Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.

ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು

ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯುವ ಸಮೃದ್ಧಿ ಸಮ್ಮೇಳನ-ವಿಜಯಪುರ ಉದ್ಯೋಗ ಮೇಳಕ್ಕೆ ಚಾಲನೆಕಾಲಕ್ಕೆ ತಕ್ಕಂತೆ ತಂತ್ರಜ್ಞಾನ-ಕೌಶಲ್ಯಾಭಿವೃದ್ದಿ ಅಳವಡಿಸಿಕೊಂಡು ಉದ್ಯೋಗ ಪಡೆಯಲು ಮುಂದಾಗಲು-ಸಚಿವ ಡಾ.ಎಂ.ಬಿ.ಪಾಟೀಲ ಕರೆ
(ರಾಜ್ಯ ) ಜಿಲ್ಲೆ

ಯುವ ಸಮೃದ್ಧಿ ಸಮ್ಮೇಳನ-ವಿಜಯಪುರ ಉದ್ಯೋಗ ಮೇಳಕ್ಕೆ ಚಾಲನೆಕಾಲಕ್ಕೆ ತಕ್ಕಂತೆ ತಂತ್ರಜ್ಞಾನ-ಕೌಶಲ್ಯಾಭಿವೃದ್ದಿ ಅಳವಡಿಸಿಕೊಂಡು ಉದ್ಯೋಗ ಪಡೆಯಲು ಮುಂದಾಗಲು-ಸಚಿವ ಡಾ.ಎಂ.ಬಿ.ಪಾಟೀಲ ಕರೆ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ:

ವಿಜಯಪುರ: ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಆರ್ಟಿಫಿಸಿಯಲ್ ಇಂಟಲಿಜೆನ್ಸ್ (ಎಆಯ್), ರೋಬೋಟ ತಂತ್ರಜ್ಞಾನ, ಗ್ರೀನ್ ಎನರ್ಜಿ ದಾಪುಗಾಲಿಟ್ಟಿದ್ದು, ಈ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು, ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಪಡೆಯಲು ಇಂದಿನ ಯುವ ಜನಾಂಗ ಮುಂದಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಸೋಮವಾರ ನಗರದ ದರ್ಬಾರ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಯುವ ಸಮೃದ್ಧಿ ಸಮ್ಮೇಳನ-ವಿಜಯಪುರ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಾಫ್ಡ್ ವೇರ್ ಕ್ಷೇತ್ರದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಇದು ರಾಜ್ಯದ ಶಕ್ತಿಯಾಗಿದೆ. ಕಾಲ ಬದಲಾವಣೆಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಹಾಗೂ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ.
ಈ ನಿಟ್ಟಿನಲ್ಲಿ ಎಂಟನೇ ತರಗತಿಯಿಂದಲೇ ಮಕ್ಕಳಲ್ಲಿ ಕೌಶಲ್ಯ ರೂಡಿಸಿಕೊಂಡು ಸಿದ್ಧಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಇಂದು ಆಯೋಜಿಸಲಾದ ಉದ್ಯೋಗ ಮೇಳ ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಉದ್ಯೋಗ ಮೇಳದಲ್ಲಿ 25 ಸಾವಿರ ಉದ್ಯೋಗಾಕಾಂಕ್ಷಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಉದ್ಯೋಗದಾತ ಕಂಪನಿಗಳ ಮೂಲಕ ಆಯ್ಕೆ ಬಯಸಿ ಈ ಮೇಳದ ಕುರಿತು ಯುವಜನರು ಆಶಾ ಕಿರಣ ಹೊಂದಿದ್ದಾರೆ. ಯುವ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಧ್ಯೇಯೋದ್ದೇಶದೊಂದಿಗೆ, ಇಂತಹ ಮೇಳಗಳನ್ನು ಆಯೋಜಿಸಿ ಸಹಾಯ-ಸಹಕಾರದೊಂದಿಗೆ ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯುವ ಜನರು ದೇಶದ ಶಕ್ತಿಯಾಗಿದ್ದಾರೆ. 140 ಕೋಟಿ ಜನಸಂಖ್ಯೆಯಲ್ಲಿ ಶೇ.40 ರಷ್ಟು ಯುವಕರಿದ್ದಾರೆ. ಈ ಹಿಂದೆ ವಿದ್ಯಾಭ್ಯಾಸಕ್ಕೆ ರಾಜ್ಯದ ಮೈಸೂರು ಮಹಾರಾಜರು ವಿವಿಧ ಶಿಕ್ಷಣ ಸಂಸ್ಥೆ- ಉದ್ಯಮಗಳಲ್ಲಿ ಸ್ಥಾಪಿಸಿದ್ದರು. ದೇಶಾದ್ಯಂತ ಯುವ ಉದ್ಯೋಗಿಗಳು ಉದ್ಯೋಗ ಅರಸಿ ಕರ್ನಾಟಕಕ್ಕೆ ಬರುತ್ತಿದ್ದರು. ನಮ್ಮಲ್ಲಿಯೂ ಪ್ರತಿಭಾವಂತರಿದ್ದು, ಅವರು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಹೆಮ್ಮೆಯಾಗಿದೆ. ರಾಜ್ಯ ಸೇವಾ ವಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಜೈವಿಕ ತಂತ್ರಜ್ಞಾನ, ಮಶಿನ್ ಟೂಲ್ಸ್ ತಯಾರಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದೇವೆ. ಪ್ರತಿಭಾವಂತರು ಕೂಡಿದ ಬುದ್ದಿವಂತರ ಸಮೂಹ ಹೊಂದಿದ ರಾಜ್ಯ ನಮ್ಮದಾಗಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಹುಟ್ಟಿನಿಂದ ಯಾರೂ ಕಲಿತು ಬಂದಿರುವುದಿಲ್ಲ. ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಕೌಶಲ್ಯಾಭಿವೃಧ್ದಿಗೆ ಒತ್ತು ನೀಡಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅವರನ್ನು ಸಿದ್ಧಗೊಳಿಸಬೇಕು. ತಾಂತ್ರಿಕ ಹಾಗೂ ಬೌಧ್ದಿಕವಾಗಿ ಸಮರ್ಥವಾಗಿಸಿ ಸಿದ್ಧಪಡಿಸಬೇಕು. ವಿವಿಧ ರಾಷ್ಟ್ರೀಯ-ಅಂತರರಾಷ್ಟ್ರೀಯ ಕಂಪನಿಗಳು ಆನ್‍ಲೈನ್ ತರಬೇತಿ ನೀಡುತ್ತಿವೆ. ಈ ಕುರಿತು ಪ್ರತಿಯೊಬ್ಬರು ಮಾಹಿತಿ ಹೊಂದಿ, ಬದಲಾವಣೆಗೆ ತಕ್ಕಂತೆ ಕೌಶಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. 
ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಕೌಶಲ್ಯ ತರಬೇತಿ ಹೊಂದುವುದು ಅತ್ಯವಶ್ಯಕವಾಗಿದೆ. ಯುವಪೀಳಿಗೆಯನ್ನು ಭವಿಷ್ಯದ ದೃಷ್ಟಿಯಿಂದ ಸಿದ್ಧಪಡಿಸಬೇಕು. ಕೌಶಲ್ಯ ರೂಢಿಸಿಕೊಂಡು ಒಳ್ಳೆಯ ಅವಕಾಶ ಪಡೆಯುವ ಮೂಲಕ ಉದ್ಯೋಗದಾತರಾಗಿ ಹೊರಹೊಮ್ಮಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ ಅವರು, ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 
ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಶರಣ ಪ್ರಕಾಶ ಪಾಟೀಲ ಅವರು ಮಾತನಾಡಿ,  ಜಿಲ್ಲೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಗುರಿಯೊಂದಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮೈಸೂರು ಮತ್ತು ಕಲಬುರಗಿಯಲ್ಲಿ ಈಗಾಗಲೇ ಯಶಸ್ವಿಯಾಗಿ ಉದ್ಯೋಗ ಮೇಳ ಕೈಗೊಂಡು ಯಶಸ್ವಿಗೊಳಿಸಲಾಗಿದೆ.  ರಾಜ್ಯದಲ್ಲಿ 3 ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನ ನಡೆದ ಉದ್ಯೋಗ ಮೇಳದಲ್ಲಿ 45 ಸಾವಿರ ಉದ್ಯೋಗಾಕಾಂಕ್ಷಿಗಳು ನೊಂದಾಯಿಸಿಕೊಂಡಿದ್ದು, 14 ಸಾವಿರ ಜನರಿಗೆ ಉದ್ಯೋಗ ದೊರೆತಿದೆ ಎಂದು ಅವರು ಹೇಳಿದರು. 
ರಾಜ್ಯದ ಯುವಕರು ಪ್ರತಿಭಾವಂತರಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ ಹಾಗೂ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಮುಂಬರುವ  ದಿನಗಳಲ್ಲಿ ರಾಜ್ಯದ ಎಲ್ಲ ವಿಭಾಗಗಳಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಬೃಹತ್ ಉದ್ಯೋಗ ಮೇಳವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ವರ್ಷ ಏಪ್ರಿಲ್ 4 ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಆಯೊಜನೆಗೆ ಸಿದ್ಧತೆ ನಡೆದಿದ್ದು, ಈ ಮೇಳದಲ್ಲಿ ಬೇರೆ ಬೇರೆ ದೇಶದ ಕಂಪನಿಗಳು ಭಾಗವಹಿಸಲಿರುವುದರಿಂದ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ದೊರಕಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. 


ದೇಶದಲ್ಲಿ ಅತಿ ಹೆಚ್ಚು ಕೌಶಲ್ಯ ಹೊಂದಿದ ರಾಜ್ಯ ಕರ್ನಾಟಕ ರಾಜ್ಯವಾಗಿದೆ. ರಾಜ್ಯದಿಂದ ಪ್ರತಿ ವರ್ಷ ಸುಮಾರು 1.15 ಲಕ್ಷ ಇಂಜಿನೀಯರ್ ಪದವಿ ಪಡೆದುಕೊಳ್ಳುತ್ತಿದ್ದಾರೆ. ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ಕೌಶಲ್ಯ ಕೊರತೆ ನೀಗಿಸಲು ಇಂಡಸ್ಟ್ರೀಜ್ ಲಿಂಕೇಜ್ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. 
ಯುವ ನಿಧಿ ಯೋಜನೆಯಡಿ ನೊಂದಣಿಯಾದ ಫಲಾನುಭವಿಗಳಿಗೆ ಈಗಾಗಲೇ ನಿರುದ್ಯೋಗ ಭತ್ಯೆ ನೀಡಲಾಗುತ್ತಿದ್ದು, ಇದರೊಂದಿಗೆ ಇಂದಿನ ತಂತ್ರಜ್ಞಾನಕ್ಕನುಗುಣವಾಗಿ ಕೌಶಲ್ಯ ತರಬೇತಿ ನೀಡಲು  ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಕೌಶಲ್ಯಾಭಿವೃದ್ದಿ ಇಲಾಖೆಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. 
ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ ಅವರು ಮಾತನಾಡಿ, ಪದವಿಯೊಂದಿಗೆ ಕೌಶಲ್ಯ ರೂಢಿಸಿಕೊಳ್ಳಬೇಕು. ಕೌಶಲ್ಯ ಒಂದು ಶಕ್ತಿ, ಆಯುಧ, ಇದನ್ನು ಇಂದಿನ ಯುವಕರು ಅರಿತುಕೊಳ್ಳಬೇಕು. ಕೌಶಲ್ಯಾಭಿವೃದ್ದಿ ನಿಗಮದದಿಂದ ನನ್ನ ವೃತ್ತಿ, ನನ್ನ ಆಯ್ಕೆ  ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಸ್ವಾವಲಂಬಿ ಬದುಕಿಗೆ ಕೌಶಲ್ಯಾಭಿವೃದ್ದಿ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ  ಮಹಿಳೆಯರು ಸ್ವಾವಲಂಬಿಯಾಗಲು ನಲ್-ಜಲ್ ಯೋಜನೆಯಡಿ ಅಸಾಧಾರಣ ಕೌಶಲ್ಯ ರೂಪಿಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. 
ಈ ಸಂದರ್ಭದಲ್ಲಿ  ನವಕರ್ನಾಟಕ ನಿರ್ಮಾಣಕ್ಕಾಗಿ ನವ ಕೌಶಲ್ಯಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಜಲಜೀವನ ಮಿಷನ್ ಅಡಿಯಲ್ಲಿ ನಲ್-ಜಲ್ ಮಿತ್ರ ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಕಾರ್ಯಾಲಯ ವ್ಯಾಪ್ತಿಯ ಎರಡು ಜನ ಮಹಿಳಾ ಸ್ವಸಹಾಯ ಸದಸ್ಯರಿಗೆ ಒಟ್ಟು 17 ದಿನಗಳವರೆಗೆ ಯಶಸ್ವಿಯಾಗಿ ಪಠ್ಯಕ್ರಮದಂತೆ ತರಗತಿ ಹಾಗೂ ಪ್ರಾಯೋಗಿಕ ತರಗತಿ ನೀಡಿ ನಂತರ 23 ದಿನಗಳ ಕಾಲ ಓಜೆಟಿ ತರಗತಿ ಕೈಗೊಂಡು ಮಹಿಳೆ ಸ್ವಾವಲಂಬಿಯಾಗಲು ಕೈಗೊಂಡ ಯೋಜನೆಯಡಿ ಸಾಂಕೇತಿಕವಾಗಿ ಹತ್ತು ಜನರಿಗೆ ಕಿಟ್ ವಿತರಿಸಲಾಯಿತು.
ಚಲನಚಿತ್ರ ನಟಿ ಸಪ್ತಮಿ ಗೌಡ ಅವರು ಮಾತನಾಡಿದರು.  ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಲ ಆರ್. ಸ್ವಾಗತಿಸಿದರು. ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗ್ಯಾರಂಟಿ ಯೋಜನೆಗಳ ತಾಲೂಕಾ ಅನುಷ್ಠಾನ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಉದ್ಯೋಗದಾತ ಸಂಸ್ಥೆಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.

ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು

ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ

ಕೃತಿ ಬಿಡುಗಡೆ ಸಮಾರಂಭನಾಟಕ ಕಲೆಯಲ್ಲಿ ಪಳಗಿದ ಹುನ್ನೂರು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.
    In (ರಾಜ್ಯ ) ಜಿಲ್ಲೆ
  • ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು
    In (ರಾಜ್ಯ ) ಜಿಲ್ಲೆ
  • ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಕೃತಿ ಬಿಡುಗಡೆ ಸಮಾರಂಭನಾಟಕ ಕಲೆಯಲ್ಲಿ ಪಳಗಿದ ಹುನ್ನೂರು
    In (ರಾಜ್ಯ ) ಜಿಲ್ಲೆ
  • ಸದಾ ಜನಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಜನನಾಯಕರ ಆದ್ಯ ಕರ್ತವ್ಯವಾಗಿದೆ: ಶಾಸಕಿ ಜೊಲ್ಲೆ.
    In (ರಾಜ್ಯ ) ಜಿಲ್ಲೆ
  • ಹೆಚ್ ಡಿ ಕೋಟೆಯಲ್ಲಿ ಸಿಬಿಎಸ್ಇ ಶಾಲೆ, ಬಿ.ಇಡಿ ಕಾಲೇಜು ಆರಂಭ
    In (ರಾಜ್ಯ ) ಜಿಲ್ಲೆ
  • ಶ್ರೀ ದತ್ತ ಇಂಡಿಯನ್ ಶುಗರ್ಸ್ ಕಾರ್ಖಾನೆ ಬೈಲರ್‌ಗೆ ಆಕಸ್ಮಿಕ ಬೆಂಕಿ :ಅಪಾರ ಪ್ರಮಾಣದ ಹಾನಿ
    In (ರಾಜ್ಯ ) ಜಿಲ್ಲೆ
  • ವಿವೇಕಾನಂದ ವೃತ್ತದಲ್ಲಿ ವಿದ್ಯುತ್‌ ದೀಪಗಳಿಗೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಚಾಲನೆ
    In (ರಾಜ್ಯ ) ಜಿಲ್ಲೆ
  • ಪಿಕೆಪಿಎಸ್ ನೂತನ ಸದಸ್ಯರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ತಾಲೂಕಿಗೆ ಜಿಪಂ ಸಿಇಓ ರಿಷಿ ಆನಂದ ಭೇಟಿ: ಪರಿಶೀಲನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.