ಉದಯರಶ್ಮಿ ದಿನಪತ್ರಿಕೆ
ಜಮಖಂಡಿ : ನಗರದ ರಮಾ ನಿವಾಸ (ಐಬಿ) ಹತ್ತಿರ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾದ ಪರಿಣಾಮ ವ್ಯಕ್ತಿಯೋರ್ವನು ಟ್ರ್ಯಾಕ್ಟರ ಇಂಜಿನ್ ಹಾಗೂ ಕಲ್ಲು ತುಂಬಿದ ಡಬ್ಬಿ ಮಧ್ಯ ಸಿಲುಕಿ ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ ದಾರುಣ ಘಟನೆ ನಡೆದಿದೆ.
ಬೀಳಗಿ ತಾಲೂಕಿನ ನಾಗರಾಳ ತಾಂಡಾದ ಸುನೀಲ ರಾಠೋಡ ಸುಮಾರು (35) ಟ್ರ್ಯಾಕ್ಟರ್ ಇಂಜಿನ್‌ನಲ್ಲಿ ಸಿಲುಕಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ನಗರದ ದೇಸಾಯಿ ಸರ್ಕಲ ಹತ್ತಿರ ಇರುವ ರಮಾ ನಿವಾಸ ಐ.ಬಿ. ರಸ್ತೆಯಲ್ಲಿ ಕಲ್ಲು ತುಂಬಿದ ಟ್ರ್ಯಾಕ್ಟರ್ ಎತ್ತರವಾದ ರಸ್ತೆಯನ್ನು ದಾಟಿಸುವ ವೇಳೆ ಕಲ್ಲು ತುಂಬಿದ ಡಬ್ಬಿ ಮತ್ತು ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾಗಿ ಚಾಲಕ ಇಂಜಿನ ಮಧ್ಯ ಸಿಲುಕಿಕೊಂಡಿದ್ದಾನೆ. ನಂತರ ಜೆಸಿಬಿ ಯಂತ್ರದ ಮೂಲಕ ಸಿಲುಕಿಕೊಂಡ ಟ್ರ್ಯಾಕ್ಟರ್ ಚಾಲಕನನ್ನು ಹೊರ ತೆಗೆದು ಸಾವು ಬದುಕಿನ ಮಧ್ಯ ಹೋರಾಟ ನಡೆಸಿದ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು. ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಅನೀಲ ಬಡಿಗೇರ, ಶಹರ ಪೋಲಿಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.

