Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೆಬಿಹಾಳ: ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಕರಾದರೆ ಪತ್ರಕರ್ತರು ಇಡೀ ಸಮಾಜಕ್ಕೆ ಶಿಕ್ಷಕರು. ವೈದ್ಯರು ರೋಗಿಗಳಿಗೆ ಮಾತ್ರ ವೈದ್ಯರಾದರೆ ಪತ್ರಕರ್ತರು ಇಡೀ ಸಮಾಜಕ್ಕೆ ವೈದ್ಯರು ಎಂದು ಉಪನ್ಯಾಸಕ ರಾಜನಾರಾಯಣ ನಲವಡೆ ಹೇಳಿದರು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಪತ್ರಿಕೋದ್ಯಮ ಲಾಭದಾಯಕ ಹುದ್ದೆ ಅಲ್ಲ. ಅದೊಂದು ಸಮಾಜಮುಖಿ ಕಾರ್ಯ. ಈ ಹುದ್ದೆಯನ್ನು ಅಲಂಕರಿಸುವವರು ಸಮಾಜದ ಅಂಕು ಡೊಂಕುಗಳನ್ನು, ಓರೆ ಕೋರೆಗಳನ್ನು ತಿದ್ದಲು ಬರಬೇಕೆ ಹೊರತು ಸಂಪಾದನೆಗಾಗಿ ಬರಬಾರದು. ಪತ್ರಕರ್ತರು ಒಂದು ವೇಳೆ ಆಸೆ ಆಮೀಷಗಳಿಗೆ ಒಳಗಾಗಿ ಸತ್ಯವನ್ನು ಮುಚ್ಚಿ ಅಥವಾ ತಿರುಚಿ ಸುದ್ದಿ ಮಾಡಿದರೆ ಅದರಿಂದ ಇಡೀ ಸಮಾಜ ಹಾಳಾಗುತ್ತದೆ ಎಂದರು.ಮಾಜಿ ಶಾಸಕ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಧ್ಯದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಪತ್ರಕರ್ತ ಇದು ತಂತ್ರಜ್ಞಾನ ನಮಗೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಯುಕೆಪಿ ಹತ್ತಿರ ವಾರ್ಡ 17 ರ ಸರ್ವೇ ಸಂಖ್ಯೆ 236ರಲ್ಲಿ ಕಟ್ಟಿಸಿರುವ ಮನೆ ತೆರವುಗೊಳಿಸಲು ಲೋಕೊಪಯೋಗಿ ಇಲಾಖೆ ನೀಡಿರುವ ನೋಟೀಸನ್ನು ಹಿಂಪಡೆಯಲು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ತಹಶೀಲ್ದಾರ್ ಎಸ್.ಎಸ್. ಅರಕೇರಿ ಮೂಲಕ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಪಟ್ಟಣದ ಯುಕೆಪಿ ಹತ್ತಿರ 236 ಸರ್ವೇ ಸಂಖ್ಯೆಯ ಸರಕಾರಿ ಜಾಗದಲ್ಲಿ ಸಂತ್ರಸ್ತರಾದ ಬಡ ಕುಡುಂಬದ ದಲಿತ ಸಮೂದಾಯದ 15 ರಿಂದ 20 ಕುಟುಂಬಗಳು 25-30 ವರ್ಷಗಳಿಂದ ವಾಸವಾಗಿದ್ದು ಇಂತಹ ಕುಟುಂಬಗಳಿಗೆ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯಿಂದ ಕೊಲ್ಹಾರ ಪಟ್ಟಣದಲ್ಲಿ ಸಂತ್ರಸ್ತರೆಂದು ಪರಿಗಣಿಸದೆ ನಿವೇಶನ ಹಂಚಿಕೆ ಮಾಡಿರುವುದಿಲ್ಲ.ಆದ್ದರಿಂದ ಅವರು ಸದರಿ ಜಾಗದಲ್ಲಿ ತಮ್ಮ ದಿನನಿತ್ಯದ ಕಾಯಕಮಾಡಿ ಬದಕು ಸಾಗಿಸಲು ಒಂದು ಸೂರು ಕಟ್ಟಿಕೊಂಡಿರುವುದಕ್ಕೂ ಸರ್ಕಾರದ ಲೋಕೋಪಯೋಗಿ ಇಲಾಖೆಯವರು ತೆರವುಗೊಳಿಸಲು ನೋಟೀಸು ನೀಡಿರುವುದು ಯಾವ ನ್ಯಾಯ ಅನೇಕ ವರ್ಷಗಳಿಂದ ಬರದ ನೋಟೀಸಗಳು ಈಗೇಕೆ ಬರುತ್ತೀವೆ. ಒಂದು ವೇಳೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ತೆಲಗಿ, ರೋಣಿಹಾಳ ಮತ್ತು ಮುಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಲಗಿ LT, ಚಿರಲದಿನ್ನಿ, ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೋಣಿಹಾಳ, ಕುಪಕಡ್ಡಿ ಗ್ರಾಮಕ್ಕೆ ಹಾಗೂ ಮುಳವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳವಾಡ ಸ್ಟೇಶನ್, ಮುಳವಾಡ ಗ್ರಾಮಕ್ಕೆ ವಿಜಯಪುರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಸೋಮವಾರ ಪರಿಶೀಲನೆ ಮಾಡಿದರು.ಜಲ ಮಿಷನ್ ಜೀವನ ಯೋಜನೆ ಅಡಿಯಲ್ಲಿ ಕೈಗೊಂಡ ಪ್ರತಿ ಗ್ರಾಮಗಳಿಗೆ ಪ್ರತಿ ಮನೆ – ಮನೆಗಳಿಗೆ ನಳಗಳ ಸಂಪರ್ಕ ಮೂಲಕ ಪ್ರತಿದಿನ ನೀರು ಪೂರೈಕೆ ಆಗುತ್ತಿರುವ ಕುರಿತು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಭೇಟಿ ವೇಳೆಯಲ್ಲಿ ಗ್ರಾಮಗಳಲ್ಲಿ ಅನುಷ್ಠಾನಗೊಂಡಿರುವ ಜಲಜೀವನ ಮಿಷನ್ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಉತ್ತಮ ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ ನಿಮ್ಮ ಮನೆ-ಮನೆಗೆ ಬಂದ ಗಂಗೆಯನ್ನು ಗ್ರಾಮಸ್ಥರು ಮಿತವಾಗಿ ಬಳಸಿ, ಸ್ವಚ್ಛತೆ ಕಾಪಾಡುವುದರ ಮೂಲಕ ದಿನನಿತ್ಯ ಉಪಯೋಗಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.…

Read More

ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಪುತ್ಥಳಿ ಅನಾವರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಚಪ್ಪಲಿ ಹಾಕದೇ ಬದ್ಧತೆಯ ಹೋರಾಟ ನಡೆಸಿದ್ದ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಅವರಿಲ್ಲದ ವಿಜಯಪುರ ಜಿಲ್ಲೆಯಲ್ಲಿ ರೈತ-ಕಾರ್ಮಿಕ ಧ್ವನಿ ಕ್ಷೀಣಿಸಿದಂತಾಗಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ಭೀಮಶಿ ಕಲಾದಗಿ ಎಂಬಂತಾಗಿದ್ದು ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.ಸೋಮವಾರ ಇಂಡಿ ತಾಲೂಕಿನ ಹಂಜಗಿ ಗ್ರಾಮದ ತೋಟದ ವಸ್ತಿಯಲ್ಲಿ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಪುಣ್ಯಸ್ಮರಣೆ ಸಂದರ್ಭದಲ್ಲಿ ಭೀಮಶಿ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು, ನನ್ನೊಂದಿಗೆ ಸುದೀರ್ಘ ೩೫ ವರ್ಷಗಳ ಒಡನಾಡ ಹೊಂದಿದ್ದ ಭೀಮಶಿ ಕಲಾದಗಿ ಅವರು, ಹಲವು ಸಮಸ್ಯೆಗಳ ಪರಿಹಾರದ ವಿಷಯವಾಗಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ಜಿಲ್ಲೆಯ ಸಮಗ್ರ ನೀರಾವರಿ ವಿಷಯಗಾಗಿ ಅವರು ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯುವ ಶಪಥ ಮಾಡಿದ್ದರು. ನೀರಾವರಿ ಯೋಜನೆ ಅನುಷ್ಠಾನದ ಬಳಿಕ ನಾನೇ ಅವರಿಗೆ ಚಪ್ಪಲಿ ಹಾಕುವ…

Read More

ಯೋಗಪಟು ಬಣಜಿಗೇರ ಗೆ ’ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ | ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ಶಿಕ್ಷಣದಲ್ಲಿ ಭಾರತೀಯತೆ ಅಳವಡಿಸಿ ಕೊಳ್ಳುವುದು ರಾಷ್ಟ್ರದ ಪ್ರಗತಿಗೆ ಅವಶ್ಯಕವಾಗಿದೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.ನಗರದಲ್ಲಿ ಪ್ರಧಾನ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಗುರು ನಮನ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಧಾರವಾಡ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಸ್ಕೃತ ಅಧ್ಯಾಪಕ ವಿನಾಯಕ್ ಭಟ್ ಶೇಡಿಮನೆ, ವೇದಗಳು ಪ್ರಾಚೀನ ಭಾರತದ ಜ್ಞಾನದ ಮೂಲವಾಗಿದೆ ಎಂದು ಹೇಳಿದರು.ವಿದ್ವಾಂಸ, ನಾಟಕಕಾರ ನಾರಾಯಣ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕೃತಿ ಪರಂಪರೆಯ ಮೌಲ್ಯ ಗಳ ಬಗ್ಗೆ ತಿಳಿಸಿಕೊಟ್ಟರು.ಅಮೃತಾನಂದ ಮಹಾಸ್ವಾಮಿಗಳು ಬಾಲಗಾoವ ಹಾಗೂ ಪ್ರಾಂತ ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷರು ಡಾ.ಬಸವರಾಜ್ ಅನಾಮಿ ಹಾಗೂ ಬಿ ಎಸ್ ಬಾಸಗೊಂಡ ಹಾಗೂ ಶ್ರೀ ಸಿದ್ದೇಶ್ವರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಬಿ.ಎಲ್.ಲಕ್ಕಣ್ಣನವರ ಅವರು ಸೋಮವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನೂತನ ಮೌಲ್ಯಮಾಪನ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡರು.ಮಹಿಳಾ ವಿಶ್ವವಿದ್ಯಾನಿಲಯದ ಪ್ರಸ್ತುತ ಮೌಲ್ಯಮಾಪನ ಕುಲಸಚಿವರಾಗಿದ್ದ ಪ್ರೊ.ಎಚ್.ಎಂ.ಚಂದ್ರಶೇಖರ್ ಅವರು ಪ್ರೊ.ಲಕ್ಕಣ್ಣನವರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ಪ್ರೊ.ಬಿ.ಎಲ್.ಲಕ್ಕಣ್ಣವರ ಅವರನ್ನು ತಕ್ಷಣ ಜಾರಿಗೆ ಬರುವಂತೆ ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆ ಶನಿವಾರ ಆದೇಶ ಹೊರಡಿಸಿತ್ತು. ಅಲ್ಲದೇ ಪ್ರೊ.ಎಚ್.ಎಂ.ಚಂದ್ರಶೇಖರ್ ಅವರ ಸೇವೆಯನ್ನು ಅವರ ಮಾತೃ ಸಂಸ್ಥೆಯಾಗಿರುವ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಕ್ಷಣ ಜಾರಿಗೆ ಬರುವಂತೆ ಹಿಂತಿರುಗಿಸಲಾಗಿದೆ ಎಂದೂ ಉನ್ನತ ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿತ್ತು.ಪ್ರೊ.ಲಕ್ಕಣ್ಣನವರ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೆಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲೆಯ ನೂತನ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಸದಸ್ಯರಾದ ಬಂದೇನವಾಜ ಕುಮಸಿ ಅವರು ಮಾತನಾಡಿ, ಶಾಲೆಯು ಮೂಲಭೂತ ಸೌಲಭ್ಯಗಳಿಂದ ಕುಂಠಿತವಾಗಿದೆ. ಸಧ್ಯ ಶಾಲೆಯಲ್ಲಿ ೫೫೦ ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಖಾಯಂ ಶಿಕ್ಷಕರ ಕೊರತೆ ಇದ್ದು ನೇಮಕಾತಿ ಅವಶ್ಯಕತೆ ಇದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೈಟೆಕ್ ಶೌಚಾಲಯ, ಬಿಸಿ ಊಟದ ಕೋಣೆ ಮತ್ತು ೬೦೦ ಮಕ್ಕಳು ಒಂದೆ ಬಾರಿಗೆ ಕುಳಿತು ಊಟ ಮಾಡುವಷ್ಟು ಭೋಜನಾಲಯ ಅವಶ್ಯಕತೆ ಇದೆ. ಕುಡಿವ ನೀರು, ಒಳಚರಂಡಿ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಆಟವಾಡಲು ಸಮತಟ್ಟಾದ ಮೈದಾನ ಮತ್ತು ಶಾಲಾ ಸೌಂಧರ್ಯ ಹೆಚ್ಚಿಸಲು ಉದ್ಯಾನವನ ನಿರ್ಮಾಣ ಮಾಡಬೇಕು. ಶಾಲೆಗೆ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ದುರಸ್ಥಿಗೊಳಿಸಿಕೊಡುವಂತೆ ಎಂದು ಶಾಸಕ ನಾಡಗೌಡರಲ್ಲಿ ಮನವಿ ಮಾಡಿಕೊಂಡರು.ಮನವಿಯನ್ನು ಸ್ವೀಕರಿಸಿದ ಶಾಸಕರು…

Read More

ಇಂಡಿಯ ವರ್ತಕ ಪ್ರದೀಪ ಮುರಗುಂಡಿ ಅವರ ತೋಟದಲ್ಲಿ ಹಳ್ಳಿ ಸೊಗಡಿನ ಸ್ಪರ್ಧೆಗಳನ್ನಾಡಿ ನಲಿದ ಗೆಳೆಯರ ಬಳಗ ಉದಯರಶ್ಮಿ ದಿನಪತ್ರಿಕೆ ಇಂಡಿ: ನಮ್ಮ ಪ್ರಾಚೀನ ಹಬ್ಬಗಳ ಪೈಕಿ ನಾಗರ ಪಂಚಮಿ ಹಬ್ಬ ಬಲು ವಿಶೇಷತೆಯಿಂದ ಕೂಡಿದೆ. ಇದು ಮನುಷ್ಯ ಪ್ರಕೃತಿಯೊಂದಿಗೆ ಬದುಕುತ್ತ ಸಕಲ ಪ್ರಾಣಿಗಳೊಂದಿಗೆ ನಾವು ದಯೆ ಮತ್ತು ಸ್ನೇಹ ಪೂರ್ಣ ಸಂಬಂಧ ಹೊಂದಬೇಕಾದ ಅವಶ್ಯಕತೆಯನ್ನು ತೋರಿಸುತ್ತದೆ.ಹಲವು ರೀತಿಯ ಹಿನ್ನಲೆಯಲ್ಲಿ ಆಚರಿಸಿಕೊಂಡು ಬಂದಿರುವ ಈ ಹಳ್ಳಿ ಸೊಗಡಿನ ಹಬ್ಬದ ನಿಮಿತ್ಯ ಇಂಡಿ ಪಟ್ಟಣದ 1989 /1990 ನೇ ಸಾಲಿನ ಶ್ರೀ ಶಾಂತೇಶ್ವರ ಪ್ರೌಢ ಶಾಲಾ ಗೆಳೆಯರ ಬಳಗದ ವತಿಯಿಂದ ಇಂಡಿಯ ವ್ಯಾಪಾರಸ್ಥ ಪ್ರದೀಪ ಮುರಗುಂಡಿ ಅವರ ತೋಟದಲ್ಲಿ ಬಸವರಾಜ ಚೌದರಿಯವರ ನೇತ್ರತ್ವದಲ್ಲಿ ಹಳ್ಳಿ ಸೊಗಡಿನ ಸ್ಪರ್ಧೆಗಳಾದ ಜೋಕಾಲಿ ಜೀಕುವುದು, ಚಿಣ್ಣಿದಾಂಡು, ಕಣ್ಣಾ ಮುಚ್ಚಾಲೆ ಗೋಟಿ, ಬುಗುರಿ ಕುಂಟಾಟ ಲಗೋರಿ, ಸುರಮನಿ ಗ್ರಾಮೀಣ ಆಟಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೆಳೆಯರೆಲ್ಲರೂಕೂಡಿಕೊಂಡು ಆಟವಾಡಿ ನಕ್ಕು ನಲಿದರು.ನಾಗರ ಪಂಚಮಿಯ ವಿಶೇಷ ಖಾದ್ಯಗಳಾದ ಅಳ್ಳ, ಚೂಡಾ, ಚಕ್ಕುಲಿ, ಕರದಂಟು,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ ಎಂದು ನಿರ್ಗಮಿತ ತಾಲೂಕು ದಂಡಾಧಿಕಾರಿ ಬಲರಾಮ ಕಟ್ಟಿಮನಿ ಹೇಳಿದರು.ನ್ಯಾಯವಾದಿ ಚೇತನ ಶಿವಶಿಂಪಿ ಹಾಗೂ ಅವರ ಸ್ನೇಹಿತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಾಲೂಕಿನ ಜನ ಹೃದಯ ಶ್ರೀಮಂತಿಕೆ ಉಳ್ಳವರು. ಕಚೇರಿಯ ಸಿಬ್ಬಂದಿಗಳೂ ಕೂಡ ಅಷ್ಟೇ ಒಳ್ಳೆಯವರು. ಇಲ್ಲಿನ ಸೇವೆ ನನಗೆ ಸಾಕಷ್ಟು ಹೊಸ ವಿಷಯಗಳನ್ನು ಪರಿಚಯಿಸುವುದರ ಜೊತೆಗೆ ಒಳ್ಳೆಯ ಅನುಭವ ತಂದು ಕೊಟ್ಟಿದೆ. ಇಲ್ಲಿನ ಜನತೆ ಮತ್ತು ಸಿಬ್ಬಂದಿಗಳನ್ನು ನಾನೆಂದಿಗೂ ಮರೆಯಲಾರೆ ಎಂದರು.ಈ ವೇಳೆ ನ್ಯಾಯವಾದಿ ಚೇತನ ಶಿವಶಿಂಪಿ ಅವರು ಮಾತನಾಡಿ, ಕಟ್ಟಿಮನಿ ಸಾಹೇಬರು ಅತ್ಯಂತ ಸರಳ ಜೀವಿಗಳು. ಸೌಮ್ಯ ಸ್ವಭಾವದವರು. ಅಷ್ಟೇ ಕಾನೂನನ್ನು ಪಾಲಿಸುವವರು. ಕಾನೂನಿಗೆ ಗೌರವಿಸದವರಿಗೆ ಬೆವರಿಳಿಸುತ್ತಿದ್ದರು. ತಮ್ಮ ಬಳಿ ಬಂದ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದು ತಾವೇ ಬಗೆಹರೆಸುತ್ತಿದ್ದರು. ಇಂತಹ ವ್ಯಕ್ತಿತ್ವದ ಅಧಿಕಾರಿಯನ್ನು ಈವೆರೆಗೂ ನಾನು ಕಂಡಿಲ್ಲ. ಸಧ್ಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿಗೆ ವರ್ಗಾವಣೆಯಾದ ಇವರ ಸೇವೆಯನ್ನು ಪಡೆಯುವ ಹುಕ್ಕೇರಿ ತಾಲೂಕಿನ ಜನತೆ ಪುಣ್ಯವಂತರು. ಸಾಹೇಬರು…

Read More

ಚಡಚಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಉದ್ಘಾಟನೆ – ಪದಗ್ರಹಣ ಉದಯರಶ್ಮಿ ದಿನಪತ್ರಿಕೆ ಚಡಚಣ: ನಾವೆಲ್ಲ ವೀರಶೈವ ಲಿಂಗಾಯತರು. ನಾವೆಲ್ಲರೂ ಸಹಕಾರದಿಂದ ಒಗ್ಗಟ್ಟಾದರೆ ಧರ್ಮದ ಉಳಿವು ಸಾಧ್ಯ‌ ಲಿಂಗಾಯತರು ಹಾಗೂ ವೀರಶೈವರು ಒಂದೇ ನಾಣ್ಯದ ಎರಡು ಮುಖಗಳು. ಮನೆಗೊಬ್ಬರಂತೆ ಸುಮಾರು ೧೦ ಸಾವಿರ ಸದಸ್ಯರಾಗಬೇಕು. ಅಂದಾಗ ಅಭಿವೃದ್ಧಿಯಾಗುವುದು ಖಚಿತ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರೆಂದು ನಮೂದಿಸಿರಿ ಎಂದು ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಕರೆಕೊಟ್ಟರು.ಸ್ಥಳೀಯ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ರವಿವಾರ ಜರುಗಿದ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳಂತೆ ಪ್ರೀತಿಸುವ ಗುಣ ಹೊಂದಿರಿ. ನಾವೆಲ್ಲರೂ ಒಂದಾಗಬೇಕು.ಕೆಟ್ಟ ವಿಚಾರದಿಂದ ದೂರವಿರಬೇಕು. ಮುಂದಿನ ದಿನಗಳಲ್ಲಿ ಅಧ್ಯಕ್ಷ ಎಸ್.ಆರ್. ಅವಜಿ ಅವರ ಮಾರ್ಗದರ್ಶನದಲ್ಲಿ ಘಟಕವು ಅಭಿವೃದ್ಧಿ ಸಾಧ್ಯ ಎಂದು ಬಿದರಿ ಅವರು ಹೇಳಿದರು.ಪದಗ್ರಹಣ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವೀಣಾಕಾಶಪ್ಪನವರ ಅವರು, ವಿಭೂತಿಧಾರಣೆಯೊಂದಿಗೆ ಲಿಂಗಾರ್ಚನೆ ಮಾಡಬೇಕು. ಪುರುಷರಂತೆ ಮಹಿಳೆಯರಿಗೆ ಸಮಾನತೆಯನ್ನು…

Read More