ನಗರದ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಕ್ಕಾಗಿ ಕಾಲೇಜಿನ ವತಿಯಿಂದ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು; ನಮ್ಮಲ್ಲಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಅತಿಯಾದ ಆತ್ಮವಿಶ್ವಾಸ. ನಾನು ಮಾಡುತ್ತೇನೆ ಬಿಡು ಇಂದಲ್ಲ ನಾಳೆ ಆಗುತ್ತೆ ಬಿಡು ಎನ್ನುವ ರೀತಿಯಲ್ಲಿ ಅಧ್ಯಯನ ಮಾಡಿದರೆ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಅತಿಯಾದ ಆತ್ಮವಿಶ್ವಾಸ ಅನಾವಶ್ಯಕ ಆಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅದರಿಂದ ಹೊರ ಬರುವುದು ಉತ್ತಮ. ಅದರ ಜೊತೆಗೆ ಭೌತಶಾಸ್ತ್ರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನೌಪಚಾರಿಕ ಶಿಕ್ಷಣ ಸಂಸ್ಥೆ ಬಿಜಾಪುರ ನಗರ ಸ್ಲಂ ಅಭಿವೃದ್ದಿ ಸಮಿತಿ(ರಿ) ಹಾಗೂ ಡಾ|| ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳು ಅಂಬೇಡ್ಕರ ನಗರವನ್ಮು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ವೇಳೆ ಬಿಜಾಪುರ ನಗರ ಸ್ಲಂ ಅಬಿವೃದ್ದಿ ಸಮಿತಿ ಅಧ್ಯಕ್ಷರಾದ ಮುತ್ತು ಬೋವಿ ಮಾತನಾಡಿ, ಕಂದಾಯ ಗ್ರಾಮ ಮಾಡಿದರೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ದೊರೆಯುತ್ತವೆ. ಹಾಗೂ ಅಲ್ಲಿ ವಾಸಿಸುತ್ತಿರುವ ಎಲ್ಲ ನಿವಾಸಿಗಳಿಗೆ ಹಕ್ಕು ಪತ್ರ ದೊರೆಯುತ್ತವೆ. ಕಾರಣ ಮುಂದಿನ ಕಾರ್ಯಕ್ಕೆ ದಾಖಲಾತಿಗಳು ರವಾನಿಸಬೇಕೆಂದು ಕೋರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಲ್ಲಾದ ಪಾಟೀಲ ರಿಗೆ ಮನವಿ ಸಲ್ಲಿಸಿದರು.ಈ ಸಂದರ್ಬದಲ್ಲಿ ಮಿನಾಕ್ಷಿ ಕಾಲೆಬಾಗ, ಭಾರತಿ ಶಿವಣಗಿ, ಲಕ್ಷೀಂಬಾಯಿ ಆನೆಕಲ್, ಸ್ಲಂ ಸಮಿತಿ ಸದಸ್ಯರು ಮತ್ತು ಬಿ ಆರ್ ಅಂಬೇಡ್ಕರ ನಗರದ ನಿವಾಸಿಗಳಾದ ಕೃಷ್ಣಾ ಪ್ರಭಾಕರ, ರವಿ ವಾಲಿಕಾರ, ಪ್ರಕಾಶ ಕಳ್ಳೆನ್ನವರ, ಸುಬಾಸ ವಾಲಿಕಾರ, ಮಹಾಂತೇಶ ಸಿಂದ್ರೆ, ವಿಶಾಲ ಪ್ರಭಾಕರ,…

Read More

ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಕ್ರೋಶ| ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಒಟ್ಟು 13 ತಾಲೂಕುಗಳ ಪೈಕಿ 10 ತಾಲೂಕುಗಳನ್ನು ಬರ ಘೋಷಣೆಯಿಂದ ಹೊರಗಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಸರ್ಕಾರದ ಈ ನಿರ್ಧಾರವು ಜಿಲ್ಲೆಯ ರೈತರ ನಡುವೆ ತಾರತಮ್ಯದ ಭಾವನೆ ಮೂಡಿಸಿದ್ದು, ವಿಜಯಪುರ ಜಿಲ್ಲೆಯ 10 ತಾಲೂಕುಗಳ ರೈತರಿಗೆ ಅನ್ಯಾಯವಾಗುತ್ತಿರುವಾಗ ಜಿಲ್ಲೆಯ ಎಂಟು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ?” ಎಂದು ಸೋಲಾಪುರ್ ಪ್ರಶ್ನಿಸಿದ್ದಾರಲ್ಲದೆ, ಈಗ್ಲಾದ್ರೂ ಅವರು ರೈತರ ಪರವಾಗಿ ಧ್ವನಿ ಎತ್ತಲಿ ಎಂದು ಆಗ್ರಹಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸುವುದರ ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಮುಂದೆ ಸರ್ವೇ ನಂ ೮೬೪/೨ರ ಜಾಗೆಯಲ್ಲಿನ ಶೌಚಾಲಯದ ನೀರು ಬರುತ್ತಿದ್ದು, ಪಟ್ಟಣ ಪಂಚಾಯಿತಿ ಈ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ದೇವಸ್ಥಾನ ಸಮಿತಿ ಸದಸ್ಯರು ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ರಾವುತರಾಯ-ಮಲ್ಲಯ್ಯ ದೇವಸ್ಥಾನ ಸಮಿತಿ ಸದಸ್ಯರು ಶೌಚಾಲಯ ನೀರು ಹರಿಯುವ ಕುರಿತು ಗಮನ ಸೆಳೆದರು.ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಿನೋದಗೌಡ ಪಾಟೀಲ ಮಾತನಾಡಿ, ಸರ್ವೇ ನಂ೮೬೪/೨ ರಲ್ಲಿನ ವಿನಾಯಕ ಲಾಜ್‌ನ ಸ್ನಾನ ಮತ್ತು ಶೌಚಾಲಯದ ಮಲೀನ ನೀರು ಮಲ್ಲಯ್ಯನ ದೇವಸ್ಥಾನದ ಮುಂದೆ ಬರುತ್ತಿದ್ದು , ಇದರಿಂದ ಬರುವ ಭಕ್ತಾಧಿಗಳು ಮೂಗು ಮುಚ್ಚಿಕೊಂಡು ಬರುವಂತಾಗಿದೆ. ದೇವಾಲಯ ಪವಿತ್ರ ಯಾತ್ರಾ ಸ್ಥಳವಾಗಿರುವುದರಿಂದ ಶೌಚಾಲಯದ ಮಲಮೂತ್ರ ತ್ಯಾಜ್ಯ ಮತ್ತು ಸ್ನಾನದ ನೀರು ಜೊತೆಗೆ ಮದ್ಯದಂಗಡಿಯ ಸರಾಯಿ ಬಾಟಲುಗಳು ದೇವಾಲಯದ ಮುಂದೆ ಬರುತ್ತಿವೆ. ಆದ ಕಾರಣ ನಮ್ಮ ಸಮಿತಿಯ ಎಲ್ಲ ಸದಸ್ಯರು ಹಾಗೂ ದೇವಸ್ಥಾನದ ಸಕಲ ಸದ್ಭಕ್ತರು ಮನವಿ…

Read More

ತಾಳಿಕೋಟೆಯಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ | ರೈತರ ಕೃಷಿ ಸಾಲ ಮನ್ನಾಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಿಸಿರುವ ಕ್ರಮವನ್ನು ಖಂಡಿಸಿ, ಜಿಲ್ಲೆಯ ತಾಳಿಕೋಟೆ, ದೇ.ಹಿಪ್ಪರಗಿ, ಮುದ್ದೇಬಿಹಾಳ ಒಳಗೊಂಡು ಉಳಿದ ಹತ್ತು ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಗುರುವಾರರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದ ಬಳಿಕ ಅನಿರ್ದಿಷ್ಟ ಧರಣಿ ಆರಂಭಿಸಿದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜಿಲ್ಲೆಯ ಯಾವುದೇ ಶಾಸಕರು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಇನ್ನೋರ್ವ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ ಹಾಗೂ ಜಿಲ್ಲಾಧ್ಯಕ್ಷ ಉಮೇಶ್…

Read More